ಭಲೇ ಜೋಡೆತ್ತುಗಳ ಬಾಂಧವ್ಯಕ್ಕೆ ಕ್ರಿಕೆಟ್ ಲೋಕ ಫಿದಾ..!
ಇಂತಹ ಬಾಂಡಿಂಗ್ ಮತ್ತೆಂದೂ ನೋಡಲು ಸಾಧ್ಯವಿಲ್ಲ
ಕ್ರೆಡಿಟ್ ಬಯಸಲ್ಲ, ತಂಡದ ಹಿತವೇ ಇಬ್ಬರಿಗೂ ಮುಖ್ಯ
ಬಾಂಡಿಂಗ್ ಅಂದ್ರೆ ಇದಪ್ಪಾ..! ಇದ್ದರೆ ಇವರ ಥರಾ ಬಾಂಡಿಂಗ್ ಇರಬೇಕು ಕಣ್ರಿ. ಸ್ಟಾರ್ಡಮ್ ತಲೆಗೇರಿಲ್ಲ. ಕಷ್ಟದ ಟೈಮ್ ಅಲ್ಲು ಒಬ್ಬರನ್ನ ಒಬ್ಬರು ಬಿಟ್ಟು ಕೊಡಲ್ಲ. ಒಂದೇ ಮಾತಲ್ಲ ಹೇಳಬೇಕಂದರೆ, ಈ ಸ್ಟಾರ್ ಜೋಡಿ ಬಾಂಡಿಂಗ್ ಮುಂದೆ ಮತ್ಯಾವ ಬಾಂಡಿಂಗ್ ಕೂಡ ಅಮುಖ್ಯ ಅನ್ನಿಸುತ್ತೆ. ಅಂತಹ ಬಾಂಡಿಂಗ್ ಟೀಮ್ ಇಂಡಿಯಾದ ಆ ಇಬ್ಬರು ಆಟಗಾರರಲ್ಲಿ ಇರೋದು ಇನ್ನೂ ಜಾಸ್ತಿ ಖುಷಿಯಾಗುತ್ತೆ.
ಹೌದು.. ವಿಶ್ವಕಪ್ ಗೆಲುವಿನ ಜೊತೆಗೆ ಕಿಂಗ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬಾಂಡಿಂಗ್ ಬಗ್ಗೆ ಹೆಚ್ಚು ಪ್ರಶಂಸೆ ವ್ಯಕ್ತವಾಗ್ತಿದೆ. ವಿಶ್ವಕಪ್ ಗೆದ್ದ ವೇಳೆ ಈ ಜೋಡಿಯ ಬಾಂಡಿಂಗ್ ಎಲ್ಲರ ಹೃದಯ ಸ್ಪರ್ಶಿಸಿದೆ.
ಇದನ್ನೂ ಓದಿ:ದ್ರಾವಿಡ್ ನಿವೃತ್ತಿ, ಗಂಭೀರ್ ಬಗ್ಗೆ ಮಾಹಿತಿ ಇಲ್ಲ.. ಜಿಂಬಾಬ್ವೆ ಪ್ರವಾಸದಲ್ಲಿರುವ ಕೋಚ್ ಯಾರು?
ತಬ್ಬಿಕೊಂಡು ಕಣ್ಣೀರು ಹಾಕಿದ ರೋಹಿತ್-ಕೊಹ್ಲಿ
ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುತ್ತಿದ್ದಂತೆ ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಭಾವುಕರಾಗಿದ್ರು. ಖುಷಿ ತಡೆಯಲಾರದೇ ಆನಂದಭಾಷ್ಪ ಹರಿಸಿದರು. ಕ್ಯಾಪ್ಟನ್ ರೋಹಿತ್ ಕಣ್ಣಲ್ಲೂ ನೀರು ಜಿನಿಗಿತ್ತು. ಡ್ರೆಸ್ಸಿಂಗ್ ರೂಮ್ ಬಳಿ ಭಾವುಕರಾಗಿ ನಿಂತಿದ್ದ, ರೋಹಿತ್ರನ್ನ ತಬ್ಬಿಕೊಂಡು ಕಿಂಗ್ ಕೊಹ್ಲಿ ಕೂಡ ಕಣ್ಣೀರು ಹಾಕಿದರು.
