ರೈಲು ಆಕ್ಸಿಡೆಂಟ್ ಆದ ರಭಸಕ್ಕೆ ಒಂದು ಬೋಗಿ ಎರಡು ಪೀಸ್
ಹೆಚ್ಚಿನ ಮಾಹಿತಿ ಪಡೆಯಲು ಹೆಲ್ಪ್ಲೈನ್ ತೆರೆದ ರೈಲ್ವೆ ಇಲಾಖೆ
ಪರಿಸ್ಥಿತಿ ಅವಲೋಕಿಸ್ತಿರುವ ಕೇಂದ್ರ ರೈಲ್ವೆ ಸಚಿವ, ಮುಖ್ಯಮಂತ್ರಿ
ಕೋಲ್ಕತ್ತಾ: ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ವೇಗದಲ್ಲಿ ಬಂದು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 5 ಪ್ರಯಾಣಿಕರು ಸಾವನ್ನಪ್ಪಿದ್ದು, 25 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ನ್ಯೂ ಜಲ್ಪೈಗುರಿಗೆ ಸಮೀಪದ ರಂಗಪಾಣಿ ನಿಲ್ದಾಣದ ಬಳಿ ಈ ಭೀಕರ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಅಸ್ಸಾಂನ ಸಿಲ್ಚಾರ್‌ನಿಂದ ಕೋಲ್ಕತ್ತಾದ ಸೀಲ್ದಾಗೆ ಪ್ರಯಾಣಿಸುತ್ತಿದ್ದಾಗ ಈ ಭಯಾನಕ ಆ್ಯಕ್ಸಿಡೆಂಟ್ ಸಂಭವಿಸಿದೆ. ಈ ವೇಳೆ ಅಪಘಾತದಲ್ಲಿ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲಿನ 2 ಬೋಗಿಗಳು ಹಳಿತಪ್ಪಿವೆ. ದುರಂತದಲ್ಲಿ ಐವರು ಪ್ರಯಾಣಿಕರು ಉಸಿರು ಚೆಲ್ಲಿದ್ದು 25 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಟ್ರೈನ್ ಡಿಕ್ಕಿಯಾದ ರಭಸಕ್ಕೆ ಒಂದು ಬೋಗಿಯಂತೂ ಎರಡು ಪೀಸ್ ಆಗಿದೆ ಎಂದು ಹೇಳಲಾಗಿದೆ.
ಇನ್ನು ಈ ಸಂಬಂಧ ಎಕ್ಸ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿರುವ ಸಿಎಂ ಮಮತಾ ಬ್ಯಾನರ್ಜಿ ಅವರು ಘಟನಾ ಸ್ಥಳಕ್ಕೆ ವೈದ್ಯರು ಹಾಗೂ ವಿಪತ್ತು ನಿರ್ವಹಣಾ ತಂಡಗಳು ಆಗಮಿಸಿದ್ದು ರಕ್ಷಣೆ ಕಾರ್ಯದಲ್ಲಿ ತೊಡಗಿಕೊಂಡಿವೆ. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಈ ಘಟನೆಯಿಂದ ಬೇಸರವಾಗಿದೆ ಎಂದು ಸಿಎಂ ಹೇಳಿದ್ದಾರೆ.
ಇದನ್ನೂ ಓದಿ: Train Accident: ದೇಶದಲ್ಲಿ ಮತ್ತೊಂದು ರೈಲು ಭೀಕರ ಅಪಘಾತ.. ಭಾರೀ ಸಾವು ನೋವಿನ ಆತಂಕ
ಪಶ್ಚಿಮ ಬಂಗಾಳದಿಂದ ಈಶಾನ್ಯ ರಾಜ್ಯಗಳ ನಗರಗಳಾದ ಸಿಲ್ಚಾರ್ ಮತ್ತು ಅಗರ್ತಲಾಕ್ಕೆ ಕಾಂಚನಜುಂಗಾ ಎಕ್ಸ್‌ಪ್ರೆಸ್ ನಿತ್ಯ ಪ್ರಯಾಣಿಸುತ್ತದೆ. ಪ್ರವಾಸಿಗರು ಡಾರ್ಜಿಲಿಂಗ್‌ಗೆ ಪ್ರಯಾಣಿಸಲು ಇದೇ ಟ್ರೈನ್ ಅನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಸಿಗ್ನಲ್ ಅನ್ನು ಸರಿಯಾಗಿ ಗಮಿನಿಸದ ಕಾರಣ 2 ಟ್ರೈನ್ ಮಧ್ಯೆ ಡಿಕ್ಕಿಯಾಗಿದೆ. ಈ ಎಲ್ಲವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ದೆಹಲಿಯ ರೈಲ್ವೆ ವಾರ್ ರೂಮ್‌ನಿಂದಲೇ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
Major train accident in #Bengal. Sealdah bound #KanchanjungaExpress (passenger) derailed after being hit by a goods train from behind. Two bogies have been uprooted, trampled and thrown off the tracks. Many feared trapped. Rescue work has started by Police and locals. Horrible… pic.twitter.com/E6vZ9jNwmR
— Tamal Saha (@Tamal0401) June 17, 2024
ಆಕ್ಸಿಡೆಂಡ್ ಸಂಬಂಧ ಮಾಹಿತಿ ಪಡೆಯಲು ರೈಲ್ವೆ ಇಲಾಖೆ ಸಹಾಯವಾಣಿಯನ್ನು ತೆರೆದಿದೆ. ಗುವಾಹಟಿಗೆ ಸಂಪರ್ಕಿಸಬೇಕು ಎಂದರೆ 033-2350-8794 ಮತ್ತು 033-2383-3326, ಹಾಗೂ ಸೀಲ್ದಾಹ್ ಸಂಪರ್ಕ ಮಾಡಲು 036-127-31621, 036-127-31622 ಮತ್ತು 036-127-31623 ನಂಬರ್ಗಳನ್ನು ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