newsfirstkannada.com

47 ಬಾಲ್​​ನಲ್ಲಿ 100 ರನ್; ಶತಕದ ಹಿಂದಿನ ಅಸಲಿ ಕತೆ ಬಿಚ್ಚಿಟ್ಟ ಅಭಿಶೇಕ್ ಶರ್ಮಾ..!

Share :

Published July 8, 2024 at 7:00am

    ಅಭಿಶೇಕ್ ಶರ್ಮಾ ನಿನ್ನೆ ಯಾರ ಬ್ಯಾಟ್​​ನಲ್ಲಿ ಆಡಿದ್ದರು ಗೊತ್ತಾ..?

    ಜಿಂಬಾಬ್ವೆ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿರುವ ಅಭಿಶೇಕ್ ಶರ್ಮಾ

    100 ರನ್​​ಗಳ ಅಂತರದಿಂದ ಗೆಲುವು ಸಾಧಿಸಿರುವ ಭಾರತ ತಂಡ

ಹರಾರೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾದ ಯುವ ಕ್ರಿಕೆಟರ್​​ ಅಭಿಶೇಕ್​ ಶರ್ಮಾ ಭರ್ಜರಿ ಶತಕ ಬಾರಿಸಿ ಮಿಂಚಿದ್ದಾರೆ. ಟೀಮ್​ ಇಂಡಿಯಾಗೆ ಡೆಬ್ಯೂಟ್​ ಮಾಡಿದ 2ನೇ ಪಂದ್ಯದಲ್ಲೇ ಸಿಡಿಲಬ್ಬರದ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

ಇನ್ನಿಂಗ್ಸ್​ ಉದ್ಧಕ್ಕೂ ಜಿಂಬಾಬ್ವೆ ಕ್ರಿಕೆಟ್ ತಂಡದ ಬೌಲರ್​ಗಳ ಬೆಂಡೆತ್ತಿದ ಅಭಿಷೇಕ್​ ಶರ್ಮಾ ಸ್ಫೋಟಕ ಬ್ಯಾಟಿಂಗ್​ ಮಾಡಿದ್ದರು. ತಾವು ಎದುರಿಸಿದ ಕೇವಲ 47 ಬಾಲ್​ನಲ್ಲಿ ಬರೋಬ್ಬರಿ 8 ಸಿಕ್ಸರ್​​, 7 ಫೋರ್​ ಜತೆಗೆ 100 ರನ್​ ಚಚ್ಚಿದ್ದಾರೆ. ಈ ಮೂಲಕ ಟೀಂ ಇಂಡಿಯಾಗೆ ಮತ್ತೊಬ್ಬ ಸ್ಫೋಟಕ ಬ್ಯಾಟ್ಸಮನ್ ಸಿಕ್ಕಂತಾಗಿದೆ.

ಇದನ್ನೂ ಓದಿ:ರಾಜ್ಯದ ಈ ಜಿಲ್ಲೆಯಲ್ಲಿ ಇಲಿ ಜ್ವರ, ಭಾರೀ ಆತಂಕ.. ಆರೋಗ್ಯ ಅಧಿಕಾರಿಗಳು ಗ್ರಾಮಕ್ಕೆ ದೌಡು

ಪಂದ್ಯ ಮುಗಿದ ಬಳಿಕ ತಮ್ಮ ಶತಕಕ್ಕೆ ಕಾರಣವಾಗಿದ್ದು ಗಿಲ್ ಅವರ ಬ್ಯಾಟ್ ಎಂದಿದ್ದಾರೆ. ನಾನು ಇವತ್ತು ಗಿಲ್ ಅವರ ಬ್ಯಾಟ್​ ಪಡೆದುಕೊಂಡು ಆಡಿದೆ. ಅದನ್ನು ಮೊದಲೂ ಮಾಡಿದ್ದೆ. ನನಗೆ ಯಾವಾಗ ರನ್ ಅಗತ್ಯ ಇದೆಯೋ ಆಗೆಲ್ಲ ನಾನು ಅವರಿಂದ ಬ್ಯಾಟ್ ಕೇಳುತ್ತೇನೆ ಎಂದು ಅಭಿಶೇಕ್ ಶರ್ಮಾ ಹೇಳಿದ್ದಾರೆ.

ಅಭಿಶೇಕ್​ ಶರ್ಮಾ ಮೂಲತಃ ಪಂಜಾಬ್​​. ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡವನ್ನು ಪ್ರತಿನಿಧಿಸುತ್ತಾರೆ. ಸನ್​ರೈಸರ್ಸ್​ ಹೈದರಾಬಾದ್​ ತಂಡದ ಪರ ಓಪನರ್​ ಆಗಿ ಬರುತ್ತಿದ್ದ ಅಭಿಶೇಕ್​​ ಅಬ್ಬರದ ಬ್ಯಾಟಿಂಗ್​ ಮಾಡುತ್ತಿದ್ದರು. ಇವರನ್ನು ಜಿಂಬಾಬ್ವೆ ವಿರುದ್ಧದ 5 ಟಿ20 ಪಂದ್ಯಗಳ ಟೂರ್ನಿಗೆ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ:KRS ಡ್ಯಾಮ್​​ಗೆ ಬಂತು ಭರ್ಜರಿ ಒಳಹರಿವು.. ಡ್ಯಾಂ ನೀರಿನ ಮಟ್ಟ 102 ಅಡಿಗೆ ಏರಿಕೆ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

47 ಬಾಲ್​​ನಲ್ಲಿ 100 ರನ್; ಶತಕದ ಹಿಂದಿನ ಅಸಲಿ ಕತೆ ಬಿಚ್ಚಿಟ್ಟ ಅಭಿಶೇಕ್ ಶರ್ಮಾ..!

https://newsfirstlive.com/wp-content/uploads/2024/07/ABHISHEK-SHARMA-1.jpg

Load More