newsfirstkannada.com

ಕೊಹ್ಲಿ, ರೋಹಿತ್​, ಜಡೇಜಾ ಆಯ್ತು.. ಮತ್ತೆ ನಾಲ್ವರು ಆಟಗಾರರು ಗುಡ್​ಬೈ ಹೇಳಲು ತಯಾರಿ..!

Share :

Published July 3, 2024 at 9:35am

  ಕಪ್​ ಗೆದ್ದ ಸಂಭ್ರಮದ ನಡುವೆ ಫ್ಯಾನ್ಸ್​ಗೆ ಶಾಕ್​..!

  ಟೀಮ್​ ಇಂಡಿಯಾದಲ್ಲಿ ಆಟಗಾರರ ನಿವೃತ್ತಿ​ ಪರ್ವ..!

  ಟಿ-20 ವಿಶ್ವಕಪ್ ಗೆದ್ದಿರುವ ಭಾರತ ತಂಡ

ವಿಶ್ವಕಪ್​ ಗೆಲುವಿನ ಬೆನ್ನಲ್ಲೇ ಟೀಮ್​ ಇಂಡಿಯಾದಲ್ಲಿ ರಿಟೈರ್​ಮೆಂಟ್​ ಪರ್ವ ಶುರುವಾಗಿದೆ. ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ರವೀಂದ್ರ ಜಡೇಜಾ ಆಯ್ತು.. ಇದೀಗ ಇನ್ನೂ ಹಲವು ಆಟಗಾರರು ನಿವೃತ್ತಿ ಹೇಳಲು ಚಿಂತನೆ ನಡೆಸ್ತಿದ್ದಾರೆ. ಕೇವಲ ಟಿ20 ಇಂಟರ್​ನ್ಯಾಷನಲ್​ ಮಾತ್ರವಲ್ಲ.. ಎಲ್ಲಾ ಫಾರ್ಮೆಟ್​ ವಿದಾಯ ಘೋಷಿಸೋ ಆಟಗಾರರೂ ಇದ್ದಾರೆ.

11 ವರ್ಷಗಳ ಕೊರಗು ಕೊನೆಗೂ ನೀಗಿದೆ. ಕೊಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಫಲಿಸಿದೆ. 2013ರ ಬಳಿಕ ಪದೇ ಪದೆ ಐಸಿಸಿ ಟೂರ್ನಿಗಳಲ್ಲಿ ನಿರಾಸೆ ಅನುಭವಿಸಿದ್ದ ಟೀಮ್​ ಇಂಡಿಯಾ ಕೊನೆಗೂ ಗೆದ್ದು ಬೀಗಿದೆ. ಭಾರತದ ಮುಡಿಗೆ ಟಿ20 ವಿಶ್ವಕಪ್​ ಕಿರೀಟ ಒಲಿದಿದೆ. ಈ ಅವಿಸ್ಮರಣೀಯ ಕ್ಷಣ ಘಟಿಸಿ 2 ದಿನಗಳೇ ಆಯ್ತು. ಆ ಸಂಭ್ರಮಕ್ಕೆ ಇನ್ನೂ ತೆರೆ ಬಿದ್ದಿಲ್ಲ.. ಸೋಷಿಯಲ್​ ಮೀಡಿಯಾಗಳಲ್ಲಂತೂ ಟೀಮ್​ ಇಂಡಿಯಾದ ವಿಜಯದ ಯಾತ್ರೆ ಇನ್ನೂ ಸಖತ್​ ಟ್ರೆಡಿಂಗ್​ನಲ್ಲಿದೆ.

ಇದನ್ನೂ ಓದಿ:ದ್ರಾವಿಡ್ ನಿವೃತ್ತಿ, ಗಂಭೀರ್ ಬಗ್ಗೆ ಮಾಹಿತಿ ಇಲ್ಲ.. ಜಿಂಬಾಬ್ವೆ ಪ್ರವಾಸದಲ್ಲಿರುವ ಕೋಚ್ ಯಾರು?

