ಭಾರತ-ಅಫ್ಘಾನಿಸ್ತಾನ ಸೂಪರ್ 8 ಹಣಾಹಣಿ
ಟೀಮ್ ಇಂಡಿಯಾ ಮುಂದಿದೆ ಟಫ್ ಚಾಲೆಂಜ್
ರೋಹಿತ್ ಪಡೆಗೆ ಅಫ್ಘನ್ ಬೌಲರ್ಗಳೇ ಸವಾಲು
ಬಾರ್ಬಡೋಸ್ನಲ್ಲಿ ನಡೆಯೋ ಇಂದಿನ ಸೂಪರ್ 8 ಕದನದಲ್ಲಿ ಟೀಮ್ ಇಂಡಿಯಾ ಮುಂದೆ ಟಫ್ ಚಾಲೆಂಜ್ ಇದೆ. ಟೀಮ್ ಇಂಡಿಯಾ ಬ್ಯಾಟರ್ಗಳನ್ನ ಒಂದೊಂದು PHASEನಲ್ಲಿ ಒಬ್ಬೊಬ್ಬ ಅಫ್ಘನ್ ಬೌಲರ್ ಕಾಡಲು ರೆಡಿಯಾಗಿದ್ದಾರೆ. ಪೇಸ್ ಅಂಡ್ ಸ್ಪಿನ್ ಚಾಲೆಂಜ್ ಗೆದ್ರಷ್ಟೇ ಟೀಮ್ ಇಂಡಿಯಾಗೆ ಗೆಲುವು ಒಲಿಯಲಿದೆ. ಸ್ವಲ್ಪ ಯಾಮಾರಿದ್ರೂ ಮುಖಭಂಗ ಅನುಭವಿಸಬೇಕಾಗುತ್ತದೆ.
ಟೀಮ್ ಇಂಡಿಯಾದ ಮೊದಲ ಸೂಪರ್ 8 ಕದನಕ್ಕೆ ಕೌಂಟ್ಡೌನ್ ಶುರುವಾಗಿದೆ. ಬಾರ್ಬಡೋಸ್ನಲ್ಲಿ ಇಂದು ಸೋಲಿಲ್ಲದ ಸರದಾರ ಭಾರತ ತಂಡ ಅಪ್ಘಾನಿಸ್ತಾನ ಪಡೆಯನ್ನ ಎದುರಿಸಲಿದೆ. ಹ್ಯಾಟ್ರಿಕ್ ಗೆಲುವಿನ ಆತ್ಮವಿಶ್ವಾಸದಲ್ಲಿರುವ ಟೀಮ್ ಇಂಡಿಯಾ, ಬಾರ್ಬಡೋಸ್ನಲ್ಲೂ ಗೆಲುವಿನ ಪತಾಕೆ ಹಾರಿಸೋ ವಿಶ್ವಾಸದಲ್ಲಿದೆ.
ಇದನ್ನೂ ಓದಿ:ನಟ ದರ್ಶನ್ ಜೊತೆ ಮಾತಾಡಿಕೊಂಡು ಬಂದ್ವಿ -ಜಾಮೀನು ಬಗ್ಗೆ ವಕೀಲರು ಹೇಳಿದ್ದೇನು..?
ಮೇಲ್ನೋಟಕ್ಕೆ ಅಫ್ಘನ್ಗಿಂತ ಬಲಿಷ್ಠವಾಗಿ ಕಾಣಿಸ್ತಿರೋ ಟೀಮ್ ಇಂಡಿಯಾ ಇಂದಿನ ಪಂದ್ಯದಲ್ಲೂ ಸುಲಭದ ಗೆಲುವಿನ ನಿರೀಕ್ಷೆಯಲ್ಲಿದೆ. ಅಫ್ಘನ್ ತಂಡ ಸುಲಭಕ್ಕೆ ಶರಣಾಗೋ ಜಾಯಮಾನದ್ದಲ್ಲ. ಸಿಕ್ಕಾಪಟ್ಟೆ ಟಫ್ ಫೈಟ್ ಕೊಡಲಿದೆ. ಅದ್ರಲ್ಲೂ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳಿಗಂತೂ ಅಫ್ಘನ್ ಬೌಲರ್ಸ್ ಟಫ್ ಫೈಟ್ ನೀಡಲಿದ್ದಾರೆ. ಈ ಬ್ಯಾಟಲ್ನಲ್ಲಿ ಮೇಲುಗೈ ಸಾಧಿಸಿದ್ರೆ ಮಾತ್ರ, ತಂಡ ಪಂದ್ಯ ಗೆಲ್ಲೋಕೆ ಸಾಧ್ಯ.
