ಟಿ20 ವಿಶ್ವಕಪ್ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ರಶೀದ್ ಖಾನ್ ಪಡೆ
ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಅಫ್ಘಾನ್ ಸೆಮಿಫೈನಲ್ ಪ್ರವೇಶ
ಬಾಂಗ್ಲಾ ದೇಶದ ವಿರುದ್ಧ 8 ರನ್ಗಳಿಂದ ಗೆಲುವು ದಾಖಲಿಸಿದ ಅಫ್ಘಾನ್
ಟಿ20 ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ಸೆಮಿಫೈನಲ್ ಪ್ರವೇಶಿಸಿದೆ. ಇಂದು ನಡೆದ ಕೊನೆಯ ಸೂಪರ್-8 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದು ಬೀಗಿದ ರಶೀದ್ ಖಾನ್ ಬಳಗ ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದೆ. ಆ ಮೂಲಕ ಇತಿಹಾಸ ಸೃಷ್ಟಿಸಿದೆ.
ಮಳೆಬಾಧಿತ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಅಫ್ಘಾನಿಸ್ತಾನ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 115 ರನ್ ದಾಖಲಿಸಿತ್ತು. ಈ ಗುರಿಯನ್ನ 12.1 ಎಸೆತದಲ್ಲೇ ತಲುಪುವ ಲೆಕ್ಕಚಾರದಲ್ಲಿ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶದ ಲೆಕ್ಕಚಾರ ತಲೆಕೆಳಗಾಯ್ತ. ಅಷ್ಟೇ ಅಲ್ಲ.
ಇದನ್ನೂ ಓದಿ:ಡೆಡ್ಲಿ ಸ್ಪೆಲ್ಗೆ ಆಸಿಸ್ ಕಕ್ಕಾಬಿಕ್ಕಿ.. ಆಸ್ಟ್ರೇಲಿಯಾ ಕನಸಿಗೆ ರೋಹಿತ್ ಕೊಳ್ಳಿ ಇಟ್ಟಿದ್ದು ಹೀಗೆ..!
ಕೊನೆ ಬಾರಿಗೆ ಪಂದ್ಯವನ್ನಾದರೂ ಗೆಲ್ಲೋ ಮಹಾದಾಸೆಯಲ್ಲಿದ್ದ ಬಾಂಗ್ಲಾ, ಅಫ್ಘಾನ್ ಬೌಲರ್ಗಳ ಮ್ಯಾಜಿಕಲ್ ಸ್ಪೆಲ್ಗೆ ಪೆವಿಲಿಯನ್ ಪರೇಡ್ ನಡೆಸಿತು. ಪರಿಣಾಮ ಅಫ್ಘಾನಿಸ್ತಾನ ಪಂದ್ಯವನ್ನ ಡಕ್ ವರ್ಥ್ ಲೂಯಿಸ್ ನಿಯಮದೊಂದಿಗೆ 8 ರನ್ಗಳಿಂದ ಗೆಲ್ಲುವುದರ ಜೊತೆಗೆ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿ, ಇತಿಹಾಸ ನಿರ್ಮಿಸಿದೆ. ಇದರೊಂದಿಗೆ ಆಸ್ಟ್ರೇಲಿಯಾ ಕನಸು ನುಚ್ಚುನೂರಾಯ್ತು.
ಇದನ್ನೂ ಓದಿ:ಬೀದರ್ನಲ್ಲಿ ಮಧ್ಯರಾತ್ರಿ ಹರಿದ ನೆತ್ತರು.. ಬಾಲ್ಯದ ಗೆಳೆಯನ ಕತ್ತು ಸೀಳಿ ಬರ್ಬರ ಕೊಲೆ..
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್