ಫೋನ್, ಸಿಸಿಟಿವಿ ಹಾರ್ಡ್ಡಿಸ್ಕ್, ವೈಫೈ ಕಿತ್ತುಕೊಂಡು ಪರಾರಿ
50 ಲಕ್ಷ ರೂಪಾಯಿ ಹಣ ಪಡೆದು ಎಸ್ಕೇಪ್ ಆದ ಕಿಡಿಗೇಡಿಗಳು
ಟ್ಯಾಕ್ಸ್ ಆಫೀಸರ್ ಎಂದು ಮನೆ ಪೂರ್ತಿ ಕಳ್ಳರು ಸರ್ಚಿಂಗ್
ಚಿತ್ರದುರ್ಗದಲ್ಲಿ ಸಿನಿಮೀಯ ರೀತಿ ದರೋಡೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಐಡಿ ಕಾರ್ಡ್ ತೋರಿಸಿ ನುಗ್ಗಿದವರು ಮನೆಯಲ್ಲಾ ದೋಚಿದ್ದಾರೆ. ಬಲಗಣ್ಣಿನ ಮೇಲೆ ಚೆಲ್ಲಿದ ನೆತ್ತರು. ಆತಂಕ, ಭಯಮಿಶ್ರಿತದಲ್ಲಿರುವ ಮಕ್ಕಳು. ಅಧಿಕಾರಿಗಳಿಂದ ಫಿಂಗರ್ ಪ್ರಿಂಟ್ಗಾಗಿ ಹುಡುಕಾಟ. ಮನೆಯೊಂದರಲ್ಲಿ ನಡೆದ ಘೋರ ದರೋಡೆಯ ಚಿತ್ರಣವನ್ನ ಕಟ್ಟಿಕೊಡ್ತಿದೆ. ಚಿತ್ರದುರ್ಗದಲ್ಲಿ ಸಿನಿಮೀಯ ರೀತಿಯಲ್ಲಿ ಖದೀಮರು ದರೋಡೆ ಮಾಡಿದ್ದಾರೆ.
ಇದು ಸ್ಪೆಷಲ್ ಚೆಬ್ಬಿಸ್ ಎಂಬ ಬಾಲಿವುಡ್ ಸಿನಿಮಾವನ್ನ ನೆನಪಿಸುವಂತಿದೆ. ಖದೀಮರಿಂದ ಹಲ್ಲೆಗೊಳಗಾಗಿ ಕಣ್ಣಿಗೆ ಪಟ್ಟಿಕಟ್ಟಿಕೊಂಡ ಈ ವ್ಯಕ್ತಿ, ಆರೋಗ್ಯ ಇಲಾಖೆ ಹೆಲ್ತ್ ಇನ್ಸ್ಪೆಕ್ಟರ್. ಹೆಸರು ನಜೀರ್. ಚಿತ್ರದುರ್ಗದ ಬ್ಯಾಂಕ್ ಕಾಲೋನಿಯಲ್ಲಿ ಕುಟುಂಬ ಸಮೇತ ವಾಸವಿದ್ದಾರೆ. ನಿನ್ನೆ ಹಾಡಹಗಲೆ ಬೆಳಗ್ಗೆ 9 ಗಂಟೆಗೆ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಸಂಜೆ 4:30ರವರೆಗೆ ಮನೆಯಲ್ಲೇ ಇದ್ರು ಎನ್ನಲಾಗಿದೆ. ಐಡಿ ಕಾರ್ಡ್ವೊಂದನ್ನ ತೋರಿಸಿ ಮನೆಗೆ ನುಗ್ಗಿದ್ದಾರೆ. ಅಷ್ಟಕ್ಕೂ ಅಲ್ಲಾಗಿದ್ದೇನು? ಕಳ್ಳರು ತೋರಿಸಿದ ಐಡಿ ಕಾರ್ಡ್ ಯಾವುದು ಅನ್ನೋದೇ ಕುತೂಹಲ.
ಚಿತ್ರದುರ್ಗದಲ್ಲಿ ಕಿರಾತಕರಿಂದ ಸಿನಿಮೀಯ ರೀತಿ ದರೋಡೆ ನಡೆದಿದ್ದು, ಇನ್ಕಮ್ ಟ್ಯಾಕ್ಸ್ ಆಫೀಸರ್ರೆಂದು ಕಳ್ಳರು ಮನೆಗೆ ನುಗ್ಗಿದ್ದಾರೆ. ಟ್ಯಾಕ್ಸ್ ಆಫೀಸರ್ ಅಂತ ಮನೆ ಪೂರ್ತಿ ಕಳ್ಳರು ಸರ್ಚಿಂಗ್ ಮಾಡಿದ್ದಾರೆ. ಆಗ ಸಂಶಯಗೊಂಡ ಮನೆ ಮಾಲೀಕ ನಜೀರ್ ಕುಟುಂಬ ಪ್ರಶ್ನೆ ಮಾಡಿದೆ. ಈ ವೇಳೆ, ಗನ್ ತೋರಿಸಿದ ಮೂವರು ಪಾತಕಿಗಳು, ಮನೆಯಲ್ಲಿದ್ದ ಚಿನ್ನ, ಹಣ, ದಾಖಲೆಗಳನ್ನ ದೋಚಿ ಪರಾರಿ ಆಗಿದೆ. ಇದಷ್ಟೇ ಅಲ್ಲ, ಇನ್ಕಮ್ ಟ್ಯಾಕ್ಸ್ ಆಫೀಸರ್ರೆಂದು ಹೇಳಿ ಕಳ್ಳತನ ಮಾಡಿದ ಖದೀಮರು ಇನ್ನೊಂದು ದುಷ್ಕೃತ್ಯ ಎಸಗಿದ್ದಾರೆ. ಫೋನ್, ಸಿಸಿಟಿವಿ ಹಾರ್ಡ್ಡಿಸ್ಕ್, ವೈಫೈ ಕಿತ್ತುಕೊಂಡು ಪರಾರಿ ಆಗಿದ್ದಾರೆ. ನಜೀರ್ ಪುತ್ರ ಮಗ ಸಮೀರ್, ಅಳಿಯ ಶಹಜಹಾನ್ರನ್ನ ಒತ್ತೆಯಾಳಾಗಿ ಒಯ್ದಿದ್ದಾರೆ. ಅಲ್ಲದೆ, ಕುಟುಂಬಕ್ಕೆ 50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದು, ಚಿತ್ರದುರ್ಗದಲ್ಲಿ 25 ಲಕ್ಷ, ದಾವಣಗೆರೆ ರಸ್ತೆಯಲ್ಲಿ 25 ಲಕ್ಷ ಪಡೆದಿದ್ದಾರೆ.
ಒಟ್ಟು 50 ಲಕ್ಷ ಹಣ ಪಡೆದು ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಖದೀಮರಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಒಟ್ಟಾರೆ, ಹಾಡಹಗಲೆ ಮನೆಯೊಂದಕ್ಕೆ ನುಗ್ಗಿ ದರೋಡೆ ಮಾಡಿರೋದು ದುರ್ಗದ ಜನರನ್ನ ಬೆಚ್ಚಿಬೀಳಿಸಿದೆ. ಅಲ್ಲದೆ, ಕಾನೂನು ಸುವ್ಯವಸ್ಥೆ ಬಗ್ಗೆ ಸಂಶಯ ಸುಳಿದಾಡ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