newsfirstkannada.com

ಕರೆಂಟ್ ಶಾಕ್ ಕೊಟ್ಟಿದ್ದ ಎನ್ನಲಾದ ಆರೋಪಿಯೂ ಅರೆಸ್ಟ್.. ಮತ್ತೊಬ್ಬ ದರ್ಶನ್ ಆಪ್ತ ಲಾಕ್..!

Share :

Published June 17, 2024 at 9:35am

    ರೇಣುಕಾಸ್ವಾಮಿ ಹತ್ಯೆ ಕೇಸ್‌ನ 9ನೇ ಆರೋಪಿ ಅರೆಸ್ಟ್

    ರಾಜು ಅಲಿಯಾಸ್ ಧನರಾಜು ಬಂಧಿಸಿದ ಪೊಲೀಸರು

    ಇಲ್ಲಿಯವರೆಗೆ ಒಟ್ಟು 19 ಆರೋಪಿಗಳ ಬಂಧನ ಆಗಿದೆ

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪೊಲೀಸರು ದರ್ಶನ್​ ಌಂಡ್ ಪಟಾಲಂನ ಬಂಧಿಸಿದ್ದಾರೆ. ಇದೀಗ ಭೀಕರ ಹತ್ಯೆ ಕೇಸ್‌ನ ಮತ್ತೊಬ್ಬ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕರೆಂಟ್ ಶಾಕ್ ಕೊಟ್ಟು ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಟ್ಟಿದ್ದ ಎನ್ನಲಾಗಿರುವ ಮಹಾಕ್ರೂರಿಯನ್ನ ಪೊಲೀಸರು ಬಂಧಿಸಿದ್ದಾರೆ.

ಒಂದು ಮೆಸೇಜ್ ಮಾಡಿ ಡೆವಿಲ್ ಗ್ಯಾಂಗ್​ನಿಂದ ಅಮಾಯಕ ರೇಣುಕಾಸ್ವಾಮಿ ಬರ್ಬರವಾಗಿ ಸಾವನ್ನಪ್ಪಿದ್ದಾನೆ. ಇದು ಅವನ ಕುಟುಂಬಕ್ಕೆ ದಿಕ್ಕೇ ತೋಚದಂತೆ ಮಾಡಿದೆ. ಇದೇ ವೇಳೆ ಸಾಕಷ್ಟು ಚಿತ್ರಹಿಂಸೆ ಅನುಭವಿಸಿ ಬದುಕಿದ್ದಾಗಲೇ ನರಕ ಕಂಡಿದ್ದ. ಹೀಗೆ ಮೃಗೀಯವಾಗಿ ನಡೆದುಕೊಂಡಿದ್ದ ಮತ್ತೊಬ್ಬ ನರ ಹಂತಕನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ:ಸೂತ್ರಧಾರಿಗಳ ತಾಳಕ್ಕೆ ಕುಣಿದ ಪಾತ್ರಧಾರಿಗಳು.. ಯಾರು ಯಾವ ರೋಲ್ ನಿಭಾಯಿಸಿದರು..?

ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಪಟ್ಟಣಗೆರೆ ಶೆಡ್​​ನಲ್ಲಿ ಪೊಲೀಸರು ಆರೋಪಿಗಳನ್ನು ಕರೆತಂದು ಮತ್ತೊಮ್ಮೆ ಮಹಜರು ನಡೆಸಿದ್ದಾರೆ. ದಿನವೂ ಪ್ರಕರಣದ ಆಳ ಅಗಲದ ಬಗ್ಗೆ ತನಿಖೆ ಮಾಡುತ್ತಲೇ ಇದ್ದಾರೆ. ಈ ಹೊತ್ತಲ್ಲಿ ಎಲ್ಲಾ ಆರೋಪಿಗಳನ್ನು ಲಾಕ್ ಮಾಡಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ 9ನೇ ಆರೋಪಿ ರಾಜು ಎಸ್ಕೇಪ್ ಆಗಿದ್ದ.. ಇದೀಗ ಪೊಲೀಸರು ಅವನನ್ನೂ ಖೆಡ್ಡಾಕ್ಕೆ ಕೆಡವಿದ್ದಾರೆ.

ರಾಜೂ ಬಂಧನದ ಬಳಿಕ ಕ್ರೌರ್ಯತೆಯ ಇತಿಹಾಸ ಬಯಲಾಗಿದೆ. ಬರೀ ಹೊಡಿಬಡಿ ಅಷ್ಟೇ ಅಲ್ಲ, ಪೋಸ್ಟ್​​ಮಾರ್ಟಂನಲ್ಲಿ ಕಂಡ ಕೆಲ ಗಾಯದ ಗುರುತುಗಳು, ನರಕಾಸುರರ ಸತ್ಯಗಳ ಅನಾವರಣ ಮಾಡಿತ್ತು. ಅಲ್ಲದೇ ಎಲೆಕ್ಟ್ರಿಕ್ ಮೆಗ್ಗರ್ ಡಿವೈಸ್​ನಿಂದ ರೇಣುಕಾಸ್ವಾಮಿಗೆ ಶಾಕ್​​ ನೀಡಲಾಗಿದೆ ಎಂಬ ಅಂಶ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿತ್ತು.. ಈ ಅಂಶ ನಿಜ ಅನ್ನೋದು ರಾಜು ಬಂಧನದಿಂದ ಧೃಢಪಟ್ಟಿದೆ.

