newsfirstkannada.com

ಟೀಂ ಇಂಡಿಯಾ ಸೋಲೇ ಇಲ್ಲದೇ ಮುನ್ನುಗ್ತಿದ್ದರೂ ಫ್ಯಾನ್ಸ್​ಗೆ ಭಾರೀ ಬೇಸರ.. ಅದಕ್ಕೆಲ್ಲ ಕಾರಣ ಈತ..!

Share :

Published June 15, 2024 at 11:00am

    USA ನಲ್ಲಿ ಸೈಲೆಂಟ್​​​.. ವಿಂಡೀಸ್​​​ನಲ್ಲಿ ಆಗ್ತಾರೆ ವೈಲೆಂಟ್​​..!

    ಸೂಪರ್​​​-8 ಹಂತದಲ್ಲಿ ಎಲ್ಲದಕ್ಕೂ ಲೆಕ್ಕಾ ಚುಕ್ತಾ ಗ್ಯಾರಂಟಿ..!

    ಸೂಪರ್​​​-8 ನಲ್ಲಿ ಇವರನ್ನು ತಡೆಯೋದು ಕಷ್ಟಕಷ್ಟ..!

ಟಿ20 ವಿಶ್ವಕಪ್​ನಲ್ಲಿ ಭಾರತ ತಂಡ ಗೆಲುವಿನ ತೋರಣ ಕಟ್ತಿದೆ. ಇಷ್ಟಾದ್ರೂ ಫ್ಯಾನ್ಸ್​ ಮುಖದಲ್ಲಿ ಖುಷಿ ಮಾಯವಾಗಿದೆ. ಕಾರಣ ಕಿಂಗ್ ಕೊಹ್ಲಿಯ ಬ್ಯಾಡ್​​​​ ಫಾರ್ಮ್​. ಯಾವಾಗಪ್ಪಾ ವಿರಾಟ್​​​​ ತಮ್ಮ ವಿರಾಟರೂಪ ತೋರಿಸ್ತಾರೆ ಅಂತ ಅಭಿಮಾನಿಗಳು ಕಾಯ್ತಿದ್ದಾರೆ. ಆ ಫ್ಯಾನ್ಸ್​ ಪ್ರಾರ್ಥನೆ ಶೀಘ್ರದಲೇ ಫಲಿಸಲಿದೆ.

ಟೀಮ್ ಇಂಡಿಯಾ ಟಿ20 ವಿಶ್ವಕಪ್​​ ಯುದ್ಧಭೂಮಿಯಲ್ಲಿ ವಿರಾಜಿಸ್ತಿದೆ. ಎದುರಾಳಿಗಳನ್ನು ಪುಡಿಗಟ್ಟಿ ಸೂಪರ್​​​-8ಗೆ ಟಿಕೆಟ್​​​​​​ ಗಿಟ್ಟಿಸಿಕೊಂಡಿದೆ. ಆದರೆ ಇನ್ನೊಂದೆಡೆ ಮೆನ್ ಇನ್ ಬ್ಲೂ ಪಡೆ ಪ್ರಚಂಡ ಆಟವಾಡ್ತಿದ್ರೂ, ಕಿಂಗ್ ಕೊಹ್ಲಿ ಬ್ಯಾಡ್​ಫಾರ್ಮ್​ ತಂಡಕ್ಕೆ ತಲೆನೋವಾಗಿದೆ. ಗ್ರೂಪ್ ಸ್ಟೇಜ್​​​​​​​ನಲ್ಲಿ ಸೈಲೆಂಟಾದ ವಿರಾಟ್​​​ ಕಥೆ ಮುಂದೇನು ಅನ್ನೋ ಪ್ರಶ್ನೆ ಕ್ರಿಕೆಟ್ ಪ್ರೇಮಿಗಳ ಕಾಡ್ತಿದೆ.

