newsfirstkannada.com

×

ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್‌.. ದರ್ಶನ್ ಗ್ಯಾಂಗ್‌ನಲ್ಲಿ ಮತ್ತೊಬ್ಬ ಅನಾಮಧೇಯ; ಸ್ಫೋಟಕ ಮಾಹಿತಿ ಇಲ್ಲಿದೆ

Share :

Published June 21, 2024 at 10:10pm

    ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಅನಾಮಧೇಯ ವ್ಯಕ್ತಿಗಳು

    ಪ್ರದೋಶ್​ ಜೊತೆ ಬಂದು ಹೋಗಿರುವ ವ್ಯಕ್ತಿ ಬಗ್ಗೆ ಹುಡುಕಾಟ

    ಎಲೆಕ್ಟ್ರಿಕ್​ ಶಾಕ್​ ಕೊಟ್ಟು ರೇಣುಕಾಸ್ವಾಮಿಗೆ ಡಿ ಗ್ಯಾಂಗ್​ ಹಿಂಸೆ

ಡಿ ಬಾಸ್‌ ಎಂಬ ಖ್ಯಾತಿ ಈಗ ಡಿ ಗ್ಯಾಂಗ್ ಎಂಬ ಕುಖ್ಯಾತಿಯಾಗಿ ಬದಲಾಗಿದೆ. ಇದು ದರ್ಶನ್‌ಗೆ ಯಾರಿಂದಲೋ ಒದಗಿಬಂದ ಪರಿಸ್ಥಿತಿಯಲ್ಲ. ಕೋಪದ ಕೈಗೆ ಬುದ್ಧಿ ಕೊಟ್ಟು ತಾವಾಗೇ ಮೈಮೇಲೆ ಎಳೆದುಕೊಂಡಿರೋ ಮಹಾ ಪಾಪ. ಈ ಮಧ್ಯೆ ಜೈಲು ಸೇರಿರೋ ಡೆವಿಲ್ ಗ್ಯಾಂಗೇ ಎಷ್ಟು ದೊಡ್ಡದಿದೆ. ಆದ್ರೀಗ ಇವರಷ್ಟೇ ಕೊಲೆ ಪಾತಕಿಗಳಲ್ಲ. ಬದಲಾಗಿ ಮತ್ತಷ್ಟು ಕಾಣದ ಕೈಗಳು ಭೀಭತ್ಸ ಕೃತ್ಯದಲ್ಲಿ ಕೈ ಜೋಡಿಸಿವೆ ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: HDK ವಿರುದ್ಧ ನಾಲಿಗೆ ಹರಿಬಿಟ್ಟ ದರ್ಶನ್ ಮಹಿಳಾ ಅಭಿಮಾನಿಗೆ ಸಂಕಷ್ಟ; ಆಗಿದ್ದೇನು?

ಬೆಳ್ಳಿ ಪರದೆ ಮೇಲೆ ಮಾಸ್ ಡೈಲಾಗ್ ಹೊಡೀತಿದ್ದ ನಟ ಈಗ ಕತ್ತಲ ಕೋಣೆ ಸೇರಿದ್ದಾರೆ. ನಿತ್ಯವೂ ಫ್ಯಾನ್ಸ್‌ ಮುಖ ನೋಡ್ತಿದ್ದ ನಟನೀಗ ಪೊಲೀಸರ ಅತಿಥಿಯಾಗಿದ್ದಾರೆ. ಕೊಲೆ ಕೇಸ್‌ನಲ್ಲಿ ಮಾಸ್‌ ಗ್ಯಾಂಗ್‌ ಜೊತೆ ಕಸ್ಟಡಿಯಲ್ಲಿದ್ದಾರೆ. ಇದೀಗ ಕೊಲೆಯ ಸಾರಥಿಯ ಸೈನ್ಯ 17 ಮಂದಿ ಅಷ್ಟೇ ಅಲ್ಲ. ಮತ್ತಷ್ಟು ಮಂದಿ ಈ ಕೇಸ್‌ನಲ್ಲಿ ಇನ್ವಾಲ್ ಆಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನ ಅನಾಮಧೇಯ ವ್ಯಕ್ತಿ ಲಿಸ್ಟ್‌ನಲ್ಲಿರೋ ಮೊದಲ ವ್ಯಕ್ತಿ ಶವ ಸಾಗಾಟಕ್ಕೆ ಕೇಶವಮೂರ್ತಿಗೆ 5 ಲಕ್ಷ ನೀಡಲಾಗಿತ್ತು. ಆ ಹಣವನ್ನ ಕೇಶವಮೂರ್ತಿ ತನ್ನ ಸ್ನೇಹಿತನಿಗೆ ನೀಡಿದ್ದಾಗಿ ಹೇಳಿಕೆ ನೀಡಿದ್ದ. ಆದ್ರೀಗ ಹಣ ಪಡೆದ ಆ ಸ್ನೇಹಿತ ತಲೆಮರೆಸಿಕೊಂಡಿದ್ದು, ಇನ್ನೂ ಪತ್ತೆಯಾಗಿಲ್ಲ.

