newsfirstkannada.com

ದರ್ಶನ್​ ಸಿಕ್ಕಿದ್ಮೇಲೆ ಪವಿತ್ರಾ ಕೋಟಿ ಕುಳ.. ಹತ್ತು ವರ್ಷ.. ಹೇಗಿದ್ದಳು..? ಹೇಗಾದಳು..?

Share :

Published June 16, 2024 at 1:53pm

  ಸಂಯಮ ಕಲಿಯದೇ ಸಾಂತ್ವನ ಕೇಂದ್ರ ಸೇರಿದ ಪವಿತ್ರಾ!

  ಪವಿತ್ರಾ ಸಿಟ್ಟಿನ ಜ್ವಾಲೆಗೆ ಎಷ್ಟು ಕುಟುಂಬಗಳು ದಿಕ್ಕಾಪಾಲು!

  ಕಿರಾಣಿ ಅಂಗಡಿ ಮಾಲೀಕನ ಪುತ್ರಿ ಇವತ್ತು ಕೋಟಿ ಕುಳ!

ಒಂದೂವರೆ ಕೋಟಿಯ ಕಾರು.. ಪವಿತ್ರಾಗೆ ಗಿಫ್ಟ್​ ಕೊಟ್ಟಿದ್ದ ದರ್ಶನ್​! – ಏನೂ ಇಲ್ಲವಾಗಿದ್ದ ಪವಿತ್ರಾ ದರ್ಶನ್​ ಸಿಕ್ಕಿದ್ಮೇಲೆ ಕೋಟಿ ಕುಳ! ಹತ್ತು ವರ್ಷ..ಲೈಫ್​​ ಜಿಂಗಾಲಾಲಾ.. ಪವಿತ್ರಾ ಬಿಂದಾಸ್​​ ಆಗಿದ್ದೇಗೆ? ಅನ್ನೋ ವಿಚಾರ ತುಂಬಾನೇ ಇಂಟರೆಸ್ಟಿಂಗ್ ಆಗಿದೆ.

ಜೀವನದಲ್ಲಿ ಸಂಯಮ ರೂಢಿಸಿಕೊಳ್ಳದಿದ್ರೆ ಸಾಂತ್ವನ ಕೇಂದ್ರ ಸೇರಬೇಕಾಗುತ್ತೆ ಅನ್ನೋದಕ್ಕೆ ದರ್ಶನ್ ಸಂಗಾತಿ ಪವಿತ್ರಾ ಗೌಡ ಬೆಸ್ಟ್​ ಎಕ್ಸಾಂಪಲ್​. ಕೋಟೆ ಕಟ್ಟಿ ಮೆರೆದೋರೆಲ್ಲಾ ಏನೇನೋ ಆಗಿರುವಾಗ ರಾತ್ರೋ ರಾತ್ರಿ ಸಿರಿತನವನ್ನ ಕಂಡವರ ಅಬ್ಬರ, ಆಡಂಬರ ಯಾವ ಲೆಕ್ಕ. ರೇಣುಕಾಸ್ವಾಮಿಯ ಕೊಲೆ ಕೇಸಲ್ಲಿ ದರ್ಶನ್​ ಪಟಾಲಂ ವಿರುದ್ಧ ಬೆಚ್ಚಿ ಬೀಳಿಸೋ ವಿಷ್ಯಗಳು ಬಯಲಾಗ್ತಿವೆ. ಈ ಮಧ್ಯೆ ಎಲ್ಲದ್ದಕ್ಕೂ ಮೂಲ ಅನಿಸಿಕೊಳ್ತಿರೋ ಪವಿತ್ರಾ ಗೌಡಳ ಲೈಫ್​ಸ್ಟೈಲ್​ ಭರ್ಜರಿ ಸದ್ದುಮಾಡ್ತಿದೆ. ಜೀವನದಲ್ಲಿ ಏನೇನೂ ಇಲ್ಲವಾಗಿದ್ದ ಪವಿತ್ರಾಗೆ ಸೆಲೆಬ್ರಿಟಿ ಸ್ಟೇಟಸ್​ ಸಿಕ್ಕದ್ದೇ ರೋಚಕ. ಕಿರಾಣಿ ಅಂಗಡಿ ಮಾಲೀಕನ ಪುತ್ರಿ ಕೋಟಿ ಕುಳವಾಗಿದ್ದೇಗೆ ಅನ್ನೋದು ಸಖತ್​ ಇಂಟರೆಸ್ಟಿಂಗ್​!

ಇದನ್ನೂ ಓದಿ:‘ನೀನ್ಯಾರು? ನಿನ್ ಕಥೆ ಎಲ್ಲಾ ಗೊತ್ತು..’ ಬಂಧನದ ವೇಳೆ ಖಡಕ್ ಅಧಿಕಾರಿ ದರ್ಶನ್​ಗೆ ಕೊಟ್ಟ ವಾರ್ನಿಂಗ್ ಏನು..?

