newsfirstkannada.com

ದರ್ಶನ್​​ಗೆ ಪವಿತ್ರಾ ಗೌಡ ಪ್ರೀತಿಯಿಂದ ಏನೆಂದು ಕರೀತಾರೆ.. ಈ ನಟಿಯ ಹಿನ್ನೆಲೆ ಏನು ಗೊತ್ತಾ..?

Share :

Published June 17, 2024 at 11:17am

  ನಟ ದರ್ಶನ್​ನ ಸುಬ್ಬ ಅಂತಾ ಕರೆಯುತ್ತಿದ್ದ ಪವಿತ್ರಾ ಗೌಡ!

  ಪವಿತ್ರಾಗೆ ಐಡೆಂಟಿಟಿ ಸಿಕ್ಕಿದ್ದೇ ದರ್ಶನ್​ ಅನ್ನೋ ಹೆಸರಿನಿಂದ!

  ಸೌಂದರ್ಯದ ಬಗ್ಗೆ ಗಮನ.. ಫಿಟ್​ನೆಸ್​ಗಾಗಿಯೂ ಸಾಕಷ್ಟು ಖರ್ಚು!

ಶಿವಪಾರ್ವತಿಯಂತೆ ನಮ್ಮ ಅಣ್ಣನ ಫ್ಯಾಮಿಲಿ ಅಂತಿದ್ರು ಅಭಿಮಾನಿಗಳು. ಅದೇ ಅಭಿಮಾನಿಗಳ ಬಾಯಿಂದ ಅತ್ತಿಗೆ ಅನಿಸಿಕೊಳ್ತಿದ್ದವಳು ಈಗ ಕೊಲೆ ಕೇಸಿನ ಆರೋಪಿ. ದರ್ಶನ್​ ಬಾಳಲ್ಲಿ ಅಚಾನಕ್​ ಎಂಟ್ರಿ ಕೊಟ್ಟವಳಿಂದ ಅನಾಹುತವೇ ನಡೆದು ಹೋಯ್ತಾ? ಅದು ತನಿಖೆಯಿಂದಷ್ಟೇ ಗೊತ್ತಾಗ್ಬೇಕು. ಪವಿತ್ರಾಳಿಂದ ದರ್ಶನ್​ಗೆ ಸಿಕ್ಕಿದ್ದೇನು ಗೊತ್ತಿಲ್ಲ. ಆದ್ರೆ ಪವಿತ್ರಾಗಂತೂ ಅದೇ ದರ್ಶನ್ ಸಹವಾಸದಿಂದ ದಕ್ಕಿದ್ದು ಒಂದೆರಡಲ್ಲ.

RR ನಗರದಲ್ಲಿ ಪವಿತ್ರಗೆ ಮನೆ ಗಿಫ್ಟ್..?
ಕೆಲವು ಮಾಹಿತಿಗಳ ​ಪ್ರಕಾರ ದರ್ಶನ್​ ಪವಿತ್ರಾಗೆ ಏನೂ ಕಡಿಮೆ ಮಾಡಿರಲಿಲ್ಲ ಎನ್ನಲಾಗಿದೆ. ರಾಣಿಯಂತೆ ನೋಡಿಕೊಳ್ತಿದ್ರು. ತಾವೆಷ್ಟು ರಾಯಲ್​ ಆಗಿ ಜೀವನ ನಡೆಸ್ತಿದ್ರೋ ಅಷ್ಟೇ ರಾಯಲ್​ ಆಗಿ ಪವಿತ್ರಾರನ್ನೂ ಕೇರ್​ ಮಾಡ್ತಿದ್ರು ಅನ್ನೋದು ಸಿಕ್ಕಿರೋ ಮಾಹಿತಿ. ಎಲ್ಲರಿಗೂ ಗೊತ್ತಿರುವ ಹಾಗೇ ನಟ ದರ್ಶನ್​ ಮನೆ ಇರೋದು ರಾಜರಾಜೇಶ್ವರಿನಗರದಲ್ಲಿ. ಬೆಂಗಳೂರಿನ ಬೇರೊಂದು ಏರಿಯಾದಲ್ಲಿ ನೆಲೆಸಿದ್ದ ಪವಿತ್ರಾ ಗೌಡಗೆ ತಾವಿರುವ ಏರಿಯಾದಲ್ಲೇ ಮನೆ ಕೊಡಿಸಿದ್ದರಂತೆ ದರ್ಶನ್​.

