newsfirstkannada.com

KL ರಾಹುಲ್ ಟಿ-20 ಕರಿಯರ್​ ಖತಂ..? ಕೋಚ್ ಗಂಭೀರ್ ಕೂಡ ರಾಹುಲ್​ ಎಂಟ್ರಿಗೆ ಅಡ್ಡಿ..!

Share :

Published July 12, 2024 at 9:34am

Update July 12, 2024 at 11:39am

    ಸಂಕಷ್ಟದಲ್ಲಿ ಕೆ.ಎಲ್.ರಾಹುಲ್​ ಟಿ20 ಕರಿಯರ್..!

    ಕೊಹ್ಲಿ, ರೋಹಿತ್​, ಜಡೇಜಾ ಹಾದಿಯಲ್ಲಿ ರಾಹುಲ್?

    ಟಿ20 ಗೇಮ್​​​​​​ಗೆ ಫಿಟ್​ ಆಗಲ್ವಾ ಕೆ.ಎಲ್.ರಾಹುಲ್?

ಟಿ20 ವಿಶ್ವಕಪ್​ ಬೆನ್ನಲ್ಲೇ ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ, ರವೀಂದ್ರ ಜಡೇಜಾ.. ಟಿ20 ಫಾರ್ಮೆಟ್​​ಗೆ ಗುಡ್​ ಬೈ ಹೇಳಿದ್ರು. ಇದೀಗ ಕನ್ನಡಿಗ ಕೆ.ಎಲ್.ರಾಹುಲ್​ ಕೂಡ ಈ ತ್ರಿಮೂರ್ತಿಗಳ ಹಾದಿಯನ್ನೇ ಹಿಡಿಯುತ್ತಾರಾ ಎಂಬ ಅನುಮಾನ ಹುಟ್ಟಿಹಾಕಿದೆ.

ಕೆ.ಎಲ್.ರಾಹುಲ್​.. ಟೀಮ್ ಇಂಡಿಯಾದ ಸ್ಟ್ರೈಲಿಶ್ ಬ್ಯಾಟ್ಸ್​ಮನ್.. ಫಾರ್ಮೆಟ್ ಯಾವುದೇ ಆಗಿರಲಿ, ಆ ಫಾರ್ಮೆಟ್​ಗೆ ತಕ್ಕಂತೆ ಬದಲಾಗುವ ಕೆ.ಎಲ್.ರಾಹುಲ್, ಬ್ಯಾಟಿಂಗ್ ನೋಡೋದೇ ಕಣ್ಣಿಗೆ ಹಬ್ಬ. ಆದ್ರೀಗ ಇದೇ ರಾಹುಲ್​ನ ಟಿ20 ಕರಿಯರ್ ಸಂಕಷ್ಟಕ್ಕೆ ಸಿಲುಕಿದೆ. ಟಿ20 ಮಾದರಿಯ ಕ್ರಿಕೆಟ್​ನಲ್ಲಿ ಇನ್ಮುಂದೆ ಕಾಣೋದು ಅನುಮಾನವೇ. ಇದಕ್ಕೆಲ್ಲ ಕಾರಣ ಟೀಮ್ ಇಂಡಿಯಾದಲ್ಲಿ ಶುರುವಾಗಿರುವ ಹೊಸ ಪರ್ವ. ಹೀಗಾಗಿ ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ, ಜಡೇಜಾರ ಹಾದಿಯನ್ನೇ ಕೆ.ಎಲ್.ರಾಹುಲ್ ಹಿಡಿಯುತ್ತಾರಾ ಎಂಬ ಪ್ರಶ್ನೆ ಹುಟ್ಟಿಹಾಕಿದೆ.

ಇದನ್ನೂ ಓದಿ:ಡಿವೋರ್ಸ್ ವದಂತಿ ಬೆನ್ನಲ್ಲೇ ಪಾಂಡ್ಯ ಹೆಸರಿನ ಜೊತೆ ತಳುಕು ಹಾಕಿಕೊಂಡ ಸುಂದರಿ..!

ಕಾರಣ 1: ಯಂಗ್​ಸ್ಟರ್ಸ್​ ಮೇಲಿದೆ ಹೊಸ ಕೋಚ್​ ಕಣ್ಣು
ಗೌತಮ್ ಗಂಭೀರ್, ನ್ಯೂ ಹೆಡ್ ಕೋಚ್ ಆಗಿ ಚುಕ್ಕಾಣಿ ಹಿಡಿದಿದ್ದೆ ತಡ. ಟೀಮ್ ಇಂಡಿಯಾದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಯುವ ಆಟಗಾರರ ಪಡೆಯನ್ನೇ ಕಟ್ಟುವ ಮನಸ್ಸು ಮಾಡಿರೋ ಗೌತಮ್ ಗಂಭೀರ್, 2026ರ ಟಿ20 ವಿಶ್ವಕಪ್​ ವೇಳೆಗೆ ಬಲಿಷ್ಠ ತಂಡ ಕಟ್ಟುವ ಚಿಂತನೆಯಲ್ಲಿದ್ದಾರೆ. ಹೀಗಾಗಿ 32 ವರ್ಷದ ಕೆ.ಎಲ್.ರಾಹುಲ್​, ಟಿ20 ಫಾರ್ಮೆಟ್​ನಿಂದ ಕಂಪ್ಲೀಟ್ ದೂರವಾಗೋದು ಗ್ಯಾರಂಟಿ.

