newsfirstkannada.com

ದರ್ಶನ್​ ಕೈದಿ ನಂಬರ್ ಫೋಟೋ ಶೂಟ್​.. ಮಗುವಿನ ತಂದೆ, ತಾಯಿ, ವೈರಲ್ ಮಾಡಿದವ್ರಿಗೆ ಸಂಕಷ್ಟ!

Share :

Published July 3, 2024 at 3:46pm

    ಈ ಘಟನೆ ಬಗ್ಗೆ ಮಕ್ಕಳ ರಕ್ಷಣಾ ಆಯೋಗ ಕಳವಳ, ಮುಂದಿನ ಕ್ರಮ?

    ಅಭಿಮಾನ ಯಾವಾಗಲು ವಿಕೃತಿ ಆಗಬಾರದು ಎಂದ ಮಕ್ಕಳ ಆಯೋಗ

    ದರ್ಶನ್ ಕೈದಿ ನಂಬರ್, ಡ್ರೆಸ್ ಹಾಕಿಸಿ ಮಗುವಿನ ಫೋಟೋಶೂಟ್

ಬೆಂಗಳೂರು: ನಟ ದರ್ಶನ್ ಅವರು ಕೊಲೆ ಕೇಸ್​ನಲ್ಲಿ ಜೈಲು ಸೇರಿದ ಮೇಲೆ ಅವರ ಫ್ಯಾನ್ಸ್​ಗೆ ದಿಕ್ಕು ದೋಚದಂತೆ ಆಗಿದೆ. ದರ್ಶನ್​​ಗೆ ನೀಡಿದ ಕೈದಿ ನಂಬರನ್ನೇ ಫ್ಯಾನ್ಸ್ ವಿಧ ವಿಧವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೈ ಮೇಲೆ ಹಚ್ಚೆ, ಟ್ಯಾಟೂ ಹಾಕಿಸಿಕೊಳ್ಳುವುದು, ಬೈಕ್, ಕಾರಿನ ಮೇಲೆ ಬರೆದುಕೊಳ್ಳುವುದು ಮಾಡುತ್ತಿದ್ದಾರೆ. ಇದೇ ರೀತಿ ತನ್ನ ಮಗುವಿಗೆ ದರ್ಶನ್ ನಂಬರ್ ಇರೋ ಕೈದಿ ರೀತಿಯಲ್ಲಿ ಬಟ್ಟೆ ಹಾಕಿಸಿದ್ದ ಪೋಷಕರಿಗೆ ಮಕ್ಕಳ ರಕ್ಷಣಾ ಆಯೋಗ ನೋಟಿಸ್ ನೀಡಲು ಮುಂದಾಗಿದೆ.

ಇದನ್ನೂ ಓದಿ: ಐಕಾನಿಕ್ ವಾಕಿಂಗ್​ನಲ್ಲಿ ಟ್ರೋಫಿ ಸ್ವೀಕರಿಸಿದ್ದ ರೋಹಿತ್.. ಹಿಟ್​​ಮ್ಯಾನ್​ಗೆ ಈ ಸ್ಟೈಲ್ ಹೇಳಿದ್ಯಾರು?

ದರ್ಶನ್ ಅಭಿಮಾನಿಯೊಬ್ಬರು ತನ್ನ ಮಗುವಿನ ಫೋಟೋ ಶೂಟ್‌ ಮಾಡಿಸುವಾಗ ದರ್ಶನ್ ಕೈದಿ ನಂಬರ್ ಇರೋ ಡ್ರೆಸ್​ ಹಾಕಿಸಿದ್ದಾರೆ. ಹೆತ್ತ ಮಗುವನ್ನೇ ಕೈದಿ ರೀತಿ ಬಿಳಿ ಬಟ್ಟೆ ಹಾಕಿಸಿದ್ದಲ್ಲದೇ ಕೈ ಕೋಳ ಮಾದರಿ ಇಟ್ಟು ಫೋಟೋ ಶೂಟ್ ಮಾಡಿದ್ದಾರೆ. ಮಗುವಿಗೆ ಇದೇ ಕೈದಿ ನಂಬರ್​ನ್ನೇ ಹೆಸರಿಟ್ಟಿದ್ದಾರೆ ಎನ್ನಲಾಗ್ತಿದೆ. ಮಗುವಿನ ಪೋಷಕರಿಗೆ ನೋಟಿಸ್ ನೀಡಲು ಸಿದ್ಧತೆ ನಡೆಯುತ್ತಿದ್ದು ಅಭಿಮಾನ ವಿಕೃತಿ ಆಗಬಾರದೆಂದು ಮಕ್ಕಳ ಆಯೋಗ ಕಳವಳ ವ್ಯಕ್ತಪಡಿಸಿದೆ.

