newsfirstkannada.com

ಶುಭ್​​ಮನ್​ ಗಿಲ್​ಗೆ ಟೀಮ್​ ಇಂಡಿಯಾದಿಂದ ಗೇಟ್​ಪಾಸ್.. ಕ್ಯಾಪ್ಟನ್ ರೋಹಿತ್ ಜೊತೆ ಜಗಳ ಮಾಡಿಕೊಂಡ್ರಾ?

Share :

Published June 16, 2024 at 2:54pm

    ಅಮೆರಿಕದಿಂದ ವೆಸ್ಟ್​​ ಇಂಡೀಸ್​ಗೆ ಹೊರಟಿರೋ ಟೀಮ್ ಇಂಡಿಯಾ

    ಭಾರತದ ಡ್ರೆಸ್ಸಿಂಗ್​ ರೂಮ್​ನಲ್ಲಿ ಅಸಮಾಧಾನ ಹೊಗೆಯಾಡ್ತಿದೆಯಾ?

    ತಂಡದಿಂದ ಅಂತರ ಕಾಯ್ದುಕೊಂಡ ಪಂಜಾಬ್​ ಪುತ್ತರ್ ಶುಭ್​ಮನ್

ಟೀಮ್​ ಇಂಡಿಯಾ ಸೂಪರ್​​- 8ಗೆ ಕಾಲಿಟ್ಟ ಬೆನ್ನಲ್ಲೇ ಡ್ರೆಸ್ಸಿಂಗ್​ ರೂಮ್​ನಲ್ಲಿ ಅಸಮಾಧಾನ ಸ್ಪೋಟವಾಗಿದೆ. ಅಶಿಸ್ತಿನ ಕಾರಣಕ್ಕೆ ಶುಭಮನ್​ ಗಿಲ್​ ತಲೆದಂಡ ಎಂಬ ಸುದ್ದಿ ಸೆನ್ಸೇಷನ್​ ಸೃಷ್ಟಿಸಿದೆ. ಎಲ್ಲ ಆಟಗಾರರು ಅಮೆರಿಕದಿಂದ ವೆಸ್ಟ್​ ಇಂಡೀಸ್​ಗೆ ಹೊರಟ್ರೆ, ಶುಭ್​ಮನ್ ಗಿಲ್​ ಭಾರತಕ್ಕೆ ವಾಪಾಸ್ಸಾಗ್ತಿದ್ದಾರೆ. ಅಷ್ಟಕ್ಕೂ ಗಿಲ್​​ಗೆ ಗೇಟ್​ಪಾಸ್​ ನೀಡಿರೋದ್ಯಾಕೆ?.

ಚುಟುಕು ವಿಶ್ವಕಪ್​ ಸಮರದಲ್ಲಿ ಟೀಮ್​ ಇಂಡಿಯಾದ ಅಬ್ಬರ ಜೋರಾಗಿದೆ. ಬ್ಯಾಕ್​ ಟು ಬ್ಯಾಕ್​ ಜಯದೊಂದಿಗೆ ಸೂಪರ್-​ 8 ಹಂತಕ್ಕೆ ಎಂಟ್ರಿ ಕೊಟ್ಟಾಗಿದೆ. ಅಮೆರಿಕದಲ್ಲಿ ಅಬ್ಬರಿಸಿರೋ ಟೀಮ್​ ಇಂಡಿಯಾ, ಟ್ರೋಫಿ ಗೆಲ್ಲೋ ಹಾಟ್​ ಫೇವರಿಟ್​ ಅನಿಸಿಕೊಂಡಿದೆ. ಜಯದ ಆತ್ಮವಿಶ್ವಾಸದಲ್ಲಿರೋ ಆಟಗಾರರು 17 ವರ್ಷಗಳ ಟಿ20 ವಿಶ್ವಕಪ್​ ಗೆಲುವಿನ ಕೊರಗಿಗೆ ಬ್ರೇಕ್​ ಹಾಕಲು ಪಣತೊಟ್ಟಿದ್ದಾರೆ.

