newsfirstkannada.com

ರೋಹಿತ್​ ಉತ್ತರಾಧಿಕಾರಿ ಪಟ್ಟಕ್ಕಾಗಿ ಟಫ್ ಫೈಟ್​.. ಕ್ಯಾಪ್ಟನ್ ರೇಸ್​ನಲ್ಲಿ ನಾಲ್ವರು ಪ್ಲೇಯರ್ಸ್!​

Share :

Published July 2, 2024 at 10:07am

    ಯಾರಾಗ್ತಾರೆ ಟೀಮ್ ಇಂಡಿಯಾದ ಹೊಸ T20 ಕ್ಯಾಪ್ಟನ್​​​..?

    ಟೀಮ್​ ಮ್ಯಾನೇಜ್​​ಮೆಂಟ್​​ಗೆ ಕಬ್ಬಿಣದ ಕಡಲೆಯಾದ ಆಯ್ಕೆ

    ಬಿಸಿಸಿಐ ಒಲವು ಭಾರತ ತಂಡದ ಯಾವ ಪ್ಲೇಯರ್ ಮೇಲಿದೆ?

ಚಾಂಪಿಯನ್​ ಕಿರೀಟ ಗೆದ್ದ ರೋಹಿತ್​ ಶರ್ಮಾ ಚುಟುಕು ಫಾರ್ಮೆಟ್​ಗೆ ಗುಡ್​ ಬೈ ಹೇಳಿದ್ದಾರೆ. ಇದ್ರೊಂದಿಗೆ ಟೀಮ್​ ಇಂಡಿಯಾದ ಮುಂದಿನ ನಾಯಕ ಯಾರು.? ಎಂಬ ಪ್ರಶ್ನೆ ಹುಟ್ಟಿದೆ. ಚಾಂಪಿಯನ್​​​​ ತಂಡದ ನಯಾ ಟಿ20 ಕ್ಯಾಪ್ಟನ್ ಆಗಲು ನಾಲ್ವರು ನಾ ಮುಂದು, ತಾ ಮುಂದು ಅಂತ ತುದಿಗಾಲಲ್ಲಿ ನಿಂತಿದ್ದಾರೆ. ಆಯ್ಕೆಯಂತೂ ಟೀಮ್​ ಮ್ಯಾನೇಜ್​​ಮೆಂಟ್​​ಗೆ ಕಬ್ಬಿಣದ ಕಡಲೆಯಾಗಿದೆ. ರೋಹಿತ್​ ಉತ್ತರಾಧಿಕಾರಿ ಪಟ್ಟಕ್ಕಾಗಿ ಯಾರ ನಡುವೆ ಫೈಟ್​​​ ನಡೀತಿದೆ?. ಯಾರಿಗೆ ನೂತನ ಬಾಸ್ ಆಗುವ ಚಾನ್ಸ್​ ಇದೆ?.

ಒಂದು ಪಟ್ಟಕ್ಕಾಗಿ ನಾಲ್ವರು ಸ್ಟಾರ್​​ ಆಟಗಾರರ ಹದ್ದಿನ ಕಣ್ಣು

ಟೀಮ್ ಇಂಡಿಯಾ ಟಿ20 ವಿಶ್ವಕಪ್​ ಗೆದ್ದು ಹೊಸ ಭಾಷ್ಯ ಬರಿದ್ದಾಯ್ತು. ಇದೇ ಖುಷಿಯಲ್ಲಿ ರೋಹಿತ್​ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಗುಡ್​ ಬೈ ಹೇಳಿ ಶಾಕ್​ ಕೊಟ್ಟಿದ್ದು ಆಯ್ತು. ಇದೀಗ ಹಿಟ್​ಮ್ಯಾನ್​ ಉತ್ತರಾಧಿಕಾರಿ ಯಾರಾಗ್ತಾರೆ ಅನ್ನೋ ಚರ್ಚೆ ಜೋರಾಗಿದೆ. ಟೀಮ್ ಇಂಡಿಯಾದ ಟಿ20 ಕ್ಯಾಪ್ಟನ್ಸಿ ಪಟ್ಟಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ನಾಲ್ವರು ಸ್ಟಾರ್ ಕ್ರಿಕೆಟಿಗರು ನಾಯಕರಾಗಲು ತುದಿಗಾಲಲ್ಲಿ ನಿಂತಿದ್ದಾರೆ.

ಇದನ್ನೂ ಓದಿ: ರಾತ್ರಿ ಅಂತ್ಯಸಂಸ್ಕಾರ ಮಾಡಿದ್ದ ಮಗುವಿನ ಮೃತದೇಹ.. ಬೆಳಗ್ಗೆ ಉಯ್ಯಾಲೆಯಲ್ಲಿ ಪ್ರತ್ಯಕ್ಷ..! ಗಾಬರಿಬಿದ್ದ ಜನ

ರೋಹಿತ್​​ ಉತ್ತರಾಧಿಕಾರಿ ರೇಸ್​​ನಲ್ಲಿ ಹಾರ್ದಿಕ್​​​ ಮುಂಚೂಣಿ..!

