newsfirstkannada.com

IND vs AFG.. ಯಾರಿಗೆಲ್ಲಾ ಚಾನ್ಸ್​​​.. ಯಾರಿಗೆಲ್ಲಾ ಕೊಕ್​​​..​ ಕೊಹ್ಲಿ ಸ್ಲಾಟ್​ನಲ್ಲಿ ಸರ್​ಪ್ರೈಸ್​..!

Share :

Published June 20, 2024 at 9:26am

Update June 20, 2024 at 9:38am

  ಸೂಪರ್​​​​-8 ಫೈಟ್​ನಲ್ಲಿ ಇಂದು ಭಾರತ vs ಅಫ್ಘಾನ್

  ಕ್ಯಾಪ್ಟನ್ ರೋಹಿತ್ ಪಡೆಗಿರೋ ಚಾಲೆಂಜಸ್​ಗಳೇನು..?

  ಹೇಗಿರುತ್ತೆ ಟೀಂ ಇಂಡಿಯಾದ ಪ್ಲೇಯಿಂಗ್​​​-11..?

ಟಿ20 ವಿಶ್ವಕಪ್​​​​ನಲ್ಲಿ ಸೂಪರ್​​​​-8 ಪಂದ್ಯಗಳು ಆರಂಭಗೊಂಡಿವೆ. ಆದರೆ ಟೀಮ್ ಇಂಡಿಯಾದ ಅಭಿಯಾನ ಶುರುವಾಗೋದು ಇಂದಿನಿಂದ. ಮೊದಲ ಪಂದ್ಯದಲ್ಲೇ ಭಾರತ ತಂಡ ಡೇಂಜರಸ್​​ ಅಪ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಗ್ರೂಪ್​ ಸ್ಟೇಜ್​​ನಲ್ಲಿ ದೊಡ್ಡ ತಂಡಗಳಿಗೆ ಚಳ್ಳೆ ಹಣ್ಣು ತಿನ್ನಿಸಿರುವ ಅಫ್ಘನ್​ ಭಾರತಕ್ಕೆ ಶಾಕ್ ಕೊಡುವ ನಿರೀಕ್ಷೆಯಲ್ಲಿದೆ. ಅತ್ತ ಭಾರತ ಗೆಲುವಿಗೆ ಹವಣಿಸ್ತಿದೆ. ಏಷ್ಯನ್​​ ಬ್ಯಾಟಲ್​​ನ ಕಂಪ್ಲೀಟ್​​​ ರಿಪೋರ್ಟ್​ ಇಲ್ಲಿದೆ.

ಇಂದು ಸೂಪರ್​​​​-8ನಲ್ಲಿ ಭಾರತಕ್ಕೆ ಅಫ್ಘನ್​​​​ ಸವಾಲು
T20 ವಿಶ್ವಕಪ್​ ರಣರಂಗದಲ್ಲಿ ಮತ್ತೆ ದರ್ಬಾರ್​ ನಡೆಸೋಕೆ ಟೀಮ್ ಇಂಡಿಯಾ ಸಜ್ಜಾಗಿದೆ. ಗ್ರೂಪ್​ ಸ್ಟೇಜ್​​ನಲ್ಲಿ ಅಜೇಯವಾಗಿದ್ದ ಭಾರತ, ಇಂದು ಮತ್ತೊಂದು ವಿಕ್ಟರಿ ಮೇಲೆ ಕಣ್ಣಿಟ್ಟಿದೆ. ಬಾರ್ಬಡೋಸ್​ನಲ್ಲಿ ನಡೆಯುವ ಸೂಪರ್​​​-8 ಹಣಾಹಣಿಯಲ್ಲಿ ಬಲಾಢ್ಯ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ತೊಡೆಗಟ್ಟಲಿವೆ. ಉಭಯ ತಂಡಗಳಿಗೆ ಗೆಲುವೊಂದೇ ಗುರಿಯಾಗಿದ್ದು, ಏಷ್ಯನ್​ ತಂಡಗಳ ಕಾದಾಟ ಭಾರಿ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ:ಮೂರು ವರ್ಷದ ಪುಟಾಣಿ ಕಂದನ ಕತ್ತು ಸೀಳಿ ಬರ್ಬರವಾಗಿ ಕೊಲೆಗೈದ ಚಿಕ್ಕಪ್ಪ..

ಭಾರತಕ್ಕೆ ಆರಂಭಿಕರೇ ದೊಡ್ಡ ತಲೆನೋವು..!
ಅಪ್ಘಾನಿಸ್ತಾನದಂತಹ ಡೇಂಜರಸ್​​ ತಂಡವನ್ನ ಬಗ್ಗುಬಡಿಯಲು ಉತ್ತಮ ಆರಂಭ ಸಿಗಬೇಕು. ಆದರೆ ಭಾರತಕ್ಕೆ ಆರಂಭಿಕರೇ ದೊಡ್ಡ ತಲೆನೋವಾಗಿದ್ದಾರೆ. ಗ್ರೂಪ್ ಸ್ಟೇಜ್​ನಲ್ಲಿ ರೋಹಿತ್​​​-ಕೊಹ್ಲಿ ಜೋಡಿ ಫೇಲ್ಯೂರ್ ಆಗಿದೆ. 22 ರನ್​ ಇದುವರೆಗಿನ ಬೆಸ್ಟ್​ ಪಾರ್ಟ್ನರ್​​ಶಿಪ್​ ಆಗಿದೆ. ಇಂದಾದ್ರು ಆ ವೈಫಲ್ಯದಿಂದ ಹೊರಬಂದು, ಬಿಗ್ ಇನ್ನಿಂಗ್ಸ್ ಕಟ್ಟುವತ್ತ ಚಿತ್ತ ಹರಿಸಬೇಕಿದೆ.