ಟೀಮ್​ ಇಂಡಿಯಾದಲ್ಲಿ ಮತ್ತೆ ಅಸಮಾಧಾನದ ಹೊಗೆ.?

ಬ್ಯಾಟಿಂಗ್​ ವೈಫಲ್ಯದಂತ ದೊಡ್ಡ ವೀಕ್​ನೆಸ್​ನ ಹೊರತಾಗಿ ಟೀಮ್​ ಇಂಡಿಯಾ ಸೂಪರ್-​ 8 ಹಂತಕ್ಕೆ ಕ್ವಾಲಿಫೈ ಆಗಿದೆ. ಅದೃಷ್ಟವೋ.. ದೇವರ ಆಶಿರ್ವಾದವೋ.. ಎಲ್ಲ ಸರಿಯಾಗಿ ಹೋಗ್ತಿದೆ. ಈ ಬಾರಿ ಟ್ರೋಫಿ ನಮ್ದಾಗುತ್ತೆ ಅಂತಾ ಫ್ಯಾನ್ಸ್​​ ಕನಸು ಕಾಣ್ತಿದ್ದಾರೆ. ಈ ನಡುವೆ ಶಾಕಿಂಗ್​ ಸುದ್ದಿಯೊಂದು ಹೊರಬಿದ್ದಿದೆ. ಟೀಮ್​​ ಇಂಡಿಯಾ ಡ್ರೆಸ್ಸಿಂಗ್​ ರೂಮ್​ನಲ್ಲಿ ಅಸಮಾಧಾನದ ಹೊಗೆಯಾಡಲು ಶುರುವಾಗಿದೆ.

ರಿಸರ್ವ್​ ಪ್ಲೇಯರ್​​ ಶುಭ್​​ಮನ್​ ಗಿಲ್​ಗೆ ಶಾಕ್​.?

15 ಜನ ಆಟಗಾರರ ಜೊತೆಗೆ ನಾಲ್ವರು ರಿಸರ್ವ್​ ಪ್ಲೇಯರ್ಸ್​ ಕೂಡ ಅಮೆರಿಕದಲ್ಲಿ ಟೀಮ್​ ಇಂಡಿಯಾ ಜೊತೆಗಿದ್ದಾರೆ. ಅವ್ರಲ್ಲಿ ಶುಭಮನ್​ ಗಿಲ್​ ಕೂಡ ಒಬ್ಬರು. ಟೂರ್ನಿಯ ಅಂತ್ಯದವರೆಗೂ ಇವ್ರು ತಂಡದ ಜೊತೆಯಲ್ಲಿ ಇರ್ತಾರೆ ಅನ್ನೋದು ಮೊದಲೇ ಇದ್ದ ಪ್ಲಾನ್​ ಆಗಿತ್ತು. ಆದ್ರೀಗ ಆ ಪ್ಲಾನ್​ನಲ್ಲಿ ಸಡನ್​ ಚೈಂಜ್​​ ಆಗಿದೆ. ಶುಭ್​ಮನ್​ ಗಿಲ್​, ಆವೇಶ್​ ಖಾನ್​ರನ್ನ ವಾಪಾಸ್​ ಭಾರತಕ್ಕೆ ಕಳುಹಿಸಲು ಸಿದ್ಧತೆ ನಡೆದಿದೆ. ಇಡೀ ತಂಡ ಅಮೆರಿಕಾದಿಂದ ವೆಸ್ಟ್​ ಇಂಡಿಸ್​ ಕಡೆಗೆ ಪ್ರಯಾಣ ಬೆಳೆಸಿದ್ರೆ, ಇವರಿಬ್ಬರು ಭಾರತಕ್ಕೆ ವಾಪಾಸ್ಸಾಗ್ತಿದ್ದಾರೆ.

ಅಶಿಸ್ತಿಗೆ ಯಂಗ್​​ ಬ್ಯಾಟರ್​​ ಶುಭ್​ಮನ್​ ಗಿಲ್​ ತಲೆದಂಡ.?