ಭಾರತದ ಬಾವುಟ ಹಿಡಿದು ಒಟ್ಟಿಗೆ ಪೋಸ್
ಟಿ20 ವಿಶ್ವಕಪ್ನಲ್ಲಿ ಭಾರತಕ್ಕೆ ಗೆಲುವು ಖಚಿತವಾಗ್ತಿದ್ದಂತೆ ಆಟಗಾರರೆಲ್ಲರೂ ಭಾರತದ ಬಾವುಟ ಹಿಡಿದು ಮೈದಾನಪೂರ್ತಿ ಓಡಾಡಿದ್ರು. ಇದೇ ವೇಳೆ ವಿರಾಟ್ ಕೊಹ್ಲಿ, ಕ್ಯಾಪ್ಟನ್ ರೋಹಿತ್ ಜೊತೆಗೆ ಫೋಟೋ ಕೇಳಿದ್ರು. ಬಳಿಕ ಭುಜದ ಮೇಲೆ ಭಾರತದ ಭಾವುಟ ಹಾಕಿಕೊಂಡು ರೋಹಿತ್, ಕೊಹ್ಲಿ ಜೊತೆಗೂಡಿ ವಿಶ್ವಕಪ್ ಟ್ರೋಫಿ ಹಿಡಿದು ಫೋಟೋಗೆ ಪೋಸ್ ನೀಡಿದರು. ಈ ವಿಶ್ವಕಪ್ನ ಹಲ ಪಂದ್ಯಗಳಿಗೂ ಮುನ್ನ ನಾಯಕ ರೋಹಿತ್ ಬದಲಾಗಿ ವಿರಾಟ್ ಕೊಹ್ಲಿ ಪೆಪ್ ಟಾಕ್ ಮಾಡಿದ್ರು. ಆಟಗಾರರನ್ನ ಹುರಿದುಂಬಿಸಿದ್ದರು. ನಿಜ ಹೇಳಬೇಂಕದ್ರೆ ಬಹುತೇಕ ನಾಯಕರೇ ಈ ಕೆಲಸವನ್ನ ನಿಭಾಯಿಸ್ತಾರೆ. ರೋಹಿತ್ ಕೊಹ್ಲಿಗೆ ಈ ಅವಕಾಶ ನೀಡಿದರು. ಕೊಹ್ಲಿ ಹುರಿದುಂಬಿಸಿದ ರೀತಿ ಭಾರತದ ವಿಶ್ವಕಪ್ ಗೆಲುವಿಗೆ ಕಾರಣವಾಗಿದೆ ಅಂದ್ರು ತಪ್ಪಲ್ಲ.
ಇದನ್ನೂ ಓದಿ:ಕೊಹ್ಲಿ, ರೋಹಿತ್, ಜಡೇಜಾ ಆಯ್ತು.. ಮತ್ತೆ ನಾಲ್ವರು ಆಟಗಾರರು ಗುಡ್ಬೈ ಹೇಳಲು ತಯಾರಿ..!
ಒಬ್ಬರನ್ನೊಬ್ಬರು ಬಿಟ್ಟುಕೊಡದ ‘RO-KO’ ಜೋಡಿ..!