ಕಿಂಗ್​ ಕೊಹ್ಲಿ ಸ್ಲಾಟ್​ನಲ್ಲಿ ಸರ್​ಪ್ರೈಸ್​..!
ಕಿಂಗ್ ಕೊಹ್ಲಿ ಆರಂಭಿಕ ಸ್ಥಾನ ಸದ್ಯ ಹಾಟ್​ ಟಾಪಿಕ್ ಆಗಿದೆ. ಟೂರ್ನಿಯಲ್ಲಿ ಅಟ್ಟರ್​​​​ ಫ್ಲಾಪ್ ಶೋ ನೀಡ್ತಿರೋ ಕೊಹ್ಲಿಯನ್ನ ಆರಂಭಿಕ ಸ್ಥಾನದಿಂದ ಕೆಳಗಿಳಿಸಿ ಫೇವರಿಟ್ 3ನೇ ಸ್ಲಾಟ್​ನಲ್ಲಿ ಆಡಿಸ್ಬೇಕು ಅನ್ನೋ ಕೂಗು ಕೇಳಿ ಬರ್ತಿದೆ. ಈ ಸ್ಲಾಟ್​ನಲ್ಲಿ ವಿರಾಟ್​​ ರೆಕಾಡ್ಸ್​​ ಅದ್ಭುತವಾಗಿದೆ. ಒಂದೊಮ್ಮೆ ಕೊಹ್ಲಿಗೆ ಆರಂಭಿಕ ಸ್ಥಾನದಿಂದ ಕೊಕ್​ ನೀಡಿದ್ರೆ ಜೈಸ್ವಾಲ್​​ಗೆ ಅದೃಷ್ಟದ ಬಾಗಿಲು ತೆರೆಯಲಿದೆ.

ಇದನ್ನೂ ಓದಿ:ಚೈನ್​, ಉಂಗುರ ತೆಗೆದುಕೊಂಡಿದ್ದು ಜಗದೀಶ್.. ವಾಚ್ ಕದ್ದಿದ್ಯಾರು? D ಗ್ಯಾಂಗ್​ನ ಒಡವೆಗಳ ಹಂಚಿಕೆ ಹೇಗಿತ್ತು?

ನಾಲ್ವರು ಫಾಸ್ಟ್ ಬೌಲರ್ಸಾ ಅಥವಾ ಮೂವರಾ..?
ಅಮೆರಿಕಾದ ಪಿಚ್​ಗಳು ವೇಗಿಗಳ ಸ್ವರ್ಗವಾಗಿತ್ತು. ಅಲ್ಲಿ ಭಾರತ ತಂಡ ನಾಲ್ವರು ಫಾಸ್ಟ್ ಬೌಲರ್​ಗಳನ್ನ ಆಡಿಸಿತ್ತು. ಆದರೆ ವೆಸ್ಟ್​​ಇಂಡೀಸ್​ ತಾಣಗಳಲ್ಲಿ ಸ್ಪಿನ್ನರ್ಸ್​ಗೆ ಹೆಚ್ಚು ನೆರವು ಸಿಗಲಿದೆ. ಹೀಗಾಗಿ ಮೂವರು ಫಾಸ್ಟ್ ಬೌಲರ್ಸ್​ ಆಡಿಸುವ ಸಾಧ್ಯತೆ ಹೆಚ್ಚಿದೆ. ಬೂಮ್ರಾ ಹಾಗೂ ಹಾರ್ದಿಕ್​ ಆಡುವುದು ಕನ್ಫರ್ಮ್​. ಉಳಿದ 1 ಸ್ಥಾನಕ್ಕೆ ಸಿರಾಜ್ ಹಾಗೂ ಅರ್ಷ್​ದೀಪ್ ಸಿಂಗ್​ ನಡ್ವೆ ಫೈಟ್ ಏರ್ಪಡಲಿದೆ.

ಕುಲ್​ದೀಪ್​ V/S ಚಹಲ್​​​​​​​​​​​​..
ಒಂದೊಮ್ಮೆ ಕ್ಯಾಪ್ಟನ್ ರೋಹಿತ್​ ಶರ್ಮಾ ಇಂದು ಮೂವರು ವೇಗಿಗಳನ್ನ ಆಡಿಸಿದ್ರೆ ಅವರಿಗೆ ತ್ರಿಮೂರ್ತಿ ಸ್ಪಿನ್ನರ್ಸ್​ ಸಾಥ್​ ನೀಡಲಿದ್ದಾರೆ. ಜಡೇಜಾ ಹಾಗೂ ಅಕ್ಷರ್ ಪಟೇಲ್ ಆಡುವುದು ಬಹುತೇಕ ಪಕ್ಕಾ. ಆದರೆ 3ನೇ ಸ್ಪಿನ್ನರ್ ಆಗಿ ಕುಲ್ದೀಪ್​ ಯಾದವ್ ಆಡ್ತಾರಾ ಅಥವಾ ಚಹಲ್ ಆಡ್ತಾರಾ ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ.