ಇಬ್ಬರ ವಾಪಾಸ್ಸಾತಿಗೆ ಬ್ಯಾಕ್​ ಟು ಬ್ಯಾಕ್​ ಪಂದ್ಯಗಳಿವೆ. ಟ್ರಾವೆಲಿಂಗ್​ ಸಮಸ್ಯೆ ಎಂಬ ಕಾರಣಗಳನ್ನ ಬಿಸಿಸಿಐ ಮೂಲಗಳು ನೀಡಿವೆ. ಇದು ಆವೇಶ್​ ಖಾನ್​​ ವಿಚಾರದಲ್ಲಿ ನಿಜ ಇರಬಹುದು ಆದ್ರೆ, ಶುಭ್​ಮನ್​ ಗಿಲ್​ ವಿಚಾರದಲ್ಲಿ ಅಲ್ಲ ಅಂತಿದೆ ಮತ್ತೊಂದು ಮೂಲ. ಅಶಸ್ತಿನ ನಡೆಯ ಕಾರಣಕ್ಕೆ ಶುಭ್​​ಮನ್​ ಗಿಲ್​ಗೆ ಗೇಟ್​ಪಾಸ್​ ನೀಡಲಾಗಿದ್ಯಂತೆ.

ಶುಭ್​ಮನ್​ ಗಿಲ್​​​ಗೆ ಮ್ಯಾನೇಜ್​ಮೆಂಟ್​ ಮೇಲೆ ಮುನಿಸು.?

ಭಾರತ ತಂಡ ಅಮೆರಿಕಗೆ ತೆರಳಿದ ಬಳಿಕ ಶುಭ್​​ಮನ್​ ಗಿಲ್​ ನಡೆ ತುಂಬಾ ವಿಚಿತ್ರವಾಗಿತ್ತು. ತಂಡದಿಂದ ಅಂತರಕಾಯ್ದುಕೊಂಡಿದ್ದ ಗಿಲ್​, ಆರಂಭದಲ್ಲಿ ನಡೆದ ಫೋಟೋಶೂಟ್, ಮೊದಲ ಪ್ರಾಕ್ಟಿಸ್​​ ಸೆಷನ್​​​ ಹೊರತಾಗಿ ಹೆಚ್ಚು ತಂಡದೊಂದಿಗೆ ಕಾಣಿಸಿಕೊಳ್ಳಲಿಲ್ಲ. ಪಾಕ್​ ವಿರುದ್ಧದ ಪಂದ್ಯದಲ್ಲಿ ರಿಸರ್ವ್​ ಪ್ಲೇಯರ್​ಗಳಾದ ರಿಂಕು ಸಿಂಗ್​, ಖಲೀಲ್​ ಅಹ್ಮದ್​, ಆವೇಶ್​ ಖಾನ್​ ತಂಡಕ್ಕೆ ಚಿಯರ್​ ಮಾಡ್ತಿದ್ರೆ, ಶುಭ್​ಮನ್​ ಅಡ್ರೆಸ್ಸೇ ಇರಲಿಲ್ಲ. ಗಿಲ್​​​ ಮುಖ್ಯ ತಂಡಕ್ಕೆ ಸೆಲೆಕ್ಟ್​ ಮಾಡಿಲ್ಲ ಅನ್ನೋ ಕಾರಣಕ್ಕೆ ಅಸಮಾಧಾನಗೊಂಡಿದ್ದಾರಂತೆ. ಈ ಕಾರಣಕ್ಕೆ ತಂಡದಿಂದ ಅಂತರ ಕಾಯ್ದುಕೊಂಡಿರೋದು ಎನ್ನಲಾಗ್ತಿದೆ.

ಇದನ್ನೂ ಓದಿ: ದರ್ಶನ್​ ಸಿಕ್ಕಿದ್ಮೇಲೆ ಪವಿತ್ರಾ ಕೋಟಿ ಕುಳ.. ಹತ್ತು ವರ್ಷ.. ಹೇಗಿದ್ದಳು..? ಹೇಗಾದಳು..?

ತಂಡದಿಂದ ದೂರ.. ಬ್ಯುಸಿನೆಸ್​ ಕಡೆಗೆ ಗಮನ.!

