newsfirstkannada.com

×

‘ಮನೆ ನೋಡಿಕೊಳ್ಳೋ ಹೆಂಡತಿಗೆ ಅಕೌಂಟ್​ ಮಾಡಿಸಿ ATM ಕೊಡಬೇಕು’- ಗಂಡಂದಿರಿಗೆ ಸುಪ್ರೀಂಕೋರ್ಟ್​ ಶಾಕ್​​!

Share :

Published July 10, 2024 at 9:42pm

Update July 10, 2024 at 9:44pm

    ಜೀವನಾಂಶ ಅನ್ನೋದು ದಾನವಲ್ಲ ಅದು ವಿವಾಹಿತ ಮಹಿಳೆಯ ಹಕ್ಕು

    ಜಂಟಿ ಬ್ಯಾಂಕ್ ಖಾತೆ ಮಾಡಿಸಿ ಆಕೆಗೂ ATM ಕಾರ್ಡ್‌ ನೀಡಬೇಕು

    ಒಂದು ಎಟಿಎಂ ಗೃಹಿಣಿ ಕೈಯಲ್ಲೇ ಇದ್ದರೆ ಒಳ್ಳೆಯದು ಎಂದ ಕೋರ್ಟ್

ನವದೆಹಲಿ: ಭಾರತದ ಮಹಿಳಾ ಮಣಿಗಳು ಹಾಗೂ ಗೃಹಿಣಿಯರಿಗೆ ಗುಡ್‌ನ್ಯೂಸ್‌. ಇಷ್ಟು ದಿನ ನೀವು ಗಂಡನ ಬಳಿ ತಮ್ಮ ಸ್ವಂತ ಖರ್ಚಿಗೆ ದುಡ್ಡು ಕೇಳಬೇಕಿತ್ತು. ಅಥವಾ ಮನೆ ಖರ್ಚಿನಲ್ಲಿ ಸ್ವಲ್ಪ ದುಡ್ಡು ಉಳಿಸಿ ಖರ್ಚು ಮಾಡಬೇಕಾದ ಅನಿವಾರ್ಯತೆ ನಿಮಗಿತ್ತು. ಆದ್ರೆ ಈಗ ಕಾಲ ಬದಲಾಗುತ್ತಿದೆ. ಕಾಡಿ ಬೇಡಿದ್ರೂ ಒಂದಿಷ್ಟು ಹಣ ಸಿಗುತ್ತಿದ್ದ ನಿಮ್ಮ ಕೈಗೆ ATM ಸಿಗೋ ಕಾಲ ಬರಬಹುದು.

ಇದನ್ನೂ ಓದಿ: ನಾನು ಅವಳಲ್ಲ, ಅವನು.. ಮಹಿಳಾ IRS ಅಧಿಕಾರಿ ಗಂಡಾಗಿ ಬದಲಾದ್ರಾ? ಏನಿದು ಅಚ್ಚರಿ! 

ಹೌದು.. ಸುಪ್ರೀಂಕೋರ್ಟ್ ಇವತ್ತು ಮಹತ್ವದ ಒಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಅದರಲ್ಲಿ ಜೀವನಾಂಶ ಅನ್ನೋದು ದಾನವಲ್ಲ. ಅದು ವಿವಾಹಿತ ಮಹಿಳೆಯ ಹಕ್ಕು. ಪತಿಯು ಪತ್ನಿಗೆ ಯಾವೆಲ್ಲ ಸೌಕರ್ಯ ನೀಡಬೇಕು ಅನ್ನೋದನ್ನ ನ್ಯಾಯಪೀಠ ಸವಿವರವಾಗಿ ಹೇಳಿದೆ.

ಮನೆ ನೋಡಿಕೊಳ್ಳೋ ಯಜಮಾನಿ, ಹೆಂಡತಿ ಅಂದ್ರೆ ಸುಮ್ಮನೆ ಅಲ್ಲ. ಆಕೆಗೂ ಜವಾಬ್ದಾರಿಗಳಿದೆ. ಆಕೆಗೂ ಸ್ವಂತ ಖರ್ಚಿಗೆ ಹಣದ ಅವಶ್ಯಕತೆಗಳಿದೆ. ಜೀವನಾಂಶ ಅನ್ನೋದು ವಿವಾಹಿತ ಮಹಿಳೆಯ ಹಕ್ಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ.