ಕಾರಣ 2: T20 ಕ್ರಿಕೆಟ್​​ನಲ್ಲಿ ಯಂಗ್​ಸ್ಟರ್ಸ್​​ ಶೈನಿಂಗ್​​
ಕೆ.ಎಲ್.ರಾಹುಲ್, ಟಿ20 ಫಾರ್ಮೆಟ್​ನಿಂದ ಕಂಪ್ಲೀಟ್ ದೂರವಾಗ್ತಾರೆ ಎಂದು ಹೇಳಲು ಕಾರಣ. ಯುವ ಆಟಗಾರರ ಅಬ್ಬರವೂ ಒಂದಾಗಿದೆ. ಸಿಕ್ಕ ಒಂದೇ ಒಂದು ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುತ್ತಿರುವ ಯುವ ಆಟಗಾರರು, ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಸಿಂಗಲ್ ಹ್ಯಾಂಡ್​ನಲ್ಲೇ ತಂಡವನ್ನು ಗೆಲ್ಲಿಸಿ ಗೇಮ್​​​​​ ಚೇಂಜರ್​ಗಳಾಗಿ ಮಿಂಚುತ್ತಿದ್ದಾರೆ. ಇದು ರಾಹುಲ್ ಬಾಗಿಲನ್ನು ಸಂಪೂರ್ಣ ಮುಚ್ಚುವಂತೆ ಮಾಡಿದೆ.

ಇದನ್ನೂ ಓದಿ:ಗಂಭೀರ್ ಕೋಚ್ ಆದ ಬೆನ್ನಲ್ಲೇ ಟೆನ್ಷನ್ ಟೆನ್ಷನ್.. ಆತಂಕ ಹುಟ್ಟಿಸಿದ ಆ ಮೂರು ಘಟನೆಗಳು..!

ಕಾರಣ 3: ಓಪನಿಂಗ್​ ಸ್ಲಾಟ್​ ತೀವ್ರವಾದ ಪೈಪೋಟಿ
ಟೀಮ್ ಇಂಡಿಯಾದಲ್ಲಿ ತ್ರೀವ್ರ ಪೈಫೋಟಿ ಇರುವ ಸ್ಲಾಟ್​ ಅಂದ್ರೆ ಅದು ಓಪನಿಂಗ್ ಸ್ಲಾಟ್​. ರೋಹಿತ್ ಶರ್ಮಾರಿಂದ ತೆರವಾದ ಸ್ಥಾನದಲ್ಲಿ ಕೆ.ಎಲ್.ರಾಹುಲ್​ಗೆ ಚಾನ್ಸ್ ಸಿಗುತ್ತಾ ಅಂದ್ರೆ ನಿಜಕ್ಕೂ ಇಲ್ಲ ಅಂತಾನೇ ಹೇಳಬೇಕು. ಆರಂಭಿಕನ ಸ್ಥಾನಕ್ಕಾಗಿ ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಜೊತೆಗೆ ನ್ಯೂ ಸೆನ್ಸೇಷನ್ ಅಭಿಷೇಕ್ ಶರ್ಮಾ ಕಮಾಲ್ ಮಾಡ್ತಿದ್ದಾರೆ. ತಂಡದಲ್ಲಿರುವ ಇವರಲ್ಲೇ ಸ್ಥಾನಕ್ಕಾಗಿ ಕಿತ್ತಾಟ ನಡೀತಿದೆ. ಇದಿಷ್ಟೇ ಅಲ್ಲ, ತಂಡದ ಹೊರಗೂ ಸಾಲು ಸಾಲು ಆಟಗಾರರು ಇದ್ದಾರೆ.

