newsfirstkannada.com

×

‘ಡಿವೋರ್ಸ್​ ನಂತರವೂ ಮಹಿಳೆ ಗಂಡನಿಂದ ಜೀವನಾಂಶಕ್ಕೆ ಅರ್ಹಳು’- ಸುಪ್ರೀಂ ಕೋರ್ಟ್​​

Share :

Published July 10, 2024 at 7:54pm

Update July 10, 2024 at 7:55pm

    ಡಿವೋರ್ಸ್​​ ನಂತರ ಮಹಿಳೆಯರು ಗಂಡನಿಂದ ಜೀವನಾಂಶ ಕೇಳಲು ಅರ್ಹರು

    ಕ್ರಿಮಿನಲ್ ಪ್ರೊಸೀಜರ್ ಕೋಡ್‌ ಸೆಕ್ಷನ್​ 125ರ ಅಡಿ ಅರ್ಹರು ಎಂದ ಕೋರ್ಟ್​​

    ಯಾವ ಧರ್ಮಕ್ಕೆ ಸೇರಿದವರಾದ್ರೂ ಜೀವನಾಂಶ ಕೇಳಬಹುದು ಎಂದ ಸುಪ್ರೀಂ!

ನವದೆಹಲಿ: ಡಿವೋರ್ಸ್​​ ನಂತರ ಮುಸ್ಲಿಮ್​ ಮಹಿಳೆಯರು ಗಂಡನಿಂದ ಜೀವನಾಂಶ ಕೇಳಲು ಅರ್ಹರು ಎಂದು ಸುಪ್ರೀಂ ಕೋರ್ಟ್​​ ಮಹತ್ವದ ತೀರ್ಪು ನೀಡಿದೆ. ಕ್ರಿಮಿನಲ್ ಪ್ರೊಸೀಜರ್ ಕೋಡ್‌ ಸೆಕ್ಷನ್​ 125ರ ಅಡಿ ಮುಸ್ಲಿ ಮಹಿಳೆ ತನ್ನ ಗಂಡನಿಂದ ಜೀವನಾಂಶ ಕೇಳಬಹುದು ಎಂದು ಕೋರ್ಟ್​​ ಹೇಳಿದೆ.

ಏನಿದು ಕೇಸ್​​..?

ಈ ಹಿಂದೆಯೇ ತೆಲಂಗಾಣದ ಕೌಟುಂಬಿಕ ನ್ಯಾಯಾಲಯ ಪತ್ನಿಗೆ 20 ಸಾವಿರ ರೂ. ಜೀವನಾಂಶ ನೀಡಬೇಕು ಎಂದು ಮೊಹಮ್ಮದ್ ಅಬ್ದುಲ್ ಸಮದ್ ಎಂಬುವರಿಗೆ ಆದೇಶಿಸಿತ್ತು. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೊಹಮ್ಮದ್ ಅಬ್ದುಲ್ ಸಮದ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಜಾಗೊಳಿಸಿದ ನ್ಯಾ. ಬಿವಿ ನಾಗರತ್ನ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ನೇತೃತ್ವದ ನ್ಯಾಯಪೀಠ ಮಹತ್ವದ ತೀರ್ಪು ಕೊಟ್ಟಿದೆ.

ಎಲ್ಲ ಧರ್ಮೀಯರಿಗೂ ಅನ್ವಯ ಎಂದ ಕೋರ್ಟ್​​!

ಎಲ್ಲ ಮಹಿಳೆಯರಿಗೂ ಸಿಆರ್‌ಪಿಸಿ ಸೆಕ್ಷನ್ 125 ಅನ್ವಯವಾಗುತ್ತದೆ. ಯಾವ ಧರ್ಮಕ್ಕೆ ಸೇರಿದವರಾದ್ರೂ ಜೀವನಾಂಶ ಕೇಳಬಹುದು. ಜೀವನ ನಿರ್ವಹಣೆ ವೆಚ್ಚ ನೀಡುವುದು ದಾನವಲ್ಲ, ಅದು ಮಹಿಳೆಯರ ಹಕ್ಕು. ಗೃಹಿಣಿಯರು ಗಂಡನ ಮೇಲೆ ಆರ್ಥಿಕವಾಗಿ ಅವಲಂಬಿಸಿರುತ್ತಾರೆ. ಇದನ್ನು ಪುರುಷರು ಗುರುತಿಸಬೇಕು. ನಗದು ರೀತಿಯಲ್ಲಾದ್ರೂ ನೀಡಬಹುದು. ಇಲ್ಲದೆ ಹೋದಲ್ಲಿ ಗಂಡ ಮತ್ತು ಹೆಂಡತಿ ಜಂಟಿ ಬ್ಯಾಂಕ್​ ಖಾತೆ ಮಾಡಿಸಬಹುದು. ಒಂದು ಎಟಿಎಂ ಮಹಿಳೆ ಕೈಯಲ್ಲೇ ಇದ್ದರೆ ಒಳ್ಳೆಯದು ಎಂದು ಕೋರ್ಟ್​ ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಡಿವೋರ್ಸ್​ ನಂತರವೂ ಮಹಿಳೆ ಗಂಡನಿಂದ ಜೀವನಾಂಶಕ್ಕೆ ಅರ್ಹಳು’- ಸುಪ್ರೀಂ ಕೋರ್ಟ್​​

https://newsfirstlive.com/wp-content/uploads/2023/11/Supreme-Court.jpg

Load More