ಮನೆ ಊಟ, ಹಾಸಿಗೆ, ಪುಸ್ತಕ ನೀಡುವಂತೆ ದರ್ಶನ್ ಮನವಿ
ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ಆರಂಭ
ಅರ್ಜಿಯಲ್ಲಿ ಕಾನೂನಿನ ಅವಕಾಶಗಳ ಮೊದಲು ನೋಡೋಣ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿರುವ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಕಂಬಿ ಹಿಂದೆ ಕಾಲ ಕಳೆಯುತ್ತಿರುವ ದರ್ಶನ್ ಅವರಿಗೆ ಜೈಲೂಟಕ್ಕೆ ಅಡ್ಜೆಸ್ಟ್ ಆಗೋದೇ ಕಷ್ಟವಾಗಿದೆ. ಕಳೆದ ಒಂದು ತಿಂಗಳಿಂದ ಪೊಲೀಸರ ಟ್ರೀಟ್‌ಮೆಂಟ್, ಜೈಲೂಟಕ್ಕೆ ಒಗ್ಗಿಕೊಳ್ಳಲಾಗದೇ ಪರದಾಡುತ್ತಿರುವ ದರ್ಶನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: ದರ್ಶನ್ 14 ದಿನಗಳ ನ್ಯಾಯಾಂಗ ಬಂಧನ ಅಂತ್ಯ.. ಅಂದುಕೊಂಡಿದ್ದ ಬೇಡಿಕೆಗಳಿಂದು ಈಡೇರುತ್ತಾ?
ದರ್ಶನ್ ಪರ ವಕೀಲರು ಹೈಕೋರ್ಟ್‌ನಲ್ಲಿ ಮನೆ ಊಟ, ಹಾಸಿಗೆ, ಪುಸ್ತಕ ನೀಡುವಂತೆ ಮನವಿ ಮಾಡಿದ್ದಾರೆ. ಇಂದು ಈ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಆರಂಭಿಸಿದೆ. ನ್ಯಾಯಾಮೂರ್ತಿ ಎಸ್.ಆರ್ ಕೃಷ್ಣಕುಮಾರ್ ಅವರ ನ್ಯಾಯಪೀಠದ ವಿಚಾರಣೆ ನಡೆದಿದ್ದು, ದರ್ಶನ್ ಪರ ಹಿರಿಯ ವಕೀಲರಾದ ಕೆ.ಎನ್ ಫಣೀಂದ್ರ ಹಾಗೂ ಸರ್ಕಾರದ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ಹಾಜರಿದ್ದರು.
ದರ್ಶನ್ ಮನೆ ಊಟದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಅರ್ಜಿಯಲ್ಲಿ ಕಾನೂನಿನ ಅವಕಾಶಗಳ ಮೊದಲು ನೋಡೋಣ. ಅದು ಅಪ್ಲೈ ಆಗುತ್ತಾ ಇಲ್ವಾ ನೋಡೋಣ ಎಂದಿದೆ. ಇದೇ ವೇಳೆ ಎರಡು ಕಡೆಯ ವರದಿ ಸ್ವೀಕಾರ ಮಾಡಲಾಗಿದ್ದು, ನಾಳೆ ಮಧ್ಯಾಹ್ನ 2:30ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಲಾಗಿದೆ.
ಇದನ್ನೂ ಓದಿ: ನಿದ್ದೆ ಬರ್ತಿಲ್ಲ ನಂಗೆ.. ಜೈಲಿನಲ್ಲಿ ಗಳಗಳನೇ ಕಣ್ಣೀರಿಟ್ಟ ಪವಿತ್ರಾ ಗೌಡ; ದರ್ಶನ್‌ಗೆ ಪತ್ನಿಯೇ ಧೈರ್ಯಲಕ್ಷ್ಮಿ; ಆಗಿದ್ದೇನು?
ದರ್ಶನ್ ಪರ ವಕೀಲರು ಮತ್ತು ಸರ್ಕಾರದ ಆಕ್ಷೇಪವಿರುವ ಎರಡು ಕಡೆಯ ಲಿಖಿತ ಪ್ರಾವಿಷನ್ ವರದಿಯನ್ನು ಕೋರ್ಟ್ ಸ್ವೀಕಾರ ಮಾಡಿದೆ. ಈ ವರದಿಯನ್ನು ಅಧ್ಯಯನ ಮಾಡಿ ನಾಳೆ ತೀರ್ಮಾನ ಮಾಡುವ ಸಾಧ್ಯತೆ ಇದೆ. ಇಂದು ದರ್ಶನ್ ಪರ ವಕೀಲರು ಮನೆ ಊಟಕ್ಕೆ ಅನುಮತಿ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಹೈಕೋರ್ಟ್ ನಾಳೆ ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿದ್ದು, ಸದ್ಯ ದರ್ಶನ್ ಅವರಿಗೆ ಇಂದು ಜೈಲೂಟವೇ ಗತಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