newsfirstkannada.com

ಕೋರ್ಟ್​​ನಲ್ಲಿ ಒಂದೇ ದಿನ ಅಣ್ಣ-ತಮ್ಮನ ಕೇಸ್ ವಿಚಾರಣೆ.. ಸೂರಜ್ ರೇವಣ್ಣಗೂ ಪುರುಷತ್ವ ಟೆಸ್ಟ್..?

Share :

Published June 25, 2024 at 8:14am

Update June 25, 2024 at 8:15am

    ಎರಡು ಪ್ರಕರಣ ವಿಚಾರಣೆ ಮಾಡಿದ ನ್ಯಾಯಾಧೀಶ KN ಶಿವಕುಮಾರ್‌

    ಸೂರಜ್ ಅಸಹಜ ಲೈಂಗಿಕ ದೌರ್ಜನ್ಯ ಕೇಸ್​ ತನಿಖೆ ಮತ್ತಷ್ಟು ಚುರುಕು

    ಸೂರಜ್ ರೇವಣ್ಣ ವಿರುದ್ಧ ಹಾಸನದಲ್ಲಿ ಸಲಿಂಗಕಾಮದ ಕೇಸ್ ದಾಖಲು

ಸೂರಜ್ ರೇವಣ್ಣ ವಿರುದ್ಧ ಹಾಸನದಲ್ಲಿ ಸಲಿಂಗಕಾಮದ ಕೇಸ್ ದಾಖಲಾಗುತ್ತಿದ್ದಂತೆ ಬಂಧಿಸಿದ್ದ ಜಿಲ್ಲಾ ಪೊಲೀಸರು ತನಿಖೆ ಆರಂಭಿಸಿದ್ದ್ದರು. ನಿನ್ನೆ ಕೋರ್ಟ್ ಮುಂದೆ ಹಾಜರುಪಡಿಸಿದ ಸಿಐಡಿ ಪೊಲೀಸರು ವಿಚಾರಣೆ ನಡೆಸಲು 8 ದಿನ ಸುಪರ್ದಿಗೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಜೈಲೂಟ ತಿನ್ನದೆ ಪರದಾಟ.. ಹೆಂಡತಿ, ಮಗನನ್ನು ನೋಡಿ ಇನ್ನಷ್ಟು ಮಂಕಾದ ದರ್ಶನ್..!

ಒಂದೇ ಬಾರಿಗೆ ಅಣ್ಣ ಸೂರಜ್, ತಮ್ಮ ಪ್ರಜ್ವಲ್ ವಿಚಾರಣೆ!

ನಿನ್ನೆ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್​ನಲ್ಲಿ ಅಣ್ಣ-ತಮ್ಮಂದಿರ ಅರ್ಜಿ ವಿಚಾರಣೆ ನಡೆದಿದೆ. ಮಾಜಿ ಸಚಿವ ಹೆಚ್​.ಡಿ ರೇವಣ್ಣರ ಇಬ್ಬರೂ ಪುತ್ರರ ವಿರುದ್ಧ ಹಾಕಿರುವ ಕೇಸ್​ನ ಅರ್ಜಿ ವಿಚಾರಣೆ ನಡೆಸಲಾಗಿದೆ. ಸಲಿಂಗ ಕಾಮ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಜೆಡಿಎಸ್​ ವಿಧಾನಪರಿಷತ್ ಸದಸ್ಯ ಸೂರಜ್‌ ರೇವಣ್ಣನನ್ನ ನ್ಯಾಯಾಲಯ 8 ದಿನ ಸಿಐಡಿ ಕಸ್ಟಡಿಗೆ ನೀಡಿದೆ. ಇನ್ನು ಅತ್ಯಾಚಾರ ಪ್ರಕರಣದ ಆರೋಪಿ ತಮ್ಮ ಪ್ರಜ್ವಲ್​ ರೇವಣ್ಣಗೆ ಸಿಐಡಿ ಕಸ್ಟಡಿಯಿಂದ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನ್ಯಾಯಾಧೀಶ ಕೆ.ಎನ್‌.ಶಿವಕುಮಾರ್‌ ಈ ಎರಡೂ ಕೇಸ್​ನ ಅರ್ಜಿ ವಿಚಾರಣೆ ಮಾಡಿದ್ದಾರೆ.

ಇದನ್ನೂ ಓದಿ: ಪ್ರಬುದ್ಧ ಕೊಲೆ ಕೇಸ್​.. ತಾಯಿ ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ; ಪ್ರಕರಣ ಸಿಐಡಿಗೆ ಒಪ್ಪಿಸಿದ ಸಿಎಂ

ಪರಪ್ಪನ ಅಗ್ರಹಾರದಿಂದ ಜುಲೈ 1 ರವರೆಗೆ ಸೂರಜ್ ರೇವಣ್ಣನನ್ನು ಸಿಐಡಿ ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದು ವಿಚಾರಣೆಗೆ ನಡೆಸಲಿದ್ದಾರೆ. ಸೂರಜ್ ವಿರುದ್ಧ ಕೇಳಿ ಬಂದಿರುವ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆ ಸದ್ಯ ಮತ್ತಷ್ಟು ಚುರುಕುಗೊಳ್ಳಲಿದೆ. ಇಂದು ಸೂರಜ್​ರನ್ನು ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸುವ ಸಾಧ್ಯತೆಯಿದೆ.

ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ಸೂರಜ್ ರೇವಣ್ಣ ಪರೀಕ್ಷೆ

ಸೂರಜ್ ರೇವಣ್ಣ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲು ಮುಂದಾಗಿದ್ದಾರೆ. ಹೀಗಾಗಿ ಸೂರಜ್​ರನ್ನ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಲಿದ್ದಾರೆ. ಆಸ್ಪತ್ರೆಯಲ್ಲಿ ಯೂರಾಲಜಿಸ್ಟ್, ಫಾರೆನ್ಸಿಕ್ ತಜ್ಞರು ಮತ್ತು ಪಿಜಿಷಿಯನ್ ವೈದ್ಯರಿಂದ ಮೆಡಿಕಲ್ ಟೆಸ್ಟ್ ಮಾಡಿಸಲಾಗುತ್ತದೆ. ಜೊತೆಗೆ, ಮನೋ ವೈದ್ಯರಿಂದ ಕೂಡ ಸಂತ್ರಸ್ತನನ್ನ ಎಕ್ಸಾಮಿನೇಷನ್ ಮಾಡಿಸಲಿದ್ದಾರೆ.

ಯಾವ್ಯಾವ ಪರೀಕ್ಷೆ?

1. ಕೂದಲುಗಳನ್ನ ಪರೀಕ್ಷೆಗೆ ಒಳಪಡಿಸಲು ಕೂದಲು ಸಂಗ್ರಹ
2. ಸಂತ್ರಸ್ತನ ದೇಹದ ಮೇಲೆ ಕಚ್ಚಿದ ಗುರುತು ಪರೀಕ್ಷೆ
3. ಸೂರಜ್ ರೇವಣ್ಣ ಹಲ್ಲಿಗೆ ಹೋಲಿಕೆ ಮಾಡಿ ಪರೀಕ್ಷೆ
3. ಸೂರಜ್ ರೇವಣ್ಣಗೆ ಲಿಂಗತ್ವ ಪರೀಕ್ಷೆ
5. ಡಿಎನ್ಎ ಟೆಸ್ಟ್ ಕೂಡ ಮಾಡಲಿದ್ದಾರೆ

ಇದನ್ನೂ ಓದಿ: ರೋಹಿತ್ ಬ್ಯಾಟಿಂಗ್​ ಅಬ್ಬರಕ್ಕೆ ಬೆಚ್ಚಿಬಿದ್ದ ಆಸಿಸ್​.. ಸೆಂಚುರಿ ಬಾರಿಸದೇ ನಿರಾಸೆಯಿಂದ ಹೊರನಡೆದ ಹಿಟ್​ಮ್ಯಾನ್

ಪ್ರಜ್ವಲ್ ರೇವಣ್ಣಗೆ ಮತ್ತೆ 14 ದಿನಗಳ ಕಾಲ ಅಗ್ರಹಾರ ವಾಸ!

ಇನ್ನು ಇತ್ತ ಅಣ್ಣ ಸೂರಜ್​ ಸಿಐಡಿ ತೆಕ್ಕೆಯಲ್ಲಿದ್ರೆ ಮತ್ತೊಂದೆಡೆ ತಮ್ಮ ಪ್ರಜ್ವಲ್ ರೇವಣ್ಣಗೆ ಮತ್ತೆ 14 ದಿನಗಳ ಕಾಲ ಪರಪ್ಪನ ಅಗ್ರಹಾರ ಮಾಡುವಂತೆ ಜಡ್ಜ್​ ಆದೇಶಿಸಿದ್ದಾರೆ. ನ್ಯಾಯಾಂಗ ಬಂಧನಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. 3ನೇ ಕೇಸ್​ನಲ್ಲಿ ಪ್ರಜ್ವಲ್ ರೇವಣ್ಣ ಪೊಲೀಸ್ ಕಸ್ಟಡಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ 42 ಎಸಿಎಂಎಂ ಕೋರ್ಟ್ ನ್ಯಾಯಾಧೀಶರು ಜುಲೈ 8ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ದಾರೆ. ಇನ್ನು ಇದೇ ವೇಳೆ ನಾಳೆ ಜಾಮೀನು ಅರ್ಜಿ ಬಗ್ಗೆ ಆದೇಶ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಹೊಡಿಬಡಿ ಬ್ಯಾಟಿಂಗ್ ಮಾಡ್ತಿರೋ ಕ್ಯಾಪ್ಟನ್ ರೋಹಿತ್.. ಹಾಫ್​ಸೆಂಚುರಿ ಸಿಡಿಸಿದ ಹಿಟ್​ ಮ್ಯಾನ್

ಅತ್ತ ಅಣ್ಣ ಸೂರಜ್ ರೇವಣ್ಣ ಸಿಐಡಿ ಕಸ್ಟಡಿಯಲ್ಲಿ ಆತಿಥ್ಯ ಪಡೆಯಲು ಹೋದ್ರೆ ಇತ್ತ ತಮ್ಮ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ವಾಸಕ್ಕೆ ತೆರಳಿದ್ದಾರೆ. ನಾಳೆ ಪ್ರಜ್ವಲ್ ಜಾಮೀನು ಅರ್ಜಿ ಆದೇಶದ ಮೇಲೆ ಪ್ರಜ್ವಲ್ ಕಣ್ಣಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋರ್ಟ್​​ನಲ್ಲಿ ಒಂದೇ ದಿನ ಅಣ್ಣ-ತಮ್ಮನ ಕೇಸ್ ವಿಚಾರಣೆ.. ಸೂರಜ್ ರೇವಣ್ಣಗೂ ಪುರುಷತ್ವ ಟೆಸ್ಟ್..?

https://newsfirstlive.com/wp-content/uploads/2024/06/SURAJ-REVANNA-2.jpg

Load More