ವಿಶ್ವಕಪ್​​ನಲ್ಲಿ ವೈಸ್ ಕ್ಯಾಪ್ಟನ್ ಆಗಿದ್ದ ಸ್ಟಾರ್​ ಆಲ್​ರೌಂಡರ್ ಹಾರ್ದಿಕ್​​ ಪಾಂಡ್ಯ ಭಾರತ ತಂಡದ ನೂತನ ಟಿ20 ಕ್ಯಾಪ್ಟನ್ ಆಗುವ ಸಾಧ್ಯತೆ ಹೆಚ್ಚಿದೆ. ಟಿ20ಯಲ್ಲಿ ತಂಡ ಮುನ್ನಡೆಸಿದ ಅನುಭವಿದೆ. ಜೊತೆಗೆ ಐಪಿಎಲ್​ನಲ್ಲಿ ತಂಡದ ನಾಯಕರಾಗಿ ಸಕ್ಸಸ್ ಕಂಡಿದ್ದಾರೆ. ಹೀಗಾಗಿ ಹಾರ್ದಿಕ್​​ ಪಾಂಡ್ಯಗೆ ಪಟ್ಟ ಕಟ್ಟಲು ಟೀಮ್ ಇಂಡಿಯಾ ಒಲವು ತೋರಿದೆ ಎಂದು ವರದಿಯಾಗಿದೆ.

ರಿಷಬ್​​​ ಪಂತ್​​​​​ಗೆ ಬಂಪರ್​ ಜಾಕ್​ಪಾಟ್ ಹೊಡೆಯುತ್ತಾ​​​..?

ಹಾರ್ದಿಕ್​​​ ಜೊತೆ ವಿಕೆಟ್ ರಿಷಬ್​ ಪಂತ್ ಹೆಸರು ಕ್ಯಾಪ್ಟನ್ಸಿ ರೇಸ್​​ನಲ್ಲಿ ಬಲವಾಗಿ ಕೇಳಿ ಬರ್ತಿದೆ. ಪಂತ್​ಗೆ ಈಗಿನ್ನೂ 26 ವರ್ಷ. ಅವಕಾಶ ನೀಡಿದ್ರೆ 10 ವರ್ಷಗಳ ಸುದೀರ್ಘ ಕಾಲ ತಂಡವನ್ನ ಮುನ್ನಡೆಸಬಹುದು. ಐಪಿಎಲ್​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​​​​​​​​​​​ ಲೀಡ್​​ ಮಾಡಿದ ಅನುಭವ ಬೇರೆ ಇದೆ. ಇದರ ಜೊತೆ ದ್ರಾವಿಡ್​ ಉತ್ತರಾಧಿಕಾರಿಯಾಗೋ ಗೌತಮ್ ಗಂಭೀರ್​​​ ಹಾಗೂ ಪಂತ್ ಡೆಲ್ಲಿಯವರೇ. ಇಬ್ಬರ ನಡುವೆ ಭಾಂದವ್ಯ ಚೆನ್ನಾಗಿದ್ದು, ಇದು ತಂಡದ ಚುಕ್ಕಾಣಿ ಹಿಡಿಯಲು ನೆರವಾಗಲಿದೆ ಎಂದು ಹೇಳಲಾಗ್ತಿದೆ.

ಹಾರ್ದಿಕ್​​​​-ಪಂತ್​​​ರನ್ನ ಓವರ್​​ಟೇಕ್​ ಮಾಡ್ತಾರಾ ಸೂರ್ಯ..?

ಸೂರ್ಯಕುಮಾರ್ ಯಾದವ್ ಕೂಡ ಟಿ20 ನಾಯಕತ್ವದ ಮೇಲೆ ಕಣ್ಣಿಟ್ಟಿದ್ದಾರೆ. ಸೂರ್ಯ ಒಂದೆರೆಡು ಸರಣಿಗಳಲ್ಲಿ ಭಾರತ ತಂಡವನ್ನ ಮುನ್ನಡೆಸಿದ್ದು ಬಿಟ್ರೆ ಹೆಚ್ಚು ಅನುಭವವಿಲ್ಲ. ಆದ್ರೂ, ತಂಡವನ್ನ ಯಶಸ್ವಿಯಾಗಿ ಮುನ್ನಡೆಸುವ ಕೆಪಾಸಿಟಿ ಈ ಡೇಂಜರಸ್​​ ಬ್ಯಾಟರ್​ಗಿದೆ. ಈ ಹಿಂದೆ ಆಸಿಸ್​​​​​​ ಎದುರಿನ ಸರಣಿ ಗೆಲ್ಲಿಸಿ ಅದನ್ನ ಪ್ರೂವ್ ಮಾಡಿದ್ದಾರೆ. ಹೀಗಾಗಿ ಸೂರ್ಯನಿಗೆ ಅದೃಷ್ಟದ ಬಾಗಿಲು ತೆರೆದ್ರು ಆಶ್ಚರ್ಯವಿಲ್ಲ.

