newsfirstkannada.com

ಲಾಕಪ್​​ನಲ್ಲಿ ಚಾಲೆಂಜಿಂಗ್ ಸ್ಟಾರ್.. ನಿನ್ನೆ ರಾತ್ರಿ ಕಳಂಕಿತ ಡಿ ಗ್ಯಾಂಗ್​​ಗೆ ಪೊಲೀಸರ ಆತಿಥ್ಯ ಹೇಗಿತ್ತು..?​​ ​

Share :

Published June 12, 2024 at 7:23am

  ದರ್ಶನ್ ಅಂಡ್ ಗ್ಯಾಂಗ್‌ಗೆ 6 ದಿನ ಪೊಲೀಸ್ ಕಸ್ಟಡಿ

  ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಡಿ ಗ್ಯಾಂಗ್ ಲಾಕ್

  ಇವತ್ತಿನಿಂದ ಸಾಕ್ಷ್ಯ ಕಲೆಹಾಕಲಿರುವ ಪೊಲೀಸರು

ಅಭಿಮಾನಿಗಳೇ ನನ್ನ ಸೆಲೆಬ್ರೆಟಿ ಅಂತಿದ್ದ ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಇದೀಗ ಕೊಲೆ ಕೇಸ್‌ನಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ. ಇದೀಗ ದರ್ಶನ್, ಪವಿತ್ರಾಗೌಡ ಸೇರಿ ಎಲ್ಲಾ ಆರೋಪಿಗಳನ್ನೂ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ಎಲ್ಲಾ ಆರೋಪಿಗಳು ಇಡೀ ರಾತ್ರಿ ಕಳೆದಿದ್ದಾರೆ.

ಕೆಲ ವರ್ಷಗಳ ಹಿಂದೆ ಪತ್ನಿ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದ್ದ ಸ್ಯಾಂಡಲ್​​​ವುಡ್​ ದಾಸ.. ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಮತ್ತೊಮ್ಮೆ ಅರೆಸ್ಟ್ ಆಗಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನ ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಆರೋಪದಡಿ ದರ್ಶನ್ ಸೇರಿ 13 ಜನರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:ಟಿ20 ವಿಶ್ವಕಪ್​​ನಲ್ಲಿ ಅಚ್ಚರಿ ಫಲಿತಾಂಶಗಳು.. ದೊಡ್ಡ ದೊಡ್ಡ ತಂಡಗಳಿಗೆ ಶಾಕ್ ಮೇಲೆ ಶಾಕ್..!

ನಿನ್ನೆ ದರ್ಶನ್, ಪವಿತ್ರಾಗೌಡ ಸೇರಿ ಎಲ್ಲಾ ಆರೋಪಿಗಳನ್ನ ಬಂಧಿಸಿದ್ದ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ರು.. ಬಳಿಕ ಕೋರ್ಟ್ ದರ್ಶನ್ ಸೇರಿ ಎಲ್ಲಾ ಕೊಲೆ ಆರೋಪಿಗಳನ್ನ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಇದೀಗ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಡಿ ಗ್ಯಾಂಗ್‌ ರಾತ್ರಿ ಕಳೆದಿದೆ. ಪೊಲೀಸರ ಕಸ್ಟಡಿಯಲ್ಲಿ ಮೊದಲ ದಿನವನ್ನ ದರ್ಶನ್ ಅಂಡ್ ಗ್ಯಾಂಗ್ ಕಳೆದಿದೆ.. ದರ್ಶನ್, ವಿನಯ್ ಹಾಗೂ ರಾಘವೇಂದ್ರ ಒಂದು ಲಾಕ್ ಅಪ್‌ನಲ್ಲಿದ್ರೆ, ಇತರೆ ಆರೋಪಿಗಳು ಮತ್ತೊಂದು ‌ಲಾಕ್ ಅಪ್‌ನಲ್ಲಿ ಇಡೀ ರಾತ್ರಿ ಕಳೆದಿದ್ದಾರೆ. 5 ದಿನ ಪೊಲೀಸ್ ಲಾಕ್ ಅಪ್‌ನಲ್ಲೇ ನಟ ದರ್ಶನ್, ಪವಿತ್ರಾಗೌಡ ಸೇರಿ ಇತರೆ ಆರೋಪಿಗಳು ದಿನದೂಡಬೇಕಿದೆ. ಇತ್ತ ರಾತ್ರಿ 10 ಗಂಟೆ ಸುಮಾರಿಗೆ ಮಹಿಳಾ ಸಾತ್ವಾನ ಕೇಂದ್ರಕ್ಕೆ ಪವಿತ್ರಾ ಗೌಡರನ್ನ ಶಿಫ್ಟ್ ಮಾಡಲಾಗಿತ್ತು. ಇನ್ನೂ ದಿನನಿತ್ಯ ವಿಚಾರಣೆಗೆ ಪೊಲೀಸ್ ಠಾಣೆಗೆ ತೆರಳಬೇಕು. ಬಳಿಕ ಮತ್ತೆ ರಾತ್ರಿ 10 ಗಂಟೆ ಸಾಂತ್ವನ ಕೇಂದ್ರಕ್ಕೆ ಪವಿತ್ರಾಗೌಡರನ್ನ ಶಿಫ್ಟ್ ಮಾಡಲಾಗುತ್ತೆ ಅಂತ ತಿಳಿದುಬಂದಿದೆ.