ಇದನ್ನೂ ಓದಿ:ಮಗನಿಂದ ಇಂತಹ ಪರಿಸ್ಥಿತಿ ಬರುತ್ತದೆ ಎಂದು ಗೊತ್ತಿರಲಿಲ್ಲ -ಪವನ್ ತಾಯಿ ಕಣ್ಣೀರು

ಕ್ರಿಕೆಟ್ ಪ್ರೇಮಿಗಳೇ ಡೋಂಟ್​ವರಿ
ಕಿಂಗ್ ಕೊಹ್ಲಿ ಟಿ20 ವಿಶ್ವಕಪ್​​ನಲ್ಲಿ ಕೊಹ್ಲಿ ಬ್ಯಾಟ್​​​ ಘರ್ಜಿಸ್ತಿಲ್ಲ. ಮೂರು ಪಂದ್ಯಗಳಲ್ಲಿ ಅಟ್ಟರ್​​ ಫ್ಲಾಪ್​ ಶೋ ನೀಡಿದ್ದಾರೆ. ವಿರಾಟ್​​ರ ಈ ಔಟ್ ​​​ಆಫ್​​​​​​​ ಫಾರ್ಮ್ ಆಟ ​ನೋಡಿದ ಬಹುತೇಕರು ಮತ್ತೆ ಲಯಕ್ಕೆ ಮರಳೋದು ಕಷ್ಟ ಎಂದು ಮಾತನಾಡಿಕೊಳ್ತಿದ್ದಾರೆ. ನೀವೇನಾದ್ರು ಹಾಗೇ ಅಂದುಕೊಂಡಿದ್ರೆ ಆ ಯೋಚನೆಯನ್ನ ಬದಲಿಸಿ ಬಿಡಿ. ಯಾಕಂದ್ರೆ ಕಿಂಗ್ ಕೊಹ್ಲಿ ಅಸಲಿ ಆಟ ಶುರುವಾಗೋದೆ ಸೂಪರ್​​​-8 ನಿಂದ.
ಗ್ರೂಪ್​ ಸ್ಟೇಜ್​​​ನಲ್ಲಿ ಕಮಾಲ್ ಮಾಡದ ಕೊಹ್ಲಿ, ಸೂಪರ್​​​​​-8 ರಲ್ಲಿ ಎಲ್ಲದಕ್ಕೂ ಲೆಕ್ಕಾ ಚುಕ್ತಾ ಮಾಡಲಿದ್ದಾರೆ. ಯಾಕಂದ್ರೆ ಸೂಪರ್​​​-8 ಪಂದ್ಯಗಳು ವೆಸ್ಟ್​ಇಂಡೀಸ್​​ನಲ್ಲಿ ನಡೆಯಲಿವೆ. ವಿಂಡೀಸ್​ನಲ್ಲಿ ನೆಲದಲ್ಲಿ ಕೊಹ್ಲಿ 3 ಪಂದ್ಯಗಳನ್ನ ಆಡಿದ್ದು, 141.77 ಸ್ಟ್ರೈಕ್​​ರೇಟ್​ನಲ್ಲಿ 112 ರನ್​ ಕೊಳ್ಳೆ ಹೊಡೆದಿದ್ದಾರೆ. ಕಳೆದ ಟಿ20 ವಿಶ್ವಕಪ್ ಹಾಗೂ 2024 ರ ಐಪಿಎಲ್​ ಜಬರ್ದಸ್ತ್​​​​ ಪರ್ಫಾಮೆನ್ಸ್ ನೋಡಿದ್ರೆ, ಇದು ಡೀಸೆಂಟ್​ ರೆಕಾರ್ಡ್ಸ್ ಅನ್ನಿಸಿಬಹುದು ನಿಜ. ಆದರೆ ಸೂಪರ್​​​-8ನಲ್ಲಿ ಎಲ್ಲಾ ರೆಕಾರ್ಡ್ಸ್ ಅನ್ನ ಕೊಹ್ಲಿ ಉಲ್ಟಾ ಮಾಡಲು ಹವಣಿಸ್ತಿದ್ದಾರೆ.

ಇದನ್ನೂ ಓದಿ:Rain Alert: ರಾಜ್ಯದ 8 ಜಿಲ್ಲೆಗಳಲ್ಲಿ ಇಂದಿನಿಂದ ಭರ್ಜರಿ ಮಳೆ.. ಹವಾಮಾನ ಇಲಾಖೆ ಎಚ್ಚರಿಕೆ

ಬಿಗ್​ ಸ್ಟೇಜ್​​​, ಬಿಗ್ ಮ್ಯಾಚ್​ನಲ್ಲಿ ಕೊಹ್ಲಿ ಅಬ್ಬರ ಫಿಕ್ಸ್​
ಜೂನ್​​ 19 ರಿಂದ ಸೂಪರ್​​​-8 ದಂಗಲ್ ಆರಂಭಗೊಳ್ಳಲಿದೆ. ಇಲ್ಲಿಂದಲೇ ಕೊಹ್ಲಿ ವಿರಾಟರೂಪ ದರ್ಶನವಾಗಲಿದೆ. ಯಾರೆಲ್ಲಾ ಟೀಕೆಯನ್ನೇ ಟೀಕಿಸಿದ್ರೋ, ಯಾರೆಲ್ಲಾ ಫಾರ್ಮ್ ಬಗ್ಗೆ​ ಪ್ರಶ್ನಿಸಿದ್ರೋ ಅವರಿಗೆಲ್ಲಾ ಅದ್ಭುತ ಆಟದ ಮೂಲಕ ಸೂಪರ್​​​​-8 ನಲ್ಲಿ ತಿರುಗೇಟು ಕೊಡಲಿದ್ದಾರೆ. ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಯಾಕಂದ್ರೆ ಕಿಂಗ್ ಕೊಹ್ಲಿ ಹೇಳಿ ಕೇಳಿ ಬಿಗ್​ ಮ್ಯಾಚ್ ಪ್ಲೇಯರ್​​.!