ಕೊಹ್ಲಿ-ರೋಹಿತ್ಗೆ ಪವರ್ ಪ್ಲೇನಲ್ಲೇ ಅಗ್ನಿಪರೀಕ್ಷೆ
ಟೀಮ್ ಇಂಡಿಯಾದ ಆರಂಭಿಕರಾಗಿ ಕಣಕ್ಕಿಳಿತಾ ಇರೋ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ರಿಯಲ್ ಅಗ್ನಿಪರೀಕ್ಷೆ ಕಾದಿದೆ. ಕೊಹ್ಲಿ ರನ್ಗಳಿಕೆಗೆ ತಡಬಡಾಯಿಸ್ತಾ ಇದ್ರೆ, ರೋಹಿತ್ ಶರ್ಮಾ ಹೇಳಿಕೊಳ್ಳುವಂತಾ ಅದ್ಭುತ ಫಾರ್ಮ್ನಲ್ಲೇನು ಇಲ್ಲ. ಇದೀಗ ಇವರಿಬ್ಬರ ಮುಂದೆ ವಿಶ್ವಕಪ್ ಅಖಾಡದಲ್ಲಿ ಧೂಳೆಬ್ಬಿಸಿರುವ, ಫಝಲ್ಹಕ್ ಫರೂಕಿಯ ಸವಾಲಿದೆ.
ಇದನ್ನೂ ಓದಿ:IND vs AFG.. ಯಾರಿಗೆಲ್ಲಾ ಚಾನ್ಸ್.. ಯಾರಿಗೆಲ್ಲಾ ಕೊಕ್.. ಕೊಹ್ಲಿ ಸ್ಲಾಟ್ನಲ್ಲಿ ಸರ್ಪ್ರೈಸ್..!
ರೋಹಿತ್, ಕೊಹ್ಲಿಗೆ ಕಾಡ್ತಿದೆ ‘ಎಡಗೈ ಕಂಟಕ’..!
ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಪರ್ಫಾಮೆನ್ಸ್ ನೀಡಿರುವ ಫರೂಕಿ, ಗರಿಷ್ಠ ವಿಕೆಟ್ ಟೇಕರ್ ಆಗಿದ್ದಾರೆ. ಹೊಸ ಬಾಲ್ನೊಂದಿಗೆ ಪವರ್ ಪ್ಲೇನಲ್ಲಿ ಫರೂಕಿ ಬಿರುಗಾಳಿಯಂತಾ ಪರ್ಫಾಮೆನ್ಸ್ ನೀಡ್ತಿದ್ದಾರೆ. ಸಾಲಿಡ್ ರಿಧಮ್ನಲ್ಲಿರೋ ಲೆಫ್ಟ್ ಆರ್ಮ್ ಪೇಸರ್, ಆರಂಭಿಕರಾಗಿ ಕಣಕ್ಕಿಳಿಯುತ್ತಿರೋ ರೋಹಿತ್, ಕೊಹ್ಲಿಗೆ ಬಿಗ್ ಥ್ರೆಟ್ ಆಗಲಿದ್ದಾರೆ. ಫರೂಕಿ ಪರ್ಫಾಮೆನ್ಸ್ ಒಂದೆಡೆಯಾದ್ರೆ, ಲೆಫ್ಟ್ ಆರ್ಮ್ ಪೇಸರ್ಗಳ ಎದುರು ಈ ಹಿಂದೆ ಕೊಹ್ಲಿ-ರೋಹಿತ್ ಪರದಾಡಿರೋದು ಆತಂಕ ಹೆಚ್ಚಿಸಿದೆ.
ಸೂರ್ಯ, ಪಂತ್ಗೆ ಕಾದಿದೆ ರಶೀದ್ ಗೂಗ್ಲಿ ಚಾಲೆಂಜ್.!
ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಸೂರ್ಯ ಕುಮಾರ್ ಯಾದವ್ ಕಳೆದ ಪಂದ್ಯದಲ್ಲಿ ಫಾರ್ಮ್ಗೆ ಮರಳಿದ್ದಾರೆ. ಉತ್ತಮ ಟಚ್ನಲ್ಲಿದ್ರೂ ಅತಿಯಾದ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿಯುವಂತಿಲ್ಲ. ಮಿಡಲ್ ಓವರ್ಗಳಲ್ಲಿ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಇವರನ್ನ ಕಾಡಲಿದ್ದಾರೆ. ಸ್ಪಿನ್ಗೆ ನೆರವಾಗೋ ಪಿಚ್ನಲ್ಲಿ ರಶೀದ್ರ ಗೂಗ್ಲಿ ಎಸೆತಗಳನ್ನ ಎದುರಿಸೋದು ನಿಜಕ್ಕೂ ಟಫ್ ಟಾಸ್ಕ್.! ಕೆರಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೆಚ್ಚು ಪಂದ್ಯಗಳನ್ನ ಆಡಿರೋ ಅನುಭವ ಕೂಡ ರಶೀದ್ಗಿದ್ದು, ಎಚ್ಚರಿಕೆಯ ಆಟವಾಡಬೇಕಿದೆ.
ಇದನ್ನೂ ಓದಿ:ಶವ ಬಿಸಾಕಿದ್ದಾಗಿಂದ ಒಂದೇ ಬಟ್ಟೆಯಲ್ಲೇ ಮೂರು ದಿನ ಓಡಾಟ.. ಎಣ್ಣೆ ಪಾರ್ಟಿ..!
ಡೆತ್ ಓವರ್ಗಳಲ್ಲಿ ನವೀನ್ ಉಲ್ ಹಕ್ ಸವಾಲು.!
ಡೆತ್ ಓವರ್ಗಳಲ್ಲಿ ಟೀಮ್ ಇಂಡಿಯಾಗೆ ನವೀನ್ ಉಲ್ ಹಕ್ ಚಾಲೆಂಜ್ ಎದುರಾಗಲಿದೆ. ಹಳೆ ಬಾಲ್ನೊಂದಿಗೆ ಮ್ಯಾಜಿಕ್ ಮಾಡಬಲ್ಲ ಸಾಮರ್ಥ್ಯ ನವೀನ್ ಉಲ್ ಹಕ್ಗಿದೆ. ಸದ್ಯ ನಡೀತಾ ಇರೋ ಟೂರ್ನಿಯಲ್ಲಿ ವಿಕೆಟ್ ಕಬಳಿಕೆಯಲ್ಲಿ ಹಿಂದಿದ್ರೂ, ಅದ್ಬುತವಾದ ಎಕಾನಮಿ ಕಾಯ್ದುಕೊಂಡಿದ್ದಾರೆ. ಉತ್ತಮವಾದ ವೆರಿಯೇಶನ್ ಹೊಂದಿರುವ ನವೀನ್ ಉಲ್ ಹಕ್, ಫಿನಿಷರ್ ರೋಲ್ ಪ್ಲೇ ಮಾಡ್ತಿರೋ ಹಾರ್ದಿಕ್ ಪಾಂಡ್ಯಗೆ ಸವಾಲಾಗಲಿದ್ದಾರೆ.
ಜೊತೆಗೆ ಮೊಹಮ್ಮದ್ ನಬಿ, ನೂರ್ ಅಹ್ಮದ್ರಂತಹ ಸ್ಪಿನ್ ಪಂಟರ್ಗಳು ಕೂಡ ಅಫ್ಘನ್ ಪಡೆಯಲ್ಲಿದ್ದಾರೆ. ಒಂದೇ ಮಾತಲ್ಲಿ ಹೇಳಬೇಕಂದ್ರೆ, ಅಫ್ಘಾನಿಸ್ತಾನದ ಬೌಲಿಂಗ್ ವಿಭಾಗ ಸಖತ್ ಸ್ಟಾಂಗ್ ಇದೆ. ಈ ಬಲಿಷ್ಠ ಬೌಲಿಂಗ್ ಅಟ್ಯಾಕ್ಗೆ ಟೀಮ್ ಇಂಡಿಯಾ ಬ್ಯಾಟರ್ಸ್ ಹೇಗೆ ಉತ್ತರ ಕೊಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ಇದನ್ನೂ ಓದಿ:ಚಂದನ್ ಶೆಟ್ಟಿ-ನಿವೇದಿತಾ ಗೌಡ ಕುರಿತ ಮತ್ತೊಂದು ಅಪ್ಡೇಟ್ಸ್.. ಮತ್ತೆ ಪ್ರೂವ್ ಮಾಡಿದ ಜೋಡಿ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್