ಯಾವುದೇ ಸರ್ಕಾರಿ ಕಾರ್ಯಕ್ರಮವೇ ಇರಲಿ ನಟಿ ಅಪರ್ಣಾ ಹಾಜರು
ನಿರೂಪಣೆಯ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ರು ನಟಿ ಅಪರ್ಣಾ
ಸತತ 8 ಗಂಟೆ ನಿರಂತರ ನಿರೂಪಣೆ ಮಾಡಿ ದಾಖಲೆ ಮಾಡಿದ್ದ ಅಪರ್ಣಾ
ಬೆಂಗಳೂರು: ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ನಿರೂಪಣಾ ಲೋಕದಲ್ಲಿ ತಮ್ಮ ಸುಂದರ ಧ್ವನಿ ಮತ್ತು ಭಾಷಾ ಸ್ಪಷ್ಟತೆ ಮೂಲಕ ತಮ್ಮದೇ ಸಾಮ್ರಾಜ್ಯ ಕಟ್ಟಿಕೊಂಡಿದ್ದರು ಅಪರ್ಣಾ ಅವರು. ಸೀರಿಯಲ್ಗಳಲ್ಲೂ, ರಿಯಾಲಿಟಿ ಶೋಗಳಲ್ಲೂ ಮಿಂಚಿದ್ದಾರೆ. ಕಿರುತೆರೆಯಲ್ಲಿ ಅಪರ್ಣಾ ಅಚ್ಚಳಿಯದ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ.
ಕನ್ನಡ ಕಂಡ ಅತಿ ಅಪರೂಪದ ನಿರೂಪಕಿ ಅಪರ್ಣಾರ ಹುಟ್ಟು 1967ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪಂಚನಹಳ್ಳಿಯಲ್ಲಾಗಿತ್ತು. ಅಪರ್ಣಾ ಅವರ ತಂದೆ ಹೆಸರು ನಾರಾಯಣಸ್ವಾಮಿ, ಸಿನಿಮಾ ಪತ್ರಕರ್ತರಾಗಿದ್ರು. ಹೀಗೆ, ಪಂಚನಹಳ್ಳಿಯಲ್ಲಿ ಜನಿಸಿದ ಅಪರ್ಣಾ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಅಂಬೆಗಾಲಿಟ್ಟಿದ್ರು. ಮುಂದೆ ನಾಟಕಗಳಲ್ಲಿ ಬಣ್ಣ ಹಚ್ಚಿ, ನಟಿಯಾಗಿ ಕಾಣಿಸಿಕೊಂಡು, ನಿರೂಪಕಿಯಾಗಿ ಮಿಂಚಿದ್ದ ಅಪರ್ಣಾರ ಪತಿ ಹೆಸರು ನಾಗರಾಜ್ ವಸ್ತಾರೆ. ವಾಸ್ತುಶಿಲ್ಪಿಯಾಗಿರೋ ಅಪರ್ಣಾರ ಪತಿ ಕವಿಯೂ ಹೌದು. ಇನ್ನು, ಅಪರ್ಣಾ ಅವರು ನಿರೂಪಕಿ ಆಗೋಕೆ ಮುನ್ನ ಸಿನಿಮಾದಲ್ಲಿ ನಟಿಯಾಗಿ ಅಭಿನಯಿಸಿದ್ರು. ಅದುವೇ ಪುಟ್ಟಣ್ಣ ಕಣಗಾಲ್ರ ಮಸಣದ ಹೂವು.
ಇದನ್ನೂ ಓದಿ: ಒನ್ ಅಂಡ್ ಓನ್ಲಿ ವರು.. ಮಜಾ ಟಾಕೀಸ್ನಲ್ಲಿ ಅಭಿನಯಿಸಲು ಅಪರ್ಣಾ ಒಪ್ಪಿದ್ದು ಹೇಗೆ? ಸೃಜನ್ ಲೋಕೇಶ್ ಹೇಳಿದ್ದೇನು?