ಕಪ್​ ಗೆದ್ದ ಸಂಭ್ರಮದ ನಡುವೆ ಫ್ಯಾನ್ಸ್​ಗೆ ಶಾಕ್.​.!
ಇಂಡಿಯನ್​ ಟೈಗರ್ಸ್​​, ಕೆರಬಿಯನ್​ ನಾಡಲ್ಲಿ ಘರ್ಜಿಸಿ ಟ್ರೋಫಿ ಗೆದ್ದ ಖುಷಿಯ ಬೆನ್ನಲ್ಲೇ ಇಂಡಿಯನ್​​ ಫ್ಯಾನ್ಸ್​ಗೆ ಎದುರಾಗಿದ್ದು ಶಾಕ್​. ಮ್ಯಾನ್​ ಆಫ್​ ದ ಮ್ಯಾಚ್​ ಅವಾರ್ಡ್​ ಪಡೆಯಲು ಬಂದ ವಿರಾಟ್​, ಪೋಡಿಯಂ ಮೇಲೆಯೇ ವಿದಾಯ ಹೇಳಿ ಶಾಕ್​ ನೀಡಿದರು. ಇದ್ರ ಬೆನ್ನಲ್ಲೇ, ಪ್ರೆಸ್​ ಕಾನ್ಪರೆನ್ಸ್​ನಲ್ಲಿ ಗುಡ್​ ಬೈ ಹೇಳಿದ್ರು. ಒಂದು ದಿನ ಕಳೆದ ಬಳಿಕ ರವೀಂದ್ರ ಜಡೇಜಾ ನಿವೃತ್ತಿಯ ಶಾಕ್​ ಕೊಟ್ಟಿದ್ದಾರೆ. ಆರಂಭವಾಗಿರೋ ಈ ರಿಟೈರ್​ಮೆಂಟ್​ ಪರ್ವ ಸದ್ಯಕ್ಕೆ ನಿಲ್ಲೋ ತರ ಇಲ್ಲ. ಮುಂದಿನ ಕೋಚ್​ ಗೌತಮ್​ ಗಂಭೀರ್​, ಸೀನಿಯರ್ಸ್​ಗೆ ಷರತ್ತು ವಿಧಿಸಿರೋದ್ರಿಂದ ಇನ್ನಷ್ಟು ಪ್ಲೇಯರ್ಸ್​​ ಗುಡ್​ ಬೈ ಹೇಳೋ ಸಾಧ್ಯತೆ ಇದೆ.

ಏಕದಿನ, T20ಗೆ ಗುಡ್​ ಬೈ ಹೇಳ್ತಾರಾ ಅಶ್ವಿನ್​?
35 ವರ್ಷದ ಗಡಿದಾಟಿದ ಟೀಮ್​ ಇಂಡಿಯನ್ಸ್​ ಒಬ್ಬಬ್ಬಾರಾಗಿ ಚುಟುಕು ಫಾರ್ಮೆಟ್​ಗೆ ಟಾಟಾ ಹೇಳ್ತಿದ್ದಾರೆ. 37 ವರ್ಷದ ಆಫ್​​ ಸ್ಪಿನ್ನರ್​ ಅಶ್ವಿನ್, ಕೂಡ ಶೀಘ್ರದಲ್ಲೇ ಗುಡ್​ ಬೈ ಹೇಳೋ ಸಾಧ್ಯತೆ ಇದೆ. ಟಿ20 ಮಾತ್ರವಲ್ಲ.. ಏಕದಿನ ತಂಡದಿಂದಲೂ ದೂರ ಉಳಿದಿರೋ ಅಶ್ವಿನ್​, ವೈಟ್​ಬಾಲ್​ ಫಾರ್ಮೆಟ್​ಗೆ ವಿದಾಯ ಹೇಳಿದ್ರೂ ಅಚ್ಚರಿಪಡಬೇಕಿಲ್ಲ.

ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ದಿಢೀರ್ ಬದಲಾವಣೆ.. ಜಿಂಬಾಬ್ವೆ ಪ್ರವಾಸದಿಂದ ಮೂವರು ಸ್ಟಾರ್ ಆಟಗಾರರಿಗೆ ಕೊಕ್..!

ನಿವೃತ್ತಿ ಹೇಳಲು ಸ್ಪೀಡ್​ಸ್ಟರ್​ ಶಮಿ ಸಜ್ಜು..?
ವೇಗಿ ಮೊಹಮ್ಮದ್​ ಶಮಿ ಕೂಡ ಟಿ20 ಕ್ರಿಕೆಟ್​ಗೆ ಗುಡ್​ ಬೈ ಹೇಳುವ ಸಾಧ್ಯತೆ ಹೆಚ್ಚಿದೆ. 33 ವರ್ಷದ ಶಮಿಯನ್ನ ಇಂಜುರಿ ಸಮಸ್ಯೆ ಪದೇ ಪದೆ ಕಾಡ್ತಿದೆ. ಹೀಗಾಗಿ ವರ್ಕ್​ಲೋಡ್​ ಮ್ಯಾನೇಜ್​​ಮೆಂಟ್​ ದೃಷ್ಟಿಯಿಂದ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಹೇಳೋ ಸಾಧ್ಯತೆಯಿದೆ.

