newsfirstkannada.com

×

ಸಣ್ಣ ಆಗಲು ಹೋಗಿ ಜೀವಂತ ಅಸ್ಥಿಪಂಜರವಾದ ಸುಂದರಿ.. ಹೆಣ್ಣುಮಕ್ಕಳು ಓದಲೇಬೇಕಾದ ಸ್ಟೋರಿ!

Share :

Published July 15, 2024 at 6:22am

    ಯುವತಿ ಬೇಬಿ ಟಿಂಗ್ಜಿ ವಿಡಿಯೋ ನೋಡಿದ ನೆಟ್ಟಿಗರು ಆದ್ರು ಫುಲ್ ಶಾಕ್​

    ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡ ಟಿಕ್​ಟಾಕ್​ ಸ್ಟಾರ್​

    ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ ಈಕೆಯ ರೀಲ್ಸ್​

ಇತ್ತೀಚಿಗೆ ಹುಡುಗರು ಹಾಗೂ ಹುಡುಗಿಯರು ಎಲ್ಲರೂ ಫಿಟ್​ ಅಂಡ್ ಫೈನ್​ ಆಗರ್ಬೇಕು ಅಂದುಕೊಳ್ಳುತ್ತಾರೆ. ಅದಕ್ಕಾಗಿ ಜಿಮ್​, ಡಯೆಟ್​, ಎಕ್ಸಸೈಜ್​, ಟ್ಯಾಬ್ಲೆಟ್ಸ್​, ಸರ್ಜರಿ ಅಂತೆಲ್ಲಾ ಮಾಡಿಸ್ತಾರೆ. ದೇಹ ಸೌಂದರ್ಯಕ್ಕಾಗಿ ಕೆಲವರು ಏನೇನೋ ಮಾಡೋದನ್ನ ನೋಡಿರುತ್ತೇವೆ. ಆರೋಗ್ಯಕ್ಕೋಸ್ಕರ ಹೀಗೆಲ್ಲಾ ಮಾಡುವುದರಲ್ಲಿ ತಪ್ಪಿಲ್ಲ. ಆದ್ರೆ ಹೈಟ್​ಗೆ ತಕ್ಕಂಕೆ ವೇಯ್ಟ್​ ಇರ್ಬೇಕು. ಆದ್ರೆ ಇಲ್ಲೊಬ್ಬ ಸುಂದರಿ ಏನೋ ಮಾಡೋಕೆ​ ಹೋಗಿ ಇನ್ನೇನೋ ಮಾಡಿದ್ರು ಅಂತಾರಲ್ಲ ಹಾಗಾಗಿದೆ ಈಕೆಯ ಕಥೆ. ತೆಳ್ಳಗೆ ಆಗ್ಬೇಕು ಅಂತ ಜೀವಂತ ಅಸ್ತಿಪಂಜರ ಆಗ್ಬಿಟ್ಟಿದ್ದಾಳೆ ಈ ಸುಂದರಿ.

ಇದನ್ನೂ ಓದಿ: ನೆರಳು ಎಲ್ಲಿಯೂ ಬೀಳಲ್ಲ, ಗಾಳಿಯ ವಿರುದ್ಧ ಹಾರಾಡುತ್ತೆ ಧ್ವಜ.. ವಿಜ್ಞಾನಕ್ಕೂ 5 ಸವಾಲು ಪುರಿ ಜಗನ್ನಾಥನ ಸನ್ನಿಧಿ..!

ಈಕೆ ಹೆಸರು ಬೇಬಿ ಟಿಂಗ್ಜಿ. ಚೀನಾದ ಗ್ವಾಂಗ್‌ಡಾಂಗ್ ಪ್ರಾಂತ್ಯದ ಗುವಾಂಗ್‌ಝೌನಲ್ಲಿ ಇರೋ ಈಕೆ ಭಾರತದಲ್ಲಿ ಬ್ಯಾನ್​ ಆಗಿರೋ ಟಿಕ್​ಟಾಕ್​ ಸ್ಟಾರ್​. ಮದುವೆ ಮಕ್ಕಳು ಏನೂ ಇಲ್ಲ. ಚೀನಾದ ಮಹಿಳೆಯರು ಇರೋ ಥರ ಈಕೆನೂ 160 ಸೆಂ.ಮೀ ಎತ್ತರವಿದ್ದಾಳೆ. ಆದರೆ, ಈಕೆ ತೂಕ ಮಾತ್ರ ಕೇವಲ 25 ಕೆ.ಜಿ. ಆದ್ರೆ ಈ ತೂಕ ಕೂಡಾ ಈಕೆಗೆ ಹೆಚ್ಚಾಗಿದ್ಯಂತೆ. ಅದಕ್ಕೆ ಪ್ಲೀಸ್​ ಫ್ರೆಂಡ್ಸ್​ ವೇಯ್ಟ್​ ಲಾಸ್​ ಮಾಡೋಕೆ ಸಜೆಷನ್ಸ್​​ ಕೊಡಿ ಅಂತ ಕೇಳ್ತಿದ್ದಾಳೆ. ಕೇವಲ ಮೂಳೆಗಳೇ ಇರೋ ಈಕೆ ದೇಹದಲ್ಲಿ ಕಾಲು ಕೆಜಿ ಮಾಂಸ ಕೂಡ ಇಲ್ಲ. ಇನ್ನೂ ಎಲ್ಲಿ ತೂಕ ಕಡಿಮೆ ಮಾಡೋದು ಅಂತ ವೀಡಿಯೋ ಕಂಡವರು ಶಾಕ್​ ಆಗ್ತಿದ್ದಾರೆ.