ಇದನ್ನೂ ಓದಿ:ಒಂದು ದಿನಕ್ಕೆ ಎಷ್ಟು ಗಂಟೆ ಫೋನ್ ಬಳಸಬಹುದು? ಮಕ್ಕಳು ಫೋನ್​​ನಲ್ಲಿ ಎಷ್ಟು ಗಂಟೆ ಕಳೆದ್ರೆ ಉತ್ತಮ..?

ತಾವಿರುವ ರಾಜರಾಜೇಶ್ವರಿ ನಗರದಲ್ಲಿಯೇ ಪವಿತ್ರಾಗಾಗಿ ದರ್ಶನ್​ ಮನೆಯನ್ನ ಉಡುಗೊರೆಯಾಗಿ ನೀಡಿದ್ದಾರೆ ಅಂತ ಮೂಲಗಳಿಂದ ತಿಳಿದುಬಂದಿದೆ. ಆರ್​ ಆರ್ ನಗರದಲ್ಲಿ 3 ಮಹಡಿಯ ಮನೆಯೊಂದನ್ನು ಖರೀದಿಸಿ ಕೊಟ್ಟಿದ್ದಾರಂತೆ. ಆ ಮನೆಯೂ ಕೂಡ ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತೆ. ಅದೇ ಮನೆಯಲ್ಲಿ ಪವಿತ್ರಾ ಗೌಡ ತನ್ನ ಕುಟುಂಬದ ಜೊತೆಗೆ ನೆಲೆಸಿದ್ದಾರೆ ಅಂತಲೂ ಹೇಳಲಾಗುತ್ತದೆ. ದರ್ಶನ್ ಹಾಗೂ ಪವಿತ್ರಾ ಸಂಬಂಧ ಎಂಥದ್ದು ಅಂದ್ರೆ ದರ್ಶನ್​ರನ್ನ ಈಕೆ ಪ್ರೀತಿಯಿಂದ ಸುಬ್ಬ ಅಂತಾ ಕರೀತಾರೆ. ಅದಕ್ಕೆ ನಟನ ಹುಟ್ಟುಹಬ್ಬದಲ್ಲಿ ಪವಿತ್ರಾ ಕಟ್​ ಮಾಡಿಸಿದ್ದ ಕೇಕ್​ ಇತ್ತಲ್ಲ, ಅದೇ ಸಾಕ್ಷಿ. ಆ ಕೇಕ್​ನಲ್ಲಿ ದರ್ಶನ್​ ಹೆಸರಿನ ಬದಲು ಹ್ಯಾಪಿ ಬರ್ತ್​ಡೇ ಸುಬ್ಬ ಅಂತಾ ಪವಿತ್ರಾ ಬರೆಸಿದ್ದು ಸಾಕಷ್ಟು ಸದ್ದು ಮಾಡಿತ್ತು.