ಇದನ್ನೂ ಓದಿ:ದರ್ಶನ್ ಜೊತೆಯಲ್ಲೇ ಇರ್ತಾರೆ ಮೂವರು ದುಶ್ಮನ್​​ಗಳು.. ಪ್ರತಿ ಅನಾಹುತಗಳಿಗೂ ಕಾರಣ ಅವೇ..!

ರಾಜು ಬಂಧನ.. ಮೆಗ್ಗರ್ ವಶಕ್ಕೆ
ರೇಣುಕಾಸ್ವಾಮಿ ಹತ್ಯೆ ಮಾಡಿ ನಾಪತ್ತೆಯಾಗಿದ್ದ ಪ್ರಕರಣದ 9ನೇ ಆರೋಪಿ ರಾಜು ಅಲಿಯಾಸ್ ಧನರಾಜುನ ಪೊಲೀಸರು ಬಂಧಿಸಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್ ಗ್ಯಾಂಗ್‌ನಲ್ಲಿ ಆರೋಪಿ ರಾಜು ಇದ್ದ ಅನ್ನೋದು ಗೊತ್ತಾಗಿದೆ.. ಇದಷ್ಟೇ ಅಲ್ಲ.. ರೇಣುಕಾಸ್ವಾಮಿಗೆ ಮೆಗ್ಗರ್ ಡಿವೈಸ್​ ಬಳಸಿ ಕರೆಂಟ್ ಶಾಕ್ ಕೊಟ್ಟಿದ್ದು ಇದೇ ಆರೋಪಿ ಅನ್ನೋದು ಬಯಲಾಗಿದೆ. ರೇಣುಕಾಸ್ವಾಮಿಗೆ ಶಾಕ್ ಕೊಟ್ಟು ಹಿಂಸೆ ನೀಡಿದ್ದ ಕ್ರೂರಿ ರಾಜು ಅನ್ನೋದು ತನಿಖೆಯಲ್ಲಿ ತಿಳಿದುಬಂದಿದೆ. ಮತ್ತೊಬ್ಬ ಆರೋಪಿ ನಂದೀಶ್ ಜೊತೆ ಸೇರಿ ಈ ಧನರಾಜು ಕರೆಂಟ್ ಶಾಕ್ ಕೊಟ್ಟಿದ್ದನಂತೆ.. ಇದೀಗ ಧನರಾಜುನಿಂದ ಕೃತ್ಯಕ್ಕೆ ಬಳಸಿದ್ದ ಮೆಗ್ಗರ್ ಡಿವೈಸ್‌ನ ಅನ್ನಪೂರ್ಣೇಶ್ರಿ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾಜು ಬಂಧನದ ಬಳಿಕ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಸೇರಿ ಆರೋಪಿಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ:ದರ್ಶನ್​ ಸಿಕ್ಕಿದ್ಮೇಲೆ ಪವಿತ್ರಾ ಕೋಟಿ ಕುಳ.. ಹತ್ತು ವರ್ಷ.. ಹೇಗಿದ್ದಳು..? ಹೇಗಾದಳು..?

ಒಟ್ಟಾರೆ, ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಅರೆಸ್ಟ್​​​ ಆಗಿರೋ ಡೆವಿಲ್​ ಗ್ಯಾಂಗ್​​​ನ ಭೀಭತ್ಸ ಕೃತ್ಯಗಳು ದಿನದಿಂದ ದಿನಕ್ಕೆ ಒಂದೊದಾಗೇ ಬಯಲಾಗುತ್ತಲೇ ಇವೆ. ಇದೀಗ ಕೋರ್ಟ್​ ಆರೋಪಿಗಳಿಗೆ ಯಾವ ಶಿಕ್ಷೆ ವಿಧಿಸಬಹುದು ಎಂಬ ಚರ್ಚೆ ಶುರುವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರೆಂಟ್ ಶಾಕ್ ಕೊಟ್ಟಿದ್ದ ಎನ್ನಲಾದ ಆರೋಪಿಯೂ ಅರೆಸ್ಟ್.. ಮತ್ತೊಬ್ಬ ದರ್ಶನ್ ಆಪ್ತ ಲಾಕ್..!

https://newsfirstlive.com/wp-content/uploads/2024/06/RAJU.jpg

Load More