ಸುಪ್ರೀಂಕೋರ್ಟ್ ನ್ಯಾಯಪೀಠದ ಉಲ್ಲೇಖದಂತೆ ಮನೆಯಲ್ಲಿರುವ ಗೃಹಿಣಿಯರಿಗೆ ದುಡಿಯುವ ಗಂಡಂದಿರು ಜಂಟಿ ಬ್ಯಾಂಕ್ ಖಾತೆ ಮಾಡಿಸಬೇಕು. ಆಕೆಗೂ ATM ಕಾರ್ಡ್‌ ನೀಡಬೇಕು. ಗೃಹಿಣಿಯರಿಗೆ ಹಣಕಾಸಿನ ಸ್ವಾತಂತ್ರ್ಯ ನೀಡುವುದರಿಂದ ಅವರಿಗೆ ಮನೆಯಲ್ಲಿ ಹೆಚ್ಚು ಸುರಕ್ಷತೆಯ ಭಾವನೆ ಮೂಡುತ್ತದೆ. ಹೀಗಾಗಿ ಮನೆಯ ಖರ್ಚಿನ ಜೊತೆಗೆ ಆಕೆಯ ವೈಯಕ್ತಿಕ ಖರ್ಚುಗಳಿಗೂ ಗಂಡ ಹಣ ಕೊಡಬೇಕು. ಆಗ ಮಾತ್ರ ಮಹಿಳೆಯು ನೆಮ್ಮದಿಯಿಂದ ಇರಲು ಸಾಧ್ಯ ಎಂಬುದಾಗಿ ಕೋರ್ಟ್ ತಿಳಿಸಿದೆ.

ಇದನ್ನೂ ಓದಿ: ‘ಡಿವೋರ್ಸ್​ ನಂತರವೂ ಮಹಿಳೆ ಗಂಡನಿಂದ ಜೀವನಾಂಶಕ್ಕೆ ಅರ್ಹಳು’- ಸುಪ್ರೀಂ ಕೋರ್ಟ್​​ 

ಏನಿದು ಕೇಸ್​​..? 
ಈ ಹಿಂದೆಯೇ ತೆಲಂಗಾಣದ ಕೌಟುಂಬಿಕ ನ್ಯಾಯಾಲಯ ಪತ್ನಿಗೆ 20 ಸಾವಿರ ರೂ. ಜೀವನಾಂಶ ನೀಡಬೇಕು ಎಂದು ಮೊಹಮ್ಮದ್ ಅಬ್ದುಲ್ ಸಮದ್ ಎಂಬುವರಿಗೆ ಆದೇಶಿಸಿತ್ತು. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೊಹಮ್ಮದ್ ಅಬ್ದುಲ್ ಸಮದ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಜಾಗೊಳಿಸಿದ ನ್ಯಾ. ಬಿವಿ ನಾಗರತ್ನ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ನೇತೃತ್ವದ ನ್ಯಾಯಪೀಠ ಮಹತ್ವದ ತೀರ್ಪು ಕೊಟ್ಟಿದೆ.

ಎಲ್ಲಾ ಧರ್ಮೀಯರಿಗೂ ಅನ್ವಯ ಎಂದ ಕೋರ್ಟ್​​!

ಎಲ್ಲ ಮಹಿಳೆಯರಿಗೂ ಸಿಆರ್‌ಪಿಸಿ ಸೆಕ್ಷನ್ 125 ಅನ್ವಯವಾಗುತ್ತದೆ. ಯಾವ ಧರ್ಮಕ್ಕೆ ಸೇರಿದವರಾದ್ರೂ ಜೀವನಾಂಶ ಕೇಳಬಹುದು. ಜೀವನ ನಿರ್ವಹಣೆ ವೆಚ್ಚ ನೀಡುವುದು ದಾನವಲ್ಲ, ಅದು ಮಹಿಳೆಯರ ಹಕ್ಕು. ಗೃಹಿಣಿಯರು ಗಂಡನ ಮೇಲೆ ಆರ್ಥಿಕವಾಗಿ ಅವಲಂಬಿಸಿರುತ್ತಾರೆ. ಇದನ್ನು ಪುರುಷರು ಗುರುತಿಸಬೇಕು. ನಗದು ರೀತಿಯಲ್ಲಾದ್ರೂ ನೀಡಬಹುದು. ಇಲ್ಲದೆ ಹೋದಲ್ಲಿ ಗಂಡ ಮತ್ತು ಹೆಂಡತಿ ಜಂಟಿ ಬ್ಯಾಂಕ್​ ಖಾತೆ ಮಾಡಿಸಬಹುದು. ಒಂದು ಎಟಿಎಂ ಮಹಿಳೆ ಕೈಯಲ್ಲೇ ಇದ್ದರೆ ಒಳ್ಳೆಯದು ಎಂದು ಕೋರ್ಟ್​ ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಮನೆ ನೋಡಿಕೊಳ್ಳೋ ಹೆಂಡತಿಗೆ ಅಕೌಂಟ್​ ಮಾಡಿಸಿ ATM ಕೊಡಬೇಕು’- ಗಂಡಂದಿರಿಗೆ ಸುಪ್ರೀಂಕೋರ್ಟ್​ ಶಾಕ್​​!

https://newsfirstlive.com/wp-content/uploads/2024/07/Supreme-court-on-House-Wife.jpg

Load More