ಇನ್ನೂ 2ನೇ ಅನಾಮಧೇಯ ವಕ್ತಿ ಅಂದ್ರೆ, ಪ್ರದೋಶ್​ ಜೊತೆ ಪಟ್ಟಣಗೆರೆ ಶೆಡ್‌ಗೆ ಆಗಾಗ ಬಂದು ಹೋಗಿರುವ ವ್ಯಕ್ತಿ ಯಾರು ಅನ್ನೋದು? ಮೂರನೇ ಅನಾಮಧೇಯ ವ್ಯಕ್ತಿ ಅಂದ್ರೆ, ಪ್ರಮುಖ ಐ ವಿಟ್ಸೆಸ್‌ಗಳಿಗೆ ಸಾಕ್ಷಿ ಹೇಳದಂತೆ ಹಣದ ಆಮಿಷ ಒಡ್ತಿರೋರು ಯಾರು ಅನ್ನೋದು ಸದ್ಯದ ಪ್ರಶ್ನೆ. ಇನ್ನೂ, ಪೊಲೀಸರ ವಿಚಾರಣೆಯಲ್ಲಿ ತಮ್ಮ ಜೊತೆ ಬಂದು ಹೋಗಿರೋ ವ್ಯಕ್ತಿ ಯಾರು ಅಂತ ಎಷ್ಟೇ ಕೇಳಿದ್ರೆ ಪ್ರದೋಶ್‌ ಬಾಯ್ಬಿಡ್ತಿಲ್ವಂತೆ. ಹೀಗಾಗಿ ಪೊಲೀಸರು ಪ್ರದೋಶ್‌ಗೆ ಮಾತ್ರ ಆತ ಗೊತ್ತು ಅಂತ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಹಾಗಾದ್ರೆ ಆ ಅಪರಿಚಿತ ವ್ಯಕ್ತಿ ನಟನಾ? ಅಥವಾ ವಿಐಪಿಯಾ? ಎಂಬ ಪ್ರಶ್ನೆ ಮೂಡಿದೆ.

ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್​ ಶಾಕ್​ ಟಾರ್ಚ್​ ಮೂಲಕ ಚಿತ್ರಹಿಂಸೆ ನೀಡಲಾಗಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಸೆಕ್ಯೂರಿಟಿ ಗಾರ್ಡ್​ಗಳು ಸೆಲ್ಫ್​ ಡಿಫೆನ್ಸ್​ಗೆ ಬಳಸುವಂತಹ ಟಾರ್ಚ್‌ನ ಅಮಾನವೀಯ ಕೃತ್ಯಕ್ಕೆ ಬಳಸಲಾಗಿದೆ. ಇದೇ ಟಾರ್ಚ್‌ನ ಬಳಸಿ 9ನೇ ಆರೋಪಿ ರಾಜು ಅಲಿಯಾಸ್‌ ಧನರಾಜ್​ ರೇಣುಕಾಸ್ವಾಮಿಗೆ ಮನಬಂದಂತೆ ಶಾಕ್ ಕೊಟ್ಟಿದ್ನಂತೆ. ಆದ್ರೀಗ ಈ ಎಲೆಕ್ಟ್ರಿಕ್ ಶಾಕ್ ಟಾರ್ಚ್‌ನ ಧನರಾಜ್‌ ಎಲ್ಲಿಂದ ತಂದ ಅನ್ನೋದರ ಮೂಲವನ್ನ ಪೊಲೀಸರು ಹುಡುಕುತ್ತಿದ್ದಾರೆ. ಆವತ್ತಿನ ದಿನ ಧನರಾಜ್‌ ಜೊತೆಗೂ ಯಾರೋ ಒಬ್ಬ ವ್ಯಕ್ತಿ ಶೆಡ್‌ನ ಸ್ಥಳಕ್ಕೆ ಬಂದು ಹೋಗಿದ್ದು, ಆತನ ಖೆಡ್ಡಾಕ್ಕೆ ಕೆಡವಲು ಪೊಲೀಸರು ಮುಂದಾಗಿದ್ದಾರೆ.

ಇನ್ನೂ ಏಟಿನ ಮೇಲೆ ಏಟು ತಿಂದಿದ್ದ ರೇಣುಕಾಸ್ವಾಮಿ ಸಾವನ್ನಪ್ಪುತ್ತಿದ್ದಂತೆ ದರ್ಶನ್ ಬಾಲ ಸುಟ್ಟ ಬೆಕ್ಕಿನಂತಾಗಿದ್ರಂತೆ. ತನ್ನ ಮೈಮೇಲೆ ಆರೋಪ ಬರಬಾರದು ಅಂತ ಯಾಱರನ್ನೋ ಸಂಪರ್ಕ ಮಾಡಿದ್ರಂತೆ. ಆದ್ರೆ, ಯಾರನ್ನೆಲ್ಲಾ ಸಂಪರ್ಕಿಸಲಾಗಿತ್ತು? ಅವರನ್ನ ಸಂಪರ್ಕಿಸಿದ ಉದ್ದೇಶವೇನು? ಎಂಬ ವಿವರ ಸಿಕ್ಕಿಲ್ಲ. ಅದೇನೆ ಇರಲಿ, ಪೊಲೀಸರು ಕಾಣದ ಕೈಗಳಿಗೆ ಕೋಳ ತೊಡಿಸಲು ಹುಡುಕಾಡ್ತಿದ್ದಾರೆ. ಅವರ ಪಾತ್ರದ ಬಗ್ಗೆ ಪತ್ತೆ ಹಚ್ಚಲು ಟೊಂಕ ಕಟ್ಟಿ ನಿಂತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್‌.. ದರ್ಶನ್ ಗ್ಯಾಂಗ್‌ನಲ್ಲಿ ಮತ್ತೊಬ್ಬ ಅನಾಮಧೇಯ; ಸ್ಫೋಟಕ ಮಾಹಿತಿ ಇಲ್ಲಿದೆ

https://newsfirstlive.com/wp-content/uploads/2024/06/DARSHAN-32-1.jpg

Load More