newsfirstkannada.com

×

ಅಂಬಾನಿ ಮದುವೆಗೆ ತಲೈವಾ ಮಾಸ್​ ಎಂಟ್ರಿ.. ಅತಿಥಿಗಳಿಗೆ ಸ್ವಾಗತ ಹೇಗಿದೆ ಗೊತ್ತಾ? ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!

Share :

Published July 12, 2024 at 6:48pm

Update July 13, 2024 at 3:24pm

    ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಮನೆಯಲ್ಲಿ ಮದುವೆ ಸಂಭ್ರಮ

    ಮಧ್ಯಾಹ್ನ 3 ಗಂಟೆಯಿಂದಲೇ ಅನಂತ್, ರಾಧಿಕಾ ಮರ್ಚೆಂಟ್​ ಮೆರವಣಿಗೆ ಶುರು

    ಹಿಂದೂ ಸಂಪ್ರದಾಯದಂತೆ ಮದುವೆಗೆ ಬಂದ ಅತಿಥಿಗಳನ್ನು ಸತ್ಕರಿಸಿದ ಕುಟಂಬ

ಮುಂಬೈ: ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಮುಖೇಶ್​ ಅಂಬಾನಿ ಕಿರಿಯ ಪುತ್ರ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅಂಬಾನಿ ಮಗ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಗುರು ಹಿರಿಯರ ಸಮ್ಮುಖದಲ್ಲಿ ಇಂದು ಸಂಜೆ ಹಿಂದೂ ಸಂಪ್ರದಾಯದಂತೆ ವಿವಾಹವಾಗಲಿದ್ದಾರೆ.

ಇದನ್ನೂ ಓದಿ: ಭರತನಾಟ್ಯ ಪ್ರವೀಣೆ.. ಸ್ವಿಮ್ಮಿಂಗ್, ಚಾರಣ ಅಂದ್ರೆ ಪಂಚಪ್ರಾಣ.. ರಾಧಿಕಾ ಮರ್ಚಂಟ್ ಹಿನ್ನೆಲೆ ಏನು?

ಇಂದಿನಿಂದ ಜುಲೈ 14ರವರೆಗೆ ಮುಖೇಶ್​ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರ ಮದುವೆ ಕಾರ್ಯಕ್ರಮಗಳು ನಡೆಯಲಿದೆ. ಇಂದು ಅಂಬಾನಿ ಕುಟುಂಬದ ವಿವಾಹ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ದೇಶ ವಿದೇಶಗಳಿಂದ ಗಣ್ಯಾತಿಗಣ್ಯರು ಮುಂಬೈ ಬಂದಿದ್ದಾರೆ. ಅಂಬಾನಿ ಕುಟುಂಸ್ಥರ ಮದುವೆಯಲ್ಲಿ ವಿವಿಧ ಲೋಕದ ತಾರೆಯರ ಸಮಾಗಮವಾಗಿದೆ. ಇನ್ನು, ಅಂಬಾನಿ ಮದುವೆಗೆ ಬಂದ ಅತಿಥಿಗಳು ಒಬ್ಬರಿಗಿಂತ ಒಬ್ಬರು ಮಿರ ಮಿರ ಮಿಂಚುತ್ತಿದ್ದಾರೆ.

ಇಂದು ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಮುಂಬೈನ ಜಿಯೋ ವರ್ಲ್ಡ್‌ನಲ್ಲಿ ಬಹಳ ಅದ್ಧೂರಿಯಾಗಿ ನಡೆಯಲಿದೆ.ಇನ್ನು, ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ತಲೈವಾ ರಜನಿಕಾಂತ್ ಅಂಬಾನಿ ಮಗನ ಮದುವೆಗೆ ಕುಟುಂಬಸ್ಥರ ಸಮೇತ ಬಂದಿದ್ದಾರೆ. ನಟ ರಜನಿಕಾಂತ್ ಜೊತೆಗೆ ಲತಾ ರಜನಿಕಾಂತ್, ಐಶ್ವರ್ಯಾ ರಜನಿಕಾಂತ್ ಬಂದಿದ್ದಾರೆ.

ಇದನ್ನೂ ಓದಿ: ಒನ್ ಅಂಡ್ ಓನ್ಲಿ ವರು.. ಮಜಾ ಟಾಕೀಸ್‌ನಲ್ಲಿ ಅಭಿನಯಿಸಲು ಅಪರ್ಣಾ ಒಪ್ಪಿದ್ದು ಹೇಗೆ? ಸೃಜನ್ ಲೋಕೇಶ್ ಹೇಳಿದ್ದೇನು?

ಜೊತೆಗೆ ಟೋನಿ ಬ್ಲೇರ್, ಬೋರಿಸ್ ಜಾನ್ಸನ್, ಜಾನ್ ಕೆರಿ, ಕಿಮ್ ಕರ್ದಿಶಾನಾ, ಸಲ್ಮಾನ್ ಖಾನ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ, ಅಮಿತಾಬ್ ಬಚ್ಚನ್ ದಂಪತಿ, ಆಂಧ್ರದ ಡಿಸಿಎಂ ಪವನ್ ಕಲ್ಯಾಣ್, ರಾಮಚರಣ್, ನಟ ಯಶ್​ ಹಾಗೂ ರಾಧಿಕಾ ಪಂಡಿತ್​, ಸಿಎಂ ಮಮತಾ ಬ್ಯಾನರ್ಜಿ, ಲಾಲೂ ಪ್ರಸಾದ್ ಯಾದವ್ ಕುಟುಂಬ, ಕಿಮ್ ಕರ್ದಾಶಿಯಾನ್ ಮತ್ತು ಕ್ಲೋಯ್ ಕಾರ್ಡಶಿಯಾನ್, ಪ್ರಿಯಾಂಕಾ ಚೋಪ್ರಾ, ನೆಕ್ ಜೋನ್ಸ್ ದಂಪತಿ, ಐಶ್ವರ್ಯಾ ರೈ-ಬಚ್ಚನ್, ಜಾನ್ವಿ ಕಪೂರ್ ಮತ್ತು ಸಾರಾ ಅಲಿ ಖಾನ್ ಸೇರಿದಂತೆ ಸಾಕಷ್ಟು ಗಣ್ಯರು ಮದುವೆಗೆ ಆಗಮಿಸಿದ್ದಾರೆ.

ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ  ಮದುವೆಗೆ ಬಂದ ಅತಿಥಿಗಳಿಗೆ ಭರ್ಜರಿಯಾಗಿ ಸ್ವಾಗತ ಮಾಡಿದ್ದಾರೆ. ಮೊದಲಗೆ ಅತಿಥಿಗಳ ತಲೆಯ ಮೇಲೆ ಗುಲಾಬಿ ದಳಗಳನ್ನು ಹಾಕುತ್ತಾರೆ. ಬಳಿಕ ಅವರ ಕೈಗೆ ಬೊಕ್ಕೆ ಸ್ವಾಗತ ಮಾಡುತ್ತಾರೆ. ನಂತರ ಅವರನ್ನು ಭಾರತೀಯ ಸಂಪ್ರದಾಯದಂತೆ ಕೊಳಲನ್ನು ಊದುತ್ತಾ ಬಹಳ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂಬಾನಿ ಮದುವೆಗೆ ತಲೈವಾ ಮಾಸ್​ ಎಂಟ್ರಿ.. ಅತಿಥಿಗಳಿಗೆ ಸ್ವಾಗತ ಹೇಗಿದೆ ಗೊತ್ತಾ? ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!

https://newsfirstlive.com/wp-content/uploads/2024/07/Anant-Ambani8.jpg

Load More