ಲೀಗ್ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ
ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ಪ್ಲೇಯರ್ಸ್ ಪರ್ಫಾಮೆನ್ಸ್ ಹೇಗಿದೆ?
ಟೀಮ್ ಇಂಡಿಯಾವನ್ನ ಸೋಲಿಸುವಷ್ಟು ಅಫ್ಘಾನ್ ಸ್ಟ್ರಾಂಗ್ ಇದೆ
ಸೂಪರ್ 8ನ ಮೊದಲ ಪಂದ್ಯದಲ್ಲೇ, ಟೀಮ್ ಇಂಡಿಯಾಗೆ ದೋಸ್ತ್ಗಳ ಸವಾಲು ಎದುರಾಗ್ತಿದೆ. ಬಾರ್ಬಡೋಸ್ನಲ್ಲಿ ನಡೆಯೋ ಪಂದ್ಯದಲ್ಲಿ ಅಫ್ಘಾನಿಸ್ತಾನ ಪಡೆಯನ್ನ ರೋಹಿತ್ ಪಡೆ ಎದುರಿಸಲಿದೆ. ದೋಸ್ತ್ಗಳು ಎಂದುಕೊಂಡು ಫುಲ್ ರಿಲ್ಯಾಕ್ಸ್ಡ್ ಆಗಿ ಕಣಕ್ಕಿಳಿದ್ರೆ, ನೂರಕ್ಕೆ 100ರಷ್ಟು ಶಾಕ್ ಪಕ್ಕಾ. ಅತಿಯಾದ ಆತ್ಮವಿಶ್ವಾಸದಲ್ಲಿ ಮೈದಾನಕ್ಕಿಳಿದ್ರೆ, ದೋಸ್ತ್ಗಳೇ ವಿಲನ್ ಆಗಿ ಬಿಡ್ತಾರೆ.
ಯಾಮಾರಿದ್ರೆ ‘ದೋಸ್ತ್’ಗಳೇ ‘ವಿಲನ್’.!
ಲೀಗ್ ಸ್ಟೇಜ್ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ ಸೋಲಿಲ್ಲದ ಸರದಾರನಂತೆ ಸೂಪರ್-8 ಹಂತಕ್ಕೆ ಕಾಲಿಟ್ಟಿದೆ. ಅಮೆರಿಕದಿಂದ ವೆಸ್ಟ್ ಇಂಡೀಸ್ಗೆ ಕಾಲಿಟ್ಟಿರುವ ರೋಹಿತ್ ಪಡೆ ಇದೀಗ, ಮಹತ್ವದ ಪಂದ್ಯಗಳನ್ನಾಡಲು ಸಜ್ಜಾಗಿದೆ. ಮೊದಲ ಪಂದ್ಯದಲ್ಲೇ ದೋಸ್ತ್ ಅಫ್ಘಾನಿಸ್ತಾನದ ಸವಾಲು ಎದುರಾಗಲಿದೆ. ಟೀಮ್ ಇಂಡಿಯಾದ ಬಹುತೇಕ ಆಟಗಾರರಿಗೆ ಅಫ್ಘಾನ್ ಪಡೆಯ ಆಟಗಾರರು ದೋಸ್ತ್ಗಳಿದ್ದಾರೆ. ಹಾಗೆಂದುಕೊಂಡು ಫುಲ್ ರಿಲ್ಯಾಕ್ಸ್ ಆದ್ರೆ, ದೋಸ್ತ್ಗಳೇ ವಿಲನ್ ಆಗ್ಬಿಡ್ತಾರೆ. ವಿಶ್ವಕಪ್ನಲ್ಲಿ ಅಫ್ಘಾನ್ ಆಟಗಾರರು ಅಂತಾ ಪರ್ಫಾಮೆನ್ಸ್ ನೀಡ್ತಿದ್ದಾರೆ.
ಇದನ್ನೂ ಓದಿ: ಪುರುಷತ್ವ ಪರೀಕ್ಷೆಗೆ ಹೋಗಲು ಪ್ರಜ್ವಲ್ ರೇವಣ್ಣ ಅಳಲು; ಪರಿ, ಪರಿಯಾಗಿ ಕೇಳಿಕೊಂಡಿದ್ದೇನು?
ವಿಶ್ವಕಪ್ ಅಖಾಡದಲ್ಲಿ ಫಾರೂಕಿ ಬೆಂಕಿ-ಬಿರುಗಾಳಿ.!
