newsfirstkannada.com

×

ಅಂಬಾನಿ ಮದ್ವೆಯ ಎಫೆಕ್ಟ್‌.. ಒಂದು ರಾತ್ರಿಗೆ ಮುಂಬೈ ಹೋಟೆಲ್ ರೂಂ ರೇಟ್ ಎಷ್ಟು ಗೊತ್ತಾ? ಶಾಕ್ ಆಗ್ತೀರಾ!

Share :

Published July 11, 2024 at 9:30pm

    ಒಂದೇ ಒಂದು ರಾತ್ರಿಗೆ ಹೋಟೆಲ್ ರೂಮ್ ಎಷ್ಟಿತ್ತು? ಎಷ್ಟಾಗಿದೆ ಗೊತ್ತಾ?

    ಗುರು ಹಿರಿಯರ ಸಮ್ಮುಖದಲ್ಲಿ ಅನಂತ್​, ರಾಧಿಕಾ ಅದ್ಧೂರಿಯಾಗಿ ಮದುವೆ

    3 ದಿನ ಮುಂಬೈನ 27 ಅಂತಸ್ತಿನಲ್ಲಿ ಅನಂತ್​, ರಾಧಿಕಾ ಗ್ರ್ಯಾಂಡ್ ಮ್ಯಾರೇಜ್

ಭಾರತದ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಕಿರಿಯ ಪುತ್ರ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಜುಲೈ 12 ಅಂದ್ರೆ ನಾಳೆ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅಂಬಾನಿ ಮಗ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಗುರು ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗುತ್ತಿದ್ದಾರೆ.

ಈಗಾಗಲೇ ಸಂಗೀತ, ವಿವಾಹಪೂರ್ವ ಶಾಸ್ತ್ರಗಳು ಅದ್ಧೂರಿಯಾಗಿ ನಡೆದಿದೆ. ಹಳದಿ ಕಾರ್ಯಕ್ರಮದ ನಂತರ ಮೆಹಂದಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೆಹಂದಿ ಕಾರ್ಯಕ್ರಮಕ್ಕೂ ಕೂಡ ಬಾಲಿವುಡ್ ಸ್ಟಾರ್​ಗಳು ಆಗಮಿಸಿದ್ದರು. ಟ್ರೆಡಿಷನಲ್ ಡ್ರೆಸ್​ನಲ್ಲಿ ನಟ ಹಾಗೂ ನಟಿಯರು ಮಿಂಚಿದ್ದರು. ಜುಲೈ 12ರಿಂದ 14ರವರೆಗೆ ಮುಖೇಶ್​ ಅಂಬಾನಿ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರ ಮದುವೆ ನಡೆಯಲಿದೆ.

ಇದನ್ನೂ ಓದಿ: ಇಂದು ವಿಶ್ವ ಜನಸಂಖ್ಯಾ ದಿನಾಚರಣೆ.. 35ನೇ ವರ್ಷಕ್ಕೆ  10ನೇ ಮಗುವಿಗೆ ಜನ್ಮ ನೀಡಿದ ತಾಯಿ!

3 ದಿನಗಳ ಕಾಲ ಮುಂಬೈಯಲ್ಲಿರುವ 27 ಅಂತಸ್ತಿನ ಭವ್ಯ ಮಹಲಿನಲ್ಲಿ ಅನಂತ್​ ಅಂಬಾನಿ ಹಾಗೂ ರಾಧಿಕಾ ಅವರ ಮದುವೆ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಹೊಂದಿಕೊಂಡಂತೇ ಇರುವ ಜಿಯೋ ವರ್ಲ್ಡ್ ಕನ್ವೆನ್ಸನ್ ಸೆಂಟರ್‌ನಲ್ಲಿ ಮದುವೆಗೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಈ ಕನ್ವೆನ್ಸನ್ ಸೆಂಟರ್‌ನಲ್ಲಿ ಸುಮಾರು 16,000 ಮಂದಿ ಒಂದೇ ಬಾರಿಗೆ ಭಾಗಿಯಾಗುವಷ್ಟು ಸ್ಥಳಾವಕಾಶವಿದೆ. ಅನಂತ್ ಅಂಬಾನಿ ವಿವಾಹದ ಮುಂಚೆಯೇ ಮುಂಬೈನ ಉನ್ನತ ಐಷಾರಾಮಿ ಹೋಟೆಲ್‌ಗಳು ತಮ್ಮ ಬೆಲೆಯಲ್ಲಿ ಏರಿಕೆ ಕಂಡಿದೆ. ಫೋರ್ ಸೀಸನ್ಸ್ ಮುಂಬೈ, ಜುಲೈ 12ರಂದು ಪ್ರತಿ ರಾತ್ರಿಗೆ 5 ಲಕ್ಷ ರೂಪಾಯಿಗೆ 90,000 ತೆರಿಗೆಗಳನ್ನು ಹೊರತುಪಡಿಸಿ ಬೆಲೆಯನ್ನು ನಿಗದಿ ಮಾಡಲಾಗಿದೆ.

