newsfirstkannada.com

ಗುರು ನಾನ್‌ ಇನ್ನೂ ಚಿಕ್ಕವಳು.. ದರ್ಶನ್ ಅಭಿಮಾನಿಗಳ ಬ್ಯಾಡ್‌ ಕಮೆಂಟ್ಸ್‌ಗೆ ಸೋನು ಫುಲ್‌ ಗರಂ; ಏನಂದ್ರು?

Share :

Published June 28, 2024 at 10:33am

    ದರ್ಶನ್ ಅಭಿಮಾನಿಗಳ ಕಮೆಂಟ್ಸ್‌ಗೆ ರೋಸಿ ಹೋದ ರೀಲ್ಸ್ ಸ್ಟಾರ್

    ಡಿಬಾಸ್‌ ಫ್ಯಾನ್ಸ್ ವಿರುದ್ಧ ಸೋನು ಗೌಡ ಕಿರುಕುಳದ ಗಂಭೀರ ಆರೋಪ

    ತಪ್ಪು ಯಾರೇ ಮಾಡಿದ್ರೂ ಕಾನೂನಿನ ಪ್ರಕಾರ ಶಿಕ್ಷೆ ಆಗೇ ಆಗುತ್ತೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಜೈಲಿನಲ್ಲಿದ್ದಾರೆ. ದರ್ಶನ್ ನ್ಯಾಯಾಂಗ ಬಂಧನದಲ್ಲಿರುವಾಗ ಹೊರಗಡೆ ಸಾಕಷ್ಟು ಚರ್ಚೆಗಳಾಗುತ್ತಿದೆ. ದರ್ಶನ್ ಅಭಿಮಾನಿಗಳು ತಮ್ಮ ಬಾಸ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ದರ್ಶನ್ ಅಭಿಮಾನಿಗಳ ಕಮೆಂಟ್ಸ್‌ಗೆ ರೀಲ್ಸ್ ಸ್ಟಾರ್, ಬಿಗ್‌ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಅವರು ರೋಸಿ ಹೋಗಿ ವಿಡಿಯೋ ಮಾಡಿದ್ದಾರೆ.

ಇದನ್ನೂ ಓದಿ: ದರ್ಶನ್ ಅಭಿಮಾನಿಗಳೇ ಎಲ್ಲಿದ್ದೀರಾ.. ಬಿಗ್‌ಬಾಸ್ ಬ್ಯೂಟಿ ಸೋನು ಗೌಡ ಖಡಕ್ ವಾರ್ನಿಂಗ್! 

ದರ್ಶನ್ ಅಭಿಮಾನಿಗಳಿಂದ ಕಿರುಕುಳದ ಆರೋಪ ಮಾಡಿರುವ ಸೋನು ಶ್ರೀನಿವಾಸ್ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ದರ್ಶನ್ ಪರವಾಗಿ ನಾನು ಮಾತನಾಡಿಲ್ಲ ಎಂದು ಕೆಟ್ಟ, ಕೆಟ್ಟದಾಗಿ ಕಮೆಂಟ್ಸ್ ಮಾಡುತ್ತಿದ್ದಾರೆ. ಈ ಕುರಿತು ಸೋನುಗೌಡ ಅವರು ತಮ್ಮ ಬೇಸರ ಹೊರ ಹಾಕಿದ್ದಾರೆ.