ಚುಟುಕು ವಿಶ್ವಕಪ್ ದಂಗಲ್ನಲ್ಲಿ ಅಫ್ಘಾನಿಸ್ತಾನ ಆಟಗಾರರು ಅಬ್ಬರದ ಪರ್ಫಾಮೆನ್ಸ್ ನೀಡ್ತಿದ್ದಾರೆ. ತಂಡದ ವೇಗಿ ಫಝಲ್ಹಕ್ ಫಾರೂಕಿಯಂತೂ ಧೂಳೆಬ್ಬಿಸಿದ್ದಾರೆ. ಫಾರೂಕಿಯ ಬೌಲಿಂಗ್ ದಾಳಿಗೆ ಬ್ಯಾಟ್ಸ್ಮನ್ಗಳು ತತ್ತರಿಸಿ ಹೋಗಿದ್ದಾರೆ. ವಿಶ್ವಕಪ್ನ ಪರ್ಫಾಮೆನ್ಸ್ ಟೀಮ್ ಇಂಡಿಯಾ ಬ್ಯಾಟರ್ಗಳಿಗೆ ವಾರ್ನಿಂಗ್ ಬೆಲ್ ಅಂದ್ರೂ ತಪ್ಪಾಗಲ್ಲ.
ವಿಶ್ವಕಪ್ ಫಾರೂಕಿ ಪ್ರದರ್ಶನ
ಟಿ20 ವಿಶ್ವಕಪ್ ಟೂರ್ನಿಯಲ್ಲಿ 3 ಪಂದ್ಯ ಆಡಿರುವ ಫಝಲ್ಹಲ್ ಫಾರೂಕಿ, 11.2 ಓವರ್ ಬೌಲಿಂಗ್ ಮಾಡಿದ್ದಾರೆ. ಬರೋಬ್ಬರಿ 12 ವಿಕೆಟ್ ಬೇಟೆಯಾಡಿದ್ದು, 3.71ರ ಎಕಾನಮಿಯಲ್ಲಿ ರನ್ ಬಿಟ್ಟು ಕೊಟ್ಟಿದ್ದಾರೆ.
ವಿಂಡೀಸ್ ನಾಡಲ್ಲಿ ಧೂಳೆಬ್ಬಿಸಿದ ನವೀನ್.!
ವೇಗಿ ನವಿನ್ ಉಲ್ ಹಕ್ ಕೂಡ ವಿಂಡೀಸ್ನಲ್ಲಿ ಧೂಳೆಬ್ಬಿಸಿದ್ದಾರೆ. ನವೀನ್ ಉಲ್ ಹಕ್ ಬೌಲಿಂಗ್ನಲ್ಲಿ ಬ್ಯಾಟ್ಸ್ಮನ್ಗಳು ರನ್ಗಳಿಕೆಗೆ ಅಕ್ಷರಶಃ ಪರದಾಡಿದ್ದಾರೆ. ಆಡಿದ 3 ಪಂದ್ಯಗಳಲ್ಲಿ 7.5 ಓವರ್ ಮಾತ್ರ ಬೌಲಿಂಗ್ ಮಾಡಿ 4 ವಿಕೆಟ್ ಉರುಳಿಸಿದ್ದಾರೆ. ಕೇವಲ 2.30ರ ಎಕಾನಮಿಯಲ್ಲಿ ರನ್ ಬಿಟ್ಟು ಕೊಟ್ಟಿದ್ದಾರೆ.
3 ಪಂದ್ಯ, 6 ವಿಕೆಟ್.. ರಶೀದ್ ಖಾನ್ ಮೋಡಿ.!
ಸ್ಪಿನ್ ಮಾಂತ್ರಿಕ, ಅಫ್ಘಾನ್ ತಂಡದ ಕ್ಯಾಪ್ಟನ್ ರಶೀದ್ ಖಾನ್, ಕೆರಬಿಯನ್ ನಾಡಲ್ಲಿ ಮೋಡಿ ಮಾಡಿದ್ದಾರೆ. ಸ್ಪಿನ್ ಮ್ಯಾಜಿಕ್ನಿಂದಲೇ ಎದುರಾಳಿ ಪಡೆಗಳನ್ನ ಕಾಡಿರುವ 3 ಪಂದ್ಯಗಳಲ್ಲೇ 6 ವಿಕೆಟ್ ಬೇಟೆಯಾಡಿದ್ದಾರೆ. 12 ಬೌಲಿಂಗ್ ಮಾಡಿದ್ದು, ಕೇವಲ 4.50ರ ಎಕಾನಮಿ ಹೊಂದಿದ್ದಾರೆ. ಸಾಲಿಡ್ ಫಾರ್ಮ್ನಲ್ಲಿರೋ ರಶೀದ್, ಭಾರತದ ಬ್ಯಾಟರ್ಗಳ ಸವಾಲಾಗೋ ಸಾಧ್ಯತೆ ದಟ್ಟವಾಗಿದೆ.
