newsfirstkannada.com

ಹಿರಿಯರಿಗೆ ಕೊಕ್, ಗಿಲ್ ಕ್ಯಾಪ್ಟನ್.. ಇದು ನಿವೃತ್ತಿ ಕೇಳುವ ಮುನ್ಸೂಚನೆ.. ಪಾಂಡ್ಯ, ಪಂತ್​ಗೂ ಪರೋಕ್ಷ ಎಚ್ಚರಿಕೆ..!

Share :

Published June 25, 2024 at 12:47pm

    ಜಿಂಬಾಬ್ವೆ ಪ್ರವಾಸಕ್ಕೆ ಟೀಮ್​ ಇಂಡಿಯಾ ಪ್ರಕಟ

    15 ಆಟಗಾರರ ‘ಯಂಗ್​ ಇಂಡಿಯಾ’ ಆಯ್ಕೆ

    ಸರ್​​ಪ್ರೈಸ್​​ ಜೊತೆಗೆ ಶಾಕ್​ ಕೊಟ್ಟ ಆಯ್ಕೆ ಸಮಿತಿ

ಚುಟುಕು ವಿಶ್ವಕಪ್​ ಟೂರ್ನಿಯ ಅಬ್ಬರದ ನಡುವೆ ಜಿಂಬಾಬ್ವೆ ಟೂರ್​​ಗೆ ಟೀಮ್​ ಇಂಡಿಯಾ ಅನೌನ್ಸ್​ ಆಗಿದೆ. ಭವಿಷ್ಯದ ಲೆಕ್ಕಾಚಾರ ಹಾಕಿರೋ ಅಜಿತ್​ ಅಗರ್ಕರ್​ ನೇತೃತ್ವದ ಸೆಲೆಕ್ಷನ್​ ಕಮಿಟಿ ‘ಯಂಗ್​ ಇಂಡಿಯಾ’ಗೆ ಮಣೆ ಹಾಕಿದೆ. ಶುಭ್​ಮನ್​ ಗಿಲ್​ಗೆ ನಾಯಕತ್ವ ನೀಡಿ ಸರ್​ಪ್ರೈಸ್​ ಕೊಟ್ಟಿರೋ ಆಯ್ಕೆ ಸಮಿತಿ, ಹಲವರಿಗೆ ಕೊಕ್​ ಕೊಟ್ಟು ಬಿಗ್​ಶಾಕ್​ ನೀಡಿದೆ.

ಟಿ20 ವಿಶ್ವಕಪ್​ನ ಅಬ್ಬರದ ನಡುವೆ ಮುಂದಿನ ಸರಣಿಗೆ ಟೀಮ್​ ಇಂಡಿಯಾದ ಸಿದ್ಧತೆ ಆರಂಭವಾಗಿದೆ. ಜಿಂಬಾಬ್ವೆ ಪ್ರವಾಸಕ್ಕೆ ಅಳೆದು ತೂಗಿ ಲೆಕ್ಕಾಚಾರ ಹಾಕಿ ಸೆಲೆಕ್ಷನ್​ ಕಮಿಟಿ ಟೀಮ್​ ಅನೌನ್ಸ್​ ಮಾಡಿದೆ. ಜುಲೈ 6ರಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಗೆ 15 ಆಟಗಾರರನ್ನ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ:ಇವರ ಭೇಟಿಯಿಂದ ಜೈಲಿನಲ್ಲಿ ಕೊಂಚ ರಿಲೀಫ್.. ದರ್ಶನ್ ಜೈಲ್ ಡೈರಿ..!

ಸೀನಿಯರ್ಸ್​ಗೆ ರೆಸ್ಟ್​​.. ಯುವಕರಿಗೆ ಚಾನ್ಸ್​..!
ನಿರೀಕ್ಷೆಯಂತೆ ಜಿಂಬಾಬ್ವೆ ಪ್ರವಾಸದ ತಂಡದಲ್ಲಿ ಸೀನಿಯರ್​ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ಜಸ್​​ಪ್ರಿತ್​ ಬೂಮ್ರಾ ಸೇರಿದಂತೆ ಟಿ20 ವಿಶ್ವಕಪ್​ ತಂಡದಲ್ಲಿರೋ ಹಿರಿಯ ಆಟಗಾರರಿಗೆಲ್ಲಾ ರೆಸ್ಟ್​ ನೀಡಲಾಗಿದೆ. ಯುವ ಆಟಗಾರರಿಗೆ ಮಣೆ ಹಾಕಿರುವ ಸೆಲೆಕ್ಷನ್​ ಕಮಿಟಿ ಪಂಜಾಬ್​ ಪುತ್ತರ್​​ ಶುಭ್​ಮನ್​ ಗಿಲ್​ಗೆ ನಾಯಕನ ಪಟ್ಟ ಕಟ್ಟಿದೆ. ಇದ್ರೊಂದಿಗೆ ಶುಭ್​ಮನ್​ ಗಿಲ್​ ಭವಿಷ್ಯದ ನಾಯಕ ಅನ್ನೋ ಚರ್ಚೆ ಶುರುವಾಗಿದೆ.

