ನಾನು ಸಿಎಂ ಆಗಿದ್ದಾಗ ಅರ್ಜಿ ಹಾಕೋದು ಬೇಡ ಎಂದು ಹೇಳಿದ್ದೆ
ಮುಡಾದಲ್ಲಿ ಕಾನೂನು ಬಾಹಿರವಾಗಿ ನಡೆದಿರುವ ಕುರಿತು ತನಿಖೆ
ನನ್ನ ಹೆಂಡತಿಗೆ ಅದು ದಾನವಾಗಿ ಬಂದಿರುವ ಪ್ರಾಪರ್ಟಿ ಆಗಿದೆ
ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಅಕ್ರಮ ನಿವೇಶನ ಹಂಚಿಕೆ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ನಡೆದಿರುವ ಆರೋಪ ಇವೆ. ಇದು ವಿಪಕ್ಷಗಳಿಗೆ ಬಹುದೊಡ್ಡ ಅಸ್ತ್ರ ಸಿಕ್ಕಂತೆ ಆಗಿದೆ. ಇನ್ನೇನು ಜುಲೈ 15 ರಿಂದ ನಡೆಯುವ ಅಧಿವೇಶನದಲ್ಲಿ ಸರ್ಕಾರದ ಮೇಲೆ ವಿಪಕ್ಷಗಳು ವಾಕ್ಸಮರ ನಡೆಸಲಿವೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ವಿವಾಹ ಸಂಭ್ರಮ.. ಮದುವೆಯಲ್ಲಿ ಗಣ್ಯರು ಭಾಗಿ.. ಯಶ್ ಸೇರಿ ಯಾರೆಲ್ಲ ಇದ್ದಾರೆ..?
ನ್ಯೂಸ್ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನನ್ನ ಹೆಂಡತಿ 3 ಎಕರೆ 13 ಗುಂಟೆ ಜಾಗ ತಗೊಂಡಿರೋದು ಕಪ್ಪು ಚುಕ್ಕೆ ಅಲ್ಲ. ಅದು ಕಾನೂನು ರೀತಿ ಇರುವಂತದ್ದು. ಇದು ಯಾವುದೇ ಹಗರಣ ಕೂಡ ಅಲ್ಲ. ಮುಡಾದಲ್ಲಿ ಕಾನೂನು ಬಾಹಿರವಾಗಿ ನಡೆದಿರುವ ಕುರಿತು ತನಿಖೆ ಮಾಡಿಸುತ್ತಿದ್ದೇವೆ. ತನಿಖೆಯ ರಿಪೋರ್ಟ್ ಬಂದ ಮೇಲೆ ಯಾರು ತಪ್ಪಿತಸ್ಥರು ಇದ್ದಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಕಾನೂನು ಬಾಹೀರವಾಗಿ ಸೈಟ್ ಹಂಚಿಕೆ
ಸರ್ವೆ ನಂ.464 ಜಮೀನು ನನ್ನ ಹೆಂಡತಿಗೆ ದಾನವಾಗಿ ಬಂದಿರುವ ಪ್ರಾಪರ್ಟಿ. ಅದನ್ನು ಮುಡಾದವರು ಕಾನೂನು ಬಾಹಿರವಾಗಿ ಸೈಟ್ ಮಾಡಿ ಹಂಚಿ ಬಿಡುತ್ತಾರೆ. ಡಿನೋಟಿಫೈ ಆಗಿರುವ 3 ಎಕರೆ 13 ಗುಂಟೆ ಜಮೀನನ್ನು ನಮ್ಮ ಗಮನಕ್ಕೆ ತರದೆ ಸೈಟ್ ಮಾಡಿ ಹಂಚಿದ್ದಾರೆ. ಇದಕ್ಕಾಗಿ ನನ್ನ ಹೆಂಡತಿ ಪಾರ್ವತಿ, ‘ನಮಗೆ ಬದಲಿ ನಿವೇಶನ ಕೊಡಿ’ ಎಂದು ಅರ್ಜಿ ಕೊಡುತ್ತಾರೆ. ಆಗ ನಾನು ಸಿಎಂ ಆಗಿದ್ದೆ. ನಾನು ಸಿಎಂ ಆಗಿದ್ದಾಗ ಅದನ್ನು ತೆಗೆದುಕೊಳ್ಳುವುದು ಬೇಡ. ಆ ಮೇಲೆ ಬೇಕಾದರೆ ಕ್ಲೈಮ್ ಮಾಡೋಣ ಎಂದಿದ್ದೆ.
2021ರಲ್ಲಿ ಸೈಟ್ ಕೊಟ್ಟರು. ಅರ್ಜಿಯಲ್ಲಿ ಇಂತಹ ಪ್ರದೇಶದಲ್ಲೇ ಕೊಡಿ ಎಂದು ನಾವು ಕೇಳಿರಲಿಲ್ಲ. ಆದರೆ ಅವರೇ ವಿಜಯನಗರದ 3ನೇ ಸ್ಟೇಜ್ನಲ್ಲಿ 16 ಸೈಟ್ಗಳನ್ನು (38,284 ಚ.ಅಡಿ) ಕೊಟ್ಟಿದ್ದಾರೆ. ಇದು ಒಂದು ಎಕರೆಗಿಂತ ಕಡಿಮೆ ಇದೆ. ನಮ್ಮದು ಹೋಗಿದ್ದೇ ಜಾಸ್ತಿ ಇದೆ. ಆದರೆ ಬಿಜೆಪಿಯವರು ದುರುದ್ದೇಶದಿಂದ ರಾಜಕೀಯವಾಗಿ ಒಂದು ವಿಷ್ಯ ಮಾಡೋಕೆ ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ MUDA ಜತೆ ವಾಲ್ಮೀಕಿ ಹಗರಣದ ಸಂಕಷ್ಟ.. ಪ್ರಕರಣದ ಅಸಲಿ ರಹಸ್ಯಗಳೇನು?
ಸುಂದರಮ್ಮ ಅನ್ನೋ ಕೇಸ್ನಲ್ಲಿ 50-50 ಕೊಡುತ್ತಿನಿ ಎಂದು ಮುಡಾದವರು ಹೇಳಿದ್ದಾರೆ. ಅವರು ಇದನ್ನ ಒಪ್ಪದೇ ಕೋರ್ಟ್ಗೆ ಹೋಗುತ್ತಾರೆ. ಸುಪ್ರೀಂ ಕೋರ್ಟ್ನಲ್ಲಿ ಆದೇಶ ಮಾಡ್ತಾರೆ. ಮುಡಾದವರು ಎಷ್ಟು ಜಮೀನು ಬಳಕೆ ಮಾಡಿಕೊಂಡಿದ್ದಾರೋ ಅಷ್ಟೇ ಜಮೀನು ಕೊಡಬೇಕು ಎಂದು ಕೋರ್ಟ್ ಆದೇಶವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