ಈ ಸಂಬಂಧ ಮಾತನಾಡಿದ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ತಿಪ್ಪೇಸ್ವಾಮಿ ಅವರು, ಅಭಿಮಾನದ ಕಾರಣಕ್ಕಾಗಿ ಈ ರೀತಿ ಮಾಡುವುದನ್ನ ನಾವೆಲ್ಲ ನೋಡುತ್ತೇವೆ. ಆದರೆ ಅಭಿಮಾನ ಹೀಗೂ ವ್ಯಕ್ತಪಡಿಸಬಹುದಾ ಎನ್ನುವ ನೈತಿಕ ಪ್ರಶ್ನೆ ಕಾಡುತ್ತೆ?. ಇದು ಮಗುವಿನ ಘನತೆಯ ಪ್ರಶ್ನೆ. ನಾವು ಏನ್ ಮಾಡುತ್ತಿದ್ದೇವೆ ಎನ್ನುವುದು ಆ ಮಗುವಿಗೆ ಗೊತ್ತಿಲ್ಲ. ಮುಂದೆ ಬೆಳೆದು ದೊಡ್ಡದಾದಗ ಇದು ಅಡ್ಡ ಹೆಸರಾಗಿ ನಿಂತು, ಮಗುವಿನ ವ್ಯಕ್ತಿತ್ವದ ಮೇಲೆ ಮಾರಕ ಪರಿಣಾಮ ಬೀರುವ ಸಾಧ್ಯತೆ ಇದೆ. ಪೋಷಕರು ಈ ರೀತಿ ಅಭಿಮಾನ ಮಾಡುವಾಗ ವಿಕೃತಿ ಮಾಡಬಾರದು ಎಂದು ಹೇಳಿದ್ದಾರೆ.

ಇದನ್ನೂ ಓದಿ: T20 ವಿಶ್ವಕಪ್​ ಗೆಲುವಿನ ಮಾಸ್ಟರ್ ಮೈಂಡ್​ಗಳು.. ಕೊಹ್ಲಿರನ್ನ ಓಪನಿಂಗ್ ಆಡಿಸಿ ಟ್ರೋಫಿ ಗೆದ್ದೇ ಬಿಟ್ರು

ಮಗುವಿನ ಫೋಟೋ ಶೂಟ್ ಮಾಡಿದವರಿಗೆ, ಅದನ್ನ ಅಪ್ಲೋಡ್ ಮಾಡಿ ವೈರಲ್ ಮಾಡಿದವರಿಗೆ, ಮಕ್ಕಳ ಆಯೋಗದ ವತಿಯಿಂದ ಐಟಿ ಇಲಾಖೆಗೆ ಕಳಿಸಿ ಅವರಿಗೆ ನೋಟಿಸ್ ಕೊಡುವಂತ ಕೆಲಸ ಮಾಡುತ್ತೇವೆ. ಇದನ್ನು ತೀರ ಅಪರಾಧಿ ಕೃತ್ಯ ಎಂದು ನೋಡುವುದಕ್ಕಿಂತಲೂ ನಮ್ಮ ಆಯ್ಕೆಗಳನ್ನ ಮಕ್ಕಳ ಮೇಲೆ ಹಾಕಬಹುದೇ ಎಂಬುದನ್ನ ಇಲ್ಲಿ ನೋಡಿಕೊಳ್ಳಬೇಕು. ಇದನ್ನು ವೈರಲ್ ಮಾಡಿದವರಿಗೆ ಸೈಬರ್​ ಪೊಲೀಸ್ ಇಲಾಖೆಗೆ ಮಾಹಿತಿ ಕೊಡುತ್ತೇವೆ. ಈ ಬಗ್ಗೆ ಎಲ್ಲ ಮಾಹಿತಿ ಸಂಗ್ರಹಿಸಿ ಪೋಷಕರಿಗೆ, ಫೋಟೋ ಅಪ್​ಲೋಡ್, ವೈರಲ್ ಮಾಡಿದವರಿಗೆ ನೋಟಿಸ್ ನೀಡಲಾಗುವುದು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ ಕೈದಿ ನಂಬರ್ ಫೋಟೋ ಶೂಟ್​.. ಮಗುವಿನ ತಂದೆ, ತಾಯಿ, ವೈರಲ್ ಮಾಡಿದವ್ರಿಗೆ ಸಂಕಷ್ಟ!

https://newsfirstlive.com/wp-content/uploads/2024/07/DARSHAN_FAN-1.jpg

Load More