newsfirstkannada.com

×

‘ಕೊಹ್ಲಿ ಕೆಟ್ಟೋನು, ರೋಹಿತ್​​ ಒಳ್ಳೆಯವ್ನು’- ವಿರಾಟ್​​ ಜತೆ ಯಾರು ಇರಕ್ಕಾಗಲ್ಲ ಎಂದ ಮಾಜಿ ಕ್ರಿಕೆಟರ್​​!

Share :

Published July 16, 2024 at 7:57pm

Update July 16, 2024 at 8:03pm

    ಟೀಮ್​​ ಇಂಡಿಯಾದ ಸ್ಟಾರ್​ ಪ್ಲೇಯರ್​​ ವಿರಾಟ್‌ ಕೊಹ್ಲಿ

    ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಕೊಹ್ಲಿ ಬೆಸ್ಟ್​ ಬ್ಯಾಟರ್..!

    ಕೊಹ್ಲಿ ವಿರುದ್ಧ ನಾಲಿಗೆ ಹರಿಬಿಟ್ಟ ಮಾಜಿ ಕ್ರಿಕೆಟರ್​​ ಮಿಶ್ರಾ

ಇತ್ತೀಚೆಗಷ್ಟೇ ಟೀಮ್​ ಇಂಡಿಯಾ ಮಾಜಿ ಕ್ರಿಕೆಟರ್​ ಅಂಬಾಟಿ ರಾಯುಡು ವಿರಾಟ್​​ ಕೊಹ್ಲಿ ಬಗ್ಗೆ ನಾಲಿಗೆ ಹರಿಬಿಟ್ಟಿದ್ದರು. ಈಗ ಮಾಜಿ ಪ್ಲೇಯರ್​​ ಅಮಿತ್​ ಮಿಶ್ರಾ ಸರದಿ. ಕೊಹ್ಲಿ ತುಂಬಾ ಬದಲಾಗಿದ್ದಾರೆ. ನಾನು ಆತನೊಂದಿಗೆ ಮಾತಾಡುವುದಿಲ್ಲ ಎಂದಿದ್ದಾರೆ.

ನಾನು ಮತ್ತು ಕೊಹ್ಲಿ ಈಗ ಮಾತಾಡುತ್ತಿಲ್ಲ. ನಾನು ಸುಳ್ಳು ಹೇಳುವುದಿಲ್ಲ. ಒಬ್ಬ ಕ್ರಿಕೆಟರ್‌ ಆಗಿ ಕೊಹ್ಲಿ ಮೇಲೆ ಅಪಾರ ಗೌರವ ಇದೆ. ಈ ಮೊದಲು ಅವರೊಂದಿಗೆ ಇದ್ದ ಒಡನಾಟ ಈಗ ಇಲ್ಲ. ಕೊಹ್ಲಿಗೆ ಸ್ನೇಹಿತರು ಬಹಳಾ ಕಡಿಮೆ ಏಕೆ ಗೊತ್ತಾ? ಇದಕ್ಕೆ ಕಾರಣ ಅವರ ಸ್ವಭಾವ ಎಂದರು.

ರೋಹಿತ್‌ ಸ್ವಭಾವ ಸಂಪೂರ್ಣ ವಿಭಿನ್ನ. ರೋಹಿತ್‌ ಶರ್ಮಾ ಮೊದಲ ಬಾರಿ ಭೇಟಿಯಾದಾಗ ಹೇಗಿದ್ರೋ ಈಗಲೂ ಹಾಗೇ ಇದ್ದಾರೆ. ಇತ್ತೀಚೆಗೆ ಭೇಟಿಯಾದಾಗ ಆತ ಅದೇ ವ್ಯಕ್ತಿಯಾಗಿ ಉಳಿದಿದ್ದ. ಒಳ್ಳೆ ಮನಸು ಇರೋರಿಗೆ ಎಲ್ಲರೂ ಹತ್ತಿರವಾಗಲು ಬಯಸುತ್ತಾರೆ. ಹಣ, ಆಸ್ತಿ, ಅಂತಸ್ತು ಬಂದ ಕೂಡಲೇ ಬದಲಾಗೋ ವ್ಯಕ್ತಿಗಳೊಂದಿಗೆ ಯಾರು ಇರಲ್ಲ. ಕೊಹ್ಲಿ ಒಳ್ಳೆಯ ಕ್ರಿಕೆಟರ್​ ಆಗಿರಬಹುದು, ಆದರೆ ಕೆಟ್ಟ ವ್ಯಕ್ತಿತ್ವ ಹೊಂದಿದ್ದಾರೆ. ರೋಹಿತ್​​​​ ಈಗಲೂ ಒಳ್ಳೆಯ ವ್ಯಕ್ತಿಯೇ ಎಂದಿದ್ದಾರೆ ಅಮಿತ್​ ಮಿಶ್ರಾ.

ಟೀಮ್​​ ಇಂಡಿಯಾದ ಸ್ಟಾರ್​ ಪ್ಲೇಯರ್​​ ವಿರಾಟ್‌ ಕೊಹ್ಲಿ. ಇವರು ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಬೆಸ್ಟ್​ ಬ್ಯಾಟರ್​​. ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 80ಕ್ಕೂ ಹೆಚ್ಚು ಶತಕಗಳು ಬಾರಿಸಿರೋ ಕೊಹ್ಲಿ ಟೆಸ್ಟ್‌ ಮತ್ತು ಏಕದಿನ ಮಾದರಿಯಲ್ಲಿ 10 ಸಾವಿರಕ್ಕೂ ಅಧಿಕ ರನ್​ ಕಲೆ ಹಾಕಿದ್ದಾರೆ. ಅದರಲ್ಲೂ ಸಚಿನ್​​ ದಾಖಲೆ ಮುರಿಯಲು ಸಾಧ್ಯವಿರೋ ಏಕೈಕ ಪ್ಲೇಯರ್​​ ಕೊಹ್ಲಿ. ಐಪಿಎಲ್‌ನಲ್ಲೂ ಕೊಹ್ಲಿಯೇ ಚೇಸ್​ ಮಾಸ್ಟರ್​​. ಇಷ್ಟು ದಾಖಲೆಗಳು ನಿರ್ಮಿಸಿರೋ ಕೊಹ್ಲಿ ಬಗ್ಗೆ ಭಾರತ ತಂಡದ ಮಾಜಿ ಪ್ಲೇಯರ್​​​ ಅಮಿತ್​ ಮಿಶ್ರಾ ಶಾಕಿಂಗ್​​ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ‘ಆಸ್ತಿ, ಅಂತಸ್ತು ಬಂದ್ಮೇಲೆ ವಿರಾಟ್​​ ಬದಲಾದ’- ಕೊಹ್ಲಿ ಬಗ್ಗೆ ಶಾಕಿಂಗ್​​ ಸತ್ಯ ಬಿಚ್ಚಿಟ್ಟ ಮಾಜಿ ಕ್ರಿಕೆಟರ್!​​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ಕೊಹ್ಲಿ ಕೆಟ್ಟೋನು, ರೋಹಿತ್​​ ಒಳ್ಳೆಯವ್ನು’- ವಿರಾಟ್​​ ಜತೆ ಯಾರು ಇರಕ್ಕಾಗಲ್ಲ ಎಂದ ಮಾಜಿ ಕ್ರಿಕೆಟರ್​​!

https://newsfirstlive.com/wp-content/uploads/2024/07/Kohli_Rohit_Amit.jpg

Load More