newsfirstkannada.com

ರಾಜ್ಯದ ಈ ಜಿಲ್ಲೆಯಲ್ಲಿ ಇಲಿ ಜ್ವರ, ಭಾರೀ ಆತಂಕ.. ಆರೋಗ್ಯ ಅಧಿಕಾರಿಗಳು ಗ್ರಾಮಕ್ಕೆ ದೌಡು

Share :

Published July 7, 2024 at 2:24pm

Update July 7, 2024 at 2:26pm

  ಇಲಿ ಜ್ವರದಿಂದ ಬಳಲುತ್ತಿದ್ದಾನೆ 12 ವರ್ಷದ ಬಾಲಕ

  ಕಳೆದ ಒಂದು ವಾರದಿಂದ ಬಾಲಕನಿಗೆ ಚಿಕಿತ್ಸೆ

  ಬಾಲಕನ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ನೀಡಲಾಗ್ತಿದೆ

ಹಾವೇರಿ: ರಾಜ್ಯದ ಜಿಲ್ಲೆ ಜಿಲ್ಲೆಗಳಿಗೂ ಡೆಂಘೀ ಹಬ್ಬುತ್ತಿದ್ದು, ಭಾರೀ ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ ಹಾವೇರಿಯಲ್ಲಿ ಇಲಿ ಜ್ವರ ಪತ್ತೆಯಾಗಿದೆ.

ಹಾವೇರಿ ತಾಲೂಕಿನ ಗ್ರಾಮವೊಂದರ 12 ವರ್ಷದ ಬಾಲಕನಿಗೆ ಇಲಿ ಜ್ವರ ಬಂದಿದೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಗ್ರಾಮಕ್ಕೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಜೊತೆಗೆ ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ಹಾವೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಬಾಲಕ ಜ್ವರದಿಂದ ಬಳಲುತ್ತಿದ್ದ. ದಿನ ಬಿಟ್ಟು ದಿನ ಜ್ವರ ಕಾಣಿಸಿಕೊಳ್ಳುತ್ತು ಎನ್ನಲಾಗಿದೆ.

ಕೆಲವು ವಾರಗಳ ಹಿಂದೆ ಬಾಲಕ ಜಾಂಡಿಸ್​ನಿಂದ ಬಳಲುತ್ತಿದ್ದ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿ ವಾಪಸ್ ಆಗಿದ್ದ. ಇದೀಗ ಇಲಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಾಲಕನ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಇಲಿ ಜ್ವರದ ಲಕ್ಷಣಗಳು..!

 • ಬಿಟ್ಟು ಬಿಟ್ಟು ಜ್ವರ ಬರುವುದು
 • ಕಣ್ಣಿನಲ್ಲಿ ಉರಿಯೂತ
 • ಚರ್ಮದ ಸೋಂಕು
 • ಶೀತ, ಜ್ವರ
 • ವಾಂತಿ, ತಲೆನೋವು
 • ಸ್ನಾಯು ಸೆಳೆತ
 • ಕೀಲುಗಳು ನೋವಿನಿಂದ ಊದುಕೊಳ್ಳುವುದು
 • ಕೈಕಾಲುಗಳ ಮೇಲೆ ಹುಣ್ಣು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದ ಈ ಜಿಲ್ಲೆಯಲ್ಲಿ ಇಲಿ ಜ್ವರ, ಭಾರೀ ಆತಂಕ.. ಆರೋಗ್ಯ ಅಧಿಕಾರಿಗಳು ಗ್ರಾಮಕ್ಕೆ ದೌಡು

https://newsfirstlive.com/wp-content/uploads/2024/07/Rat-fever-1.jpg

Load More