newsfirstkannada.com

ಮೆಗ್ಗರ್​​ ರಾಜುನ ಕ್ರೌರ್ಯದ ಇತಿಹಾಸ ತುಂಬಾನೇ ಭಯಾನಕ.. ಚಿತ್ರಹಿಂಸೆ ಅನುಭವಿಸಿದ್ದು ರೇಣುಕಾಸ್ವಾಮಿ ಒಬ್ಬರೇ ಅಲ್ಲ..!

Share :

Published June 17, 2024 at 2:23pm

Update June 17, 2024 at 2:24pm

    ಪ್ರಜ್ಞೆತಪ್ಪಿ ಬಿದ್ದಿದ್ದ ರೇಣುಕಾಸ್ವಾಮಿಗೆ ಶಾಕ್ ಕೊಟ್ಟು ಎಬ್ಬಿಸಿದ್ದ

    9ನೇ ಆರೋಪಿ ಮೆಗ್ಗಾರ್ ರಾಜುನ ನಿನ್ನೆ ಬಂಧಿಸಿದ ಪೊಲೀಸರು

    ದರ್ಶನ್ ಮನೆಯ ನಾಯಿಗಳ ನೋಡಿಕೊಳ್ತಿರುವ ಮೆಗ್ಗಾರ್ ರಾಜು

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪೊಲೀಸರು ದರ್ಶನ್​ ಅಂಡ್ ಪಟಾಲಂನ ಬಂಧಿಸಿದ್ದಾರೆ. ಇದೀಗ ಮತ್ತೊಬ್ಬ ಆರೋಪಿಯೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕರೆಂಟ್ ಶಾಕ್ ಕೊಟ್ಟು ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಟ್ಟಿದ್ದ ಎನ್ನಲಾಗಿರುವ ಮಹಾಕ್ರೂರಿ ರಾಜು ಅಲಿಯಾಸ್ ಧನರಾಜು ಅರೆಸ್ಟ್ ಆಗಿದ್ದಾನೆ.

ರೇಣುಕಾಸ್ವಾಮಿ ಹತ್ಯೆ ಮಾಡಿ ನಾಪತ್ತೆಯಾಗಿದ್ದ ಪ್ರಕರಣದ 9ನೇ ಆರೋಪಿ ರಾಜು ಅಲಿಯಾಸ್ ಧನರಾಜು ತಲೆಮರೆಸಿಕೊಂಡಿದ್ದ. ಎಲೆಕ್ಟ್ರಿಕ್ ಮೆಗ್ಗರ್ ಡಿವೈಸ್​ನಿಂದ ರೇಣುಕಾಸ್ವಾಮಿಗೆ ಶಾಕ್​​ ನೀಡಲಾಗಿದೆ ಎಂಬ ಅಂಶ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್ ಗ್ಯಾಂಗ್‌ನಲ್ಲಿ ಆರೋಪಿ ರಾಜು ಇದ್ದ ಅನ್ನೋದು ಗೊತ್ತಾಗಿದೆ. ರೇಣುಕಾಸ್ವಾಮಿಗೆ ಮೆಗ್ಗರ್ ಡಿವೈಸ್​ ಬಳಸಿ ಕರೆಂಟ್ ಶಾಕ್ ಕೊಟ್ಟಿದ್ದು ಇದೇ ಆರೋಪಿ ಅನ್ನೋದು ಬಯಲಾಗಿದೆ.

ಇದನ್ನೂ ಓದಿ:ಚಿನ್ನ ಕದ್ದವರು ಸಿಕ್ಕಿಬಿದ್ರು.. ಆದರೆ 10 ದಿನ ಕಳೆದರೂ ಅದೊಂದು ವಸ್ತು ಸಿಕ್ಕೇ ಇಲ್ಲ.. ಸಿಕ್ಕರೇ ಮೇಜರ್ ಟ್ವಿಸ್ಟ್

