newsfirstkannada.com

×

WATCH: ಭಾಗ್ಯದ ಬಾಗಿಲು ತೆರೆದು ಮರೆಯಾದ ಮಾಣಿಕ್ಯ; ರಾಮೋಜಿ ರಾವ್‌ ಅವರಿಗೆ ನುಡಿ ನಮನ

Share :

Published June 16, 2024 at 8:12pm

Update June 16, 2024 at 8:17pm

    ಜೂನ್ 8 ರಂದು ಇಹಲೋಕ ತ್ಯಜಿಸಿದ ಮಾಧ್ಯಮ ಲೋಕದ ದಿಗ್ಗಜ

    ಅನ್ನದಾತ ರಾಮೋಜಿ ರಾವ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

    ರಾಮೋಜಿ ರಾವ್ ವ್ಯಕ್ತಿ, ವ್ಯಕ್ತಿತ್ವದ ಗುಣಗಾನ ಮಾಡಿದ ಪತ್ರಕರ್ತರು

ಬೆಂಗಳೂರು: ರಾಮೋಜಿ ರಾವ್ ಈನಾಡು ಕಂಡಂತಹ ಮೇರು ಶಿಖರ. ಮಾಧ್ಯಮ ಲೋಕದ ಧೀಮಂತ ವ್ಯಕ್ತಿ, ವ್ಯಕ್ತಿತ್ವ ಈಗ ನಮ್ಮೊಂದಿಗಿಲ್ಲ. ಲಕ್ಷಾಂತರ ಪತ್ರಕರ್ತರಿಗೆ ಅಕ್ಷರಾಭ್ಯಾಸ ಮಾಡಿಸಿ ಅನ್ನದಾತರಿಗಿದ್ದ ರಾಮೋಜಿ ರಾವ್ ಅವರಿಗೆ ಇಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈಟಿವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅನೇಕ ಪತ್ರಕರ್ತರು ಭಾವಪೂರ್ಣ ನಮನ ಸಮರ್ಪಿಸಿದ್ದಾರೆ.

ಹೌದು.. ರಾಮೋಜಿ ರಾವ್ ಅನ್ನೋದೇ ಒಂದು ಸಾಧನೆಯ ಗಿರಿ ಶಿಖರ. ಈ ಮೇರು ಪರ್ವತವನ್ನು ದೂರದಿಂದ ನೋಡಿದವರೇ ನಿಬ್ಬೆರಗಾಗಿ ನಿಲ್ಲುತ್ತಾರೆ. ಇನ್ನು ಈ ಪರ್ವತದ ಆಶ್ರಯ ಪಡೆದವರು, ನೆರಳಲ್ಲಿ ಬದುಕು ಕಟ್ಟಿಕೊಂಡವರು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.

ಇದನ್ನೂ ಓದಿ: ಲಕ್ಷಾಂತರ ಪತ್ರಕರ್ತರಿಗೆ ಅಕ್ಷರಾಭ್ಯಾಸ ಮಾಡಿಸಿದ ದಾರ್ಶನಿಕ; ರಾಮೋಜಿ ರಾವ್ ಅವರಿಗೆ ನುಡಿ ನಮನ 

ರಾಮೋಜಿ ಫಿಲ್ಮ್‌ ಸಿಟಿಯ ಸೃಷ್ಟಿಕರ್ತ, ಈನಾಡು ಸಮೂಹ ಸಂಸ್ಥೆಯ ಸಂಸ್ಥಾಪಕ ರಾಮೋಜಿ ರಾವ್ ಅವರು ಕಳೆದ ಜೂನ್ 8 ರಂದು ಇಹಲೋಕವನ್ನ ತ್ಯಜಿಸಿದ್ದಾರೆ. ಧೀಮಂತ ವ್ಯಕ್ತಿಯ ಅಗಲಿಕೆಯ ಹಿನ್ನೆಲೆಯಲ್ಲಿ ಈಟಿವಿ ಬಳಗ ಇಂದು ಅನ್ನದಾತ ರಾಮೋಜಿ ರಾವ್ ಅವರಿಗೆ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಅನ್ನದಾತ ರಾಮೋಜಿ ರಾವ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಸುದ್ದಿ ವಾಹಿನಿ ಹಾಗೂ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಪತ್ರಕರ್ತರು ಭಾಗವಹಿಸಿದ್ದರು.

ಇದನ್ನೂ ಓದಿ: ಉಪ್ಪಿನಕಾಯಿ ಮಾರಾಟದಿಂದ ಸಾಮ್ರಾಜ್ಯ ಕಟ್ಟಿದ ಧೀಮಂತ.. ರಾಮೋಜಿ ರಾವ್ ಬದುಕಿನ ರೋಚಕ ಕಥೆ ಇಲ್ಲಿದೆ 

ನ್ಯೂಸ್ ಫಸ್ಟ್ CEO ರವಿ ಕುಮಾರ್ ಅವರು ರಾಮೋಜಿ ರಾವ್ ಅವರು ಅದೆಷ್ಟೋ ಮಾಧ್ಯಮ ಪ್ರತಿಭೆಯ ಸೃಷ್ಟಿಕರ್ತರು. ಇಂದು ದೇಶದ ಮೂಲೆ, ಮೂಲೆಯಲ್ಲೂ ಈಟಿವಿಯಲ್ಲಿ ಕೆಲಸ ಮಾಡಿದ ಪತ್ರಕರ್ತರು ಎಲ್ಲಿ ಹೋದ್ರು ನಮಗೆ ಸಿಗುತ್ತಾರೆ ಎಂದು ರಾಮೋಜಿ ರಾವ್ ಅವರ ಸಾಧನೆಯನ್ನು ಬಣ್ಣಿಸಿದರು. ರಾಮೋಜಿ ರಾವ್ ಅವರಿಗೆ ರಾಮೋಜಿ ರಾವ್ ಅವರೇ ಸಾಟಿ. ಅವರ ಬಳಿ ಕಾರ್ಯ ನಿರ್ವಹಿಸಿದ ಲಕ್ಷಾಂತರ ಪತ್ರಕರ್ತರು ಅನ್ನದಾತ ಅಮರ್ ರಹೇ ಎನ್ನುವ ನುಡಿ ನಮನ ಸಲ್ಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಭಾಗ್ಯದ ಬಾಗಿಲು ತೆರೆದು ಮರೆಯಾದ ಮಾಣಿಕ್ಯ; ರಾಮೋಜಿ ರಾವ್‌ ಅವರಿಗೆ ನುಡಿ ನಮನ

https://newsfirstlive.com/wp-content/uploads/2024/06/Ramoji-Rao-6.jpg

Load More