ಪವಿತ್ರಾಗೆ ಐಡೆಂಟಿಟಿ ಸಿಕ್ಕಿದ್ದೇ ‘ದರ್ಶನ್’​ ಅನ್ನೋ ಹೆಸರಿನಿಂದ!
ದರ್ಶನ್​ ಸ್ಯಾಂಡಲ್​ವುಡ್​ನ ಚಿನ್ನದ ಮೊಟ್ಟೆ ಇಡುವ ಕೋಳಿ. ದರ್ಶನ್​ ಹಾಕೊಂಡು ಸಿನಿಮಾ ಮಾಡಿದ್ರೆ ಬಡ್ಡಿ ಸಹಿತ ಹಣ ವಾಪಸ್​ ಬರುತ್ತೆ ಅನ್ನೋದು ಅದೆಷ್ಟೋ ಬಾರಿ ಸಾಬೀತಾಗಿರೋ ವಿಚಾರ. ಅಂತಹ ಬಾಕ್ಸಾಫೀಸ್ ಸುಲ್ತಾನನ ಬಾಳಲ್ಲಿ ಪವಿತ್ರಾ ದೀಪದಂತೆ ಬೆಳಕು ಹಚ್ಚಿದ್ಲೋ ಅಥವಾ ಬಿರುಗಾಳಿಯಾದಳೋ ಅದು ಅವರಿಬ್ಬರಿಗಷ್ಟೇ ಗೊತ್ತಿರೋ ವಿಚಾರ. ಸಾಮಾನ್ಯ ಬದುಕಿನಲ್ಲಿದ್ದ ಪವಿತ್ರಾ ಸಾರ್ವಜನಿಕ ಬದುಕಿನಲ್ಲಿ ಸೆಲೆಬ್ರಿಟಿ ಅಂತಾ ಕರೆಸಿಕೊಳ್ಳೋದಕ್ಕೆ ದರ್ಶನ್​ ಅನ್ನೋ ಒಂದು ಹೆಸರು ಕಾರಣವಾಗಿದ್ದಂತೂ ಸುಳ್ಳಲ್ಲ. ದರ್ಶನ್​ ಗೆಳತಿ ಅನ್ನೋ ಕಾರಣದಿಂದಲೇ ಪವಿತ್ರಾ ಸಾಕಷ್ಟು ಸುದ್ದಿಯಾಗತೊಡಗಿದ್ದರು. ಸೆಲೆಬ್ರಿಟಿಗಳು ಭಾಗಿಯಾಗುತ್ತಿದ್ದ ಪಾರ್ಟಿಗಳಲ್ಲಿ ಭಾಗಿಯಾಗಲು ಆರಂಭಿಸಿದ್ದರು. ಅಂತಹ ಜಾಗಗಳಲ್ಲಿ ಪವಿತ್ರಾಗೆ ಸ್ಟಾರ್ ನಟ-ನಟಿಯರ ಪರಿಚಯವಾಗ್ತಿತ್ತು. ಇದರಿಂದ ಪವಿತ್ರಾ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ತಮ್ಮದೇ ಐಡೆಂಟಿಟಿ ಸಂಪಾದನೆ ಮಾಡಿಕೊಂಡ್ರು. ಅಭಿಮಾನಿಗಳು ಮನಸಾರೆ ಅತ್ತಿಗೆ ಅಂತಾ ಕರೆಯೋದಕ್ಕೆ ಶುರುಮಾಡಿದ್ರು.

ಇದನ್ನೂ ಓದಿ:ದೇಶದಲ್ಲಿ ಮತ್ತೊಂದು ರೈಲು ಭೀಕರ ಅಪಘಾತ.. ಭಾರೀ ಸಾವು ನೋವಿನ ಆತಂಕ

ಪವಿತ್ರಾ ಗೌಡ ತೆರೆಯ ಮೇಲೆ ಹೆಚ್ಚು ಕಾಣಿಸಿಕೊಳ್ಳದೇ ಇದ್ರೂ ಆಕೆಗೆ ಬಣ್ಣದ ಲೋಕದ ಬಗೆಗಿನ ಆಸಕ್ತಿ ಚೂರೂ ಕಡಿಮೆಯಾಗಿರಲಿಲ್ಲ. ಅವರಿಗೆ ಸೌಂದರ್ಯದ ಬಗ್ಗೆ ಹೆಚ್ಚು ಗಮನವಿತ್ತಂತೆ. ಹೀಗಾಗಿ, ತಾವು ಸಣ್ಣ ಆಗ್ಬೇಕು, ಫಿಟ್​ನೆಸ್ ಮೇಂಟೇನ್​ ಮಾಡ್ಬೇಕು ಅಂತಾ ಜಿಮ್ಮು, ಏರೋಬಿಕ್ಸ್​ ಅಂತೆಲ್ಲಾ ಸೇರಿಕೊಂಡಿದ್ದರು ಅನ್ನುತ್ವೆ ಮೂಲಗಳು. ಪವಿತ್ರಾ ತಮ್ಮ ಮೇಕಪ್​ ಬ್ಯೂಟಿಗಾಗಿಯೇ ಸಾವಿರಾರು ರೂಪಾಯಿ ಹಣವನ್ನ ಈಸಿಯಾಗಿ ಖರ್ಚು ಮಾಡ್ತಿದ್ರಂತೆ.