ಯಾರು ಮೆಗ್ಗರ್ ರಾಜು..?
ರಾಜು ದರ್ಶನ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಆರ್​ಆರ್ ನಗರ ಪೊಲೀಸ್ ಠಾಣೆ ಹಿಂಭಾಗದ ರಸ್ತೆ ಬಳಿ ವಾಸವಾಗಿದ್ದ. ದರ್ಶನ್ ನಿವಾಸದಲ್ಲಿದ್ದ ನಾಯಿಗಳನ್ನು ನೋಡಿಕೊಳ್ತಿದ್ದ. ದರ್ಶನ್ ಗ್ಯಾಂಗ್ ಸೇರುವ ಮೊದಲು ಡಾಗ್ ಬ್ರೀಡಿಂಗ್ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಆರೋಪಿ ವಿನಯ್ ಈ ರಾಜು ಅಲಿಯಾಸ್ ಧನರಾಜುನನ್ನು ಹಲವು ತಿಂಗಳುಗಳಿಂದ ಇಟ್ಕೊಂಡಿದ್ದ. ವಿನಯ್ ಕೆಲವರ ಮೇಲೆ ಹಲ್ಲೆ ಮಾಡುವ ವೇಳೆ ​ರಾಜು ಕೂಡ ಬರ್ತಿದ್ದ. ಇಬ್ಬರು ಸೇರಿ ಪಾಪದವರನ್ನು ಶೆಡ್​ಗೆ ಕರೆದುಕೊಂಡು ಬಂದು ಹಲ್ಲೆ ಮಾಡುತ್ತಿದ್ದರು. ಹಲ್ಲೆ ಮಾಡುವಾಗ ಇದೇ ಮೆಗ್ಗಾರ್​ನಿಂದ ಶಾಕ್ ನೀಡುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ:ದರ್ಶನ್​​ಗೆ ಪವಿತ್ರಾ ಗೌಡ ಪ್ರೀತಿಯಿಂದ ಏನೆಂದು ಕರೀತಾರೆ.. ಈ ನಟಿಯ ಹಿನ್ನೆಲೆ ಏನು ಗೊತ್ತಾ..?

ಇನ್ನು ಮೆಗ್ಗರ್​ ಅನ್ನು ಯಾವಾಗ ತೆಗೆದುಕೊಂಡಿದ್ದೆ (ಪರ್ಚೇಸ್ ಮಾಡಿದ್ದೆ) ಅನ್ನೋದ್ರ ಬಗ್ಗೆ ರಾಜು ಸರಿಯಾಗಿ ಮಾಹಿತಿ ನೀಡಿಲ್ಲ. ತನಗೆ ಓರ್ವ ಗೆಳೆಯ ಕೊಟ್ಟಿದ್ದ ಎಂದು ರಾಜು ಹೇಳಿದ್ದಾನೆ. ಆತ ಯಾರು ಎಂದು ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಕೊನೆಗೆ ಮೆಗ್ಗರ್ ಆನ್​ಲೈನ್​ನಲ್ಲಿ ತರಿಸಿಕೊಂಡಿದ್ದ ಅನ್ನೋದು ತನಿಖೆಯಿಂದ ತಿಳಿದುಬಂದಿದೆ.

ರೇಣುಕಾಸ್ವಾಮಿಗೆ ಹೇಗೆ ಹಲ್ಲೆ..?
ಆರೋಪಿಗಳು ಮಾಡಿದ ಹಲ್ಲೆಯಿಂದಾಗಿ ರೇಣುಕಾಸ್ವಾಮಿ ಪ್ರಜ್ಞೆ ತಪ್ಪಿ ಬಿದ್ದಿದ. ಪ್ರಜ್ಞೆತಪ್ಪಿ ಬೀಳುತ್ತಿದ್ದಂತೆಯೇ ರಾಜು ಅಲ್ಲಿಗೆ ಎಂಟ್ರಿಯಾಗಿದ್ದ. ಕಿವಿ ಹೊಟ್ಟೆ ಭಾಗಕ್ಕೆ ಶಾಕ್ ಕೊಟ್ಟಿದ್ದಾನೆ. ಶಾಕ್​ಗೆ ಎಚ್ಚರಗೊಂಡ ಬಳಿ ಮತ್ತೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ:ದರ್ಶನ್ ಜೊತೆಯಲ್ಲೇ ಇರ್ತಾರೆ ಮೂವರು ದುಶ್ಮನ್​​ಗಳು.. ಪ್ರತಿ ಅನಾಹುತಗಳಿಗೂ ಕಾರಣ ಅವೇ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೆಗ್ಗರ್​​ ರಾಜುನ ಕ್ರೌರ್ಯದ ಇತಿಹಾಸ ತುಂಬಾನೇ ಭಯಾನಕ.. ಚಿತ್ರಹಿಂಸೆ ಅನುಭವಿಸಿದ್ದು ರೇಣುಕಾಸ್ವಾಮಿ ಒಬ್ಬರೇ ಅಲ್ಲ..!

https://newsfirstlive.com/wp-content/uploads/2024/06/RAJU-2.jpg

Load More