newsfirstkannada.com

ಫ್ಯಾನ್ಸ್​ಗೆ ಬಿಗ್ ಶಾಕ್ ಕೊಟ್ಟ ಜಾನ್ ಸೆನಾ.. WWEಗೆ ನಿವೃತ್ತಿ ಘೋಷಿಸಿ ಲೆಜೆಂಡರಿ ಐಕಾನ್ ಭಾವುಕ

Share :

Published July 7, 2024 at 1:21pm

Update July 8, 2024 at 8:18am

    16 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಜಾನ್ ಸೆನಾ

    ಜಾನ್ ಸೆನಾ ಟೀ- ಶರ್ಟ್​, ಟವೆಲ್​ ಮೇಲೆ ಏನೆಂದು ಬರೆದಿತ್ತು?

    ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದ ಸೆನಾ

ಡಬ್ಲ್ಯುಡಬ್ಲ್ಯುಇ (WWE) ಐಕಾನ್, 16 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಲೆಜೆಂಡರಿ ಜಾನ್ ಸೆನಾ ಅವರು ಫ್ಯಾನ್ಸ್​ಗೆ ಬಿಗ್ ಶಾಕ್​ ನೀಡಿದ್ದಾರೆ. ಡಬ್ಲ್ಯುಡಬ್ಲ್ಯುಇಗೆ 2025ರಿಂದ ಜಾನ್ ಸೆನಾ ನಿವೃತ್ತಿ ಘೋಷಣೆ ಮಾಡಿದ್ದು, ಈ ದಿಢೀರ್​ ನಿರ್ಧಾರಕ್ಕೆ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಧೋನಿಯ 100 ಅಡಿ ಕಟೌಟ್​.. ಪವರ್ ಸ್ಟಾರ್ ಜೊತೆ ಇರೋ ಪೋಸ್ಟರ್ ಅಂಟಿಸಿ ಸಂಭ್ರಮ

ಕೆನಾಡದ ಟೊರೊಂಟೊದಲ್ಲಿ ಜಾನ್ ಸೆನಾ ಸ್ಪರ್ಧೆ ಮಾಡಲೆಂದು ಡಬ್ಲ್ಯುಡಬ್ಲ್ಯುಇ ರಿಂಗ್​ಗೆ ರೆಡ್ ಕಲರ್ ಟೀ ಶರ್ಟ್​​ ಧರಿಸಿ,​ ಟವೆಲ್​​ವೊಂದನ್ನ ಹಿಡಿದುಕೊಂಡು ಬಂದಿದ್ದರು. ಈ ಟೀಶರ್ಟ್ ಮೇಲೆ John Cena Farewell Tour (ಈ ಪ್ರವಾಸಕ್ಕೆ ವಿದಾಯ) ಎಂದು ಬರೆದಿತ್ತು. ಅಲ್ಲದೇ ತಾವು ಹಿಡಿದುಕೊಂಡು ಬಂದಿದ್ದ ರೆಡ್​ ಟವೆಲ್ ಮೇಲೆ The Last Time Is Now (ಈಗ ಇದು ಕೊನೆ ಸಮಯ) ಎಂದು ಬರೆದಿದ್ದನ್ನ ಅಭಿಮಾನಿಗಳಿಗೆ ತೋರಿಸಿ ತಮ್ಮ ನಿವೃತ್ತಿ ಘೋಷಣೆ ಮಾಡಿದರು. ಈ ವೇಳೆ ಫ್ಯಾನ್ಸ್​ ‘ಇಲ್ಲ.. ಬೇಡ, ಬೇಡ ನಿವೃತ್ತಿ ಬೇಡ’ ಎಂದು ಕೂಗಿದರು.

ಇದನ್ನೂ ಓದಿ: ಇಬ್ಬರು ಯೋಧರು ಹುತಾತ್ಮ.. ಗಡಿಯಲ್ಲಿ ಮತ್ತೆ ಬಾಲ ಬಿಚ್ಚಿದ್ದ ನಾಲ್ವರು ಉಗ್ರರು ಫಿನಿಶ್