ತುಂಬಾ ಇನೋಸೆಂಟ್..ಅಷ್ಟೇ ಕೋಪಿಷ್ಠೆ!
ಪವಿತ್ರಾಳ ಈ ಸಿಟ್ಟಿನ ಬಗ್ಗೆ ಆಕೆಯ ಮಾಜಿ ಪತಿ ಸಂಜಯ್​ ಸಿಂಗ್ ಈಗಾಗಲೇ ಹೇಳಿದ್ದರು. ಪವಿತ್ರಾ ಗೌಡ ತುಂಬಾನೇ ಇನೋಸೆಂಟ್​. ಬಟ್, ಆಕೆ ತುಂಬಾ ಕೋಪಿಷ್ಠೆ ಅಂತಾ ಸ್ಫೋಟಕ ವಿಚಾರ ತೆರೆದಿಟ್ಟಿದ್ರು.ಕೋಪ ಬಂದ್ರೆ ಆಕೆ ಏನ್ ಮಾಡ್ತಾಳೋ ಅವಳಿಗೇ ಗೊತ್ತಿಲ್ಲ ಅಂತಾ ಹೇಳಿದ್ದದ್ದು ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು.

ಇದನ್ನೂ ಓದಿ:ದರ್ಶನ್​ ಸಿಕ್ಕಿದ್ಮೇಲೆ ಪವಿತ್ರಾ ಕೋಟಿ ಕುಳ.. ಹತ್ತು ವರ್ಷ.. ಹೇಗಿದ್ದಳು..? ಹೇಗಾದಳು..?

ಗ್ರಹಚಾರ ಸರಿ ಇಲ್ಲ ಅಂದ್ರೆ ಹಗ್ಗವೂ ಹಾವಾಗಿ ಬಂದು ಕಚ್ಚುತ್ತೆ ಅನ್ನೋ ಹಾಗಾಗಿದೆ ಪವಿತ್ರಾಳ ಪರಿಸ್ಥಿತಿ.. ಈಕೆಯ ಸಿಟ್ಟಿನ ಅಟ್ಟಹಾಸಕ್ಕೆ 10ಕ್ಕೂ ಹೆಚ್ಚು ಕುಟುಂಬಗಳು ಇವತ್ತು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಪವಿತ್ರಾಳನ್ನ ಸಡನ್ನಾಗಿ ನೋಡಿದವ್ರಿಗೆ ಇದ್ಯಾವುದೋ ದೊಡ್ಡ ಮನೆತನದ ಹೆಣ್ಣುಮಗಳಿರ್ಬೇಕು ಅಂತಾ ಅನಿಸದೇ ಇರೋದಿಲ್ಲ. ಬಟ್, ಈಕೆಯ ಬ್ಯಾಕ್​ಗ್ರೌಂಡ್ ಎಲ್ಲರೂ ಅಂದುಕೊಂಡಂತೆ ಬಾರ್ನ್​ ವಿತ್​ ಗೋಲ್ಡನ್ ಸ್ಪೂನ್ ಏನಲ್ಲ. ಪವಿತ್ರಾ ಅಪ್ಪ ಸಣ್ಣ ಪುಟ್ಟ ವ್ಯಾಪಾರ ಮಾಡ್ಕೊಂಡಿದ್ದವರು.. ಆರ್ಥಿಕವಾಗಿ ತಕ್ಕಮಟ್ಟಿಗೆ ಚೆನ್ನಾಗಿದ್ದಂತಹ ಕುಟುಂಬ.