IPL ಸ್ಟಾರ್​​ಗಳಿಗೆ ಮಣೆ ಹಾಕಿದ ಸೆಲೆಕ್ಷನ್​ ಕಮಿಟಿ
ಶುಭ್​ಮನ್​ ಗಿಲ್ ಸಾರಥ್ಯದ ತಂಡದಲ್ಲಿ ಟೆರರ್​ ಬ್ಯಾಟರ್​ಗಳಿಗೆ ಸ್ಥಾನ ಕಲ್ಪಿಸಲಾಗಿದೆ. ಐಪಿಎಲ್​ನಲ್ಲಿ ಅಬ್ಬರಿಸಿ ಬೊಬ್ಬಿರಿದ ಆಟಗಾರರಿಗೆ ಮಣೆ ಹಾಕಲಾಗಿದೆ. ಸರ್​​ರೈಸರ್ಸ್​ ಹೈದ್ರಾಬಾದ್​ ಪರ ಮಿಂಚಿದ ಅಭಿಶೇಕ್​ ಶರ್ಮಾಗೆ ಚೊಚ್ಚಲ ಕರೆ ಬಂದಿದೆ. ಅಭಿಶೇಕ್​ ಜೊತೆಗೆ ಹಲ ಡೇರ್​​ ಡೆವಿಲ್​ ಆಟಗಾರರು, ತಂಡದಲ್ಲಿರೋ ಸ್ಪೆಷಲಿಸ್ಟ್​ ಬ್ಯಾಟರ್​ಗಳಾಗಿದ್ದಾರೆ.

ಇದನ್ನೂ ಓದಿ:ಟಿ20 ವಿಶ್ವಕಪ್ ಸೆಮಿಫೈನಲ್ ಹೇಗಿರುತ್ತೆ..? ಯಾರು ಯಾರ ವಿರುದ್ಧ ಸೆಣಸಾಟ ಮಾಡ್ತಾರೆ..?

ಜಿಂಬಾಬ್ವೆ ಪ್ರವಾಸದ ತಂಡದ ಬ್ಯಾಟರ್ಸ್​
ಶುಭ್​ಮನ್​ ಗಿಲ್​, ಯಶಸ್ವಿ ಜೈಸ್ವಾಲ್​, ಋತುರಾಜ್​ ಗಾಯಕ್ವಾಡ್​​ ಜಿಂಬಾಬ್ವೆ ಪ್ರವಾಸದ ತಂಡದಲ್ಲಿರೋ ಅನುಭವಿ ಟಾಪ್​ ಆರ್ಡರ್​ ಬ್ಯಾಟರ್​ಗಳಾಗಿದ್ದಾರೆ. ಇವ್ರ ಜೊತೆಗೆ ಅಭಿಶೇಕ್​ ಶರ್ಮಾ, ರಿಯಾನ್​ ಪರಾಗ್​, ರಿಂಕು ಸಿಂಗ್​ ಕೂಡ ಸ್ಪೆಷಲಿಸ್ಟ್​ ಬ್ಯಾಟರ್​ಗಳಾಗಿ ಸ್ಥಾನ ಪಡೆದುಕೊಂಡಿದ್ದಾರೆ.

ಕೀಪರ್​​ ಕೋಟಾದಲ್ಲಿ ಸಂಜು, ಜುರೇಲ್​ಗೆ ಮಣೆ
ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಕೋಟಾದಲ್ಲಿ ವಿಶ್ವಕಪ್​ ತಂಡದಲ್ಲಿರೋ ಸಂಜು ಸ್ಯಾಮ್ಸನ್​ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಂಜು ಜೊತೆಗೆ ದೃವ್​ ಜುರೇಲ್​ಗೆ ಮಣೆ ಹಾಕಲಾಗಿದೆ. ಇನ್ನು, ಸನ್​ರೈಸರ್ಸ್​ ಹೈದ್ರಾಬಾದ್​ ತಂಡದ ಆಲ್​​ರೌಂಡರ್​ ನಿತೀಶ್​ ರೆಡ್ಡಿ, ಚೊಚ್ಚಲ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ವಾಷಿಂಗ್ಟರ್​ ಸುಂದರ್​​ ಕಮ್​ಬ್ಯಾಕ್​ ಮಾಡಿದ್ದು, ಸ್ಪೆಷಲಿಸ್ಟ್​ ಸ್ಪಿನ್ನರ್​ ಆಗಿ ರವಿ ಬಿಷ್ನೋಯ್​ಗೆ ಸೆಲೆಕ್ಷನ್​ ಕಮಿಟಿ ಮಣೆ ಹಾಕಿದೆ.