ಬೇಬಿ ಟಿಂಗ್ಜಿ ಬರೋಬ್ಬರಿ 42,000 ಫಾಲೋವರ್ಸ್​​ನ ಹೊಂದಿದ್ದಾಳೆ. ಈಕೆ ಫಾಲೋವರ್ಸ್​ ಮೇಡಂ ಏನಾದ್ರು ಹೊಟ್ಟೆಗೆ ತಿನ್ನಿ ಮೈ ಕೈ ತುಂಬಿಕೊಂಡ್ರೆ ಇನ್ನೂ ಚೆನ್ನಾಗಿ ಕಾಣ್ತೀರಾ. ಹೀಗಿರೋದು ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತಿದ್ದಾರೆ. ಡೋಂಟ್​ ಕೇರ್​ ಅಂತಿರೋ ಟಿಂಗ್ಜಿ ಮಾತ್ರ ನೋ ವೇ ಅಂತ ಮತ್ತಷ್ಟು ಸ್ಲಿಮ್​ ಆಗೋಕೆ ಟಿಪ್ಸ್​ ಇದ್ರೆ ಹೇಳಿ ಅಂತಿದ್ದಾಳೆ. ಇನ್ನು, ಬೇಬಿ ಟಿಂಗ್ಜಿ ಪೋಸ್ಟ್ ಮಾಡಿದ ಹಲವು ಪೋಟೋ ಹಾಗೂ ವಿಡಿಯೋಗಳಲ್ಲಿ ಶಾರ್ಟ್​​ ಬಟ್ಟೆ ಧರಿಸಿ ಡ್ಯಾನ್ಸ್ ಮಾಡಿದ್ದಾಳೆ. ಇದರಲ್ಲಿ ತನ್ನ ತೆಳ್ಳಗಿನ ಮೈ ಕಟ್ಟಿನಿಂದಲೇ ಅಭಿಮಾನಿಗಳನ್ನು ಹೆಚ್ಚಿಸಿಕೊಳ್ಳೋಕೆ ಟ್ರೈ ಮಾಡುತ್ತಿದ್ದಾಳೆ. ಚೀನಾದ ಟಿಕ್‌ಟಾಕ್‌ನಲ್ಲಿ ಈಕೆ ಫೋಟೋ ವೈರಲ್ ಆಗುತ್ತಿದ್ದಂತೆ, ಕೆಲವರು ಈಕೆಗೆ ಅನೋರೆಕ್ಸಿಯಾ ಎಂಬ ರೋಗವಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮೊದಲು ಡಾಕ್ಟರ್​ನ ಕನ್ಸಲ್ಟ್​ ಮಾಡಿ ಅಂತ ಸಲಹೆ ಕೊಟ್ಟಿದ್ದಾರೆ. ಇನ್ನು ಈಕೆ ಡ್ಯಾನ್ಸ್ ವಿಡಿಯೋ ನೋಡಿ ಅಸ್ಥಿಪಂಜರ ಡ್ಯಾನ್ಸ್ ಮಾಡುತ್ತಿದೆ, ನೀವು ಹೆಚ್ಚು ಕಾಲ ಬದುಕೋದೆ ಡೌಟ್ ಎಂಬಂತೆ ಕಾಮೆಂಟ್ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಣ್ಣ ಆಗಲು ಹೋಗಿ ಜೀವಂತ ಅಸ್ಥಿಪಂಜರವಾದ ಸುಂದರಿ.. ಹೆಣ್ಣುಮಕ್ಕಳು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/07/china1.jpg

Load More