ರೈಲ್ವೆ ಸೇತುವೆ ಮೇಲೆ ಫೋಟೋಶೂಟ್ಗಾಗಿ ತೆರಳಿದ್ದ ನಾಲ್ವರು
90 ಅಡಿ ಮೇಲಿನಿಂದ ಆಳಕ್ಕೆ ಬಿದ್ದ ದಂಪತಿ, ಆಗಿದ್ದೇನು ಗೊತ್ತಾ?
ಫೋಟೋಶೂಟ್ ಮಾಡೋ ಸಮಯಕ್ಕೆ ಸರಿಯಾಗಿ ಬಂದ ರೈಲು
ಜೈಪುರ: ಫೋಟೋ ಶೂಟ್ ಮಾಡುವಾಗ ರೈಲು ಬಂದ ಹಿನ್ನೆಲೆಯಲ್ಲಿ 90 ಅಡಿ ಆಳಕ್ಕೆ ಬಿದ್ದು ದಂಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಈ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯ ಗೋರ್ಮ್‌ಘಾಟ್ ಬಳಿಯ ಹೆರಿಟೇಜ್ ರೈಲ್ವೆ ಬ್ರಿಡ್ಜ್ ಮೇಲೆ ನಡೆದಿದೆ.
ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೂಗಲ್ಲಿ ರಕ್ತ, ಬಾಯಲ್ಲಿ ನೊರೆ.. ಕ್ಷಣದಲ್ಲೇ ಸಾವು; ವೈದ್ಯರ ವಿರುದ್ಧ ಆರೋಪ
ರಾಜಸ್ಥಾನದ ಬಗ್ದಿ ನಗರದ ನಿವಾಸಿಗಳಾದ ರಾಹುಲ್ ಮೇವಾಡ (22), ಇವರ ಪತ್ನಿ ಜಾಹ್ನವಿ (20) ಗಾಯಗೊಂಡವರು. ಈ ಇಬ್ಬರು ಫೋಟೋಶೂಟ್ ಮಾಡಲು ಹೆರಿಟೇಜ್ ರೈಲ್ವೆ ಬ್ರಿಡ್ಜ್ ಮೇಲೆ ಹೋಗಿ ಮೊಬೈಲ್ನಲ್ಲಿ ಫೋಟೋ ಕ್ಲಿಕ್ ಮಾಡುತ್ತಿದ್ದರು. ಇದೇ ಸಮಯಕ್ಕೆ ಸರಿಯಾಗಿ ರೈಲು ಬಂದಿದ್ದರಿಂದ ಯಾವ ಕಡೆಗೆ ಹೋಗಬೇಕೆಂದು ಗೊತ್ತಾಗದೇ ಭಯದಲ್ಲಿ ಸೇತುವೆ ಮೇಲಿನಿಂದ ಸುಮಾರು 90 ಅಡಿ ಕೆಳಕ್ಕೆ ಇಬ್ಬರು ಬಿದ್ದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ರಾಹುಲ್ ಮೇವಾಡ್ ಅವರ ಬೆನ್ನು ಮೂಳೆ ಮುರಿದು ಹೋಗಿದೆ. ಇವರ ಪತ್ನಿಯ ಕಾಲು ಮುರಿದಿದೆ. ಅಲ್ಲದೇ ಮೇಲಿನಿಂದ ಬಿದ್ದ ರಭಸಕ್ಕೆ ಇನ್ನಷ್ಟು ಸಣ್ಣಪುಟ್ಟ ಗಾಯಗಳಾಗಿವೆ.
ಇದನ್ನೂ ಓದಿ: ರಿಷಬ್ ಪಂತ್ಗೆ ಸಾಥ್ ಕೊಡ್ತಾರಾ ರಾಹುಲ್ ದ್ರಾವಿಡ್.. ಡೆಲ್ಲಿ ಕ್ಯಾಪಿಟಲ್ಸ್ಗೆ ಕೋಚ್ ಆಗ್ತಾರಾ ಕನ್ನಡಿಗ?
राजस्थान के पाली जिले में एक बड़ा हादसा हुआ। राहुल मेवड़ा अपनी पत्नी जाह्नवी संग हेरिटेज पुल पर फोटो शूट करा रहे थे। तभी ट्रेन आ गई। ट्रेन से बचने को दोनों 90 फीट गहरी खाई में कूद गए। दोनों का इलाज जारी है।
🚨Disturbing Visual🚨 pic.twitter.com/WwDSTd5jrW
— Sachin Gupta (@SachinGuptaUP) July 14, 2024
ತೀವ್ರವಾಗಿ ಗಾಯಗೊಂಡ ರಾಹುಲ್ನನ್ನ ಹೆಚ್ಚಿನ ಚಿಕಿತ್ಸೆಗಾಗಿ ಜೋಧ್‌ಪುರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಕಾಲು ಮುರಿದುಕೊಂಡ ಪತ್ನಿಯನ್ನು ಬಂಗಾರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ದಂಪತಿ ಜೊತೆ ಬಂದಿದ್ದ ಇನ್ನಿಬ್ಬರು ರೈಲು ಬರುತ್ತಿರುವುದನ್ನು ಕಂಡು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ. ದಂಪತಿಗಳು ರೈಲ್ವೆ ಸೇತುವೆಯಿಂದ ಬೀಳುತ್ತಿರುವ ಭಯಾನಕ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ನೋಡುಗರಿಗೆ ಆತಂಕ ಹುಟ್ಟಿಸುವಂತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