ಕೊಹ್ಲಿ ಹಾಗೂ ರೋಹಿತ್ ಬಾಂಡಿಂಗ್ ಅದ್ಯಾವ ಮಟ್ಟಿಗೆ ಗಟ್ಟಿ ಆಗಿತ್ತಂದ್ರೆ, ಒಬ್ಬರನ್ನೊಬ್ಬರು ಬಿಟ್ಟು ಕೊಡ್ತಿರ್ಲಿಲ್ಲ. ಕೊಹ್ಲಿ ಫೇಲ್ಯೂರ್ ಕಂಡಾಗಲೆಲ್ಲಾ ರೋಹಿತ್ ಸೆಂಚುರಿ ಸಾಮ್ರಾಟನ ಪರ ಬ್ಯಾಟ್ ಬೀಸಿದ್ರು. ಫೈನಲ್ಗಾಗಿ ರನ್ ಇಟ್ಟುಕೊಂಡಿದ್ದಾರೆ. ರೋಹಿತ್ರ ನಂಬಿಕೆಯನ್ನು ಕೊಹ್ಲಿ ಸುಳ್ಳಾಗಿಸಲಿಲ್ಲ.
ಯಂಗ್ಸ್ಟರ್ಸ್ಗೆ ಇವರೇ ದೊಡ್ಡಣ್ಣ..!
ವಿಶ್ವಕಪ್ ತಂಡದಲ್ಲಿದ್ದ ಯುವ ಆಟಗಾರರಿಗೆ ರೋಹಿತ್ ಶರ್ಮಾ ಹಾಗೂ ಕಿಂಗ್ ಕೊಹ್ಲಿಯೇ ದೊಡ್ಡಣ್ಣ. ಈ ವಿಶ್ವಕಪ್ ಟೂರ್ನಿಯಲ್ಲಿ ಇವರಿಬ್ಬರು ಮೇಜರ್ ರೋಲ್ ಪ್ಲೇ ಮಾಡಿದರು. ಸಲಹೆ-ಸೂಚನೆಗಳನ್ನ ಕೊಡ್ತಾ ತಂಡವನ್ನ ಗೆಲುವಿನ ದಡ ಸೇರಿಸಿದ್ರು.
ಇದನ್ನೂ ಓದಿ:ಟಿ20 ವಿಶ್ವಕಪ್ ಗೆದ್ದ ಬಳಿಕ ಕೊಹ್ಲಿ ಫುಲ್ ಚೇಂಜ್.. ರನ್ ಮಷಿನ್ ಹಿಂಗ್ಯಾಕೆ ಆದ್ರು ಅಂತಿದ್ದಾರೆ ಫ್ಯಾನ್ಸ್..!
ಕ್ರೆಡಿಟ್ ವಾರ್ ಬಯಸಲ್ಲ..!
ರೋಹಿತ್ ಹಾಗೂ ಕಿಂಗ್ ಕೊಹ್ಲಿ ಎಂದೂ ಕ್ರೆಡಿಟ್ ವಾರ್ಗೆ ಪ್ರಾಮುಖ್ಯತೆ ಕೊಟ್ಟವರಲ್ಲ. ಇಬ್ಬರ ಗುರಿ ಒಂದೇ ತಂಡದ ಹಿತ. ಅದಕ್ಕಾಗಿ ಒಗ್ಗಟ್ಟಾಗಿ ಹೋರಾಟ ನಡೆಸ್ತಿದ್ರು. ಈ ಭಲೇ ಜೋಡಿಗಳ ಗುರಿ ಒಂದೇ ಆಗಿತ್ತು. ಟಿ20 ವಿಶ್ವಕಪ್ ಗೆಲ್ಲಿಸಿ ಕೊಡೋದು. ಕೊನೆಗೆ ಅದನ್ನು ಸಾಧಿಸಿ ತೋರಿಸಿದ್ದಾರೆ. ಕೊಹ್ಲಿ-ರೋಹಿತ್ರ ಈ ಗಟ್ಟಿ ಬಾಂಧವ್ಯಕ್ಕೆ ಯಾರ ಕಣ್ಣು ಬೀಳದಿರಲಿ. ಮುಂದೆಯೂ ಇವರಿಬ್ಬರ ಬಾಂಡಿಂಗ್ ಹೀಗೆ ಮುಂದುವರಿಯಲಿ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್