ಇದನ್ನೂ ಓದಿ: ಡಾಲಿ ಧನಂಜಯ್- ಉಪ್ಪಿ ನಡುವೆ ಬಿಗ್ ವಾರ್​.. ಕೆಂಪೇಗೌಡ ಟೈಟಲ್ ಸಿಕ್ಕಿದ್ದು ಯಾರಿಗೆ?

ಸ್ಟಾರ್ ವೇಗಿ ಬೂಮ್ರಾ ಟೀಮ್ ಇಂಡಿಯಾ ಚುಕ್ಕಾಣಿ ಹಿಡೀತಾರಾ..?

ಬರೀ ಬ್ಯಾಟ್ಸ್​​ಮನ್​​ಗಳಷ್ಟೇ ಅಲ್ಲದೇ ಸ್ಟಾರ್ ವೇಗಿ ಜಸ್​ಪ್ರೀತ್ ಬೂಮ್ರಾ ಕೂಡ ಟೀಮ್ ಇಂಡಿಯಾ ಸಾರಥಿ ಆಗುವ ಕನಸು ಕಾಣ್ತಿದ್ದಾರೆ. ಸದ್ಯ ಇರೋರಲ್ಲಿ ಬೂಮ್ರಾನೆ ಹೆಚ್ಚು ಅನುಭವವುಳ್ಳ ಆಟಗಾರ. ಕಳೆದ ವರ್ಷ ಐರ್ಲೆಂಡ್ ವಿರುದ್ಧ ತಂಡ ಮುನ್ನಡೆಸಿದ್ದ ಬೂಮ್ರಾ ಸರಣಿ ಗೆಲ್ಲಿಸಿ ಸೈ ಅನ್ನಿಸಿಕೊಂಡಿದ್ರು. ಒಂದು ವೇಳೆ ಟೀಮ್​ ಮ್ಯಾನೇಜ್​​ಮೆಂಟ್​​ಗೆ ಅನುಭವವೇ ಮಾನದಂಡವಾದ್ರೆ ಬೂಮ್ರಾಗೆ ಕ್ಯಾಪ್ಟನ್ಸಿ ಜಾಕ್​​ಪಾಟ್ ಹೊಡೆಯೋದು ಗ್ಯಾರಂಟಿ.

ಇದನ್ನೂ ಓದಿ: ಭೀಕರ ಪ್ರವಾಹದ ನೀರಿಗೆ ಬಿದ್ದ ಶಾಸಕ.. 14 ಜಿಲ್ಲೆಗಳಲ್ಲಿ ಭರ್ಜರಿ ಮಳೆ ಮುನ್ಸೂಚನೆ; ರೆಡ್ ಅಲರ್ಟ್ ಅನೌನ್ಸ್

ರೋಹಿತ್​ ಶರ್ಮಾ ಉತ್ತರಾಧಿಕಾರಿ ಆಗಲು ನಾಲ್ವರು ಪ್ಲೇಯರ್ಸ್​ ನಡುವೆ ಜಂಗೀಕುಸ್ತಿ ಏರ್ಪಟ್ಟಿರೋಂತೂ ನಿಜ. ಆದ್ರೆ ಅಂತಿಮವಾಗಿ ಯಾರಿಗೆ ಪಟ್ಟ ದಕ್ಕುತ್ತೆ, ಟೀಮ್ ಮ್ಯಾನೇಜ್​​​​​ಮೆಂಟ್​ ಯಾರ ಮೇಲೆ ಒಲವು ತೋರುತ್ತೆ ಅನ್ನೋದಕ್ಕೆ ಶೀಘ್ರದಲ್ಲೆ ಆನ್ಸರ್ ಸಿಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೋಹಿತ್​ ಉತ್ತರಾಧಿಕಾರಿ ಪಟ್ಟಕ್ಕಾಗಿ ಟಫ್ ಫೈಟ್​.. ಕ್ಯಾಪ್ಟನ್ ರೇಸ್​ನಲ್ಲಿ ನಾಲ್ವರು ಪ್ಲೇಯರ್ಸ್!​

https://newsfirstlive.com/wp-content/uploads/2024/06/BHUMRH-ROHIT.jpg

Load More