newsfirstkannada.com

×

Breaking: ರಾಜ್ಯದ ಜನರಿಗೆ ಮತ್ತೊಂದು ಬಿಗ್ ಶಾಕ್.. ನಂದಿನಿ ಹಾಲಿನ ದರ ಮತ್ತಷ್ಟು ಏರಿಕೆ!

Share :

Published June 25, 2024 at 11:47am

    ನಿರಂತರ ದರ ಏರಿಕೆ ಮಧ್ಯೆ ಜನರಿಗೆ ಮತ್ತೊಂದು ಆಘಾತ

    ತರಕಾರಿ, ದಿನಸಿ.. ಇದೀಗ ಹಾಲಿನ ದರವೂ ಏರಿಕೆ ಆಗಿದೆ

    ಮೊನ್ನೆಯಷ್ಟೇ ಪೆಟ್ರೋಲ್ ದರವನ್ನೂ ಏರಿಸಿದ್ದ ಸರ್ಕಾರ

ಬೆಂಗಳೂರು: ನಂದಿನಿ ಹಾಲಿನ ದರವನ್ನು ಕೆಎಂಎಫ್​​​ ಪ್ರತಿ ಲೀಟರ್​ಗೆ 2 ರೂಪಾಯಿಗಳನ್ನು ಹೆಚ್ಚಳ ಮಾಡಲಾಗಿದೆ. ಇಷ್ಟು ದಿನ ಪ್ರತಿ ಲೀಟರ್​ಗೆ 42 ರೂಪಾಯಿ ಇದ್ದ ಹಾಲಿನ ದರ ಇನ್ಮುಂದೆ 44 ರೂಪಾಯಿ ಆಗಲಿದೆ.

ಇದನ್ನೂ ಓದಿ: ಕಲ್ಕಿಯ ಬುಜ್ಜಿ ಕಾರ್ ಡ್ರೈವ್ ಮಾಡಿದ ರಿಷಬ್ ಶೆಟ್ಟಿ.. ಪ್ರಭಾಸ್​ಗೆ ಸಾಥ್ ನೀಡಿದ್ರಾ ಡಿವೈನ್ ಸ್ಟಾರ್​..?

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ (ಕೆಎಂಎಫ್) ಮುಖ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದೆ. ಇಷ್ಟು ದಿನ ಒಂದು ಲೀಟರ್ ಹಾಲು 42 ರೂಪಾಯಿ ಇತ್ತು. ಆದರೆ ಈ ಬೆಲೆಯಲ್ಲಿ 2 ರೂಪಾಯಿಯನ್ನು ಹೆಚ್ಚಳ ಮಾಡಲಾಗಿದ್ದು ಇನ್ಮುಂದೆ ಪ್ರತಿ ಲೀಟರ್ ಹಾಲು 44 ರೂಪಾಯಿ ಆಗಲಿದೆ. ಅದರಂತೆ ಅರ್ಧ ಲೀಟರ್ ಹಾಲು 22 ಇತ್ತು. ಇದರಲ್ಲೂ 2 ರೂಪಾಯಿಯನ್ನ ಏರಿಕೆ ಮಾಡಲಾಗಿದ್ದು 24 ರೂಪಾಯಿ ಆಗಲಿದೆ ಎಂದು ಕೆಎಂಎಫ್ ಅಧಿಕಾರಿಗಳು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಕೋರ್ಟ್​​ನಲ್ಲಿ ಒಂದೇ ದಿನ ಅಣ್ಣ-ತಮ್ಮನ ಕೇಸ್ ವಿಚಾರಣೆ.. ಸೂರಜ್ ರೇವಣ್ಣಗೂ ಪುರುಷತ್ವ ಟೆಸ್ಟ್..?

ಇನ್ಮುಂದೆ ಪ್ರತಿ ಪಾಕೆಟ್​ನಲ್ಲಿ 1 ಲೀಟರ್ ಹಾಲಿನ ಬದಲಿಗೆ 1050 ಎಂಎಲ್​ ಹಾಲು ಇರುತ್ತದೆ. ಅದರಂತೆ ಅರ್ಧ ಲೀಟರ್​ ಹಾಲಿನ ಪಾಕೆಟ್​ ಬದಲಿಗೆ 550 ಎಂಎಲ್​​ ಹಾಲು ಬರುತ್ತದೆ. ಪ್ರತಿ ಹಾಲಿನ ಪಾಕೆಟ್​ 50 ಎಂಎಲ್​ ಹೆಚ್ಚುವರಿ ಹಾಲನ್ನು ಹೊಂದಿರುತ್ತದೆ. ಹೀಗಾಗಿಯೇ ಹಾಲಿನ ದರದಲ್ಲಿ 2 ರೂಪಾಯಿ ಏರಿಕೆ ಮಾಡಲಾಗಿದೆ ಎಂದು ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ರಾಜ್ಯದ ಜನರಿಗೆ ಮತ್ತೊಂದು ಬಿಗ್ ಶಾಕ್.. ನಂದಿನಿ ಹಾಲಿನ ದರ ಮತ್ತಷ್ಟು ಏರಿಕೆ!

https://newsfirstlive.com/wp-content/uploads/2024/02/KMF_NANDINI.jpg

Load More