1984ರಲ್ಲಿ ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದ ಮಸಣದ ಹೂವು ಚಿತ್ರದಲ್ಲಿ ಅಪರ್ಣಾ ಸಿನಿಮಾ ಜರ್ನಿ ಆರಂಭಿಸಿದ್ರು. ಪಾರ್ವತಿ ಹೆಸರಿನ ಪಾತ್ರದ ಮೂಲಕ ಪರಿಚಿತರಾದ ಅಪರ್ಣಾರಿಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸೋ ಅವಕಾಶ ಸಿಕ್ಕಿತ್ತು. ಅಪರ್ಣಾರ ತಂದೆ ಸಿನಿಮಾ ಪತ್ರಕರ್ತರಾಗಿದ್ದ ಕಾರಣಕ್ಕೆ ಪುಟ್ಟಣ್ಣ ಕಣಗಾಲ್ ಅವರ ಒಡನಾಟವಿತ್ತು. ಅದಾಗಲೇ ನಾಟಕಗಳಲ್ಲಿ ಪಾತ್ರ ಮಾಡ್ತಿದ್ದ ಅಪರ್ಣಾರಿಗೆ ಪುಟ್ಟಣ್ಣ ಕಣಗಾಲ್ ಚಿತ್ರದಲ್ಲಿ ಅವಕಾಶ ಒದಗಿಬಂದಿತ್ತು. ಮಸಣದ ಹೂವು ಅಪರ್ಣಾರ ಮೊದಲ ಸಿನಿಮಾ. ಅಪರ್ಣಾರ ಹಣೆಬರಹದಲ್ಲಿ ಸಿನಿಮಾಗಿಂತ ಹೆಚ್ಚಾಗಿ ನಿರೂಪಣೆಯಲ್ಲಿ ಹೆಸರು ಮಾಡುವ ಭವಿಷ್ಯ ಬರೆದಿತ್ತು ಅನ್ಸತ್ತೆ. ಹಾಗಾಗಿ, ಸಿನಿಮಾಗಳಿಂದ ನಿರೂಪಣೆಯತ್ತ ಅಪರ್ಣಾ ವಾಲಿದ್ರು. ಅಲ್ಲಿಂದಾಚೆಗೆ ಅಪರ್ಣಾ ಅಂದ್ರೆ ನಿರೂಪಣೆ, ನಿರೂಪಣೆ ಅಂದ್ರೆ ಅಪರ್ಣಾ ಎನ್ನುವಂತೆ ಹೆಸರುವಾಸಿಯಾದ್ರು. ಅದಕ್ಕೂ ಮೊದಲು ಅಪರ್ಣಾ ಅವರು ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿಂಚಿದ್ರು.
ಅಪರ್ಣಾ ಸಿನಿ ಪಯಣ!
1985 – ಮಸಣದ ಹೂವು
1987 – ಸಂಗ್ರಾಮ
1988 – ನಮ್ಮೂರ ರಾಜ
1988 – ಸಾಹಸ ವೀರ
1989 – ಇನ್ಸ್ಪೆಕ್ಟರ್ ವಿಕ್ರಂ
1990 – ಚಕ್ರವರ್ತಿ
2024 – ಗ್ರೇ ಗೇಮ್ಸ್
ಹೀಗೆ, ಒಟ್ಟು 10 ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರೋ ಅಪರ್ಣಾರನ್ನು ಜನ ನೆನಪಿಸಿಕೊಳ್ಳೋದು ಸಿನಿಮಾಗಳ ಪಾತ್ರಗಳ ಮೂಲಕವಲ್ಲ, ಬದಲಾಗಿ ಅತ್ಯಂತ ಅದ್ಭುತವಾದ, ಮನೋಜ್ಞ ನಿರೂಪಣೆಯ ಮೂಲಕ. ನಟಿಯಾಗಿ ಮಿಂಚಿದ್ದ ಅಪರ್ಣಾ ನಿರೂಪಕಿಯಾಗಿ ಹೆಜ್ಜೆಯೂರಿದ್ದು ಡಿಡಿ ಚಂದನದಲ್ಲಿ. ಅದು 1990 ಡಿಡಿ ಚಂದನದಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡ ಅಪರ್ಣಾ ಮತ್ತೆ ಹಿಂದಕ್ಕೆ ಹೆಜ್ಜೆಯಿಡಲೇ ಇಲ್ಲ. ಅಪ್ಪಟ ಕನ್ನಡದ ಪದಗಳನ್ನು ಮುತ್ತು ಪೋಣಿಸುವಂತೆ ಮಾತನಾಡುವ ಅಪರ್ಣಾರ ಭಾಷಾ ಶುದ್ಧಿಯ ಬಗ್ಗೆ ಎಲ್ಲರೂ ಫಿದಾ ಆಗಿಬಿಟ್ರು. ಹೀಗೆ, 1990ರಲ್ಲಿ ಡಿಡಿ ಚಂದನ ವಾಹಿನಿಯಲ್ಲಿ ಅಪರ್ಣಾ ಅವರು ಹೆಚ್ಚು ನಿರೂಪಕಿಯಾಗಿ ಕೆಲಸ ಶುರುಮಾಡಿದ್ದ ಅಪರ್ಣಾ ಅವರು, ಸರ್ಕಾರಿ ಕಾರ್ಯಕ್ರಮ, ಸಾಹಿತ್ಯ ಸಮ್ಮೇಳನ ಸೇರಿ ಬಹುತೇಕ ಕಾರ್ಯಕ್ರಮಗಳ ನಿರೂಪಣೆಯ ಶಕ್ತಿಯಾಗಿ ನಿಂತ್ರು.