ನಟ ದರ್ಶನ್ ಌಂಡ್​ ಪಟಾಲಂಗೆ ಬಿರಿಯಾನಿ ಆತಿಥ್ಯ
ಪೊಲೀಸ್ ಕಸ್ಟಡಿಯಲ್ಲಿರೋ ನಟ ದರ್ಶನ್‌ ಮತ್ತು ಉಳಿದ ಆರೋಪಿಗಳಿಗೆ ಪೊಲೀಸರು ಭರ್ಜರಿ ಆತಿಥ್ಯ ನೀಡಿದ್ದಾರೆ ಅಂತ ತಿಳಿದುಬಂದಿದೆ. ಇವತ್ತು ರಾತ್ರಿ ಪೊಲೀಸ್ ಕಸ್ಟಡಿಯಲ್ಲಿರೋ ಎಲ್ಲಾ ಆರೋಪಿಗಳಿಗೆ ಪೊಲೀಸರೇ ಬಿರಿಯಾನಿ ಊಟ ತರಿಸಿ ತಿನ್ನಿಸಿದ್ದಾರೆ. ದೊನ್ನೆ ಬಿರಿಯಾನಿ ನೀಡಿ ವಿಚಾರಣೆ ಮಾಡಿದ್ದಾರೆ ಅಂತ ತಿಳಿದುಬಂದಿದೆ.

ಇವತ್ತಿನಿಂದ ಸಾಕ್ಷ್ಯ ಕಲೆಹಾಕಲಿರುವ ಪೊಲೀಸರು
ಆರು ದಿನಗಳ ಕಾಲ ದರ್ಶನ್ ಸೇರಿ 13 ಮಂದಿ ಆರೋಪಿಗಳಿಗೆ ಭಾರೀ ವಿಚಾರಣೆ ನಡೆಯಲಿದೆ. ಕೊಲೆ ಕೇಸ್ ಸಂಬಂಧ ಪೊಲೀಸರು ಸಾಕ್ಷ್ಯ ಕಲೆಹಾಕಲು ಮುಂದಾಗಿದ್ದಾರೆ.. ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡಿ ಕರೆದೊಯ್ದ ಜಾಗ, ಕೂಡಿ ಹಾಕಿ ಹಲ್ಲೆ ಮಾಡಿದ ಜಾಗದಲ್ಲೆಲ್ಲ ಮಹಜರು ನಡೆಸಲಿದ್ದಾರೆ. ಅಲ್ಲದೇ ಕೊಲೆಯಾದ ಸ್ಥಳ, ಬಾಡಿ ಬಿಸಾಡಿದ ಜಾಗದಲ್ಲಿ ಆರೋಪಿಗಳನ್ನು ಕರೆದೊಯ್ದು ಮಹಜರು ಮಾಡಲಿದ್ದಾರೆ.

ಇದನ್ನೂ ಓದಿ:ಕೆನಡಾ.. ಪಾಕ್​ ಆಯ್ತು.. ಈಗ ಮಿಷನ್ INDIA.. ಇದು ಟೀಂ ಇಂಡಿಯಾಗೆ ಎಚ್ಚರಿಕೆಯ ಕರೆಗಂಟೆ..!

ಒಟ್ಟಾರೆ, ಸುಖದ ಸುಪ್ಪತ್ತಿಗೆಯಲ್ಲಿ ದಿನ ಕಳೆಯುತ್ತಿದ್ದ ದರ್ಶನ್‌, ನಿನ್ನೆ ರಾತ್ರಿ ಚಾಪೆ ಮೇಲೆ ಮಲಗುವ ಸ್ಥಿತಿಯನ್ನ ತಂದುಕೊಂಡಿದ್ದಾರೆ. ಈ ಮಧ್ಯೆ ರೇಣುಕಾಸ್ವಾಮಿ ಮಾಡಿದ ತಪ್ಪು ಏನೇ ಇರ್ಲಿ ಅದಕ್ಕೆ ಪೊಲೀಸರು ಇದ್ರು.. ಕಾನೂನು ಇತ್ತು.. ಅದನ್ನೆಲ್ಲಾ ಬಿಟ್ಟು ಕೋಪದ ಕೈಗೆ ದರ್ಶನ್‌ ಅಂಡ್‌ ಗ್ಯಾಂಗ್‌ ಬುದ್ದಿಕೊಟ್ಟಿದ್ದು ಮಾತ್ರ ಸರಿಯಲ್ಲ.

ಇದನ್ನೂ ಓದಿ:ರೇಣುಕಾಸ್ವಾಮಿ ಅಪಹರಣ ಮಾಡಿದ್ದ ಆರೋಪಿಯೂ ಅರೆಸ್ಟ್.. ಯಾರು ಈತ ಭಯಂಕರ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಾಕಪ್​​ನಲ್ಲಿ ಚಾಲೆಂಜಿಂಗ್ ಸ್ಟಾರ್.. ನಿನ್ನೆ ರಾತ್ರಿ ಕಳಂಕಿತ ಡಿ ಗ್ಯಾಂಗ್​​ಗೆ ಪೊಲೀಸರ ಆತಿಥ್ಯ ಹೇಗಿತ್ತು..?​​ ​

https://newsfirstlive.com/wp-content/uploads/2024/06/Darshan_Car-Case.jpg

Load More