newsfirstkannada.com

×

Meesho ಬಳಸೋರೇ ಎಚ್ಚರ! ಚೂರು ಯಾಮಾರಿದ್ರೂ ಹೋಯ್ತು ದುಡ್ಡು! ಏನಿದು ಸ್ಟೋರಿ?

Share :

Published July 16, 2024 at 6:05am

Update July 16, 2024 at 6:06am

    ಯುವಕ ಯುವತಿಯರಿಗೆ ರಿಜಿಸ್ಟರ್ ಪೋಸ್ಟ್ ಮಾಡಿ ವಂಚನೆಗೆ ಯತ್ನ

    ಲಕ್ಕಿ ಡ್ರಾ ಪಡೆಯಿರಿ 14 ರಿಂದ 51 ಸಾವಿರ ರೂಪಾಯಿ ನಿಮ್ಮದಾಗಿಸಿಕೊಳ್ಳಿ!

    ನೀವು ಹಣ ಪಡೆಯಬೇಕಾದ್ರೆ ಮೊದಲು ಶೇಕಡಾ 1ರಷ್ಟು ಟ್ಯಾಕ್ಸ್ ಕೊಡಬೇಕಂತೆ

ಬ್ಯುಸಿ ಲೈಫಲ್ಲಿ ಕೈನಲ್ಲಿರೋ ಫೋನಲ್ಲೇ ಇಡೀ ಗ್ಲೋಬಲ್​ ಬಗ್ಗೆ ತಿಳಿದುಕೊಳ್ಳುವ ಕಾಲ ಇದು. ಇದಕ್ಕಾಗಿ ಓಡಾಡಿದ್ರೆ ಟೈಮ್​ ವೇಸ್ಟ್. ದುಡ್ಡು ಖರ್ಚು ಮಾಡಿಕೊಂಡು ಟ್ರಾಫಿಕ್​ ಕಿರಿಕಿರಿಯಲ್ಲಿ ಹೊರಗೆ ಹೋಗೋಕಾಗೊಲ್ಲ ಅನ್ನೋರಿಗೆ ವರವಾಗಿ ಬಂದಿದ್ದೇ ಆನ್​ಲೈನ್​ ಶಾಂಪಿಗ್​. ಈ ಆನ್​ಲೈನ್​ ಶಾಪಿಂಗ್​ ಮಾರ್ಕೆಟ್​ ಕೂಡ ತುಂಬಾ ಕಾಂಪಿಟೇಟಿವ್​ ಆಗಿದೆ. ಒಂದಕ್ಕಿಂತ ಒಂದು ಬ್ರ್ಯಾಂಡ್​ಗಳು, ಒಂದಕ್ಕಿಂತ ಒಂದು ಬೆಸ್ಟ್​ ಆಫರ್​ಗಳನ್ನ ಕೊಡೋದು. ಕಡಿಮೆ ರೇಟ್​ಗೆ ಮಾರೋದು, ಕ್ವಿಕ್​ ಆಗಿ ಪ್ರಾಡಕ್ಟ್​ ಡೆಲಿವರಿ ಮಾಡೋದು ಹೀಗೆ. ಇಂಥಾ ಮಾರ್ಕೆಟ್​ನಲ್ಲಿ ಖ್ಯಾತಿ ಪಡೆದಿರೋ ಕಂಪನಿಗಳ ಪೈಕಿ ಮೀಶೋ ಕೂಡಾ ಒಂದು. ನೀವೂ ಈ ಮೀಶೋದಲ್ಲಿ ಶಾಪಿಂಗ್​ ಮಾಡೋರಾದ್ರೆ ಮಿಸ್​ ಮಾಡದೇ ಈ ಸ್ಟೋರಿಯನ್ನು ಓದಲೇಬೇಕು.

ಇದನ್ನೂ ಓದಿ: ​ಅಣ್ಣನನ್ನು ಭೇಟಿಯಾಗಲು ಜೈಲಿಗೆ ಬಂದ ತಮ್ಮ ದಿನಕರ್ ತೂಗುದೀಪ; ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಸಾಥ್‌

