newsfirstkannada.com

ಚಾಲೆಂಜಿಂಗ್ ಸ್ಟಾರ್ ದರ್ಶನ್​​ ತನಿಖೆ ಹೆಂಗಿರುತ್ತೆ..? ಆ ಆರು ದಿನಗಳಲ್ಲಿ ರೋಚಕ ಟ್ವಿಸ್ಟ್​..!

Share :

Published June 12, 2024 at 8:05am

    ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ

    13 ಆರೋಪಿಗಳು ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್

    ಈ ಆರು ದಿನಗಳಲ್ಲಿ ಪೊಲೀಸರು ಏನೆಲ್ಲಾ ತನಿಖೆ ಮಾಡ್ತಾರೆ?

ಬೆಂಗಳೂರು: ಕೋಟ್ಯಂತರ ಅಭಿಮಾನಿಗಳ ಯಜಮಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಅನ್ನೋ ಕಾರಣಕ್ಕೆ ವ್ಯಕ್ತಿಯನ್ನು ಕರೆಸಿ ಹಲ್ಲೆ ಮಾಡಿ ಹತ್ಯೆಗೈದಿರೋ ಆರೋಪ ಕೇಳಿಬಂದಿದೆ.

ಈ ಕೇಸ್‌ನಲ್ಲಿ ನಟ ದರ್ಶನ್ ಸೇರಿ 13 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ. ಇದೀಗ ಪೊಲೀಸರು ಟೆಕ್ನಿಕಲ್ ಎವಿಡೆನ್ಸ್ ಕಲೆ ಹಾಕ್ತಿದ್ದು ಅದರ ಆಧಾರದಲ್ಲಿ ಪ್ರಕರಣದ ತನಿಖೆ ಶುರು ಮಾಡಿದ್ದಾರೆ.. ಸದ್ಯ ವಿಶೇಷ ಕೋರ್ಟ್​ ದರ್ಶನ್ ಸೇರಿ ಒಟ್ಟು 13 ಜನರನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಆರು ದಿನಗಳ ಕಾಲ ದರ್ಶನ್ ಗ್ಯಾಂಗ್​ಗೆ ಫುಲ್ ಗ್ರಿಲ್ ನಡೆಯಲಿದೆ.

ಇದನ್ನೂ ಓದಿ:ಲಾಕಪ್​​ನಲ್ಲಿ ಚಾಲೆಂಜಿಂಗ್ ಸ್ಟಾರ್.. ನಿನ್ನೆ ರಾತ್ರಿ ಕಳಂಕಿತ ಡಿ ಗ್ಯಾಂಗ್​​ಗೆ ಪೊಲೀಸರ ಆತಿಥ್ಯ ಹೇಗಿತ್ತು..?​​

ಏನೆಲ್ಲ ತನಿಖೆ ನಡೆಯುತ್ತೆ..?

