newsfirstkannada.com

×

ನೈಸ್ ರಸ್ತೆಯಲ್ಲಿ ಭೀಕರ ಅಪಘಾತ.. ಓರ್ವ ಸ್ಥಳದಲ್ಲೇ ಸಾವು; ಹಲವರ ಸ್ಥಿತಿ ಗಂಭೀರ

Share :

Published July 15, 2024 at 5:24pm

Update July 15, 2024 at 5:45pm

    ಎಲೆಕ್ಟ್ರಾನಿಕ್ ಸಿಟಿ ನೈಸ್‌ ರೋಡ್‌ ಟೋಲ್ ಬಳಿ ಬಸ್‌ಗೆ ಕಾರು ಭಯಾನಕ ಡಿಕ್ಕಿ

    ಕಾರು ಡಿಕ್ಕಿಯಾದ ರಭಸಕ್ಕೆ ನಿಂತಿದ್ದ ಲಾರಿಗೆ ಗುದ್ದಿದ ಖಾಸಗಿ ಕಂಪನಿ ಬಸ್

    ಸ್ಕೈಲೈನ್‌ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹಲವರಿಗೆ ಗಂಭೀರ ಗಾಯ, ನರಳಾಟ

ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ನೈಸ್ ರೋಡ್ ಟೋಲ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಕಾರು ಹಿಂದಿನಿಂದ ಬಂದು ಬಸ್‌ಗೆ ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ಸ್ಕೈಲೈನ್‌ ಬಸ್‌ ಮುಂದಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಈ ದುರಂತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ​ಅಣ್ಣನನ್ನು ಭೇಟಿಯಾಗಲು ಜೈಲಿಗೆ ಬಂದ ತಮ್ಮ ದಿನಕರ್ ತೂಗುದೀಪ; ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಸಾಥ್‌ 

ನೈಸ್‌ ರೋಡ್‌ ಟೋಲ್ ಬಳಿ ನಿಂತಿದ್ದ ಕಾರು, ಬಸ್‌ಗೆ ಡಿಕ್ಕಿ ಹೊಡೆದಿದೆ. ಕಾರು ಗುದ್ದಿದ ರಭಸಕ್ಕೆ ಬಸ್ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಕಾರು, ಲಾರಿ, ಖಾಸಗಿ ಕಂಪನಿಯ ಬಸ್ ಮಧ್ಯೆ ದುರಂತ ನಡೆದಿದ್ದು ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದ. ಬಸ್‌ನಲ್ಲಿದ್ದ ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಸ್‌ನಲ್ಲಿದ್ದ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕುಣಿಗಲ್ ಮೂಲದ ದೇವರಾಜ್ ಮೃತ ದುರ್ದೈವಿ. 42 ವರ್ಷದ ದೇವರಾಜ್ ಎಲಿನ್ಸ್ ಅನ್ನೋ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ. ಅಪಘಾತದಲ್ಲಿ ಗಾಯಗೊಂಡವರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.

ಇದನ್ನೂ ಓದಿ: ರೈಲ್ವೆ ಬ್ರಿಡ್ಜ್​ ಮೇಲೆ ಫೋಟೋಶೂಟ್.. ಸಡನ್ ಆಗಿ ಬಂದ ರೈಲು.. 90 ಅಡಿ ಆಳಕ್ಕೆ ಬಿದ್ದ ದಂಪತಿ; ಮುಂದೇನಾಯ್ತು? 

ನೈಸ್ ರೋಡ್ ಟೋಲ್ ಬಳಿ ಸಂಭವಿಸಿದ ಅಪಘಾತದಲ್ಲಿ ಲಾರಿ, ಬಸ್ ಹಾಗೂ ಕಾರು ಸಂಪೂರ್ಣ ಜಖಂ ಆಗಿದೆ. ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್‌ನಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿದೆ. ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೈಸ್ ರಸ್ತೆಯಲ್ಲಿ ಭೀಕರ ಅಪಘಾತ.. ಓರ್ವ ಸ್ಥಳದಲ್ಲೇ ಸಾವು; ಹಲವರ ಸ್ಥಿತಿ ಗಂಭೀರ

https://newsfirstlive.com/wp-content/uploads/2024/07/Nice-Road-Accident.jpg

Load More