newsfirstkannada.com

×

ಮೊದಲೇ ಲೀಕ್​ ಆಗಿತ್ತಾ ಸಿದ್ದರಾಮಯ್ಯ ಸರ್ಕಾರದ ಬಜೆಟ್​? ಅಚ್ಚರಿ ಹೇಳಿಕೆ ಕೊಟ್ಟ ಆರಗ ಜ್ಞಾನೇಂದ್ರ

Share :

Published July 7, 2023 at 6:23pm

Update July 8, 2023 at 8:34am

    14ನೇ ಬಾರಿಗೆ ಬಜೆಟ್​ ಮಂಡಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

    ಸಿಎಂ ಸಿದ್ದರಾಮಯ್ಯ ಬಜೆಟ್​ ಬಗ್ಗೆ ಬಿಜೆಪಿ ನಾಯಕ ಅಚ್ಚರಿಯ ಹೇಳಿಕೆ

    ನಿನ್ನೆಯೇ ಸಿದ್ದರಾಮಯ್ಯ ಬಜೆಟ್​ ಲೀಕ್​ ಆಗಿತ್ತು ಎಂದ ಆರಗ ಜ್ಞಾನೇಂದ್ರ

ಇಂದು ಸಿಎಂ ಸಿದ್ದರಾಮಯ್ಯನವರು 2023-2024ರ ಬಜೆಟ್​ ಅನ್ನು ಮಂಡಿಸಿದ್ದಾರೆ. 14ನೇ ಬಾರಿಗೆ ಬಜೆಟ್​ ಮಂಡಿಸಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ದಾಖಲೆ ಮುರಿದಿದ್ದಾರೆ. ಆದರೆ ಇಂದಿನ ಬಜೆಟ್​ ಕುರಿತಂತೆ ಪ್ರತಿಪಕ್ಷ ನಾಯಕರು ನ್ಯೂಸ್​​ಫಸ್ಟ್​ಗೆ ಪ್ರತಿಕ್ರಿಯಿಸಿದ್ದು, ಬಜೆಟ್​ ಕುರಿತಂತೆ ದೋಷಾರೋಪ ಮಾಡಿದ್ದಾರೆ.

ಬಿಜೆಪಿ ನಾಯಕ ಆರಗ ಜ್ಞಾನೇಂದ್ರ ನ್ಯೂಸ್​ಫಸ್ಟ್​ಗೆ ಪ್ರತಿಕ್ರಿಯಿಸಿದ್ದು, ಬಜೆಟ್​ ಕುರಿತಂತೆ ಮಾತನಾಡಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಬಿಜೆಪಿ ಸರ್ಕಾರದ ವಿರುದ್ಧ 75 ಸಾವಿರ ಕೋಟಿ ಸಾಲದ ಆರೋಪ ಕುರಿತಾಗಿ ಮಾತನಾಡಿದ ಅವರು, ಸಾಲ ಮಾಡಿ ದುಡ್ಡು ಹೊಡಿಲಿಲ್ಲವಲ್ಲ, ಅಭಿವೃದ್ಧಿಗೆ ವಿನಿಯೋಗ ಮಾಡಿದ್ದೀವಿ. ಅದು ಲೋಕೋಪಯೋಗಿ ಇರಬಹುದು ಬೇರೆ ಬೇರೆ ಇರ್ಬೋದು, ಇರಿಗೇಶನ್​ಗೆ ಇರಬಹುದು. ಸಾಕಷ್ಟು ಹಣವನ್ನು ವ್ಯಯಮಾಡಿ ಭಾಗ್ಯಗಳಿಗೆ ಕೊಡದೇ ಇರಬಹುದು ಭಾವಿ ಜೀವನಕ್ಕೆ ಬೇಕಾದಂತಹ, ಮೂಲಭೂತ ಸೌಕರ್ಯ ಒದಗಿಸುವಂತಹ, ರೈತರಿಗೆ ನೆರವು ನೀಡುವಂತಹ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಕಾಂಗ್ರೆಸ್​​ ಸರ್ಕಾರ ಲೋಕೋಪಯೋಗಿ ಬಗ್ಗೆ ಏನು ಹೇಳಿಲ್ಲ. ಮೂರು ಲೈನ್​ನಲ್ಲಿ ವಿವರಿಸಿದ್ದಾರೆ. ಅಭಿವೃದ್ಧಿ ಇಲ್ಲ. ಇವರತ್ರ ಹಣ ಇಲ್ಲ. ಅದಕ್ಕೆ ನಿಗದಿ ಮಾಡಿಲ್ಲ ಎಂದು ಹೇಳಿದರು.

ನಂತರ ಮಾತು ಮುಂದುವರಿಸಿದ ಮಾಜಿ ಸಚಿವ ಆರಗ ಜ್ಞಾನೇಂದ್ರ, ನಿಮಗೆ ಗೊತ್ತಿರ್ಲಿ ಇಂದಿನ​ ಬಜೆಟ್​ ನಿನ್ನೆಯೇ ಲೀಕ್​ ಆಗಿದೆ. ಪ್ರಿಯಾಂಕ ಖರ್ಗೆಯವರು ಹೇಳಿದ್ದಾರೆ ನಿನ್ನೆ. ಕುಡಿಯುವ ನೀರಿನ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಇತ್ತು. ಆ ಜಯಜಯಮ್ಮು ಕಳಪೆ ಕಾಮಗಾರಿಯಾಗಿದೆ, ಸರಿಯಾಗಿ ಆಗಿಲ್ಲ. ಅದನ್ನು ತನಿಖೆಗೆ ಒಳಪಡಿಸುತ್ತೇವೆ. ಇಂದು ಬಜೆಟ್​ ವೇಳೆ ಅದೇ ಬಂದಿದೆ ಎಂದು ಹೇಳಿದ್ದಾರೆ.

ಶಕ್ತಿ ಯೋಜನೆ ಬಗ್ಗೆ ಮಾತನಾಡಿದ್ದು, ಶೇ.50ಕ್ಕಿಂತ ಹೆಚ್ಚಿನ ಮಹಿಳೆಯರಿಗೆ ಈ ಸೌಲಭ್ಯ ಸಿಗುತ್ತಿಲ್ಲ. ಮಲ್ನಾಡಿನಲ್ಲಿ ಎಲ್ಲಿ ಕೆಂಪು ಬಸ್​ಗಳಿದ್ದಾವೆ. ಎಲ್ಲ ಖಾಸಗಿ ಬಸ್​ ಇವೆ. ಇವತ್ತು ಖಾಸಗಿ ಬಸ್​ನಲ್ಲೂ ಓಡಾಡುವ ಮಹಿಳೆಯರಿಗೆ ಟಿಕೆಟ್​ ಅನ್ನು ಪ್ರೈವೇಟ್​ ಬಸ್​ ಕಂಪನಿಯವರಿಗೆ ರೀಎಂಬಸ್​ ಮಾಡಬಹುದಾಗಿತ್ತು ಎಂದು ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೊದಲೇ ಲೀಕ್​ ಆಗಿತ್ತಾ ಸಿದ್ದರಾಮಯ್ಯ ಸರ್ಕಾರದ ಬಜೆಟ್​? ಅಚ್ಚರಿ ಹೇಳಿಕೆ ಕೊಟ್ಟ ಆರಗ ಜ್ಞಾನೇಂದ್ರ

https://newsfirstlive.com/wp-content/uploads/2023/07/Aaraga-Jnanendra.jpg

Load More