ಈಕೆಯ ತಾತನ ಊರು ತಲಘಟ್ಟಪುರ. ಬಟ್, ಜೀವನೋಪಾಯಕ್ಕಾಗಿ ಬೆಂಗಳೂರಲ್ಲೇ ಬಂದು ಎಲ್ಲರೂ ನೆಲೆಸಿದ್ದರು. ಪವಿತ್ರಾಳ ತಂದೆಗೆ ಮೂವರು ಮಕ್ಕಳು.. ಇಬ್ಬರು ಗಂಡು ಒಂದು ಹೆಣ್ಣು.. ಮಿಡ್ಲ್​ಕ್ಲಾಸ್ ಕುಟುಂಬವಾಗಿದ್ರೂ ಇವಳು ಬದುಕಿನ ಬಗ್ಗೆ ನೂರಾರು ಕನಸುಗಳನ್ನ ಕಟ್ಟಿಕೊಂಡಿದ್ದಳಂತೆ. ಕಾಲೇಜ್​ಗೆ ಹೋಗುವ ವಯಸ್ಸಲ್ಲೇ ಬಣ್ಣದ ಬದುಕಿನ ಬಗ್ಗೆ ಕಲರ್​ಫುಲ್​ ಆಸೆಗಳನ್ನ ಇಟ್ಕೊಂಡಿದ್ದರಂತೆ.. ಸಿನಿಮಾದಲ್ಲಿ ಒಳ್ಳೆ ನಟಿಯಾಗ್ಬೇಕು. ಒಳ್ಳೆ ಹೆಸರು ಮಾಡ್ಬೇಕು ಅನ್ನೋದು ಪವಿತ್ರಾ ಗುರಿಯಾಗಿತ್ತು.

ಇದನ್ನೂ ಓದಿ:‘ಸಿಟ್ಟು ಬಂದ್ರೆ ಏನ್ಮಾಡ್ತಾಳೆ ಅಂತಾ ಅವಳಿಗೂ ಗೊತ್ತಿರಲ್ಲ..’ ಪವಿತ್ರ ಗೌಡಳ ಇನ್ನೊಂದು ಮುಖ ಅನಾವರಣ

ಮಿಡ್ಲ್ ಕ್ಲಾಸ್ ಕುಟುಂಬವಾದ ಕಾರಣ ಈಕೆ ಕನಸುಗಳು ಈಡೇರೋದಕ್ಕೆ ಸಾಧ್ಯವಾಗಿರಲಿಲ್ಲ. ಬಳಿಕ ಸಿನಿಮಾದಲ್ಲಿ ಸಿಕ್ಕ ಸಣ್ಣ ಪುಟ್ಟ ಚಾನ್ಸ್​ಗಳು ಹಾಗೂ ಸಂಜಯ್​ ಸಿಂಗ್​ ಎನ್ನುವ ಸಾಫ್ಟ್​ವೇರ್​ ಉದ್ಯೋಗಿಯ ಜೊತೆಗೆ ಮದುವೆ. ಆದರೆ ದರ್ಶನ್​ ಬಾಳಲ್ಲಿ ಈಕೆ ಬಂದ್ಮೇಲೆ ಬಿರುಗಾಳಿಗಳೇ ಭುಗಿಲೆದ್ದಿದ್ದು ಎಲ್ಲರ ಕಣ್ಮುಂದಿದೆ.

ಇದನ್ನೂ ಓದಿ:ಕರೆಂಟ್ ಶಾಕ್ ಕೊಟ್ಟಿದ್ದ ಎನ್ನಲಾದ ಆರೋಪಿಯೂ ಅರೆಸ್ಟ್.. ಮತ್ತೊಬ್ಬ ದರ್ಶನ್ ಆಪ್ತ ಲಾಕ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​​ಗೆ ಪವಿತ್ರಾ ಗೌಡ ಪ್ರೀತಿಯಿಂದ ಏನೆಂದು ಕರೀತಾರೆ.. ಈ ನಟಿಯ ಹಿನ್ನೆಲೆ ಏನು ಗೊತ್ತಾ..?

https://newsfirstlive.com/wp-content/uploads/2024/06/Pavitra-Gowda-2.jpg

Load More