ಯಾವುದೇ ಸರ್ಕಾರಿ ಕಾರ್ಯಕ್ರಮವೇ ಇರಲಿ ಅಪರ್ಣಾ ಇಲ್ಲದೆ ಆ ಕಾರ್ಯಕ್ರಮವನ್ನು ಊಹಿಸೋದೆ ಸಾಧ್ಯವಿಲ್ಲ ಎಂಬಂತೆ ತಮ್ಮ ಛಾಪು ಮೂಡಿಸಿದ್ರು. 1990 ರಿಂದ 2000ನೇ ಇಸವಿಯವರೆಗೂ ಡಿಡಿ ಚಂದನದ ಪ್ರತಿಯೊಂದು ಕಾರ್ಯಕ್ರಮಗಳ ನಿರೂಪಣೆ ಮಾಡಿ ಸೈ ಎನ್ನಿಸಿಕೊಂಡ ಅಪರ್ಣಾ ಅವರು, ನಿರೂಪಣೆಯ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ರು. ಅಪರ್ಣಾರ ಪಾಪ್ಯುಲಾರಿಟಿ ಹೆಚ್ಚಾದ ಬಳಿಕ ಖಾಸಗಿ ಟಿವಿ ಕಾರ್ಯಕ್ರಮಗಳೂ ಕೂಡ ಕೈ ಬೀಸಿ ಕರೆಯಲಾರಂಭಿಸಿದ್ವು. ಅನೇಕ ಖಾಸಗಿ ಟಿವಿ ಕಾರ್ಯಕ್ರಮಗಳ ನಿರೂಪಣೆಯನ್ನು ನಡೆಸಿಕೊಟ್ಟ ಅಪರ್ಣಾ ಅವರು ಸಿನಿಮಾ, ಧಾರವಾಹಿಗಳಲ್ಲಿ ನಟನೆ, ಸಂಗೀತ, ನೃತ್ಯ ಸೇರಿದಂತೆ ವಿವಿಧ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು, ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿರೂಪಣೆಯ ಜವಾಬ್ದಾರಿ ಹೊತ್ತು ಶಹಬ್ಬಾಶ್ ಗಿರಿ ದಕ್ಕಿಸಿಕೊಂಡ್ರು. ಈ ನಡುವೆ 1993ರಲ್ಲಿ ಆಲ್ ಇಂಡಿಯಾ ರೇಡಿಯೋದಲ್ಲಿ ರೇಡಿಯೋ ಜಾಕಿಯಾಗಿ ಕೆಲಸ ಮಾಡಿದ್ರು. ಬಳಿಕ ಏರ್ ಎಫ್ಎಮ್ ರೇನ್ಬೋನಲ್ಲಿ ಸೇವೆ ಸಲ್ಲಿಸಿದ್ರು.
8 ಗಂಟೆ ನಿರಂತರ ನಿರೂಪಣೆ ಮಾಡಿ ದಾಖಲೆ ಮಾಡಿದ್ದ ಅಪರ್ಣಾ!
