newsfirstkannada.com

×

ಶ್ರೀಲಂಕಾ ಸರಣಿ.. ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಹಾರ್ದಿಕ್​ ಪಾಂಡ್ಯ!

Share :

Published July 14, 2024 at 7:56pm

Update July 15, 2024 at 9:10am

    ಸದ್ಯದಲ್ಲೇ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರೋ ಟೀಮ್​ ಇಂಡಿಯಾ

    ಜುಲೈ​​ 27ನೇ ತಾರೀಕಿನಿಂದ ಶುರುವಾಗಲಿರೋ ಶ್ರೀಲಂಕಾ ಸರಣಿ!

    ಈ ಮುನ್ನವೇ ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಹಾರ್ದಿಕ್​​​

ಜಿಂಬಾಬ್ವೆ ಟಿ20 ಸರಣಿ ಬೆನ್ನಲ್ಲೇ ಟೀಮ್​ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈಗಾಗಲೇ ಟೀಮ್​ ಇಂಡಿಯಾ ಮುಖ್ಯ ಕೋಚ್​​​ ಗೌತಮ್​ ಗಂಭೀರ್​​​ ಮತ್ತು ಸೆಲೆಕ್ಷನ್​ ಕಮಿಟಿ ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಸ್ಟಾರ್​ ಆಟಗಾರರನ್ನು ಆಯ್ಕೆ ಮಾಡಲು ಭರ್ಜರಿ ಸರ್ಕಸ್​ ನಡೆಸುತ್ತಿದ್ದಾರೆ. ಇದಕ್ಕೂ ಮುನ್ನ ಎರಡು ಸರಣಿಗೂ ಭಾರತ ತಂಡಕ್ಕೆ ಹೊಸ ನಾಯಕನ ಅಗತ್ಯ ಇದೆ.

ಇನ್ನು, ಟೀಮ್​ ಇಂಡಿಯಾ ಕ್ಯಾಪ್ಟನ್​ ಆಗಲು ಕೆ.ಎಲ್​ ರಾಹುಲ್​ ಮತ್ತು ಹಾರ್ದಿಕ್​ ಪಾಂಡ್ಯ ರೇಸ್​ನಲ್ಲಿ ಇದ್ದಾರೆ. ಇದರ ಮಧ್ಯೆ ವಿರಾಟ್​​ ಕೊಹ್ಲಿ, ರೋಹಿತ್​​ ಶರ್ಮಾ ಮತ್ತು ಬುಮ್ರಾ ಹಾಗೆಯೇ ಹಾರ್ದಿಕ್​ ಪಾಂಡ್ಯ ಕೂಡ ಶ್ರೀಲಂಕಾ ಸೀರೀಸ್​ನಿಂದ ರೆಸ್ಟ್​ ಪಡೆಯೋ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಒಂದು ವೇಳೆ ಹಾರ್ದಿಕ್​​​ ಪಾಂಡ್ಯ ರೆಸ್ಟ್​ ತೆಗೆದುಕೊಂಡರೆ ಕೆ.ಎಲ್​ ರಾಹುಲ್ ನಾಯಕರಾಗಲಿದ್ದಾರೆ.

ರೆಸ್ಟ್​ ನೀಡಿ ಎಂದು ಬಿಸಿಸಿಐಗೆ ಹಾರ್ದಿಕ್​ ಪಾಂಡ್ಯ ಮನವಿ!

ಇತ್ತೀಚೆಗಷ್ಟೇ ಟಿ20 ವಿಶ್ವಕಪ್​​​ ಮುಗಿದಿದೆ. ಇದಕ್ಕೂ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್ ನಡೆದಿತ್ತು. ಕಳೆದ 3 ತಿಂಗಳಿಂದ ಬಿಡುವಿಲ್ಲದೆ ಕ್ರಿಕೆಟ್​ ಆಡುತ್ತಿದ್ದೇನೆ. ಕೆಲಸದ ಒತ್ತಡ ಹೆಚ್ಚಾಗಿದೆ. ಹಾಗಾಗಿ ಒತ್ತಡದಿಂದ ಹೊರಬರಲು ನನಗೆ ವಿಶ್ರಾಂತಿ ಬೇಕಿದೆ. ಶ್ರೀಲಂಕಾ ಸೀರೀಸ್​​ನಿಂದ ರೆಸ್ಟ್​ ಕೊಡಿ ಎಂದು ಹಾರ್ದಿಕ್​ ಪಾಂಡ್ಯ ಬಿಸಿಸಿಐಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

​ಜುಲೈ 27ನೇ ತಾರೀಕಿನಿಂದ ಶ್ರೀಲಂಕಾ ವಿರುದ್ಧ ಟಿ20 ಶರಣಿ ಶುರುವಾಗಲಿದೆ. ಟಿ20 ಸರಣಿ ಬಳಿಕ ಏಕದಿನ ಸೀರೀಸ್​ ಇರಲಿದೆ. ಈಗ ಹಾರ್ದಿಕ್​ ಪಾಂಡ್ಯ ರೆಸ್ಟ್​​ ತೆಗೆದುಕೊಂಡ್ರೆ ಟೀಮ್​ ಇಂಡಿಯಾಗೆ ಇರೋ ಒಂದೇ ಒಂದು ಆಯ್ಕೆ ಕೆ.ಎಲ್​​ ರಾಹುಲ್​​. ಹಾಗಾಗಿ ಕೆ.ಎಲ್​​ ರಾಹುಲ್​​ ಟೀಮ್​ ಇಂಡಿಯಾವನ್ನು ಟಿ20 ಮತ್ತು ಏಕದಿನ ಕ್ರಿಕೆಟ್​ನಲ್ಲಿ ಲೀಡ್​ ಮಾಡೋ ಸಾಧ್ಯತೆ ಇದೆ.

ಇದನ್ನೂ ಓದಿ: ಶ್ರೀಲಂಕಾ ಪ್ರವಾಸ; ಟೀಮ್​ ಇಂಡಿಯಾ ಸ್ಟಾರ್​ ಬ್ಯಾಟರ್​​ ಕೆ.ಎಲ್​​ ರಾಹುಲ್​ಗೆ ಜಾಕ್​ ಪಾಟ್..!​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀಲಂಕಾ ಸರಣಿ.. ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಹಾರ್ದಿಕ್​ ಪಾಂಡ್ಯ!

https://newsfirstlive.com/wp-content/uploads/2024/05/hardik-pandya-11.jpg

Load More