newsfirstkannada.com

ಇಸ್ಲಾಂ ಧರ್ಮಕ್ಕೆ ಮತಾಂತರ ಆಗ್ತಾರಾ ಸೋನಾಕ್ಷಿ ಸಿನ್ಹಾ? ಮದುವೆ ದಿನವೇ ದೊಡ್ಡ ವಿವಾದ; ಏನದು?

Share :

Published June 23, 2024 at 6:10am

    ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಬಾಲಿವುಡ್​ ಖ್ಯಾತ ನಟಿ

    'ಡಬಲ್‌ ಎಕ್ಸ್‌ಎಲ್‌' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಸೋನಾಕ್ಷಿ, ಇಕ್ಬಾಲ್‌

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ಮೆಹೆಂದಿ ಫೋಟೋಸ್

ಬಾಲಿವುಡ್‌ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬಹುಕಾಲದ ಗೆಳೆಯ ಜಹೀರ್‌ ಇಕ್ಬಾಲ್‌ ಅವರ ಜೊತೆ ಮದುವೆಗೆ ಸಜ್ಜಾಗಿದ್ದಾರೆ. ಈಗಾಗಲೇ ವಿವಾಹದ ಕಾರ್ಯಕ್ರಮಗಳು ಆರಂಭವಾಗಿದ್ದು, ಮೆಹೆಂದಿ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ: ಹಾಸನದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಹೊಸ ಟ್ವಿಸ್ಟ್.. ಸೂರಜ್ ರೇವಣ್ಣ ಹೇಳಿದ್ದೇನು?​​

ಇನ್ನು, ನಟಿ ಸೋನಾಕ್ಷಿ ಸಿನ್ಹಾ ಅವರು ಮದುವೆಯ ಬಳಿಕ ಜಹೀರ್‌ ಇಕ್ಬಾಲ್‌ ಅವರ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ ಎಂಬ ಮಾತುಗಳು ಹರಿದಾಡಿತ್ತು. ಇದೀಗ ಈ ಬಗ್ಗೆ ಜಹೀರ್ ಅವರ ತಂದೆ, ಉದ್ಯಮಿ ಇಟ್ಬಾಲ್ ರತ್ನಾಸಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಜಹೀರ್ ಮದುವೆ ಸ್ಪೆಷಲ್ ಮ್ಯಾರೇಜ್ ಆಕ್ಟ್ ಅಡಿಯಲ್ಲಿ ನಡೆಯಲಿದೆ. ಮದುವೆ ಬಳಿಕ ಸೋನಾಕ್ಷಿ ಇಸ್ಲಾಂಗೆ ಮತಾಂತರಗೊಳ್ಳುವುದಿಲ್ಲ. ಈ ಮದುವೆ ಹಿಂದೂ ಅಥವಾ ಮುಸ್ಲಿಂ ಆಚರಣೆಗಳನ್ನು ಹೊಂದಿರುವುದಿಲ್ಲ, ಇದೊಂದು ನಾಗರಿಕ ವಿವಾಹವಾಗಿರುತ್ತದೆ ಎಂದಿದ್ದಾರೆ.

ನಟಿ ಸೋನಾಕ್ಷಿ ಮತ್ತು ಇಕ್ಬಾಲ್‌ 2022ರಲ್ಲಿ ಬಿಡುಗಡೆಯಾದ ‘ಡಬಲ್‌ ಎಕ್ಸ್‌ಎಲ್‌’ ಚಿತ್ರದಲ್ಲಿ ನಟಿಸಿದ್ದರು. ಅಂದಿನಿಂದ ಈ ಇಬ್ಬರು ಡೇಟಿಂಗ್‌ ಮಾಡುತ್ತಿದ್ದರು ಎನ್ನಲಾಗಿತ್ತು. ಇವರಿಬ್ಬರು ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ದೃಢಪಡಿಸಿಲ್ಲ. ಆದರೆ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳು ಹರಿದಾಡುತ್ತಿದ್ದವು. ಆದರೆ ಇದನ್ನು ನೋಡಿದ ಅಭಿಮಾನಿಗಳು ಈ ಇಬ್ಬರು ಲವ್​ ಮಾಡುತ್ತಿದ್ದಾರೆ ಎಂದು ಅಂದುಕೊಂಡಿದ್ದರು. ಇದೀಗ ಆ ಅನುಮಾನ ನಿಜವಾಗಿ ಬಿಟ್ಟಿದೆ. ಮುಂಬೈನ ಬಾಸ್ಟಿಯನ್‌ನಲ್ಲಿ ಸೋನಾಕ್ಷಿ ಮತ್ತು ಜಹೀರ್ ಮದುವೆಯ ಆರತಕ್ಷತೆಯನ್ನು ಆಯೋಜಿಸಲಾಗಿದೆ. ಸೋನಾಕ್ಷಿ ಅವರ ಮದುವೆಗೆ ನಟ ಸಲ್ಮಾನ್ ಖಾನ್, ಹುಮಾ ಖುರೇಷಿ, ಶಾರುಖ್​ ಖಾನ್​ ಸೇರಿದಂತೆ ಖ್ಯಾತ ಸೆಲೆಬ್ರಿಟಿಗಳು ಭಾಗಿಯಾಗುವ ಸಾಧ್ಯತೆಯಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಸ್ಲಾಂ ಧರ್ಮಕ್ಕೆ ಮತಾಂತರ ಆಗ್ತಾರಾ ಸೋನಾಕ್ಷಿ ಸಿನ್ಹಾ? ಮದುವೆ ದಿನವೇ ದೊಡ್ಡ ವಿವಾದ; ಏನದು?

https://newsfirstlive.com/wp-content/uploads/2024/06/sonakshi1.jpg

Load More