ಜಾನ್ ಸೆನಾ ಡಬ್ಲ್ಯುಡಬ್ಲ್ಯುಇನಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದಾರೆ. 47 ವರ್ಷದ ಇವರು ಪ್ರಪಂಚದ್ಯಾಂತ ಡಬ್ಲ್ಯುಡಬ್ಲ್ಯುಇ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇವರು ಭಾವನಾತ್ಮಕವಾಗಿಯು ಫ್ಯಾನ್ಸ್​ ಮನದಲ್ಲಿ ನೆಲೆಯೂರಿದ್ದಾರೆ. ಜಾನ್​ ಸಿನಾ ಅಂದರೆ ಮಕ್ಕಳಿಗೆ ತುಂಬಾ ಅಚ್ಚುಮೆಚ್ಚು. ಜಾನ್​ ಸೆನಾ ಯಾವಾಗಲೂ ಒಂದು ಟೀ ಶರ್ಟ್​, ಹಾಫ್ ಜೀನ್ಸ್​, ತಲೆಗೆ ಹ್ಯಾಟ್​ ಹಾಗೂ ಮೊಣಕೈಗೆ ಒಂದು ಬ್ಯಾಂಡ್​ ಹಾಕೊಂಡು ರಿಂಗ್​ಗೆ ಎಂಟ್ರಿ ಕೊಡುತ್ತಿದ್ದರು. ಇವರ ಎಂಟ್ರಿಗೆ ಎಷ್ಟೋ ಜನರು ಫಿದಾ ಆಗುತ್ತಿದ್ದರು. ಇವರು ರಿಂಗ್​ನಲ್ಲಿ ಆಡುವಾಗ ಮೋಸದಾಟ ತುಂಬಾ ಕಡಿಮೆ ಅಂದರೆ ಕಡಿಮೆ ಇರುತ್ತದೆ. ಹೀಗಾಗಿಯೇ ಇವರಿಗೆ ಅಭಿಮಾನಿಗಳ ಬಳಗ ಹೆಚ್ಚು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಬೈಕ್​ ಡಿಕ್ಕಿ​.. ಸ್ಥಳೀಯ ಪತ್ರಿಕೆ ವರದಿಗಾರ ಸಾವು

ಸದ್ಯ ನಾನು ಡಬ್ಲ್ಯುಡಬ್ಲ್ಯುಇಗೆ ರಿಟೈರ್​​ಮೆಂಟ್ ಘೋಷಣೆ ಮಾಡುತ್ತಿದ್ದೇನೆ. ಇದು ಶೀಘ್ರದಿಂದಲೇ ಜಾರಿಗೆ ಬರಲ್ಲ. 2025ರಿಂದ ಈ ನಿವೃತ್ತಿ ಅಪ್ಲೇ ಆಗುತ್ತದೆ ಎಂದು ಹೇಳುತ್ತಾ ಭಾವುಕರಾಗಿದ್ದಾರೆ. 2002ರಲ್ಲಿ WWEಗೆ ಪಾದರ್ಪಣೆ ಮಾಡಿದ ಜಾನ್ ಸೆನಾ, ಕುಸ್ತಿ ಮನರಂಜನಾ ಉದ್ಯಮದಲ್ಲಿ ಸುಪ್ರಸಿದ್ಧಿ ಪಡೆದರು. ಈ ಆಟವನ್ನು ಅವರು ಮನಸಾರೆ ಆನಂದಿಸಿದರು. ಎಲ್ಲ ಏಳು, ಬೀಳುಗಳನ್ನ ಸಮನವಾಗಿ ಕಂಡು ಅದರಲ್ಲಿ ತಮ್ಮ ವೃತ್ತಿಯನ್ನು ಉತ್ತಮ ಪಡಿಸಿಕೊಂಡರು. ದಿ ರಾಕ್, ಟ್ರಿಪಲ್ ಹೆಚ್, ಸಿ.ಎಂ ಪಂಕ್ ಸೇರಿದಂತೆ ದೊಡ್ಡ ದೊಡ್ಡ ಸ್ಪರ್ಧಿಗಗಳೊಂದಿಗೆ ಸ್ಪರ್ಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ಯಾನ್ಸ್​ಗೆ ಬಿಗ್ ಶಾಕ್ ಕೊಟ್ಟ ಜಾನ್ ಸೆನಾ.. WWEಗೆ ನಿವೃತ್ತಿ ಘೋಷಿಸಿ ಲೆಜೆಂಡರಿ ಐಕಾನ್ ಭಾವುಕ

https://newsfirstlive.com/wp-content/uploads/2024/07/John_Cena_NEW.jpg

Load More