ಒಂದು ಕೊಲೆ 18 ಜನರನ್ನ ಕಂಬಿ ಹಿಂದೆ ಸೇರುವಂತೆ ಮಾಡಿದೆ. ಬಾಕ್ಸಾಫೀಸ್ ಸುಲ್ತಾನ ಠಾಣೆಯಲ್ಲಿ ಸಿಗರೇಟು, ಮ್ಯಾಚ್​ಬಾಕ್ಸು ಸಿಗದೇ ಒದ್ದಾಡ್ತಿದ್ದಾರೆ. ಇಷ್ಟಕ್ಕೆಲ್ಲಾ ಕಾರಣ ಪವಿತ್ರಾ ಗೌಡಳೇ ಅಂತಾ ಉರೆಲ್ಲಾ ಗುಲ್ಲೆಬ್ಬಿದ್ದು ಯಾರಿವಳು ಹಠಮಾರಿ ಅನ್ನೋದೇ ಎಲ್ಲರ ಕುತೂಹಲ.

ಲಕ್ಷ ಲಕ್ಷ ಬೆಲೆ ಬಾಳುವ ಕಾರು, ನಕ್ಷತ್ರಗಳೂ ನಾಚುವಂತಹ ಒಡವೆಗಳು. ಡಿಸೈನರ್ ವೇರ್​ಗಳೂ.. ರಾಣಿಯೂ ದಂಗಾಗಿ ಹೋಗುವಂತಹ ಜಿಂಗ್​ಚಾಕ್​ ಜೀವನ.. ಹಾಕುವ ಒಂದೊಂದು ಬಟ್ಟೆ, ವಾಚು, ಒಡವೆಗಳೆಲ್ಲಾ ಬ್ರ್ಯಾಂಡೆಡ್​ ಹಾಗೂ ಸಖತ್​ ಎಕ್ಸ್​ಪೆನ್ಸಿವ್​. ಅಂದಹಾಗೇ, ಪವಿತ್ರ ಗೌಡಳ ಜೀವನ ಕಳೆದ ಹತ್ತು ಹನ್ನೆರಡು ವರ್ಷಗಳ ಹಿಂದೆ ಹೀಗಿರಲಿಲ್ಲ. ಸಾಮಾನ್ಯ ಮಧ್ಯಮವರ್ಗದ ಕುಟುಂಬದ ಹೆಣ್ಣು ಮಗಳಾಗಿದ್ದ ಈಕೆ ಇಷ್ಟೊಂದು ಸೌಂಡ್​ ಮಾಡಲು ಶುರುಮಾಡಿದ್ದು ಕೆಲ ವರ್ಷಗಳ ಹಿಂದಷ್ಟೇ. ಅದೂ ದರ್ಶನ್​ ಸಾಂಗತ್ಯ ಮಾಡಿದ ಮೇಲೆ ಅನ್ನೋದು ಆಕೆಯನ್ನ ಹತ್ತಿರದಿಂದ ನೋಡಿದವರ ಮಾತು.

ಇದನ್ನೂ ಓದಿ:ದರ್ಶನ್ ಜೊತೆಯಲ್ಲೇ ಇರ್ತಾರೆ ಮೂವರು ದುಶ್ಮನ್​​ಗಳು.. ಪ್ರತಿ ಅನಾಹುತಗಳಿಗೂ ಕಾರಣ ಅವೇ..!

ಪಕ್ಕಾ ಮಿಡ್ಲ್​ ಕ್ಲಾಸ್​ ಹುಡುಗಿಯಾಗಿದ್ದ ಪವಿತ್ರಾಗೌಡಗೆ ಸಿರಿವಂತಿಕೆಯ ಕಿರೀಟ ಸಿಕ್ಕಿದ್ದು ದರ್ಶನ್​ ಭೇಟಿಯಾದ್ಮೇಲೆ ಅಂತಾ ಹಲವರು ಮಾತನಾಡಿಕೊಳ್ತಾರೆ. ಪವಿತ್ರಾ ಬಾಳಲ್ಲಿ ದರ್ಶನ್ ಬಂದ್ಮೇಲೆಯೇ ಆಕೆಯ ಲೈಫು ಲಕಲಕಲಕ ಅನ್ನೋಕೆ ಶುರುವಾಯ್ತಂತೆ. ಪವಿತ್ರಾ ಕೋಟಿ ಕೋಟಿಯನ್ನ ಬೋಟಿ ಥರಾ ನೋಡೊಕೆ ಶುರುಮಾಡಿದ್ದಂತೆ. ಲಕ್ಸುರಿ ಅನ್ನೋದು ಇವಳ ಕಾಲ ಕೆಳಗೆ ತುಪಕ್ ಅಂತಾ ಬಂದು ಬಿತ್ತಂತೆ. ಅದ್ರಲ್ಲೂ ಮುಖ್ಯವಾಗಿ ದರ್ಶನ್​ ಪರಿಚಯವಾದ್ಮೇಲೆ ಪವಿತ್ರಾಳ ಫ್ರೆಂಡ್​ ಸರ್ಕಲ್ಲೇ ಬದಲಾಗಿ ಹೋಯ್ತು ಅನ್ನೋದು ಆಕೆಯ ಹತ್ತಿರದವರು ಹೇಳುವ ಮಾತು..

