ಪಂಚೆಯಲ್ಲಿ GT ಮಾಲ್ಗೆ ಬಂದ ರೈತನಿಗೆ ಅವಮಾನ ಮಾಡಿದ ಸಿಬ್ಬಂದಿ
ನ್ಯೂಸ್ ಫಸ್ಟ್ ವರದಿಯ ಬೆನ್ನಲ್ಲೇ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ
ಪಂಚೆ ಧರಿಸಿ ಬಂದ ರೈತನಿಗೆ ಅವಮಾನ ಮಾಡಿದ್ದಕ್ಕೆ ಸಿಡಿದ್ದೆದ್ದ ಪ್ರತಿಭಟನಾಕಾರರು
ಬೆಂಗಳೂರು: ರೈತರೊಬ್ಬರು ಪಂಚೆ ಧರಿಸಿ GT ಮಾಲ್ಗೆ ಬಂದಿದ್ದಕ್ಕೆ ಅಲ್ಲಿನ ಸಿಬ್ಬಂದಿ ಅವರನ್ನು ಒಳಗೆ ಬಿಡದೆ ಅವಮಾನ ಮಾಡಿದ್ದರು. ಮಾಲ್ ಸಿಬ್ಬಂದಿ ತೋರಿದ ದರ್ಪದ ಬಗ್ಗೆ ನ್ಯೂಸ್ ಫಸ್ಟ್ ವರದಿ ಮಾಡಿತ್ತು. ಇದಾದ ಬೆನ್ನಲ್ಲೇ ಕನ್ನಡ ಪರ ಸಂಘಟನೆಗಳ ಹೋರಾಟಗಾರರು ಪಂಚೆ ಧರಿಸಿ ಬಂದ ರೈತನಿಗೆ ಅವಮಾನ ಮಾಡಿದ್ದಕ್ಕೆ ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ: ನ್ಯೂಸ್ ಫಸ್ಟ್ ಇಂಪ್ಯಾಕ್ಟ್.. ರೈತನ ಕ್ಷಮೆಯಾಚಿಸಿದ GT ಮಾಲ್; ನಿನ್ನೆ ಅವಮಾನ, ಇಂದು ಹಾರ ಹಾಕಿ ಸನ್ಮಾನ
ಕನ್ನಡ ಪರ ಹೋರಾಟಗಾರರು ಮಾಲ್ ಮುಂದೆ ಪ್ರತಿಭಟನೆ ನಡೆಸಿ ರೈತರಿಗೆ ಕ್ಷಮೆ ಕೇಳುವಂತೆ ಧರಣಿ ಮಾಡಿದ್ದರು. ಆದರೆ ಇದೀಗ ಮತ್ತೆ ಜಿ.ಟಿ ಮಾಲ್ ಒಳಗೆ ನುಗ್ಗಿ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ. ರೈತ ಪಂಚೆ ಧರಿಸಿ ಬಂದ ಫಕೀರಪ್ಪನನ್ನು ಮಾಲ್ ಬಳಗೆ ಬಿಡದಿದ್ದಕ್ಕೆ ಈ ಆಕ್ರೋಶ ಹೊರ ಹಾಕುತ್ತಿದ್ದಾರೆ. ಮಾಲ್ ಒಳಗೆ ನುಗ್ಗಿದ ಕನ್ನಡ ಪರ ಹೋರಾಟಗಾರರು ಕುರ್ಚಿ, ಟೇಬಲ್ ಇನ್ನಿತರ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ.
ಏನದು ಘಟನೆ..?
ಹಾವೇರಿ ಜಿಲ್ಲೆಯ ಅರೇಮಲ್ಲಾಪುರ ಗ್ರಾಮದ ನಾಗರಾಜ್ ತಮ್ಮ ತಂದೆ ತಾಯಿ ಜೊತೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರೋ ಜಿ.ಟಿ ಮಾಲ್ಗೆ ಸಿನಿಮಾ ನೋಡೋಕೆ ಬಂದಿದ್ದರು. ಹೀಗೆ ಮಾಲ್ ಒಳಗೆ ಎಂಟ್ರಿ ಕೊಡ್ತಿದ್ದಂತೆ ಸೆಕ್ಯೂರಿಟಿ ಸಿಬ್ಬಂದಿ ನಾಗರಾಜ್ ತಂದೆಯನ್ನು ತಡೆದಿದ್ದಾರೆ. ಕಾರಣ ಕೇಳಿದ್ರೆ ಮಾಲ್ನ ಒಳಗೆ ಪಂಚೆ ತೊಟ್ಟವರಿಗೆ ಪ್ರವೇಶವಿಲ್ಲ ಅಂತ ಹೇಳಿ ತಡೆದಿದ್ದಾರೆ. ಈ ವಿಚಾರದ ಬಗ್ಗೆ ನ್ಯೂಸ್ ಫಸ್ಟ್ ವರದಿ ಮಾಡಿತ್ತು. ಆ ಬೆನ್ನಲ್ಲೇ ಕನ್ನಡ ಪರ ಸಂಘಟನೆಗಳ ಹೋರಾಟಗಾರರು ಪಂಚೆ ಧರಿಸಿ ಬಂದ ರೈತನಿಗೆ ಅವಮಾನ ಮಾಡಿದ್ದಕ್ಕೆ ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ಇಂದು ಮತ್ತೆ ಜಿಟಿ ಮಾಲ್ಗೆ ಎಂಟ್ರಿ ಕೊಟ್ಟಿದ್ದ ರೈತ ಫಕೀರಪ್ಪ ಅವರಿಗೆ ಜಿಟಿ ಮಾಲ್ ಸಿಬ್ಬಂದಿ ಹೂವಿನ ಹಾರ ಹಾಕಿ ಸನ್ಮಾನ ಮಾಡಿದ್ದಾರೆ. ರೈತ ಫಕೀರಪ್ಪ ಬಳಿ ಜಿಟಿ ಮಾಲ್ನ ಸಿಬ್ಬಂದಿ ಕ್ಷಮೆಯಾಚಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