ಕಾರಣ 4: ಕೀಪಿಂಗ್​ ಕೋಟಾದಲ್ಲಿ ಚಾನ್ಸೇ ಇಲ್ಲ
ಆರಂಭಿಕನಾಗಿ ಅಲ್ಲ. ವಿಕೆಟ್ ಕೀಪಿಂಗ್ ಆ್ಯಂಡ್ ಮಿಡಲ್ ಆರ್ಡರ್​ ಬ್ಯಾಟ್ಸ್​ಮನ್ ಕೋಟಾದಲ್ಲಿ ಟಿ20 ಫಾರ್ಮೆಟ್​ಗೆ ಎಂಟ್ರಿ ಕೊಡುವ ಚಾನ್ಸ್ ಕೂಡ ಕೆ.ಎಲ್.ರಾಹುಲ್​ಗೆ ಇಲ್ಲ. ಫಸ್ಟ್​ ಚಾಯ್ಸ್ ವಿಕೆಟ್ ಕೀಪರ್​ ರಿಷಭ್ ಪಂತ್​ಗೆ ಭವಿಷ್ಯದ ನಾಯಕನ ಪಟ್ಟ ಕಟ್ಟಲು ಬಿಸಿಸಿಐ ರೆಡಿಯಾಗಿದೆ. ಮತ್ತೊಂದೆಡೆ ಸಂಜು ಸ್ಯಾಮ್ಸನ್, ಧೃವ್ ಜುರೇಲ್, ಇಶಾನ್ ಕಿಶನ್ ಬ್ಯಾಕ್ ಅಪ್ ವಿಕೆಟ್ ಕೀಪರ್​ಗಳಾಗಿದ್ದಾರೆ. ಜಿತೇಶ್​ ಶರ್ಮಾ ಕೂಡ ಚಾನ್ಸ್​​ಗಾಗಿ ಬೆಂಚ್ ಕಾಯ್ತಿದ್ದಾರೆ. ಮಿಡಲ್ ಆರ್ಡರ್​ನಲ್ಲಿ ಬಲ ತುಂಬಬಲ್ಲ ಇವರನ್ನ ಓವರ್ ಟೇಕ್ ಮಾಡೋದು ನಿಜಕ್ಕೂ ಕಷ್ಟದ ಕೆಲಸ.

ಇದನ್ನೂ ಓದಿ:ಮೌನಕ್ಕೆ ಜಾರಿತು ಅಕ್ಷರಗಳಿಗೂ ಭಾವ ತುಂಬುತ್ತಿದ್ದ ದನಿ.. ಅಪರ್ಣಾ ಅವರ 7 ಅಪೂರ್ವ ದಾಖಲೆಗಳು.. ಇಲ್ಲಿವೆ

ಕಾರಣ 5: ಅಗ್ರೆಸ್ಸೀವ್​ ಆಟಕ್ಕೆ ಸೂಟ್​ ಆಗ್ತಿಲ್ಲ ರಾಹುಲ್​
ಕೆ.ಎಲ್.ರಾಹುಲ್​​ಗೆ ಮುಳ್ಳಾಗಿರುವುದೇ ಸ್ಲೋ ಬ್ಯಾಟಿಂಗ್. ಈ ಹಿಂದೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡಲು ಸೈ ಅಂತಿದ್ದ ಕನ್ನಡಿಗ ರಾಹುಲ್, ಈಗ ಕಂಪ್ಲೀಟ್ ಬದಲಾಗಿದ್ದಾರೆ. ಸ್ಲೋ ಬ್ಯಾಟಿಂಗ್​​ನಿಂದಾಗಿಯೇ 2022ರ ಟಿ20 ವಿಶ್ವಕಪ್​ ಬಳಿಕ ತಂಡದಿಂದ ಗೇಟ್​ಪಾಸ್ ಪಡೆದ ರಾಹುಲ್, ಐಪಿಎಲ್​ನಲ್ಲೂ ಏಕದಿನ ಶೈಲಿಯಲ್ಲೇ ಬ್ಯಾಟಿಂಗ್ ಮಾಡಿದೆಚ್ಚು. ಇದೇ ಕಾರಣಕ್ಕೆ ಟಿ20 ವಿಶ್ವಕಪ್​ನಿಂದ ದೂರವಾದ ಕನ್ನಡಿಗ ರಾಹುಲ್, ಈಗ ಚುಟಕು ಮಾದರಿಯ ತಂಡಕ್ಕೆ ಕಮ್​ಬ್ಯಾಕ್ ಮಾಡಬೇಕಾದ್ರೆ, ಪವಾಡವೇ ನಡೀಯಬೇಕಿದೆ.

ಇದನ್ನೂ ಓದಿ:ವೈದ್ಯರ ಗಡುವು ಮೀರಿ ಅಪರ್ಣಾ ಬದುಕಿದ್ದೇ ಚಮತ್ಕಾರ.. ಕೊನೆಗಾಲದಲ್ಲಿ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

KL ರಾಹುಲ್ ಟಿ-20 ಕರಿಯರ್​ ಖತಂ..? ಕೋಚ್ ಗಂಭೀರ್ ಕೂಡ ರಾಹುಲ್​ ಎಂಟ್ರಿಗೆ ಅಡ್ಡಿ..!

https://newsfirstlive.com/wp-content/uploads/2024/01/KL_RAHUL_WICKET_KEEPING-1.jpg

Load More