ಇದನ್ನೂ ಓದಿ:ದರ್ಶನ್ ಮಾತ್ರವಲ್ಲ.. ಅಭಿಮಾನಿಗಳಿಗೂ ಇದೆ ಹಬ್ಬ.. ಬಾಲ ಕಟ್ ಮಾಡಲು ಲಿಸ್ಟ್ ರೆಡಿ..!

ಅಫ್ಘನ್​​​ ತಂಡದಲ್ಲಿ ಕ್ವಾಲಿಟಿ ಸ್ಪಿನ್ನರ್ಸ್​..ಕಿಲ್ಲಿಂಗ್ ಪೇಸರ್ಸ್​..!
ಟೀಮ್ ಇಂಡಿಯಾ ಅಪ್ಘನ್​​​​​ ತಂಡವನ್ನ ಯಾವುದೇ ಕಾರಣಕ್ಕೂ ಲೈಟ್ ಆಗಿ ತೆಗೆದುಕೊಳ್ಳುವಂತಿಲ್ಲ. ಯಾಕಂದ್ರೆ ಮ್ಯಾಚ್ ವಿನ್ನಿಂಗ್​ ಸ್ಪಿನ್ನರ್​ಗಳಿದ್ದಾರೆ. ಆಲ್​​ಟೈಮ್​ ಥ್ರೆಟ್​​ ರಶೀದ್​​ ಖಾನ್​​​, ನೂರ್ ಅಹ್ಮದ್​​​ ಹಾಗೂ ಮೊಹಮ್ಮದ್ ನಬಿ ಇದ್ದಾರೆ. ಜತೆಗೆ ಬೆಂಕಿ ಉಗುಳುವ ಫರೂಕಿ, ನವೀನ್​ ಉಲ್​​ ಹಕ್​​ ರಂತ ಫಾಸ್ಟ್ ಬೌಲರ್​ಗಳಿದ್ದಾರೆ. ಸೋ ಭಾರತ ಎಚ್ಚರಿಕೆಯಿಂದ ಆಟವಾಡಬೇಕಿದೆ.

ಸಣ್ಣ ಬೌಂಡರಿ​​​.. ಫ್ಯಾನ್ಸ್​ಗೆ ಸಿಕ್ಸರ್-ಬೌಂ​​​​​ಡ್ರಿಗಳ ಹಬ್ಬ ಪಕ್ಕಾ..!
ಬಾರ್ಬಡೋಸ್ ಮೈದಾನ ಚಿಕ್ಕದಾಗಿದ್ದು ರನ್ ಹೊಳೆ ಹರಿಯುವ ಸಾಧ್ಯತೆ ಹೆಚ್ಚಿದೆ. ಈ ವಿಶ್ವಕಪ್​​ನಲ್ಲಿ ಆಡಿದ 5 ಪಂದ್ಯಗಳ ಪೈಕಿ ಈ ಮೈದಾನದಲ್ಲಿ 3 ಪಂದ್ಯಗಳಲ್ಲಿ 150+ ರನ್​ ಹರಿದು ಬಂದಿದೆ. ಭಾರತ ಹಾಗೂ ಅಫ್ಘನ್​ ತಂಡಗಳಲ್ಲಿ ಬಿಗ್​​ ಹಿಟ್ಟರ್​ಗಳಿದ್ದಾರೆ. ಅಂದ್ಮೇಲೆ ಸಿಕ್ಸರ್​​​-ಬೌಂಡ್ರಿಗಳ ಧಮಾಕ ಗ್ಯಾರಂಟಿ. ಮಿಸ್ ಮಾಡದೇ ನೋಡಿ ಎಂಜಾಯ್ ಮಾಡಿ.

ಇದನ್ನೂ ಓದಿ:ಉಮಾಪತಿ ಹೇಳಿಕೆಯಿಂದ ದರ್ಶನ್​​ಗೆ ಮತ್ತೊಂದು ಸಂಕಷ್ಟ.. ಗೃಹ ಇಲಾಖೆಯಿಂದ ಶಾಕಿಂಗ್ ನಿರ್ಧಾರ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

IND vs AFG.. ಯಾರಿಗೆಲ್ಲಾ ಚಾನ್ಸ್​​​.. ಯಾರಿಗೆಲ್ಲಾ ಕೊಕ್​​​..​ ಕೊಹ್ಲಿ ಸ್ಲಾಟ್​ನಲ್ಲಿ ಸರ್​ಪ್ರೈಸ್​..!

https://newsfirstlive.com/wp-content/uploads/2024/06/IND-vs-AFG.jpg

Load More