newsfirstkannada.com

×

ವಿಷಕಾರಿ ಹಾವು ಕಚ್ಚಿದ್ದಕ್ಕೆ ಸಿಟ್ಟಿಗೆದ್ದ ಯುವಕ ಹಾವನ್ನೇ ಕಚ್ಚಿದ.. ಆಮೇಲೆ ಏನಾಯ್ತು ಗೊತ್ತಾ?

Share :

Published July 5, 2024 at 8:57pm

Update July 5, 2024 at 9:27pm

    ಹಾವಿಗೆ ವ್ಯಕ್ತಿ ಕಚ್ಚಿದ ಕಥೆಯನ್ನು ಕೇಳಲು ಆಸ್ಪತ್ರೆಯತ್ತ ಹರಿದು ಬಂದ ಜನರು

    ಬೇಸ್ ಕ್ಯಾಂಪ್‌ನಲ್ಲಿ ಮಲಗಿದ್ದಾಗ ಕಾರ್ಮಿಕನಿಗೆ ಕಚ್ಚಿದ ವಿಷಕಾರಿ ಹಾವು

    ಒಂದೇ ಒಂದು ಬಾರಿ ಹಾವು ಕಚ್ಚಿದ್ದಕ್ಕೆ ಮೂರು ಬಾರಿ ಕಚ್ಚಿದ ಯುವಕ

ಪಾಟ್ನಾ: ಈ ಹಿಂದೆ ಮನುಷ್ಯ ಮತ್ತು ಹಾವನ್ನು ಒಳಗೊಂಡ ಹಲವಾರು ವಿಲಕ್ಷಣ ಘಟನೆಗಳು ನಾವು ಊಹಿಸುವುದಕ್ಕಿಂತ ಹೆಚ್ಚಾಗಿ ಬೆಳಕಿಗೆ ಬರುತ್ತವೆ. ಇಂತಹದೊಂದು ಘಟನೆ ಇದೀಗ ಬಿಹಾರದಲ್ಲಿ ವರದಿಯಾಗಿದೆ. ಹೌದು, ನವಾಡದ ರಾಜೌಲಿ ಪ್ರದೇಶದ ನಿವಾಸಿಯಾಗಿರೋ ಸಂತೋಷ್ ಲೋಹರ್​ಗೆ ವಿಷಕಾರಿ ಹಾವೊಂದು ಕಚ್ಚಿದೆ. ಆದರೆ ಅದಕ್ಕೆ ಆಕ್ರೋಶಗೊಂಡ ವ್ಯಕ್ತಿ ಮಾಡಿದ್ದೇ ಅಚ್ಚರಿಯ ಸಂಗತಿ.

ಇದನ್ನೂ ಓದಿ: ಮಣ್ಣಿನಡಿ ಬಚ್ಚಿಟ್ಟ ಸೂಟ್​​ಕೇಸ್​ ಹೊರ ತೆಗೆದ ರಶ್ಮಿಕಾ ಮಂದಣ್ಣ! ಕಂತೆ ಕಂತೆ ನೋಟು! ಇದು ಎಲ್ಲಿಂದ ಬಂತು?

ರಾಜೌಲಿಯಲ್ಲಿ ರೈಲ್ವೆ ಮಾರ್ಗ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಸಂತೋಷ್ ಲೋಹರ್​ ಎಂಬಾತನಿಗೆ ಬೇಸ್ ಕ್ಯಾಂಪ್‌ನಲ್ಲಿ ಮಲಗಿದ್ದಾಗ ವಿಷಕಾರಿ ಹಾವು ಕಚ್ಚಿದೆ. ಇದನ್ನು ಕಂಡು ಗಾಬರಿಯಾಗದೆ, ಸಿಟ್ಟಿಗೆದ್ದ ಸಂತೋಷ್ ಕಬ್ಬಿಣದ ಸಲಾಕೆಯಿಂದ ಹಾವನ್ನು ಹಿಡಿದು ಒಂದಲ್ಲ ಎರಡಲ್ಲಾ ಬರೋಬ್ಬರಿ ಮೂರು ಬಾರಿ ಆ ವಿಷಪೂರಿತ ಹಾವನ್ನು ಕಚ್ಚಿದ್ದಾನೆ ಬಳಿಕ ಅದನ್ನು ಕೊಂದು ಹಾಕಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂತೋಷ್ ಲೋಹರ್​, ನಮ್ಮ ಹಳ್ಳಿಯಲ್ಲಿ ಹಾವು ಕಚ್ಚಿದರೆ, ವಿಷವನ್ನು ತಟಸ್ಥಗೊಳಿಸಲು ನೀವು ಅದಕ್ಕೆ ಎರಡು ಬಾರಿ ಕಚ್ಚಬೇಕು ಎಂಬ ನಂಬಿಕೆ ಇದೆ. ಹೀಗಾಗಿ ನಾನು ಅದಕ್ಕೆ ಕಚ್ಚಿದೆ ಎಂದು ಹೇಳಿದ್ದಾರೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ರೈಲ್ವೇ ಅಧಿಕಾರಿಗಳು ಭೇಟಿ ಕೊಟ್ಟು ಸಂತೋಷ್ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸಂತೋಷ್‌ನನ್ನು ನೋಡಲು ಹಾಗೂ ಆತನ ಕಥೆಯನ್ನು ಕೇಳಲು ಜನಸಮೂಹ ಆಸ್ಪತ್ರೆಯಲ್ಲಿ ಜಮಾಯಿಸಿತು. ಹಾವು ವಿಷಕಾರಿಯಾಗಿರಲಿಲ್ಲ, ಇಲ್ಲವಾದಲ್ಲಿ ಸಂತೋಷ್‌ನ ಜೀವಕ್ಕೆ ಆಪತ್ತು ಇತ್ತು ಅಂತ ಸ್ಥಳೀಯರು ಊಹಿಸಿದ್ದಾರೆ. ಜಾರ್ಖಂಡ್ ಮೂಲದ ಸಂತೋಷ್ ಅವರು ಈಗ ಚೇತರಿಸಿಕೊಳ್ಳುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ಸತೀಶ್ ಚಂದ್ರ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಷಕಾರಿ ಹಾವು ಕಚ್ಚಿದ್ದಕ್ಕೆ ಸಿಟ್ಟಿಗೆದ್ದ ಯುವಕ ಹಾವನ್ನೇ ಕಚ್ಚಿದ.. ಆಮೇಲೆ ಏನಾಯ್ತು ಗೊತ್ತಾ?

https://newsfirstlive.com/wp-content/uploads/2024/07/snake.jpg

Load More