ಸಾಮಾನ್ಯ ಮನೆಯ ಹುಡುಗಿಯಾಗಿದ್ದ ಪವಿತ್ರ ದರ್ಶನ್​ ಸಂಗಾತಿಯಾದ್ಮೇಲೆ, ಹತ್ತಿಪ್ಪತ್ತು ಸಾವಿರ ರೂಪಾಯಿಯ ಬ್ರ್ಯಾಂಡೆಂಡ್​ ಬಟ್ಟೆಗಳನ್ನ ನಿರಾಯಾಸವಾಗಿ ಧರಿಸೋದಕ್ಕೆ ಶುರುಮಾಡಿದ್ದರು.. ಲಕ್ಷ ಲಕ್ಷ ಮೌಲ್ಯದ ಒಡವೆಗಳನ್ನ ಹಾಕೋದಕ್ಕೆ ಆರಂಭಿಸಿದ್ಲು. ಇಂಡಸ್ಟ್ರಿಯ ದೊಡ್ಡ ದೊಡ್ಡ ಫ್ಯಾಮಿಲಿಗಳ ಜೊತೆಗೆ ಕನೆಕ್ಟ್​ ಆಗುವ ಮೂಲಕ ತನ್ನ ಸರ್ಕಲ್​​ನೂ ಗಟ್ಟಿಮಾಡಿಕೊಂಡ್ಲು. ಜೊತೆಗೆ ದರ್ಶನ್​ನ ಎಲ್ಲಾ ಸ್ನೇಹಿತರು ಈಕೆಗೂ ಸ್ನೇಹಿತರಾದ್ರು. ಉದ್ಯಮ ಸಾಮ್ರಾಜ್ಯಕ್ಕೂ ಈಕೆ ಕಾಲಿಟ್ಟಳು.

ಇದನ್ನೂ ಓದಿ:ಸೂತ್ರಧಾರಿಗಳ ತಾಳಕ್ಕೆ ಕುಣಿದ ಪಾತ್ರಧಾರಿಗಳು.. ಯಾರು ಯಾವ ರೋಲ್ ನಿಭಾಯಿಸಿದರು..?

₹1.50 ಕೋಟಿಯ ಕಾರು ಗಿಫ್ಟ್​
ಪವಿತ್ರ ಗೌಡ ಹಾಗೂ ದರ್ಶನ್​ ಮಧ್ಯೆ ಇರೋದು ಮೋಹವೋ, ಪ್ರೇಮವೋ, ಅಥವಾ ವೈವಾಹಿಕ ಸಂಬಂಧವೋ ಗೊತ್ತಿಲ್ಲ. ಪೊಲೀಸರು ಹೇಳಿರೋ ಪ್ರಕಾರ ಪವಿತ್ರಾ ದರ್ಶನ್​​ರ ಎರಡನೇ ಪತ್ನಿ.. ದರ್ಶನ್​ ಅಭಿಮಾನಿಗಳ ಪ್ರಕಾರ ಇವ್ರು ಎರಡನೇಯವರು.. ವಿಜಯಲಕ್ಷ್ಮಿ ದೊಡ್ಡ ಅತ್ತಿಗೆಯಾದ್ರೆ, ಇವ್ರು ಚಿಕ್ಕತ್ತಿಗೆ. ದರ್ಶನ್​ ಹಾಗೂ ಪವಿತ್ರಾ ನಡುವಿನ ಸಂಬಂಧ ಇಂದು ನಿನ್ನೆಯದಲ್ಲ, ಇದು ಬರೋಬ್ಬರಿ 10 ವರ್ಷಗಳ ಬಂಧ ಅನುಬಂಧ ಡ್ಯಾಶ್​ ಡ್ಯಾಶ್ ಅಂತಾ ಖುದ್ದು ಪವಿತ್ರಾನೇ ಪೋಸ್ಟ್​ ಹಾಕಿ ಲಕ್ಷ್ಮಿ ಸಿಟ್ಟಿಗೆ ತುತ್ತಾಗಿದ್ದಳು. ಹೀಗಿರುವಾಗ, ಈ ಒಂದು ದಶಕದಲ್ಲಿ ಸಾಕಷ್ಟು ಐಶಾರಾಮಿ ಉಡುಗೊರೆಗಳು ದರ್ಶನ್​ರಿಂದ ಪವಿತ್ರಾ ಸಂಪಾದಿಸಿದ್ದಾಳೆ ಅನ್ನೋ ಮಾತುಗಳಿದೆ.

