53 ವರ್ಷದ ಮಾಜಿ ಆಟಗಾರ ಡೇವಿಡ್ ಜಾನ್ಸನ್ ನಿಧನ
ಹಾಸನದ ಅರಸೀಕೆರೆ ಮೂಲದ ಕ್ರಿಕೆಟಿಗ ಡೇವಿಡ್ ಜಾನ್ಸನ್
ಭಾರತ ಪರ 2 ಟೆಸ್ಟ್ ಪಂದ್ಯಗಳನ್ನಾಡಿ ಎಲ್ಲರ ಗಮನ ಸೆಳೆದಿದ್ದರು
ಟೀಂ ಇಂಡಿಯಾದ ಮಾಜಿ ಆಟಗಾರ ಡೇವಿಡ್ ಜಾನ್ಸನ್ ಇನ್ನಿಲ್ಲ.. ತಮ್ಮ 53ನೇ ವಯಸ್ಸಿನಲ್ಲಿ ಜಾನ್ಸನ್ ಅವರು ತಮ್ಮ ಲೈಫ್ ಜರ್ನಿ ಮುಗಿಸಿದ್ದಾರೆ.
ಭಾರತದ ಕ್ರಿಕೆಟ್ ತಂಡದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಈ ತಾರೆ ಮೂಲತಃ ಕನ್ನಡಿಗನು ಹೌದು. ಕರ್ನಾಟಕದ ಹಾಸನ ಮೂಲದ ಅರಸೀಕೆರೆಯ ಈ ಪ್ರತಿಭೆ ಟೀಂ ಇಂಡಿಯಾ ತಂಡದಲ್ಲಿ ಗುರುತಿಸಿಕೊಂಡಿದ್ದರು. ಭಾರತ ಪರ 2 ಟೆಸ್ಟ್ ಪಂದ್ಯಗಳನ್ನಾಡಿದ್ದ ಕೀರ್ತಿ ಇವರಿಗಿದೆ.
ಅಕ್ಟೋಬರ್ 16, 1971ರಲ್ಲಿ ಜನಿಸಿದ ಡೇವಿಡ್, ವೇಗದ-ಮಧ್ಯಮ ಬೌಲರ್ ಆಗಿ ಗುರುತಿಸಿಕೊಂಡಿದ್ದರು. ಜೊತೆಗೆ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ ಆಗಿದ್ದರು. 1996ರಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದಲ್ಲದೆ, 3 ವಿಕೆಟ್ಗಳನ್ನು ಪಡೆದ ಕನ್ನಡಿಗ.
1996ರ ಆಸ್ಟ್ರೇಲಿಯಾದ ಭಾರತ ಪ್ರವಾಸದ ಸಮಯದಲ್ಲಿ ಡೇವಿಡ್ ತಮ್ಮ ವೇಗದ ಬೌಲಿಂಗ್ನಿಂದ ಮೈಕೆಲ್ ಸ್ಲೇಟರ್ ಅವರ ವಿಕೆಟ್ ಉರುಳಿಸಿದರು. ಗಂಟೆಗೆ 157.8 ಕಿಮೀ ವೇಗದಲ್ಲಿ ವಿಕೆಟ್ ಕಿತ್ತರು. ಅಂದಿನಿಂದ ಭಾರತದ ಅತ್ಯಂತ ವೇಗದ ಬೌಲರ್ ಎಂದೆನಿಸಿಕೊಂಡರು.
ಇದನ್ನೂ ಓದಿ: ಟೀಂ ಇಂಡಿಯಾ ಕಟ್ಟಿಹಾಕಲು ರಶೀದ್ ಖಾನ್ ಪ್ಲಾನ್.. ಭಯಂಕರ ಅಸ್ತ್ರ ಪ್ರಯೋಗಿಸ್ತೀವಿ ಎಂದ ಅಫ್ಘಾನ್
ಇನ್ನು ಫಿರೋಜ್ಶಾ ಕೋಟ್ಲಾದಲ್ಲಿ ನಡೆದ ಏಕೈಕ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟೆಸ್ಟ್ ಆಗಿದ ಹೆಗ್ಗಳಿಕೆ ಡೇವಿಡ್ಗೆ ಇದೆ. ಆ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡು ಮೊದಲ ಟೆಸ್ಟ್ನಲ್ಲಿ ಆಡಿದರು.
ಆದರಿಂದು ಟೀಂ ಇಂಡಿಯಾದ ಮಾಜಿ ಆಟಗಾರ ಡೇವಿಡ್ ಜಾನ್ಸನ್ ಅಕಾಲಿಕ ನಿಧನರಾಗಿದ್ದಾರೆ. ಡೇವಿಡ್ ಜಾನ್ಸನ್ ಅವರ ಸಾವು ಕ್ರಿಕೆಟ್ ಪ್ರಿಯರಿಗೆ ದೊಡ್ಡ ಆಘಾತವನ್ನು ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್