ಎಲ್ಲಾ ಮಾದರಿಗೆ ಸದ್ಯದಲ್ಲೇ ಧವನ್​ ವಿದಾಯ?
ಶಿಖರ್​​ ಧವನ್​ ಟೀಮ್​​ ಇಂಡಿಯಾ ಮೇನ್​ ಸ್ಕ್ಯಾಡ್​ನಿಂದ ಹೊರ ಬಿದ್ದು ವರ್ಷಗಳೇ ಉರುಳಿವೆ. ಸೆಕೆಂಡ್​​ ಸ್ಟ್ರಿಂಗ್​ ಟೀಮ್​ನೊಂದಿಗೂ ಕೊನೆಯ ಬಾರಿ ಆಡಿದ್ದು, ಡಿಸೆಂಬರ್​, 10, 2022ರಂದು. ಆ ಬಳಿಕ ತಂಡದಿಂದ ಹೊರಬಿದ್ದಿದ್ದಾರೆ. 38 ವರ್ಷದ ಧವನ್​ಗೆ ಮತ್ತೆ ಅವಕಾಶ ಸಿಗೋದು ಅನುಮಾನವೇ. ಹೀಗಾಗಿ​ ಟಿ20 ಮಾತ್ರವಲ್ಲ. ಶೀಘ್ರದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೇ ಧವನ್​ ವಿದಾಯ ಘೋಷಿಸೋ ನಿರೀಕ್ಷೆಯಿದೆ.

ನಿವೃತ್ತಿ ಘೋಷಿಸ್ತಾರಾ ಭುವನೇಶ್ವರ್​ ಕುಮಾರ್?
ಸ್ವಿಂಗ್​ ಕಿಂಗ್​ ಭುವನೇಶ್ವರ್​ ಕುಮಾರ್​ ಟೀಮ್​ ಇಂಡಿಯಾದಿಂದ ಹೊರಬಿದ್ದು ಒಂದು ವರ್ಷಕ್ಕೂ ಹೆಚ್ಚು ಕಾಲವಾಯ್ತು. 34 ವರ್ಷದ ಭುವನೇಶ್ವರ್​ಗೆ ಮತ್ತೆ ಟೀಮ್​ ಇಂಡಿಯಾ ಬಾಗಿಲು ತೆಗೆಯೋದು ಅನುಮಾನವೇ. ಹೀಗಾಗಿ ಅಧಿಕೃತವಾಗಿ ಶೀಘ್ರದಲ್ಲೇ ಸ್ವಿಂಗ್​ ಮಾಸ್ಟರ್​ ನಿವೃತ್ತಿ ಘೋಷಿಸಿದ್ರೆ, ಅಚ್ಚರಿಪಡಬೇಕಿಲ್ಲ.

ಷರತ್ತುಗಳನ್ನು ನೀಡಿ ಕೋಚ್​ ಪಟ್ಟಕ್ಕೇರಲು ಗೌತಮ್​ ಗಂಭೀರ್​ ಸಜ್ಜಾಗಿದ್ರೆ, ಗಂಭೀರ್​ ಎಂಟ್ರಿಗೂ ಮುನ್ನವೇ ಸೀನಿಯರ್ಸ್​, ಜಾಗ ಖಾಲಿ ಮಾಡ್ತಿದ್ದಾರೆ. ಮೂವರು ಲೆಜೆಂಡ್ಸ್​​ ಅಧಿಕೃತವಾಗಿ ವಿದಾಯ ಹೇಳಿದ್ರೆ, ಇನ್ನು ಹಲವರು ಗುಡ್​ ಬೈ ಹೇಳೋ ಚಿಂತನೆ ನಡೆಸಿದ್ದಾರೆ. ಹೀಗಾಗಿ ಟೀಮ್​ ಇಂಡಿಯಾದಲ್ಲಿ ಶುರುವಾಗಿರೋ ರಿಟೈರ್​ಮೆಂಟ್​ ಇನ್ನೂ ಕೆಲ ಕಾಲ ಮುಂದುವರೆಯೋದ್ರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ:ವಿಶ್ವಕಪ್ ವೇದಿಕೆಯಲ್ಲೇ ವಿರಾಟ್ ನಿವೃತ್ತಿ ಘೋಷಣೆ.. ಕೊಹ್ಲಿಯಂತೆ ರೋಹಿತ್ ಹಾಗೆ ಮಾಡಲಿಲ್ಲ ಯಾಕೆ ಗೊತ್ತಾ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿ, ರೋಹಿತ್​, ಜಡೇಜಾ ಆಯ್ತು.. ಮತ್ತೆ ನಾಲ್ವರು ಆಟಗಾರರು ಗುಡ್​ಬೈ ಹೇಳಲು ತಯಾರಿ..!

https://newsfirstlive.com/wp-content/uploads/2024/07/JADEJA-ROHIT-KOHLI.jpg

Load More