newsfirstkannada.com

ಚಿಕ್ಕಣ್ಣ, ಯಶಸ್ ಸೂರ್ಯ ಮಾತ್ರವಲ್ಲ.. ದರ್ಶನ್ ಪಾರ್ಟಿಯಲ್ಲಿ ಸ್ಟಾರ್ ನಿರ್ಮಾಪಕ..?

Share :

Published June 18, 2024 at 9:37am

    ಪವಿತ್ರ ಗೌಡ ಮನೆ ಮುಂದೆ ನಿಂತಿದೆ ಒಂದು ಕಾರು

    ಪಾರ್ಕ್ ಮಾಡಿರುವ ಆ ಕಾರು ಯಾರದ್ದು? ಕುತೂಹಲ

    ಅಂದಿನ ಪಾರ್ಟಿಯಲ್ಲಿ ಯಾರೆಲ್ಲ ಭಾಗಿ ಆಗಿದ್ದರು?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆಪ್ತರಿಗೂ ಟೆನ್ಷನ್ ಶುರುವಾಗಿದೆ ಎನ್ನಲಾಗುತ್ತಿದೆ. ದರ್ಶನ್ ಆಪ್ತ ನಟ, ನಿರ್ಮಾಪಕರಿಗೆ ಇದೀಗ ಸಂಕಷ್ಟ ಎದುರಾಗಿದ್ದು, ಪೊಲೀಸ್ ತನಿಖೆಯ ಆತಂಕ ಕಾಡಿದೆ ಎನ್ನಲಾಗುತ್ತಿದೆ.

ಸ್ಟೋನಿ ಬ್ರೂಕ್ ಪಾರ್ಟಿಯಲ್ಲಿದ್ದವರ ಸಂಪರ್ಕಕ್ಕೆ ಮುಂದಾಗಿರುವ ಪೊಲೀಸರು.. ಹಾಸ್ಯ ನಟ ಚಿಕ್ಕಣ್ಣ ಬೆನ್ನಲ್ಲೇ ಮತ್ತೋರ್ವ‌ ನಟ ಯಶಸ್ ಸೂರ್ಯನಿಗೂ ನೋಟಿಸ್ ನೀಡಲು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಪಾರ್ಟಿ ವೇಳೆ ದರ್ಶನ್ ಜೊತೆಗೆ ಯಶಸ್ ಸೂರ್ಯ ಕೂಡ ಇದ್ದರು ಎನ್ನಲಾಗಿದೆ.

ಇದನ್ನೂ ಓದಿ:ಪಟ್ಟಣಗೆರೆ ಶೆಡ್​ನಲ್ಲಿ ರಕ್ತ ಚರಿತ್ರೆಗಳ ಕತೆ..? ಸಿಕ್ಕ ರಕ್ತದ ಕಲೆಗಳು ಹೇಳ್ತಿವೆಯಂತೆ ಪಾಪಿಗಳ ಲೋಕದ ಕತೆ..!

ಇನ್ನು ದರ್ಶನ್ ಜೊತೆಗಿನ ಅಂದಿನ ಪಾರ್ಟಿಯಲ್ಲಿ ಮತ್ತೋರ್ವ ನಿರ್ಮಾಪಕ ಕೂಡ ಇದ್ದರಂತೆ. ಆ ನಿರ್ಮಾಪಕರು ಯಾರು ಅನ್ನೋದೇ ಕುತೂಹಲ ಮೂಡಿಸಿದೆ. ಜೊತೆಗೆ ಪವಿತ್ರಾ ಗೌಡ ಮನೆಯಲ್ಲಿ ಕಪ್ಪು ಬಣ್ಣದ ಮಿನಿ ಕೂಪರ್ ಕಾರು ಒಂದು ನಿಂತಿದೆ. ಅಲ್ಲಿ ಪಾರ್ಕ್​ ಮಾಡಿರುವ ಕಾರು ಯಾವುದು ಎಂಬ ಪ್ರಶ್ನೆಯೂ ಎದ್ದಿದೆ. ಆ ಕಾರಿನ ಮಾಲೀಕರು ಪಾರ್ಟಿಯಲ್ಲಿ ಭಾಗಿಯಾಗಿದ್ದರಾ? ಪಾರ್ಟಿಯಲ್ಲಿ ಯಾರೆಲ್ಲ ಭಾಗಿಯಾಗಿದ್ದರು ಅನ್ನೋದ್ರ ಮೇಲೂ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಚಿಕ್ಕಣ್ಣರನ್ನೂ ಫಜೀತಿಗೆ ಸಿಲುಕಿಸಿದ ದರ್ಶನ್.. ಪೊಲೀಸರು ಹಾಸ್ಯ ನಟನಿಗೆ ಕೇಳಿದ ಖಡಕ್ ಪ್ರಶ್ನೆಗಳೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿಕ್ಕಣ್ಣ, ಯಶಸ್ ಸೂರ್ಯ ಮಾತ್ರವಲ್ಲ.. ದರ್ಶನ್ ಪಾರ್ಟಿಯಲ್ಲಿ ಸ್ಟಾರ್ ನಿರ್ಮಾಪಕ..?

https://newsfirstlive.com/wp-content/uploads/2024/06/Darshan_Chikkanna.jpg

Load More