ಕ್ರೂಷಿಯಲ್ ಗೇಮ್ಸ್​ನಲ್ಲಿ ಕೊಹ್ಲಿ ಗೇಮ್​ ಚೇಂಜರ್​​​​..!
ಬಿಗ್​ ಸ್ಟೇಜ್​ನಲ್ಲಿ ಕಿಂಗ್ ಕೊಹ್ಲಿ ಸದಾ ಡೇಂಜರಸ್​​. ಬಲಿಷ್ಠ ತಂಡಗಳು ಎದುರು ದಿ ಬೆಸ್ಟ್​​ ಪರ್ಫಾಮೆನ್ಸ್​ ನೀಡ್ತಾರೆ. ಹಿಂದೆ ಅದನ್ನ ಪ್ರೂವ್ ಮಾಡಿದ್ದಾರೆ. ಸೂಪರ್​​​-8 ನಲ್ಲಿ ಭಾರತ ತಂಡ 3 ಪಂದ್ಯಗಳನ್ನ ಆಡಲಿದೆ. ಎಲ್ಲವೂ ಬಲಿಷ್ಠ ತಂಡಗಳೇ ಇರಲಿವೆ. ಎಲ್ಲಾ ಪಂದ್ಯಗಳು ಭಾರತಕ್ಕೆ ಮುಖ್ಯ. ಭಾರತ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಲು ಕನಿಷ್ಠ 3 ಪಂದ್ಯಗಳನ್ನ ಗೆಲ್ಲಬೇಕಿದೆ. ಕ್ರೂಷಿಯಲ್​​ ಟೈಮ್​ನಲ್ಲಿ ಕೊಹ್ಲಿ ಎಂದೂ ತಂಡವನ್ನು ಕೈಬಿಟ್ಟಿಲ್ಲ. ಏನಿದ್ರೂ ವೀರ ಸೇನಾನಿಯಂತೆ ಹೋರಾಡಿ ಗೆಲ್ಲಿಸಿಕೊಟ್ಟೇ ಅಭ್ಯಾಸ. ಸೋ ಸೂಪರ್​​​​-8ನಲ್ಲಿ ಕೊಹ್ಲಿ ಉಗ್ರಾವತಾರ ತಾಳೋದು ಪಕ್ಕಾ.

ಇದನ್ನೂ ಓದಿ:ಇಂದು ಕೊಹ್ಲಿಗೆ ಗೇಟ್​ಪಾಸ್​.. ಭಾರೀ ಬದಲಾವಣೆಯೊಂದಿಗೆ ಭಾರತ ಕಣಕ್ಕೆ.. ಅದಕ್ಕೂ ಇದೆ ಒಂದು ದೊಡ್ಡ ಕಾರಣ..!

ಒಟ್ಟಿನಲ್ಲಿ ಟಿ20 ವಿಶ್ವಕಪ್​ನಲ್ಲಿ ಕಿಂಗ್ ಕೊಹ್ಲಿ ಆರಂಭಿಕ ಪಂದ್ಯಗಳಲ್ಲಿ ಫೇಲಾಗಿದ್ದಾರೆ ನಿಜ. ಆದರೆ ವಿರಾಟ್ ಓರ್ವ ಅಪ್ರತಿಮ ಆಟಗಾರ. ಸೂಪರ್​​​​​​​-8 ನಂತ ಬಿಗ್ ಸ್ಟೇಜ್​​​​ನಲ್ಲಿ ಅಬ್ಬರಿಸೋದ್ರಲ್ಲಿ ನಿಸ್ಸೀಮ. ಇತಿಹಾಸವೇ ಅದಕ್ಕೆ ಹಿಡಿದ ಕೈಗನ್ನಡಿ. ಎಲ್ಲರ ಆಶಯದಂತೆ ಕೊಹ್ಲಿ ಸೂಪರ್​​​​​​​-8ನಲ್ಲಿ ವಿರಾಟೋತ್ಸವ ನಡೆಸಲಿ. ಟೀಮ್ ಇಂಡಿಯಾವನ್ನು ಎತ್ತಿ ಮೆರೆಸುವಂತಾಗಲಿ.

ಇದನ್ನೂ ಓದಿ:Watch: ‘ಕೊನೆ ಸಲ ಅಪ್ಪನ ನೋಡುತ್ತಾನೆ ಕರೆಸಿ ಸಾರ್..’ ದರ್ಶನ್ ಕೇಸ್​ನಲ್ಲಿ ಅರೆಸ್ಟ್ ಆಗಿರೋ ಅನು ಅಕ್ಕ ಕಣ್ಣೀರು

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಂ ಇಂಡಿಯಾ ಸೋಲೇ ಇಲ್ಲದೇ ಮುನ್ನುಗ್ತಿದ್ದರೂ ಫ್ಯಾನ್ಸ್​ಗೆ ಭಾರೀ ಬೇಸರ.. ಅದಕ್ಕೆಲ್ಲ ಕಾರಣ ಈತ..!

https://newsfirstlive.com/wp-content/uploads/2024/06/KOHLI-17.jpg

Load More