ದನ್ನೂ ಓದಿ:ಡೆಡ್ಲಿ ಸ್ಪೆಲ್​ಗೆ ಆಸಿಸ್ ಕಕ್ಕಾಬಿಕ್ಕಿ.. ಆಸ್ಟ್ರೇಲಿಯಾ​ ಕನಸಿಗೆ ರೋಹಿತ್ ಕೊಳ್ಳಿ ಇಟ್ಟಿದ್ದು ಹೀಗೆ..!

ಸಖತ್​ ಬಲಿಷ್ಠವಾಗಿದೆ ವೇಗದ ವಿಭಾಗ
ಜಿಂಬಾಬ್ವೆ ಟೂರ್​​ಗೆ ಆಯ್ಕೆ ಮಾಡಿರುವ ತಂಡದ ವೇಗದ ವಿಭಾಗ ಸಖತ್​ ಸ್ಟ್ರಾಂಗ್ ಆಗಿದೆ. ವಿಶ್ವಕಪ್​ ತಂಡದ ರಿಸರ್ವ್​​ ಪ್ಲೇಯರ್​​ಗಳಾಗಿದ್ದ ಖಲೀಲ್​ ಅಹ್ಮದ್​, ಆವೇಶ್​ ಖಾನ್​​ ಜೊತೆಗೆ ಮುಖೇಶ್​ ಕುಮಾರ್​ ಹಾಗೂ ತುಷಾರ್​ ದೇಶಪಾಂಡೆಗೆ ಅವಕಾಶ ನೀಡಲಾಗಿದೆ.

ಸ್ಥಾನದ ನಿರೀಕ್ಷೆಯಲ್ಲಿದ್ದ ಹಲವರಿಗೆ ಶಾಕ್​
ಅಳೆದು ತೂಗಿ ಯುವ ಆಟಗಾರರಿಗೆ ಮಣೆ ಹಾಕಿರುವ ಸೆಲೆಕ್ಷನ್​ ಕಮಿಟಿ, ಅವಕಾಶದ ನಿರೀಕ್ಷೆಯಲ್ಲಿದ್ದ ಹಲವರಿಗೆ ಶಾಕ್​ ನೀಡಿದೆ. ತಂಡದಿಂದ ಇಶಾನ್​ ಕಿಶನ್​ರನ್ನ ಕೈ ಬಿಟ್ಟಿರೋದು ಸರ್​​ಪ್ರೈಸ್​ ಮೂಡಿಸಿದೆ. ಜೊತೆಗೆ ಸ್ಥಾನದ ನಿರೀಕ್ಷೆಯಲ್ಲಿದ್ದ ತಿಲಕ್​ ವರ್ಮಾ, ಹರ್ಷಿತ್​ ರಾಣಾ, ರಜತ್​ ಪಟಿದಾರ್​​ಗೆ ಶಾಕ್​ ನೀಡಲಾಗಿದೆ. ಹಿರಿಯ ಆಟಗಾರರಿಗೆ ಕೈಬಿಟ್ಟಿರುವ ಬೆನ್ನಲ್ಲೇ ಹೊಸ ಚರ್ಚೆ ಶುರುವಾಗಿದೆ. ಟಿ-20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಚುಟುಕು ಕ್ರಿಕೆಟ್​ಗೆ ಗುಡ್​ಬೈ ಹೇಳ್ತಾರಾ ಎಂಬ ಪ್ರಶ್ನೆ ಎದ್ದಿದೆ. ಜೊತೆಗೆ ಹಾರ್ದಿಕ್ ಪಾಂಡ್ಯ, ಪಂತ್​​ನಂತಹ ಅನುಭವಿ ಆಟಗಾರರಿಗೂ ಎಚ್ಚರಿಕೆ ನೀಡಲಾಗುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ:ಜೈಲಲ್ಲಿ ದರ್ಶನ್​ಗೆ ಆತಿಥ್ಯ ನೀಡಲು ಕುಖ್ಯಾತ ರೌಡಿಗಳಿಂದ ಪೈಪೋಟಿ..? ಅಚ್ಚರಿಯ ವಿಷಯ ಬಹಿರಂಗ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಹಿರಿಯರಿಗೆ ಕೊಕ್, ಗಿಲ್ ಕ್ಯಾಪ್ಟನ್.. ಇದು ನಿವೃತ್ತಿ ಕೇಳುವ ಮುನ್ಸೂಚನೆ.. ಪಾಂಡ್ಯ, ಪಂತ್​ಗೂ ಪರೋಕ್ಷ ಎಚ್ಚರಿಕೆ..!

https://newsfirstlive.com/wp-content/uploads/2024/06/Virat-Kohli-Rohit.jpg

Load More