ಹೌದು,​ ಆನ್​ಲೈನ್​ ಶಾಂಪಿಂಗ್​ ಪ್ರಿಯರೇ ಅಲರ್ಟ್​ ಆಗಿ. ಹೀಗೆ ಮೀಶೋ ಕಂಪನಿಯ ಹೆಸರಲ್ಲಿ ಚೀಟಿಂಗ್​ ಮಾಡೋಕೆ ಪ್ರಯತ್ನ ನಡೆದಿದೆ. ವಿಜಯಪುರ ಜಿಲ್ಲೆಯ ಹಲವು ಯುವಕರಿಗೆ ರಿಜಿಸ್ಟರ್ ಪೋಸ್ಟ್ ಮೂಲಕ ಲಕ್ಕಿ ಡ್ರಾ ಕೂಪನ್​ಗಳು ಬಂದಿದೆ. ಯುವಕರಿಗೆ ರಿಜಿಸ್ಟರ್ ಪೋಸ್ಟ್ ಹಾಗೂ ಫೋನ್ ಮೂಲಕ ಕೂಪನ್​ಗಳನ್ನ ಕಳಿಸಲಾಗಿದೆ. ಮೀಶೋ ಕಂಪನಿಯ 8ನೇ ವರ್ಷದ ವಾರ್ಷಿಕೋತ್ಸವ ಹಿನ್ನೆಲೆ ಈ ಲಕ್ಕಿ ಡ್ರಾ ಕೂಪನ್ ಕೊಡಲಾಗಿದೆ. ಲಕ್ಕಿ ಡ್ರಾ ಅಲ್ಲಿ 14 ಲಕ್ಷದ 51 ಸಾವಿರ ರೂಪಾಯಿ ಗೆದ್ದಿದ್ದೀರಿ. ನೀವು ಈ ಹಣ ಪಡೆಯಬೇಕಾದ್ರೆ ಮೊದಲು ಶೇಕಡಾ 1ರಷ್ಟು ಟ್ಯಾಕ್ಸ್ ಕೊಡಿ. ಆಮೇಲೆ ಹಣ ಪಡೆಯಿರಿ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲ ಆನ್​ಲೈನ್​ ಮೂಲಕ ಮಾತ್ರ ಪೇಮೆಂಟ್​ ಮಾಡಬೇಕು ಅಂತ ಹೇಳಿದ್ದಾರೆ. ಆನ್​ಲೈನ್​ ಪೇಮೆಂಟ್​ ಅಂದ್ರೆ ಗೂಗಲ್​ ಪೇ ಮತ್ತು ಫೋನ್​ ಪೇ ಮಾಡೋಕೆ ಹೇಳಿದ್ದಾರೆ. ಆದ್ರೆ ಅದು ಆಗ್ತಿಲ್ಲ ಅನ್ನೋರು ಬ್ಯಾಂಕ್​ ಡೀಟೇಲ್ಸ್​ ಕೊಡಿ ಪೇಮೆಂಟ್​ ಮಾಡ್ತೀವಿ ಅಂದಿದ್ದಾರೆ. ಆದ್ರೆ ಮೀಶೋ ಸಿಬ್ಬಂದಿ ಅಂತಾ ಹೇಳಿಕೊಂಡವರು ಬ್ಯಾಂಕ್​ ಡೀಟೇಲ್ಸ್​ ಕೊಡದೇ ಕಾಲ್​ ಕಟ್​ ಮಾಡಿದ್ದಾರೆ.

ಇದನ್ನೂ ಓದಿ: ಮಹಾನಟಿ ವಿನ್ನರ್​ ಪ್ರಿಯಾಂಕ ಆಚಾರ್​​ಗೆ ಅಭಿಮಾನಿಗಳಿಂದ ಸ್ಪೆಷಲ್ ವಿಶ್​​; ಏನದು?

ಲಕ್ಕಿ ಡ್ರಾ ಅಂತ ಹೇಳಿದ್ಯಾಕೆ? ಹಣ ಬರುತ್ತೆ ಅಂದಿದ್ಯಾಕೆ? ಆಮೇಲೆ ಕಮಿಷನ್​ ಕೇಳಿದ್ಯಾಕೆ ಅನ್ನೋದು ಯುವಕರ ಪ್ರಶ್ನೆ. ಇದು ಆನ್​ಲೈನ್​ ವಂಚಕರ ಕಳ್ಳಾಟ ಇರಬಹುದು ಅನ್ನೋ ಅನುಮಾನವೂ ಇದ್ದು ಪೊಲೀಸರಿಗೆ ದೂರು ನೀಡೋಕು ಮುಂದಾಗಿದ್ದಾರೆ. ಇಲ್ಲಿ ನಿಜವಾಗಿ ಕಂಪನಿಯವ್ರೇ ಮಾಡಿದ್ದಾ? ಅಥವಾ ಬೇರೆ ಯಾರೋ ಮಾಡಿದ್ದಾ ಅನ್ನೋ ಕ್ಲಾರಿಟಿ ಇಲ್ಲ. ಆದ್ರೆ ಹಣದ ಆಸೆಗೆ ಮೋಸ ಆಗಬಾರದು ಅನ್ನೋ ಎಚ್ಚರಿಕೆಯಂತೂ ಇದೆ. ಹೀಗಾಗಿ ಅನಾಮಿಕರು ಹೀಗೆ ಕರೆ ಮಾಡಿ ಬ್ಯಾಂಕ್​ ಡೀಟೇಲ್ಸ್ ಬಗ್ಗೆ ಕೇಳಿದ್ರೆ ಎಚ್ಚೆತ್ತುಕೊಳ್ಳಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Meesho ಬಳಸೋರೇ ಎಚ್ಚರ! ಚೂರು ಯಾಮಾರಿದ್ರೂ ಹೋಯ್ತು ದುಡ್ಡು! ಏನಿದು ಸ್ಟೋರಿ?

https://newsfirstlive.com/wp-content/uploads/2024/07/meesho.jpg

Load More