ವರದಿಯ ಪ್ರಕಾರ, ಬಾಂದ್ರಾ ಕುರ್ಲಾದಲ್ಲಿರುವ ಟ್ರೈಡೆಂಟ್‌ನಲ್ಲಿ ಜುಲೈ 11-12ರವರೆಗೆ ಯಾವುದೇ ಕೊಠಡಿಗಳು ಲಭ್ಯವಿಲ್ಲ. ಮುಂಬೈ BKC ಜುಲೈ 11ರಂದು ರಾತ್ರಿಗೆ 66,434 ರೂಪಾಯಿ ಮಾಡಿದ್ದಾರೆ. ITC ಟ್ರ್ಯಾಂಡ್ ಸೆಂಟ್ರಲ್ ದರವು ರೂ. 25,370 ಆಗಿದೆ. ಒಬೆರಾಯ್ ಮುಂಬೈ ರೂ 63,130 ದರವನ್ನು ಹೆಚ್ಚಿಸಿದೆ. ತಾಜ್ ದಿ ಟ್ರೇಸ್​ ರೂಂ ಒಂದು ಕೊಠಡಿಗೆ 42,362 ಹೊಂದಿದೆ. ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಹಾಲಿಡೇ ಇನ್‌ಲ್ಲಿ ಕೊಠಡಿಯ ಬೆಲೆ 25,699 ರೂಪಾಯಿ ಆಗಿದೆ.

ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಹಳದಿ ಶಾಸ್ತ್ರ; ಬಾಲಿವುಡ್ ತಾರೆಯರ ರಂಗು ಹೇಗಿದೆ ನೋಡಿ!

ಮೂಲಗಳ ಪ್ರಕಾರ, ಕೆಲವು ಹೋಟೆಲ್‌ಗಳಲ್ಲಿ ದರಗಳು ಗಗನಕ್ಕೇರಿವೆ. ಸಾಮಾನ್ಯವಾಗಿ 13,000 ರೂ.ಗಳನ್ನು ವಿಧಿಸುವ ಹೋಟೆಲ್ ಈಗ ಜುಲೈ 14ರಂದು ಪ್ರತಿ ರಾತ್ರಿಗೆ 91,350 ರೂಪಾಯಿ ನಿಗದಿ ಮಾಡಿದ್ದಾರೆ. ಬೆಲೆ ಏರಿಕೆಯು ಮದುವೆಯ ಉನ್ನತ-ಪ್ರೊಫೈಲ್ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ. ನಾಳೆ ಮುಂಬೈಗೆ ಪ್ರಪಂಚದಾದ್ಯಂತದ ಅತಿಥಿಗಳು ಆಗಮಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂಬಾನಿ ಮದ್ವೆಯ ಎಫೆಕ್ಟ್‌.. ಒಂದು ರಾತ್ರಿಗೆ ಮುಂಬೈ ಹೋಟೆಲ್ ರೂಂ ರೇಟ್ ಎಷ್ಟು ಗೊತ್ತಾ? ಶಾಕ್ ಆಗ್ತೀರಾ!

https://newsfirstlive.com/wp-content/uploads/2024/07/radika-1.jpg

Load More