  • ಕೊಲೆ ಕೇಸ್ ಸಂಬಂಧ ಸಾಕ್ಷ್ಯಗಳ ಬಗ್ಗೆ ಪೊಲೀಸರು ಕಲೆ ಹಾಕುತ್ತಾರೆ, ಇಂದಿನಿಂದಲೇ ಆ ಕೆಲಸ ನಡೆಯಲಿದೆ
  • ಕಿಡ್ನ್ಯಾಪ್ ಮಾಡಿ ಕರೆದೊಯ್ದ ಜಾಗಗಳ ಮಹಜರು ನಡೆಯಲಿದೆ. ಜೊತೆಗೆ ರೇಣುಕಾಸ್ವಾಮಿಯನ್ನು ಕೂಡಿ ಹಾಕಿ ಹಲ್ಲೆ ಮಾಡಿದ ಜಾಗದಲ್ಲೂ ಮಹಜರು ಕಾರ್ಯ ನಡೆಯಲಿದೆ. ಕೊಲೆಯಾದ ಸ್ಥಳ, ಬಾಡಿ ಬಿಸಾಡಿದ ಜಾಗಕ್ಕೆ ಆರೋಪಿಗಳನ್ನು ಕರೆದೊಯ್ದು ಮಹಜರು ಮಾಡಲಿದ್ದಾರೆ
  • ಬಾಡಿ ಬಿಸಾಡಲು ಯಾರೆಲ್ಲ ಹೋಗಿದ್ದರು? ಯಾವ ಸ್ಥಳದಲ್ಲಿ ಮೃತದೇಹ ಬಿಸಾಡಿದ್ದರು? ಅನ್ನೋದ್ರ ಬಗ್ಗೆಯೂ ತನಿಖೆ ಆಗಲಿದೆ
    ಹಲ್ಲೆಗೆ ಬಳಸಿದ ವೆಪನ್​​ಗಳ ಬಗ್ಗೆಯೂ ಮಾಹಿತಿ ಪಡೆಯಲಿದ್ದಾರೆ. ಜೊತೆಗೆ ಅವುಗಳನ್ನೂ ವಶಕ್ಕೆ ಪಡೆಯಲಿದ್ದಾರೆ
  • ರೇಣುಕಾಸ್ವಾಮಿಯನ್ನು ಕರೆತಂದ ಜಾಗದಿಂದ ಹಿಡಿದು ಎಲ್ಲೆಲ್ಲಿಗೆ ಕರೆದೊಯ್ದರು? ಆ ಎಲ್ಲ ಕಡೆಯೂ ಮಹಜರು ನಡೆಯಲಿದೆ.

ಮಾಹಿತಿಗಳ ಪ್ರಕಾರ.. ರೇಣುಕಾಸ್ವಾಮಿ ಮೇಲೆ ಹಲವು ಜಾಗಗಳಲ್ಲಿ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಯಾವೆಲ್ಲ ಆಯುಧಗಳಿಂದ ಹಲ್ಲೆ ಮಾಡಲಾಗಿದೆ? ಎಲ್ಲೆಲ್ಲಿ ವೆಪನ್​​ಗಳನ್ನು ಬೀಸಾಡಿದ್ದಾರೆ ಅನ್ನೋದನ್ನು ತಿಳಿದುಕೊಂಡು, ಅವುಗಳನ್ನು ವಶಕ್ಕೆ ಪಡೆಯುವ ಕಾರ್ಯ ನಡೆಯಲಿದೆ. ಜೊತೆಗೆ ಆರೋಪಿಗಳ ಮೊಬೈಲ್ ಡೇಟಾವನ್ನೂ ಪೊಲೀಸರು ಸಂಗ್ರಹ ಮಾಡಲಿದ್ದಾರೆ. ಕೃತ್ಯ ನಡೆದಾಗ ಯಾವ್ಯಾವ ಆರೋಪಿಗಳು ಎಲ್ಲೆಲ್ಲಿ‌ ಇದ್ದರು ಅನ್ನೋದ್ರ ಬಗ್ಗೆಯೂ ತನಿಖೆ ನಡೆಸಲಿದ್ದಾರೆ. ಒಟ್ಟಾರೆ 6 ದಿನಗಳಲ್ಲಿ ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ರೇಣುಕಾಸ್ವಾಮಿ ಅಪಹರಣ ಮಾಡಿದ್ದ ಆರೋಪಿಯೂ ಅರೆಸ್ಟ್.. ಯಾರು ಈತ ಭಯಂಕರ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಾಲೆಂಜಿಂಗ್ ಸ್ಟಾರ್ ದರ್ಶನ್​​ ತನಿಖೆ ಹೆಂಗಿರುತ್ತೆ..? ಆ ಆರು ದಿನಗಳಲ್ಲಿ ರೋಚಕ ಟ್ವಿಸ್ಟ್​..!

https://newsfirstlive.com/wp-content/uploads/2024/06/darshan2.jpg

Load More