ಪವಿತ್ರಾ ಗೌಡ ಉದ್ಯಮಕ್ಕೂ ಲಕ್ಷ ಲಕ್ಷ ದುಡ್ಡು ಹಾಕಿದ್ರಾ ದರ್ಶನ್​?
ಸಿನಿಮಾರಂಗಕ್ಕೆ ಕಾಲಿಟ್ಟಿದ್ದ ಪವಿತ್ರಾ ಗೌಡಳಿಗೆ ಲಕ್​ ಅಷ್ಟೇನೂ ಕೈ ಹಿಡೀಲಿಲ್ಲ. ಮಾಡಿದ್ದು ಬೆರಳೆಣಿಕೆಯ ಚಿತ್ರಗಳಷ್ಟೇ ಆದರೂ, ಅವು ಕೂಡ ಅಷ್ಟೇನೂ ಸದ್ದು ಮಾಡ್ಲಿಲ್ಲ. ಸಿನಿಮಾರಂಗದಲ್ಲಿ ಸಕ್ಸಸ್ ಆಗದ ಪವಿತ್ರ ದರ್ಶನ್​ ಜೊತೆ ಜೊತೆಗಿದ್ದುಕೊಂಡೇ ಉದ್ಯಮದತ್ತಲೂ ಮುಖ ಮಾಡ್ತಾರೆ. ಅದೇ ಆರ್​ ಆರ್​ ನಗರದಲ್ಲಿ ರೆಡ್​ ಕಾರ್ಪೆಟ್​​ ಸ್ಟುಡಿಯೋ 777 ಹೆಸರಿನಲ್ಲಿ ಫ್ಯಾಷನ್​ ಬುಟಿಕ್​ಗೆ ಪವಿತ್ರಾಳೇ ಓನರ್. ಈಕೆಯ ಬುಟಿಕ್​ನಲ್ಲಿ ಡಿಸೈನರ್​​ವೇರ್​ಗಳು ಸಿಗಲಿದ್ದು, ಸಾಕಷ್ಟು ಸೆಲೆಬ್ರಿಟಿಗಳು ಇಲ್ಲಿಗೆ ಬಂದು ಬಟ್ಟೆ ಖರೀದಿ ಮಾಡ್ತಾರೆ. ಈ ಶಾಪ್​ನ ಓಪನಿಂಗ್​ಗೆ ಕ್ರೇಜಿ ಕ್ವೀನ್​ ರಕ್ಷಿತಾ, ಅಮೂಲ್ಯ, ಸೋನಲ್ ಮಾಂಟೆರೋದಂತಹ ಖ್ಯಾತ ನಾಯಕಿಯರು ಆಗಮಿಸಿ ಸಾಥ್​ ಕೊಟ್ಟಿದ್ರು. ಪವಿತ್ರಾ ಗೌಡಳ ಈ ರೆಡ್​ ಕಾರ್ಪೆಟ್​ ಸ್ಟುಡಿಯೋ ಓಪನ್​ ಮಾಡೋದಕ್ಕೆ ದರ್ಶನ್​ 30 ಲಕ್ಷ ರೂಪಾಯಿಯಷ್ಟು ಹಣ ಕೊಟ್ಟಿದ್ದರು ಅಂತಾ ಹೇಳಲಾಗುತ್ತೆ. ಮಿಕ್ಕಿದ್ದನ್ನ ಪವಿತ್ರಾ ಲೋನ್​ ಮಾಡಿ ಇನ್ವೆಸ್ಟ್​ ಮಾಡಿದ್ರು ಅನ್ನೋ ಮಾತಿದೆ.

ಇದನ್ನೂ ಓದಿ:ಅಪ್ಪನ ಜೀವ ತೆಗೆದ ದರ್ಶನ್ ಮೇಲಿನ ಅಭಿಮಾನ.. ಪ್ರಕರಣದಲ್ಲಿ ಅನು ಪಾತ್ರ ಏನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ ಸಿಕ್ಕಿದ್ಮೇಲೆ ಪವಿತ್ರಾ ಕೋಟಿ ಕುಳ.. ಹತ್ತು ವರ್ಷ.. ಹೇಗಿದ್ದಳು..? ಹೇಗಾದಳು..?

https://newsfirstlive.com/wp-content/uploads/2024/06/PAVITRA-GWODA.jpg

Load More