ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯ ಮೇರೆಗೆ ದೂರವಾದ ಸ್ಟಾರ್ ಜೋಡಿ
ಚಂದನ್ ಶೆಟ್ಟಿಯಿಂದ ವಿಚ್ಛೇದನ ಪಡೆದ ಬಳಿಕ ಸೈಲೆಂಟ್ ಆಗಿದ್ದ ನಿವೇದಿತಾ
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಈ ವಿಡಿಯೋ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಮತ್ತೆ ಸುದ್ದಿಯಲ್ಲಿದ್ದಾರೆ. ಗಿಚ್ಚಿ ಗಿಲಿಗಿಲಿ ಶೋ ಮೂಲಕ ನಿವೇದಿತಾ ಗೌಡ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿದ್ದರು. ಹೀಗೆ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರೋ ಬಿಗ್ಬಾಸ್ ಬೆಡಗಿ ಡಿವೋರ್ಸ್ ಬೆನ್ನಲ್ಲೇ ಮತ್ತೆ ಹಾಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಡಿವೋರ್ಸ್ ಬೆನ್ನಲ್ಲೇ ಚಂದನ್ ಶೆಟ್ಟಿ ಮಾಜಿ ಪತ್ನಿ ಪ್ರತ್ಯಕ್ಷ; ನಿವೇದಿತಾ ಗೌಡ ವಿಡಿಯೋ ವೈರಲ್!
ಹೌದು, ಕನ್ನಡದ ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಾಂಪತ್ಯ ಬದುಕು ಅಂತ್ಯ ಕಂಡಿದೆ. ನ್ಯಾಯಾಲಯಕ್ಕೆ ಮನವಿ ಮಾಡಿದ್ದ ಸ್ಟಾರ್ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಲು ತೀರ್ಮಾನಿಸಿದ್ದರು. ಡಿವೋರ್ಸ್ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಖುದ್ದು ಚಂದನ್, ನಿವೇದಿತಾ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದರು. ಆ ಬೆನ್ನಲ್ಲೇ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದೂರ ದೂರ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿರೋ ನಿವೇದಿತಾ ಗೌಡ ಆಗಾಗ ಹೊಸ ಹೊಸ ಬೋಲ್ಡ್ ಫೋಟೋಸ್ಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಇದೀಗ ಚಂದನ್ ಶೆಟ್ಟಿ ಅವರಿಮದ ಡಿವೋರ್ಸ್ ಪಡೆದ ಬಳಿಕ ಮತ್ತೆ ಹಾಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ನಿವೇದಿತಾ ಗೌಡ ಜೊತೆಗೆ ಡಿಸೈನಿಂಗ್ ಹಾಗೂ ಸ್ಟೈಲಿಂಗ್‌ನಲ್ಲಿರುವ ಬಾರ್ಬಿ ಡಾಲ್ ಡ್ರೆಸ್‌ನಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಹೊಸ ವಿಡಿಯೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಭಿನ್ನ ವಿಭಿನ್ನವಾಗಿ ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಇನ್ನೂ ಕೆಲವರು, ನೀವು ರೆಡಿ ಆಗ್ತಿರೋ ಸೂಚನೆ ನೋಡಿದ್ರೆ, 2ನೇ ಮದುವೆ ಇದ್ದ ಹಾಗೆ ಕಾಣುತ್ತಿದೆ, ಇವ್ಳಿಗೆ ಡಿವೋರ್ಸ್ ಆಗಿರೋ ನೋವು ಒಂದು ಚೂರು ಇಲ್ಲ ಮಾರ್ರೆ, ನಿಮಗೆ ಮುಂದೆ ಅರ್ಥ ಆಗತ್ತೆ ಚಂದನ್ ಅವರಂತ ಹುಡುಗನಾ ಕಳ್ಕೋಬಾರದಿತ್ತು ಎಂಬೆಲ್ಲಾ ಕಾಮೆಂಟ್ಸ್ಗಳನ್ನು ಹಾಕಿದ್ದಾರೆ.
View this post on Instagram
ಇನ್ನು, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಚಂದನ್ ಶೆಟ್ಟಿ, ಡಿವೋರ್ಸ್ ಪಡೆಯುವ ಮುಂಚೆ ಅಂದರೆ, ಕಳೆದ ಒಂದು ವರ್ಷದಿಂದಲೂ ತಾವಿಬ್ಬರೂ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದೆವು. ಜೊತೆಗೆ ನಿವೇದಿತಾ ಗೌಡಗೆ ಬರುವ ಅಶ್ಲೀಲ ಕಾಮೆಂಟ್‌ಗಳ ಬಗ್ಗೆಯೂ ಬೇಸರ ಹೊರ ಹಾಕಿದ್ದರು. ಡಿವೋರ್ಸ್ ಆಗಿದ್ದರೂ ಮುಂದಿನ ದಿನಗಳಲ್ಲಿ ನಾವು ಉತ್ತಮ ಸ್ನೇಹಿತರಾಗಿಯೇ ಇರುತ್ತೇವೆ ಎಂದು ಚಂದನ್ ಶೆಟ್ಟಿ ಹೇಳಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