ತಂಡದಿಂದ ಅಂತರ ಕಾಯ್ದುಕೊಂಡ ಶುಭ್​ಮನ್​ ಗಿಲ್​, ತಮ್ಮ ವೈಯಕ್ತಿಕ ಬ್ಯುಸಿನೆಸ್ ಕಡೆಗೆ ಹೆಚ್ಚಿನ ಟೈಮ್​ ಸ್ಪೆಂಡ್​ ಮಾಡಿದ್ರು. ವಿಶ್ವಕಪ್​ಗೆಂದು ತಂಡದೊಂದಿಗೆ ತೆರಳಿ ಕೆಲ ಖಾಸಗಿ ಕಂಪನಿಗಳ ಮಾತುಕತೆಯಲ್ಲಿ ಬ್ಯುಸಿಯಾಗಿದ್ರು. ವೀಕಸ್ ವೆಂಚರ್ಸ್​ ಎಂಬ ಕಂಪನಿ ಜೊತೆ ಟೈ ಅಪ್​ ಆಗಿ ಹೂಡಿಕೆಯನ್ನೂ ಮಾಡಿದ್ರು. ರಿಸರ್ವ್​ ಪ್ಲೇಯರ್​​ ಆಗಿದ್ದುಕೊಂಡು ತಂಡದೊಂದಿಗೆ ಇರದೇ, ವೈಯಕ್ತಿಕ ಕೆಲಸಗಳಲ್ಲಿ ಗಿಲ್​ ಬ್ಯುಸಿಯಾಗಿದ್ರಿಂದ ಮ್ಯಾನೇಜ್​ಮೆಂಟ್​ ಕೆಂಗಣ್ಣಿಗೆ ಗುರಿಯಾಗಿದ್ರಂತೆ. ಹೀಗಾಗಿ ಅಶಿಸ್ತಿನ ವರ್ತನೆಯ ಕಾರಣ ನೀಡಿ ಗಿಲ್​ ಗೇಟ್​ಪಾಸ್​ ನೀಡಲಾಗ್ತಿದೆ ಎಂಬ ಟಾಕ್​ ಶುರುವಾಗಿದೆ.

ಕ್ಯಾಪ್ಟನ್​​ ರೋಹಿತ್​ ವಿರುದ್ಧ ರೊಚ್ಚಿಗೆದ್ರಾ ಶುಭ್​ಮನ್​.?

ನಾಯಕ ರೋಹಿತ್​ ಶರ್ಮಾ ಮೇಲೆ ಶುಭ್​ಮನ್​ ಗಿಲ್​ ಅಸಮಾಧಾನಗೊಂಡಿದ್ದಾರಾ ಎಂಬ ಚರ್ಚೆ ಸದ್ಯ ನಡೀತಿದೆ. ಗಿಲ್​​ರನ್ನ ಭಾರತಕ್ಕೆ ವಾಪಾಸ್​ ಕಳಿಸೋ ಸುದ್ದಿ ಹೊರಬಿದ್ದ ಬೆನ್ನಲ್ಲೆ, ಇನ್ಸ್​​ಸ್ಟಾಗ್ರಾಂನಲ್ಲಿ ರೋಹಿತ್​ರನ್ನ ಅನ್​​ಫಾಲೋ ಮಾಡಿದ್ದಾರೆ. ಇದು, ಶುಭ್​ಮನ್​ ಗಿಲ್​ ತಲೆದಂಡ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಈ ವಿವಾದ ಮುಂದೆ ಎಲ್ಲಿಗೆ ಹೋಗಿ ತಲುಪುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಶುಭ್​​ಮನ್​ ಗಿಲ್​ಗೆ ಟೀಮ್​ ಇಂಡಿಯಾದಿಂದ ಗೇಟ್​ಪಾಸ್.. ಕ್ಯಾಪ್ಟನ್ ರೋಹಿತ್ ಜೊತೆ ಜಗಳ ಮಾಡಿಕೊಂಡ್ರಾ?

https://newsfirstlive.com/wp-content/uploads/2024/06/GILL_ROHIT.jpg

Load More