newsfirstkannada.com

×

ಪಾಕ್​​ ಮಾಜಿ ಬೌಲಿಂಗ್​​ ಕೋಚ್​​​ಗೆ ಮಣೆ ಹಾಕಿದ ಗಂಭೀರ್​​.. ಬಿಸಿಸಿಐ ಮೇಲೆ ಒತ್ತಡವೇಕೆ?

Share :

Published July 12, 2024 at 10:30pm

    ಶ್ರೀಲಂಕಾ ಸರಣಿಗೆ ಮುನ್ನವೇ ಸಪೋರ್ಟಿಂಗ್​ ಸ್ಟ್ಯಾಫ್​ ಬದಲಾವಣೆ..!

    ಉತ್ತಮ ಸಪೋರ್ಟಿಂಗ್​ ಸ್ಟ್ಯಾಫ್​ಗಾಗಿ ಬಿಸಿಸಿಐ ಭರ್ಜರಿ ಹುಡುಕಾಟ

    ಪಾಕ್​​​ ತಂಡದ ಮಾಜಿ ಬೌಲಿಂಗ್​​ಗೆ ಕೋಚ್​​ಗೆ ಮಣೆ ಹಾಕಿದ ಗಂಭೀರ್​​​

ಜಿಂಬಾಬ್ವೆ ಸರಣಿ ಬೆನ್ನಲ್ಲೇ ಟೀಮ್​ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಜುಲೈ 26ನೇ ತಾರೀಕಿನಿಂದ ಶುರುವಾಗಲಿರೋ ಶ್ರೀಲಂಕಾ ಸರಣಿಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ ಆಗಬೇಕಿದೆ. ಈಗಾಗಲೇ ಟೀಮ್​ ಇಂಡಿಯಾ ಮುಖ್ಯ ಕೋಚ್​​​ ಹುದ್ದೆಗೆ ಗೌತಮ್​ ಗಂಭೀರ್​ ಕೂಡ ಆಯ್ಕೆಯಾಗಿದ್ದಾರೆ.

ಇನ್ನು, ಟೀಮ್​ ಇಂಡಿಯಾ ಪ್ರಕಟ ಆಗೋ ಮುನ್ನವೇ ಸಪೋರ್ಟಿಂಗ್​ ಸ್ಟ್ಯಾಫ್​ ಕೂಡ ಬದಲಾಗಲಿದೆ. ಭಾರತ ತಂಡದ ಸಪೋರ್ಟಿಂಗ್​ ಸ್ಟ್ಯಾಫ್​ಗೆ ತಮಗೆ ಬೇಕಾದವರನ್ನು ಗೌತಮ್​ ಗಂಭೀರ್​​​ ಕರೆ ತರೋ ಪ್ರಯತ್ನ ಮಾಡುತ್ತಿದ್ದಾರೆ. ಈಗ ಗಂಭೀರ್​ ಬಿಸಿಸಿಐ ಮುಂದೆ ದೊಡ್ಡ ಡಿಮ್ಯಾಂಡ್​ ಇಟ್ಟಿದ್ದಾರೆ.

ಗಂಭೀರ್​​ ಮೊದಲು ಬೌಲಿಂಗ್ ಕೋಚ್‌ ಆಯ್ಕೆ ಸಲುವಾಗಿ ಕರ್ನಾಟಕ ರಣಜಿ ಕ್ರಿಕೆಟ್‌ ತಂಡದ ಮಾಜಿ ನಾಯಕ ಆರ್‌. ವಿನಯ್ ಕುಮಾರ್‌ ಹೆಸರು ಸೂಚಿಸಿದ್ರು. ಇವರ ಬೇಡಿಕೆಯನ್ನು ಬಿಸಿಸಿಐ ನಿರಾಕರಿಸಿದೆ ಎಂದು ವರದಿ ಆಗಿತ್ತು. ಈ ಬೆನ್ನಲ್ಲೇ ಇದೇ ಸ್ಥಾನಕ್ಕೆ ಪಾಕ್​ ಮಾಜಿ ಬೌಲಿಂಗ್​ ಕೋಚ್​ ಮತ್ತು ಸೌತ್​ ಆಫ್ರಿಕಾದ ಮಾಜಿ ವೇಗಿ ಮೊರ್ನೆ ಮಾರ್ಕೆಲ್ ಅವರನ್ನು ಆಯ್ಕೆ ಮಾಡಬೇಕು ಎಂದು ಬಿಸಿಸಿಐ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಯಾರು ಈ ಮೊರ್ನೆ ಮಾರ್ಕೆಲ್..?

ಈ ಹಿಂದೆ ಮೊರ್ಕೆಲ್ ಪಾಕ್​ ಬೌಲಿಂಗ್ ಕೋಚ್ ಆಗಿದ್ದರು. 2023 ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಮೋರ್ಕೆಲ್ ಪಾಕಿಸ್ತಾನದ ಬೌಲಿಂಗ್ ಕೋಚ್ ಆಗಿ ಕಾಣಿಸಿಕೊಂಡಿದ್ದರು. ಬಳಿಕ ಮೊರ್ಕೆಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಗಂಭೀರ್ ಮತ್ತು ಮೋರ್ಕೆಲ್ ಐಪಿಎಲ್‌ನಲ್ಲಿ ಲಕ್ನೋ ತಂಡದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

ಇದನ್ನೂ ಓದಿ: ಭಾರತದ ಬೌಲಿಂಗ್​​ ಕೋಚ್​​ ಆಗಬೇಕಿದ್ದ RCB ಆಟಗಾರನಿಗೆ ಗಂಭೀರ್​ ಶಾಕ್​​.. ಏನಾಯ್ತು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪಾಕ್​​ ಮಾಜಿ ಬೌಲಿಂಗ್​​ ಕೋಚ್​​​ಗೆ ಮಣೆ ಹಾಕಿದ ಗಂಭೀರ್​​.. ಬಿಸಿಸಿಐ ಮೇಲೆ ಒತ್ತಡವೇಕೆ?

https://newsfirstlive.com/wp-content/uploads/2024/07/Gambhir_Morkel.jpg

Load More