ಪಕ್ಕದ ರೋಡಿಗೆ ಜಂಪ್ ಆದ ಕಾರ್, ಇನ್ನೊಂದು ಕಾರಿಗೆ ಡಿಕ್ಕಿ
ನಜ್ಜುಗುಜ್ಜಾಗಿರೋ XUV700.. ಸ್ಕಾರ್ಪಿಯೋ ಫುಲ್ ಪೀಸ್, ಪೀಸ್
ನೈಸ್ ರಸ್ತೆಯಲ್ಲಿ ಭೀಕರ ಅಪಘಾತ, ಮೂವರು ಸ್ಥಳದಲ್ಲೇ ಸಾವು
ಬೆಂಗಳೂರು: ಇವರು ಮೂವರು ಕುಚಿಕು ಗೆಳೆಯರು. ವಿನೋದ್, ಕುಮಾರ್, ನಂಜೇಶ್. ಈ ಮೂವರು ಹೀಗೆ ಬೋರ್ ಆಗ್ತಿದೆ ಅಂತ ಗೋವಾಗೆ ಜಾಲಿ ಟ್ರಿಪ್ ಹೊರಟಿದ್ದರು. ಆದ್ರೆ ಹೋಗ್ತಿದ್ದ ಗಾಡಿಯ ಕಂಟ್ರೋಲ್ ಮಿಸ್ ಆಗಿದೆ. ಹೀಗೆ ಮಿಸ್ ಆದ ಕಂಟ್ರೋಲ್ನಿಂದ ಆಗಬಾರದ ದುರಂತ ಸಂಭವಿಸಿ ಬಿಟ್ಟಿದೆ.
ನೈಸ್ ರಸ್ತೆಯಲ್ಲಿ ಡೆಡ್ಲಿ ಆ್ಯಕ್ಸಿಡೆಂಟ್!
ಒಂದು ಕಡೆ ಎಕ್ಸ್ ಯು ವಿ 700 ಕಾರು ಕಂಪ್ಲೀಟ್ ಡ್ಯಾಮೇಜ್. ಮತ್ತೊಂದು ಕಡೆ ಸ್ಕಾರ್ಪಿಯೋ ಪೀಸ್ ಪೀಸ್. ಒಂದೊಂದು ದೃಶ್ಯವೂ ಭಯಾನಕವಾಗಿದೆ. ಬನ್ನೇರುಘಟ್ಟ ನೈಸ್ ರಸ್ತೆ ಟೋಲ್ ಬಳಿ ನಡೆದಿರೋ ಈ ಭೀಕರ ಅಪಘಾತ ಒಂದಲ್ಲಾ ಎರಡಲ್ಲಾ ಮೂರು ಜೀವವನ್ನೇ ಬಲಿ ಪಡೆದುಬಿಟ್ಟಿದೆ.
ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಭೀಕರ ಅಪಘಾತ; ಮೂವರ ಸಾವಿಗೆ ಕಾರಣವೇನು? ಅಸಲಿಗೆ ಆಗಿದ್ದೇನು?
ಭೀಕರ ಅಪಘಾತಕ್ಕೆ ಮೂರು ಬಲಿ
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಶಿವನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ವಿನೋದ್, ಇದೇ ಗ್ರಾಮದ ಕುಮಾರ್, ನಂಜೇಶ್ ಮೂರು ಜನ ಗೋವಾಗೆ ತೆರಳಬೇಕಂತ ಬೆಂಗಳೂರಿನತ್ತ ಬರ್ತಾ ಇದ್ದರು. ಆದ್ರೆ ತಾವು ಬರ್ತಿದ್ದ ಸ್ಕಾರ್ಪಿಯೋ ಕಾರು ಕಂಟ್ರೋಲ್ ಕಳೆದುಕೊಂಡಿದೆ. ನೈಸ್ ರಸ್ತೆಯಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಕಾರು ಜಂಪ್ ಆಗಿದೆ.
ಹೀಗೆ ಪಕ್ಕದ ರಸ್ತೆಗೆ ಬಂದ ಕಾರು ಎದುರಿನಿಂದ ಬರ್ತಿದ್ದ XUV 700 ಕಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ. ಆದ್ರೆ ಸ್ಕಾರ್ಪಿಯೋ ಕಾರ್ನಲ್ಲಿದ್ದ ಮೂವರು ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಭೀಕರ ಅಪಘಾತ.. ಕಾರು, ಲಾರಿ, ಬಸ್ ಮಧ್ಯೆ ಭಯಾನಕ ಡಿಕ್ಕಿ; ಘೋರ ದುರಂತ!
ಮಳೆಯಿಂದಾಗಿ ಕಾರಿನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿರೋ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲೇ ಇದ್ದ ವಾಹನ ಸವಾರರು ವಾಹನದಲ್ಲಿ ಸಿಲುಕಿದ್ದವರನ್ನ ರಕ್ಷಿಸಿದ್ದಾರೆ. ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