ಸೋನು ರಿಕ್ವೆಸ್ಟ್ ಏನು?
ದರ್ಶನ್ ಅಭಿಮಾನಿಗಳು ನನಗೆ ತುಂಬಾ ಬ್ಯಾಡ್ ಕಮೆಂಟ್ಸ್ ಮಾಡುತ್ತಿದ್ದಾರೆ. ಇನ್ಸ್‌ಸ್ಟಾಗ್ರಾಂ, ಯೂಟ್ಯೂಬ್‌ ಎಲ್ಲಿ ನೋಡಿದ್ರೂ ಕೆಟ್ಟ, ಕೆಟ್ಟ ಕಮೆಂಟ್ಸ್‌ಗಳೇ ಕಾಣುತ್ತಿವೆ. ನಿಮ್ಮ ಡಿ ಬಾಸ್ ಬಗ್ಗೆ ನಾನು ಏನು ಮಾತಾಡಿಲ್ಲ ಎಂದು ಸೋನು ಶ್ರೀನಿವಾಸ ಗೌಡ ಸ್ಪಷ್ಟಪಡಿಸಿದ್ದಾರೆ.

ನಾವಿನ್ನು ಚಿಕ್ಕವರು ದರ್ಶನ್ ಸಾರ್ ಅವರ ಬಗ್ಗೆ ಮಾತಾಡುವಷ್ಟು ಇನ್ನೂ ಬೆಳೆದಿಲ್ಲ. ನಾವು ಒಂದು ಸಲ ಅವರಿಗೆ ಫ್ಯಾನ್ ಆದ್ರೆ ಸಾಯೋವರಿಗೂ ಅವರ ಫ್ಯಾನ್ ಆಗಿರುತ್ತೇವೆ. ಆದರೆ ತಪ್ಪು ಯಾರೇ ಮಾಡಿದ್ರೂ ಕಾನೂನಿನ ಪ್ರಕಾರ ಶಿಕ್ಷೆ ಆಗೇ ಆಗುತ್ತೆ. ನ್ಯಾಯಾಲಯ ತೀರ್ಪು ಕೊಡುವವರಿಗೂ ಕಾಯ್ತಾ ಇರಬೇಕು.

ಇದನ್ನೂ ಓದಿ: ದರ್ಶನ್​ ಖೈದಿ 6106 ನಂಬರ್​​ಗೆ ಫುಲ್​ ಡಿಮ್ಯಾಂಡ್​.. ಮೊಬೈಲ್​ ಕವರ್​, ವಾಹನದ ಮೇಲೂ ಇದೇ ಸ್ಟಿಕ್ಕರ್​! 

ನನಗೆ ಯಾವುದೇ ಬ್ಯಾಡ್ ಕಮೆಂಟ್ ಮಾಡಬೇಡಿ. ಆ ಎರಡು ಕುಟುಂಬಕ್ಕೆ ದೇವರು ಸ್ಟ್ರಾಂಗ್ ಆಗಿ ಇರಲಿ ಅಂತ ಬೇಡಿಕೊಳ್ತೀನಿ. ನಮ್ಮ ಬಾಸ್ ಆದಷ್ಟು ಬೇಗ ವಾಪಸ್ ಬರ್ಲಿ. ಅವರು ಎಷ್ಟೇ ಪ್ರಾಣಿಗಳು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದ್ದಾರೆ. ಅವರು ಇಂತಹ ಕೆಲಸ ಮಾಡೋಕೆ ಸಾಧ್ಯವಿಲ್ಲ ಅಂತ ನಾನು ನಂಬಿದ್ದೇನೆ. ಅದು ಹಾಗೇ ಆಗಲಿ. ದಯವಿಟ್ಟು ಬ್ಯಾಡ್ ಕಮೆಂಟ್ಸ್ ಮಾಡಬೇಡಿ ಎಂದು ಸೋನುಗೌಡ ತಮ್ಮ ಅಳಲು ತೋಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗುರು ನಾನ್‌ ಇನ್ನೂ ಚಿಕ್ಕವಳು.. ದರ್ಶನ್ ಅಭಿಮಾನಿಗಳ ಬ್ಯಾಡ್‌ ಕಮೆಂಟ್ಸ್‌ಗೆ ಸೋನು ಫುಲ್‌ ಗರಂ; ಏನಂದ್ರು?

https://newsfirstlive.com/wp-content/uploads/2024/06/Sonugowda-on-Darshan-Fans.jpg

Load More