ಅಪರ್ಣಾರಿಗೆ ಕನ್ನಡ ಭಾಷೆಯ ಮೇಲಿನ ಹಿಡಿತ ಹೇಗಿತ್ತು ಅಂದ್ರೆ, ನಿರರ್ಗಳವಾಗಿ ಗಂಟೆಗಟ್ಟಲೆ ನಿರೂಪಣೆ ಮಾಡೋದನ್ನು ಸಿದ್ಧಿಸಿಕೊಂಡಿದ್ರು. ಅಪರ್ಣಾರ ಆ ನಿರೂಪಣಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದ್ದು 1998 ರ ದೀಪಾವಳಿ. ಹೌದು, 1998ರಲ್ಲಿ ದೀಪಾವಳಿ ಪ್ರಯುಕ್ತ ಅಪರ್ಣಾ ಅವರು ಭರ್ತಿ 8 ಗಂಟೆಗಳ ಕಾಲ ನಿರಂತರವಾಗಿ ನಿರೂಪಣೆ ಮಾಡಿ ದಾಖಲೆ ಪುಟ ಸೇರಿ ಎಲ್ಲರ ಹುಬ್ಬೇರಿಸಿದ್ರು. ಇಲ್ಲಿಯವರೆಗೆ ಅಪರ್ಣಾ ಅವರು 7 ಸಾವಿರಕ್ಕೂ ಹೆಚ್ಚಿನ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿದ್ದಾರೆ ಅಂದ್ರೆ ಅದು ತಮಾಷೆಯ ಮಾತಲ್ಲ.
ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ನಿತ್ಯ ಸಾವಿರಾರು ಮಂದಿ ಸಂಚರಿಸ್ತಾರೆ. ಪ್ರತಿಯೊಂದು ಸ್ಟಾಪ್ ಬಂದಾಗಲೂ ಒಂದು ಸುಂದರ ಧ್ವನಿ ಕೇಳಿಬರುತ್ತೆ. ಆ ಧ್ವನಿಯ ಒಡತಿ ಬೇಱರೂ ಅಲ್ಲ ಇದೇ ಅಪರ್ಣಾ. ಮೆಟ್ರೋದಲ್ಲಿ ಬರುವ ಮುಂದಿನ ನಿಲ್ದಾಣ ಎಂಬ ಅನೌನ್ಸ್ಮೆಂಟ್ಗೆ ಅಪರ್ಣಾರ ಧ್ವನಿಯೇ ಬೇಕು ಅಂತ ಅವರನ್ನು ಒಪ್ಪಿಸಲಾಗಿತ್ತು. ಮೆಟ್ರೋಗೆ ನಿಮ್ಮ ಧ್ವನಿ ಬೇಕು ಅಂತಾ ಅಪರ್ಣಾರನ್ನು ಸಂಪರ್ಕ ಮಾಡಿದ ಸಂದರ್ಭದಲ್ಲಿ ಅಪರ್ಣಾರಿಗೆ ಯಾವ ರೀತಿಯಲ್ಲಿ ತಮ್ಮ ಧ್ವನಿಯನ್ನು ಬಳಸಿಕೊಳ್ತಾರೆಂಬ ಕಲ್ಪನೆಯೇ ಇರಲಿಲ್ವಂತೆ.
ಇದನ್ನೂ ಓದಿ: ಭರತನಾಟ್ಯ ಪ್ರವೀಣೆ.. ಸ್ವಿಮ್ಮಿಂಗ್, ಚಾರಣ ಅಂದ್ರೆ ಪಂಚಪ್ರಾಣ.. ರಾಧಿಕಾ ಮರ್ಚಂಟ್ ಹಿನ್ನೆಲೆ ಏನು?
ಹಾಗಾಗಿ, ತಮ್ಮದೇ ವಾಯ್ಸ್ ಕೇಳೋ ಕುತೂಹಲದಲ್ಲಿ ಕುಟುಂಬದೊಟ್ಟಿಗೆ ಮೆಟ್ರೋದಲ್ಲಿ ಸಂಚರಿಸಿದ್ರಂತೆ. ಮೆಟ್ರೋಗೆ ತಮ್ಮ ಧ್ವನಿ ಮೂಲಕ ಜೀವ ತುಂಬಿದ ಅಪರ್ಣಾ ಇಂದು ಶ್ವಾಸಕೋಶ ಕ್ಯಾನ್ಸರ್ ಹೆಮ್ಮಾರಿಯ ಎದುರು ಹೋರಾಡಲಾಗದೆ ಅಸುನೀಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