ಗುರ್ಬಾಜ್ ಅಬ್ಬರದ ಮುಂದೆ ಬೌಲರ್ಸ್ ಥಂಡಾ.!
ಬ್ಯಾಟಿಂಗ್ನಲ್ಲೂ ಅಫ್ಘಾನ್ ಆಟಗಾರರು ಬೊಂಬಾಟ್ ಪರ್ಫಾಮೆನ್ಸ್ ನೀಡಿದ್ದಾರೆ. ಆರಂಭಿಕ ಆಟಗಾರ ರೆಹಮಾನುಲ್ಲಾ ಗುರ್ಬಾಜ್ ವಿಶ್ವಕಪ್ನ ಟಾಪ್ ರನ್ ಸ್ಕೋರರ್ ಆಗಿ ಹೊರ ಹೊಮ್ಮಿದ್ದಾರೆ. 154.63ರ ಸ್ಟ್ರೈಕ್ರೇಟ್ನಲ್ಲಿ ಬೌಂಡರಿ-ಸಿಕ್ಸರ್ ಸುರಿಮಳೆ ಸುರಿಸಿದ್ದಾರೆ. 3 ಪಂದ್ಯಗಳಲ್ಲಿ ಕನ್ಸಿಸ್ಟೆಂಟ್ ಬ್ಯಾಟಿಂಗ್ ನಡೆಸಿರೋ ಗುರ್ಬಾಜ್, 55.67ರ ಸರಾಸರಿಯಲ್ಲಿ 167 ರನ್ಗಳನ್ನ ಚಚ್ಚಿದ್ದಾರೆ.
ಸೈಲೆಂಟಾಗೆ ಕತೆ ಮುಗಿಸ್ತಾರೆ ಇಬ್ರಾಹಿಂ ಝರ್ದಾನ್.!
ಅಫ್ಘಾನ್ ತಂಡದ ಇನ್ನೊರ್ವ ಬ್ಯಾಟ್ಸ್ಮನ್ ಇಬ್ರಾಹಿಂ ಝರ್ದಾನ್ ಕೂಡ ಎದುರಾಳಿಗಳ ಬೌಲಿಂಗ್ ದಾಳಿಯನ್ನ ಚಿಂದಿ ಉಡಾಯಿಸಿದ್ದಾರೆ. 3 ಪಂದ್ಯಗಳಲ್ಲಿ 114 ರನ್ಗಳಿಸಿರೋ ಝರ್ಧಾನ್, 38ರ ಸರಾಸರಿ ಹೊಂದಿದ್ದಾರೆ. ಸೈಲೆಂಟಾಗೆ ಇನ್ನಿಂಗ್ಸ್ ಕಟ್ಟೋ, ಈ ಬ್ಯಾಟರ್ ಟೀಮ್ ಇಂಡಿಯಾ ಬೌಲರ್ಸ್ಗೆ ಸವಾಲಾಗಲಿದ್ದಾರೆ.
ಕ್ರಿಕೆಟ್ ವಲಯದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ಗಳ ಮುಂದೆ ಅಫ್ಘಾನಿಸ್ತಾನ ಆಟ ನಡೆಯಲ್ಲ ಅನ್ನೋ ಒಂದು ಇಮೇಜ್ ಇದೆ. ಆದ್ರೆ, ಈ ಬಾರಿ ಅಫ್ಘಾನ್ ಆಟಗಾರರು ನೀಡಿರುವ ಪರ್ಫಾಮೆನ್ಸ್ ನೋಡಿದ್ರೆ, ಆ ಇಮೇಜ್ ಸುಳ್ಳಾಗೋ ಸಾಧ್ಯತೆ ದಟ್ಟವಾಗಿದೆ. ಟೀಮ್ ಇಂಡಿಯಾ ಎಚ್ಚರಿಕೆಯ ಹೆಜ್ಜೆ ಇಟ್ರೆ ಮಾತ್ರ ಗೆಲುವು ನಮ್ಮದಾಗಲಿದೆ. ಸ್ವಲ್ಪ ಯಾಮಾರಿದ್ರೂ ಸಂಕಷ್ಟ ತಪ್ಪಿದ್ದಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